ವಿಷಯಕ್ಕೆ ಹೋಗು

ಸಿಜು ಗುಹೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಜು ಗುಹೆ ಬಳಿ ಸುಣ್ಣದ ರಚನೆಗಳು

ಸಿಜು ಗುಹೆ, (ಇಂಗ್ಲಿಷ್‍ನಲ್ಲಿ ಬ್ಯಾಟ್ ಕೇವ್-ಬಾವಲಿ ಗುಹೆ ಎಂದೂ ಪರಿಚಿತವಾಗಿದೆ) ಈಶಾನ್ಯ ಭಾರತದ ರಾಜ್ಯವಾದ ಮೇಘಾಲಯದಲ್ಲಿ ನಪಾಕ್ ಸರೋವರ ಹಾಗೂ ಸಿಂಸಾಂಗ್ ನದಿ ಅಭಯಾರಣ್ಯದ ಹತ್ತಿರ ಸ್ಥಿತವಾಗಿದೆ. ಇದು ಸುಣ್ಣದಕಲ್ಲಿನ ಗುಹೆಯಾಗಿದ್ದು ತನ್ನ ನೆಲತೊಂಗಲುಗಳು ಮತ್ತು ತೂಗುತೊಂಗಲುಗಳಿಗೆ ಪ್ರಸಿದ್ಧವಾಗಿದೆ.[]

ಸಿಜು ಗುಹೆ-ವ್ಯವಸ್ಥೆಯು 4 ಕಿಲೋಮೀಟರ್‌ಗಳಿಗಿಂತ ಹೆಚ್ಚು ಉದ್ದವಾಗಿದೆ, ಆದರೆ ಬಹುತೇಕ ಎಲ್ಲವೂ ನೀರಿನಿಂದ ತುಂಬಿದ್ದು ಇದನ್ನು ಪ್ರವೇಶಿಸಲಾಗುವುದಿಲ್ಲ. ಮೇಘಾಲಯದ ಸುಣ್ಣದಕಲ್ಲಿನ ಬೆಟ್ಟಗಳು ಸಾಕಷ್ಟು ಮಳೆ ಮತ್ತು ತೇವಾಂಶವನ್ನು ಪಡೆಯುತ್ತವೆ ಮತ್ತು ಇತರ ಅನೇಕ ಗುಹೆ-ವ್ಯವಸ್ಥೆಗಳನ್ನು ಹೊಂದಿವೆ, ಅವುಗಳಲ್ಲಿ ಕೆಲವು ಸಿಜುಗಿಂತ ಹೆಚ್ಚು ಉದ್ದ ಮತ್ತು ದೊಡ್ಡದಾಗಿವೆ, ಆದರೆ ಸಿಜು ಗುಹೆಯು ಅತ್ಯಂತ ಸಮಗ್ರವಾಗಿ ಸಂಶೋಧಿಸಲ್ಪಟ್ಟ ಮತ್ತು ಅನ್ವೇಷಿಸಲಾದ ವ್ಯವಸ್ಥೆಗಳಲ್ಲಿ ಒಂದಾಗಿದೆ.

ಸಿಜು ಗುಹೆಗಳು 21–26.4 °C ನಡುವಿನ ಸ್ಥಿರ ತಾಪಮಾನವನ್ನು ಹೊಂದಿವೆ ಎಂದು 1927 ರಲ್ಲಿ ಕಂಡುಬಂದಿತು. []

ಕೆಲವು ಅಪರೂಪದ ಬಾವಲಿ ಪ್ರಭೇದಗಳು ಈ ಗುಹೆಗಳಲ್ಲಿ ವಾಸಿಸುತ್ತವೆ.[]

ಸಾಹಿತ್ಯ

[ಬದಲಾಯಿಸಿ]
  • Stanley Kemp (1924). Rhynchota of the Siju Cave, Garo Hills, Assam (PDF).

ಉಲ್ಲೇಖಗಳು

[ಬದಲಾಯಿಸಿ]
  1. The Indian Encyclopaedia, Volume 1. Genesis Publishing Pvt Ltd. p. 6573. ISBN 9788177552577.
  2. Biospeleology: The Biology of Cavernicolous animals. Elsevier. p. 309. ISBN 9781483185132.
  3. "Meghalaya: Visit Asia's cleanest village & meet the flurry red panda". The Economic Times. Archived from the original on 2016-03-05. Retrieved 2020-11-03.

ಹೊರಗಿನ ಕೊಂಡಿಗಳು

[ಬದಲಾಯಿಸಿ]