ವಿಷಯಕ್ಕೆ ಹೋಗು

ಸದಸ್ಯ:Manjunatha7353/ನನ್ನ ಪ್ರಯೋಗಪುಟ3

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚತುರ್ಮುಖ ಬಸದಿ, ಗೇರುಸೊಪ್ಪೆ

ಕರ್ನಾಟಕದಲ್ಲಿರುವ ಚತುರ್ಮುಖ ಬಸದಿಗಳ ಈ ಇಲಿರುವ ಚತುರ್ಮುಖ ಬಸದಿ ಬಹು ಆಕರ್ಷಕ ಗೇರಸೊಪ್ಪೆ ಅಥವಾ ಗೇರುಸೊಪ್ಪೆಯು ಈಗ ಹೊನ್ನಾವರ ತಾಲೂಕು ನಗರ ಗ್ರಾಮದ ಒಂದು ಚಿಕ್ಕ ಹಳ್ಳಿ, ಆದರೆ ವಿಶೇಷವಾದ ಐತಿಹಾಸಿಕ ಮಹತ್ವವನ್ನು ಹೊಂದಿದೆ ಪ್ರಾಚೀನ ದಾಖಲೆಗಳಲ್ಲಿ ಇದನ್ನು ಕೇಮಪುರ ಭಲ್ಲಾತಕೀಪುರ ಮತ್ತು ನಗರಬಸ್ತಿಪುರ ಎಂದು ಕರೆಯಲಾಗಿದೆ. ಹೊನ್ನಾವರ ಸಾಗರ ರಸ್ತೆಯಲ್ಲಿ ಹೊನ್ನಾವರದಿಂದ 39 ಕಿಲೋಮೀಟರ್ ದೂರ ಹೋಗುವಾಗ ಸಿಗುವ ಶರಾವತಿ ನದಿಯ ಗೇರುಸೊಪ್ಪೆ ಅಣೆಕಟ್ಟಿನ ಕೆಳಗಡೆಯಿಂದ ಹೋಗುವ ಕಚ್ಚಾರಸ್ತೆರರುಲ್ಲಿ 6 ಕಿಲೋಮೀಟರ್ ಮುಂದುವರಿದಾಗ ಈ ಪ್ರದೇಶ ಸಿಗುತ್ತದೆ ಇಲ್ಲಿಯ ಕಾಡಿನ ಮಧ್ಯದ ಒಂದು ಬಟ್ಟೆಯ ಮೇಲ್ಬಾಗದಲ್ಲಿ ಈ ಬಸದಿ ಇದೆ. ಇದಕ್ಕೆ ನಾಲ್ಕು ದ್ವಾರಗಳು ಇರುವುದರಿಂದ ಇದು ಚತುರ್ಮುಖ ಬಸದಿ. ಈ ದ್ವಾರಗಳನ್ನು ಪ್ರವೇಶಿಸಿ ಮುಂದುವರಿದಾಗ ಸಿಗುವ ಹಜಾರದಂತಹ ಮಂಟಪದ ಮಧ್ಯದ ಗರ್ಭಗೃಹದಲ್ಲಿ ನಾಲ್ಕು ದಿಕ್ಕುಗಳಿಗೆ (ಅಂದರೆ ಪ್ರವೇಶ ದ್ವಾರಗಳಿಗೆ) ಮುಖಮಾಡಿ ಪದಾಸನ ಭಂಗಿಯಲ್ಲಿ ಕುಳಿತಿರುವ ನಾಲ್ಕು ಸುಂದರ ಶಿಲಾ ಜಿನ ಬಿಂಬಗಳಿವೆ. ಇವು ವರ್ತಮಾನ ಕಾಲದ ಮೊದಲ ತೀರ್ಥಂಕ‌ರುಗಳಾದ ಭಗವಾನ್ ವೃಷಭ, ಅಜಿತ, ಶಂಭವ ಮತ್ತು ಅಭಿನಂದನರ ಬಿಂಬಗಳು.[]

ಇತಿಹಾಸ

[ಬದಲಾಯಿಸಿ]

ಕ್ರಿ. ಶಿ. 14ನೇ ಶತಮಾನದ ಆರಂಭದಿಂದ ಕ್ರಿ. 1606ರವರೆಗೆ ಗೇರುಸೊಪ್ಪೆಯ ಸಾಳುವ ಅರಸರ ರಾಜಧಾನಿಯಾಗಿತ್ತು ಹಾಗೂ ಮಧ್ಯದಲ್ಲಿ ಹರಿಯುವ ಶರಾವತಿ ನದಿಯ ಇಕ್ಕೆಲಗಳಲ್ಲಿ ಹರಡಿತ್ತು. ಈಗ ದಟ್ಟವಾದ ಕಾಡಿನಿಂದ ಆವರಿಸಿರುವ ಈ ಪ್ರದೇಶದಲ್ಲಿ ಈಗ ಉತ್ತಮ ಸ್ಥಿತಿಯಲ್ಲಿರುವ ಕೆಲವು ಬಸದಿಗಳಲ್ಲದೆ ಬಿದ್ದು ಹೋಗಿರುವ ಹಲವಾರು ಬಸದಿಗಳ ಮನೆಗಳ, ದೊಡ್ಡ ದೊಡ್ಡ ಮಹಲುಗಳ ಅಸ್ತಿವಾರಗಳನ್ನು ರಸ್ತೆಗಳ ಗುರುತುಗಳನ್ನು ಮತ್ತು ಶಿಲಾಶಾಸನಗಳನ್ನು ಕಾಣಬಹುದು. ಇಲ್ಲಿಂದ ಆಳಿದ ಕೊನೆಯ ರಾಣಿ (ಕರಿಮೆಣಸಿನ ರಾಣಿ) ಚನ್ನಭೈರಾದೇವಿ ಇರುವ ವರೆಗೆ ಈ ಪಟ್ಟಣವು ಉತ್ತುಂಗ ವೈಭವದಲ್ಲಿತ್ತು. ಬಸದಿಗಳು ಅರಮನೆಗಳು ಮತ್ತು ಸಿರಿವಂತಿಕೆಯ ಮನೆಗಳಿಂದ ಕಂಗೊಳಿಸುತ್ತಿತ್ತು. ಚತುರ್ಮುಖ ಬಸದಿಯು ತುಂಬಾ ಹಿರಿದಾದುದು ಹಾಗೂ ಪ್ರಸಿದ್ಧವಾದುದು. ಇದರ ಪರಿಸರವನ್ನು ಒಂದು ಹಿರಿಯ ಸಾಂಸ್ಕೃತಿಕ ಸ್ಮಾರಕವಾಗಿ ಸಂರಕ್ಕಿಕೊಂಡು ಬರುವ ಅಗತ್ಯವಿದೆ.ಆದುದರಿಂದ ಕೇಂದ್ರ ಪುರಾತತ್ವ ಇಲಾಖೆ ಇದನ್ನು ತನ್ನ ಸುಪರ್ದಿಗೆ ತಂದುಕೊಂಡು ತನ್ನದೇ ಆದ ರೀತಿಯಲ್ಲಿ ಸಂರಕ್ಷಿಸಿಕೊಂಡು ಬರುತ್ತಿದೆ. ಸಾಮಾನ್ಯವಾಗಿ ಬಸದಿಗಳನ್ನು ತೀರ್ಥಂಕ‌ರು ಭಗವಾನರ ಸಮವಸರಣದ ಪ್ರತಿರೂಪಗಳೆಂದು ಹೇಳುತ್ತಾರೆ. ಚತುರ್ಮುಖ ಬಸದಿಗಳಲ್ಲಿ ಇವು ಸ್ಪಷ್ಟವಾಗಿ ರೂಪಿತವಾಗಿವೆ. ಯಾಕೆಂದರೆ ಸಮವಸರಣದಲ್ಲಿ ಕುಳಿತು ತಮ್ಮ ದಿವ್ಯಧ್ವನಿಯ ಮೂಲಕ ಧರ್ಮೋಪದೇಶ ಮಾಡುವ ಜೀನೇಶ್ವರರು, ಸುತ್ತಲೂ ಕುಳಿತಿರುವ ಜನರು, ಮೃಗ, ಪಕ್ಷಿಯಾದಿಯಾಗಿ ಎಲ್ಲ ಜೀವಿಗಳಿಗೆ ಸಮಾನವಾಗಿ ಕಾಣುತ್ತಿದ್ದರು. ಅವರ ದಿವ್ಯ ದರ್ಶನವಾಗುತ್ತಿತ್ತು. ಇದೇ ಭಾವನ ಸರಿಯಾಗಿ ಪ್ರತಿಬಿಂಬಿತವಾಗಲು ಇಂತಹ ಚತುರ್ಮುಖ ಬಸದಿಗಳನ್ನು ನಿರ್ಮಿಸುತ್ತಿದ್ದರು. ಮೊದಲಿಗೆ ಒಬ್ಬರೇ ತೀಥರ್ಂಕರರ ನಾಲ್ಕು ಮೂರ್ತಿಗಳನ್ನು ತಯಾರಿಸಿ ಪ್ರತಿಷ್ಟಾಪಿಸುತ್ತಿದ್ದರು. ಆದರೆ ಅನಂತರದ ಕಾಲದಲ್ಲಿ ತಮಗೆ ಪ್ರಿಯರಾದ ತೀಥರ್ಂಕರರ ಮೂರ್ತಿಗಳನ್ನು ಪ್ರತಿಷ್ಟಾಪಿಸತೊಡಗಿದರು. ಈ ಮಂದಿರದಲ್ಲಿ ವರ್ತಮಾನ ಕಾಲದ ಮೊದಲ ನಾಲ್ಕರು ತೀಥರ್ಂಕರರ ಬಿಂಬಗಳನ್ನು ಪ್ರತಿಷ್ಟಾಪಿಸಲಾಗಿದೆ. ದಷ್ಟ ಪುಷ್ಟವಾದ ಮೈಕಟ್ಟನ್ನು ಹೊಂದಿ ಪ್ರಸನ್ನ ಮುಖ ಮುದ್ರೆಯೊಂದಿಗೆ ಶೋಭಾಯಮಾನರಾಗಿದ್ದಾರೆ. ಅಭಿಷೇಕ, ಪೂಜೆ. ಇತ್ಯಾದಿಗಳನ್ನು ಮಾಡದಿರುವುದರಿಂದ ಬೂದು ಬಣ್ಣದ ಧೂಳು ಮೈಮೇಲೆ ಇದೆ. ಬದಿಗಳಲ್ಲಿ ಕಂಬದಂತಹ ರಚನೆಗಳಿದ್ದು ಮೇಲ್ಬಾಗದಲ್ಲಿ ಅರ್ಧವೃತ್ತಾಕಾರದ ಪ್ರಭಾವಳಿಯಿದ್ದು ಸರಳವಾದ ಅಲಂಕಾರಿಕ ಕೆತ್ತನೆಗಳೊಂದಿಗೆ ಮಧ್ಯದಲ್ಲಿ ಕೀರ್ತಿಮುಖ ಹೊಂದಿವೆ. ಮೊದಲ ನಾಲ್ಕೂ ಪ್ರವೇಶದ್ವಾರದ ಬದಿಗಳಲ್ಲಿ ದ್ವಾರಪಾಲಕರ ಉಬ್ಬುಶಿಲ್ಪಗಳಿವೆ. ಬಸದಿಯ ಪ್ರಾಂಗಣದಲ್ಲಿ ಪುರಾತತ್ವ ಇಲಾಕರಯು ಒಂದು ಫಲಕವನ್ನು ಹಾಕಿ ಹೀಗೆಂಬ ಮಾಹಿತಿಯನ್ನು ಹಾಕಿ ಹೀಗೆಂಬ ಮಾಹಿತಿಯನ್ನು ಕೊಡುತ್ತದೆ. ಈ ವಿಶಿಷ್ಟ ಜಿನಮಂದಿರವನ್ನು ನಗಿರೆ - ಹಾಡುವಳ್ಳಿಗಳ ರಾಣಿಯಾದ ಚೆನ್ನಾಭೈರಾದೇವಿ ನಿರ್ಮಿಸಿದಳು ಎಂದು ಹೇಳಲಾಗುತ್ತದೆ. ಶಾಸನಗಳಲ್ಲಿ ವರ್ಣಿಸಿರುವಂತೆ ನಗರೆ, ತುಳು, ಹೈವ, ಕೊಂಕಣ ರಾಜ್ಯವಾಳುತ್ತಿದ್ದ ಈಕೆ ವಿಸ್ತಾರವಾದ ರಾಜ್ಯವನ್ನೂ ಅಪಾರ ಸಂಪತ್ತನ್ನೂ ಹೊಂದಿದಳು. ವಿದೇಶಗಳಿಗೂ ಬಹಳ ಪ್ರಮಾಣದ ಕರಿಮೆಣಸನ್ನು ರಫ್ತುಮಾಡಿ ಕರಿಮೆಣಸಿನ ರಾಣಿಯೆಂದು ಖ್ಯಾತಿ ಪಡೆದಿದ್ದಳು. ವಿಜಯನಗರದ ಚಕ್ರವರ್ತಿಗಳಿಗೆ ಆತ್ಮೀಯಳಾಗಿದ್ದು, ಗೌರವದ ಸ್ಥಾನದಲ್ಲಿದ್ದಳು. ತನ್ನ ಸಾಂಸ್ಕೃತಿಕ ರಾಜಧಾನಿಯಾಗಿದೆ ಈ ಗೇರುಸೊಪ್ಪೆಯಲ್ಲಿ ಈ ಚತುರ್ಮುಖ ಬಸದಿ ಮಾತ್ರವಲ್ಲದೆ, ಇನ್ನೂರ ಎಂಟು ಬಸದಿಗಳನ್ನು ನಿರ್ಮಿಸಿದ್ದಳೆಂದು ಹೇಳಲಾಗುತ್ತದೆ. ಅವುಗಳ ಪೈಕಿ ಕೆಲವು ಬಸದಿಗಳ ಅವಶೇಷಗಳನ್ನು ಇಲ್ಲಿನ ಸುಮಾರು ಮೂರು ಕಿಲೋಮೀಟರ್ ಸುತ್ತಳತೆಯಲ್ಲಿ ಕಾಣಬಹುದು. ಇನ್ನೂ ಕೆಲವು ಉತ್ತಮ ಸ್ಥಿತಿಯಲ್ಲಿವೆ.

ವಿನ್ಯಾಸ

[ಬದಲಾಯಿಸಿ]

ಈ ಬಸದಿಯು ವಿಜಯನಗರ ಕಾಲಾವಧಿಯಲ್ಲಿ ಅವಧಿಯಲ್ಲಿ ಕಟ್ಟಲಾಗಿದೆ. ಗರ್ಭಗೃಹದ ನಾಲ್ಕೂ ದಿಕ್ಕಿಗೆ ಒಂದೊಂದು ದ್ವಾರಬಂಧಗಳಿವೆ. ಸುತ್ತಲೂ ಸಭಾಮಂಟಪವಿದೆ ಇಂತಹ ವಾಸ್ತು ನಿರ್ಮಾಣಗಳನ್ನು ಸರ್ವತೋಭದ ಎಂದು ಕರೆಯುತ್ತಾರೆ. ಗರ್ಭಗೃಹದ ನಾಲ್ಕೂ ದಿಕ್ಕುಗಳ ಪ್ರವೇಶ ದ್ವಾರದಲ್ಲಿ ಎಡಬಲಕ್ಕೆ ಹಾವುಗದೆಗಳನ್ನು ಹಿಡಿದ ದ್ವಾರಪಾಲಕರಿದ್ದಾರೆ. ಈ ದೇವಸ್ಥಾನವು ನಕ್ಷತ್ರಾಕಾರದ ಜಗತಿಯ ಮೇಲಿದೆ. ಹೊರಗೋಡೆಗಳ ಮೇಲೆ ಅಲಂಕೃತ ಗೂಡುಗಳಲ್ಲಿ ದೇವ ದೇವಿಯರ ಶಿಲ್ಪಗಳಿವೆ ಮತ್ತು ಕೆಲವು ಜಾಲಂಧ್ರಗಳಿವೆ. ದ್ರಾವಿಡ ಮತ್ತು ಕದಂಬ ನಾಗರ ಶಿಖರಗಳುಳ್ಳ ಗೂಡುಗಳಲ್ಲಿ ಶಿಲ್ಪಗಳಿವೆ ನಾಲ್ಕು ಸ್ತಂಭಗಳಿಂದ ಕೂಡಿದ ನವರಂಗಗಳಿವೆ. ಅದರಲ್ಲಿ ದೇವ ಕೋಷಗಳಿವೆ. ಮೂರು ದ್ವಾರಬಂಧಗಳ ಲಲಾಟದಲ್ಲಿ ತೀಥರ್ಂಕರರ, ದಕ್ಷಿಣ ದ್ವಾರ ಬಂಧದಲ್ಲಿ ಗಜಲಕ್ಷ್ಮಿಯ ಶಿಲ್ಪಗಳಿವೆ” ಮೇಲಿನ ಆರೂಢರಲ್ಲಿ ಸುಂದರವಾದ ಅಧೋಮುಖ ಕಮಲಗಳಿವೆ. ಪ್ರಧಾನವಾದ ಈ ಚತುರ್ಮುಖ ಬಸದಿಗೆ ಹಿಂದಿನ ಕಾಲದಲ್ಲಿ ಎತ್ತರವಾದ ಮಾನಸ್ತಂಭವಿತ್ತಂತೆ. ಈಗ ಅದರ ಪೀಠ ಮಾತ್ರವಿದೆ. ಅದರ ಮಧ್ಯದಲ್ಲಿ ಸಪುರವಾದ ಶಿಲೆಯ ಕಂಬವನ್ನು ನೆಟ್ಟಿದ್ದಾರೆ. ಬಸದಿಯ ಅಧಿಷ್ಠನಾದ ಮೇಲೆ ಬಸದಿಯ ಸುತ್ತಲೂ ಹೊರಗಡೆಯಿಂದ ಪ್ರದಕ್ಷಿಣಾ ಪಥವಿತ್ತು. ಇದರ ಸುತ್ತಲೂ ಹಾಕಿರುವ ಮೂರು ಮೂರು ಪಟ್ಟಕಗಳ ಒಂದೇ ಪ್ರಮಾಣದ ಮತ್ತು ಎತ್ತರದ ಶಿಲಾಸ್ತಂಭಗಳು ಬಸದಿಯ ಸುತ್ತಲಿನ ಇಳಿಜಾರಾದ ಮಾತನ್ನು ಆಧರಿಸಿಕೊಂಡಿರುವಂತೆ ಕಾಣುತ್ತದೆ. ವಿಶೇಷ ಮಳೆ ಬರುವ ಈ ಪ್ರದೇಶಕ್ಕೆ ಇಂತಹ ಮಾಡಿನ ಅಗತ್ಯವೂ ಇತ್ತು . ಹಿಂದೆ ಬಸದಿಯ ಬಳಿಯಲ್ಲಿ ಪಾರಿಜಾತ ಹೂವಿನ ಮರಗಳಿದ್ದವಂತೆ. ಈಗ ಯಾವುದೂ ಇಲ್ಲ. ಬದಲಾಗಿ ಪ್ರಾಚ್ಯ ಇಲಾಖೆಯವರು ಅಂಗಳದಲ್ಲಿ ಬಸದಿಯ ಸುತ್ತಲೂ ಹುಲ್ಲನ್ನೂ, ಕೆಲವು ಅಲಂಕಾರಿಕ ಗಿಡಗಳನ್ನೂ ಬೆಳೆಸಿದ್ದಾರೆ.

ಒಳಂಗಣ ವಿನ್ಯಾಸ

[ಬದಲಾಯಿಸಿ]

ಪಾಂಗಣದ ಹೊರಗಡೆ ಎರಡು ಸುತ್ತಿನ ಪ್ರಾಕಾರಗೋಡೆ ಇದ್ದಂತೆ ಕಂಡು ಬರುತ್ತದೆ. ಈಗ ಅದು ಬಹಳ ತುಟಿತಗೊಂಡಿದೆ. ಇದರ ಒಳಗಡೆ, ಪಾಂಗಣದ ಬಳಿಯಲ್ಲಿ ಕ್ಷೇತ್ರಪಾಲ ಎಂದು ಗುರುತಿಸಿಕೊಳ್ಳಬಹುದಾದ ಸಾನ್ನಿಧ್ಯವೊಂದಿದೆ.

ಹೊರಾಂಗಣ ವಿನ್ಯಾಸ

[ಬದಲಾಯಿಸಿ]

ಈ ಪ್ರಧಾನ ಬಸದಿಯ ಆವರಣದೊಳಗೆ ನಾಲ್ಕಾರು ಬಸದಿಯಂತಹ ಕಟ್ಟಡಗಳಿದ್ದು ಎಲ್ಲವೂ ಹಾಳು ಬಿದ್ದಿವೆ. ಆದರೆ ಎಲ್ಲವೂ ಈ ಪ್ರಧಾನ ಬಸದಿಗೆ ಮುಖ ಮಾಡಿಕೊಂಡಿವೆ. ಇವು ಏನು ಎಂದು ಸಷ್ಟವಾಗಿ ಹೇಳಲು ಸದ್ಯಕ್ಕೆ ಸಾಧ್ಯವಿಲ್ಲ. ಒಳಗಡೆ ಮತ್ತು ಬದಿಗಳಲ್ಲಿ ಹುಲ್ಲು ಮರ ಗಿಡಗಳು ಬೆಳೆದುಕೊಂಡಿವೆ. ಬದಿಗಳಲ್ಲಿ ಒಟ್ಟು ಲೆಕ್ಕ ಮಾಡಿದರೆ ಸುಮಾರು ಒಂಭತ್ತು ಇಂತಹ ಹರಿದು ಮುರಿದು ಬಿದ್ದಿರುವ ಹಳೆಯ ಕಟ್ಟಡಗಳ ಆಸ್ತಿವಾರಗಳಿವೆ.

ಈ ಜಿನಾಲಯಕ್ಕೆ ಸಂಬಂಧಿಸಿದ ಕುಟುಂಬಗಳೆಂದು ಹೇಳುತ್ತಿರುವವರು ಯಾರೂ ಇಲ್ಲಿಗೆ ಬರುವುದಿಲ. ಸಂದರ್ಶಕರು ಮತ್ತು ಇದನ್ನು ಪ್ರಾಕ್ತನ ಶಾಸ್ಕರೀತಾ ಅಧ್ಯಯನ ಮಾಡಬೇಕೆನ್ನುವವರು ಬರುತ್ತಾರೆ. ಪ್ರತಿದಿನ ಅಭಿಷೇಕ ಪೂಜೆಗಳು ಯಾವುದೂ ನಡೆಯುವುದಿಲ್ಲ. ಅಭಿಷೇಕ ಪೂಜೆಗಳು ಯಾವುದು ಕೆಲವೊಮ್ಮೆ ಇಲ್ಲಿಯವರೂ, ಆಗಮಿಸಿದ ಸಂದರ್ಶಕರೂ ಸ್ವಲ್ಪ ಜಲವನ್ನೊ ಹಾಲನೋ ತಂದು ಅಭಿಷೇಕ ಮಾಡುತ್ತಾರೆ. ಇಲ್ಲಿ ಇತರ ಸೇವೆ ಪೂಜಾದಿಗಳಿಗೆ ಅವಕಾಶವಿಲ್ಲ, ಈ ಬಸದಿಯ ಪರಿಸರಕ್ಕೆ ಸುಮಾರು ವರ್ಷಗಳ ಹಿಂದೆ ಶ್ರೀ ವರ್ಧಮಾನ ಮುನಿಗಳೆಂಬವರ ಮುನಿಸಂಘ ಒಂದು ಬಂದಿತ್ತು. ಅವರೂ ಇಲ್ಲಿಗೆ ಆಗಮಿಸಿದ ಇತರ ಸಂದರ್ಶಕರೂ ಇದನ್ನು ನೋಡಿ ತಮ ವ್ಯಕ್ತಪಡಿಸಿದ್ದಾರೆ. ಇಲ್ಲಿಯ ಜೈನ ಶ್ರಾವಕ ಬಂಧುಗಳು. ಹಾಗೂ ಸಂದರ್ಶಕರ ಒಟ್ಟು ಅಭಿಪ್ರಾಯವು ಒಗಿ ಇದು ತುಂಬಾ ಸುಂದರವಾದ ಪರಿಸರದಲ್ಲಿದೆ. ತುಂಬಾ ಕಾರಣಿಕ ಶಕ್ತಿಯ ಕೇಂದ್ರವಿದು. ಪಾವಿತ್ರತೆಯನ್ನು ಹಾಗೆಯೇ ಉಳಿಸಿಕೊಂಡಿದೆ. ಪ್ರಾಚ್ಯ ಇಲಾಖೆಯಿಂದ ಹಿಂದಕ್ಕೆ ಪಡೆದು ಇದನ್ನು ಪುನಃ ಮೊದಲಿನ ಸ್ಥಿತಿಗೆ ತಂದು ಪೂಜೆ ಪುರಸ್ಕಾರಗಳನ್ನು ಮಾಡಲು ಸಮಾಜದ ಮುಖ್ಯಸ್ಥರಿಗೆ ಅನುಮತಿ ಕೊಟ್ಟಲ್ಲಿ, ಇದರಿಂದ ಸಮಾಜಕ್ಕೆ ಒಳಿತಾಗಬಹುದೆಂದು ನಮ್ಮ ಅಭಿಪ್ರಾಯ.

ಉಲ್ಲೇಖ

[ಬದಲಾಯಿಸಿ]
  1. ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳು. ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೮೬.