ವಿಷಯಕ್ಕೆ ಹೋಗು

ರಿಗ್ರೆಟ್ ಅಯ್ಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ರಿಗ್ರೆಟ್ ಅಯ್ಯರ್(ನಿಜ ನಾಮಧೇಯ: ಸತ್ಯನಾರಾಯಣ ಅಯ್ಯರ್) ಒಬ್ಬ ಕನ್ನಡಿಗ ಬರಹಗಾರ ಪತ್ರಕರ್ತ ವ್ಯಂಗ್ಯಚಿತ್ರಕಾರ ಛಾಯಾಗ್ರಾಹಕ ಮತ್ತು ಪ್ರಕಾಶಕ. ವಿವಿಧ ಪತ್ರಿಕೆ/ನಿಯತಕಾಲಿಕೆಗಳಿಂದ ಬಂದ ಸುಮಾರು ೩೭೫ರಷ್ಟು ತಿರಸ್ಕಾರ ಪತ್ರಗಳನ್ನು ಪಡೆದ ಕಾರಣದಿಂದ ತಮ್ಮ ಹೆಸರನ್ನೇ ರಿಗ್ರೆಟ್ ಅಯ್ಯರ್ ಎಂದು ಬದಲಿಸಿಕೊಂಡ ಒಬ್ಬ ಅಪರೂಪದ ವ್ಯಕ್ತಿ.

ರಿಗ್ರೆಟ್ ಅಯ್ಯರ್ ಅವರು ಹುಟ್ಟಿದ್ದು ಸೆಪ್ಟೆಂಬರ್ ೨೮, ೧೯೫೦ರಂದು ಕೋಲಾರದಲ್ಲಿ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ದಾಖಲೆಗಳು

[ಬದಲಾಯಿಸಿ]

೧೯೬೪ರಲ್ಲಿ ಬಿಜಾಪುರದ ಬಗೆಗಿನ ಒಂದು ಛಾಯಾಚಿತ್ರವನ್ನು, ಟಿಪ್ಪಣಿಯ ಜೊತೆಗೆ ಬರೆದು ಬಿಜಾಪುರದ ಖ್ಯಾತ ಸಂಜೆ ಪತ್ರಿಕೆ ಜನವಾಣಿಗೆ ಕಳಿಸಿದ್ದರು. ಅದನ್ನು ಪತ್ರಿಕೆಯ ಸಂಪಾದಕರು ತಿರಸ್ಕರಿಸಿ ಮಾರುತ್ತರ ಬರೆದಿದ್ದರು. ಇದು ಅಯ್ಯರ್ ಅವರು ಮೊದಲ ಸಲ ಪಡೆದ ತಿರಸ್ಕಾರ ಪತ್ರ[]. ಮಾರ್ಚ್ ೨, ೧೯೯೦ರವರೆಗೆ ರಿಗ್ರೆಟ್ ಅಯ್ಯರ್ ಅವರು ವಿವಿಧ ಪತ್ರಿಕೆ/ನಿಯತಕಾಲಿಕೆಗಳಿಂದ ಸ್ವೀಕರಿಸಿದ ಒಟ್ಟು ತಿರಸ್ಕಾರ ಪತ್ರಗಳ ಸಂಖ್ಯೆ ೩೭೫. ಈ ರೀತಿ ಅತೀ ಹೆಚ್ಚು ತಿರಸ್ಕಾರ ಪತ್ರಗಳನ್ನು ಪಡೆದ ವ್ಯಕ್ತಿಯಾಗಿ ರಿಗ್ರೆಟ್ ಅಯ್ಯರ್ ಅವರು ದಾಖಲೆ ನಿರ್ಮಿಸಿದ್ದಾರೆ. ಮಾತ್ರವಲ್ಲ ಇವರ ಈ ದಾಖಲೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ[].

ಪ್ರಶಸ್ತಿ

[ಬದಲಾಯಿಸಿ]

ರಿಗ್ರೆಟ್ ಅಯ್ಯರ್ ಅವರನ್ನು ಅವರ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಟಿ.ಎಸ್.ಸತ್ಯನ್ ಸ್ಮಾರಕ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ[].

ಉಲ್ಲೇಖಗಳು

[ಬದಲಾಯಿಸಿ]
  1. "The Indian man who changed his name to Regret". BBC.com. BBC. Retrieved 20 December 2020.
  2. "Maximum Number of Regret Slips Received". indiabookofrecords.in/. India Book of Records. Retrieved 20 December 2020.
  3. "T.S. SATYAN Awards for Photojournalists". indianjournalismreview.com. indianjournalismreview.com.