ಸ್ಥಾಯಿ ಆದೇಶ
ಸ್ಥಾಯಿ ಆದೇಶ (ಅಥವಾ ಸ್ಥಾಯಿ ಸೂಚನೆ) ಎಂದರೆ ಬ್ಯಾಂಕ್ ಖಾತೆಯನ್ನು ಹೊಂದಿರುವವನು ("ಪಾವತಿಸುವವನು") ಒಂದು ನಿರ್ದಿಷ್ಟ ಮೊತ್ತವನ್ನು ನಿಯಮಿತ ಅಂತರಗಳಲ್ಲಿ ಮತ್ತೊಬ್ಬನ ("ಹಣ ಪಡೆಯುವವ") ಖಾತೆಗೆ ಸಂದಾಯ ಮಾಡುವಂತೆ ತನ್ನ ಬ್ಯಾಂಕ್‍ಗೆ ಕೊಡುವ ಸೂಚನೆ. ಈ ಸೂಚನೆಯನ್ನು ಕೆಲವೊಮ್ಮೆ ಬ್ಯಾಂಕರ್‌ನ ಆದೇಶ ಎಂದು ಕರೆಯಲಾಗುತ್ತದೆ.
ಇವನ್ನು ಸಾಮಾನ್ಯವಾಗಿ ಬಾಡಿಗೆ, ಅಡಮಾನ, ಅಥವಾ ಯಾವುದೇ ಇತರ ಸ್ಥಿರ ನಿಯಮಿತ ಸಂದಾಯಗಳನ್ನು ಪಾವತಿಸಲು ಬಳಸಲಾಗುತ್ತದೆ. ಪಾವತಿಸಲಾಗುವ ಮೊತ್ತಗಳು ಸ್ಥಿರವಾಗಿರುವುದರಿಂದ, ಸ್ಥಾಯಿ ಆದೇಶವು ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಅಥವಾ ಅನಿಲ ಅಥವಾ ವಿದ್ಯುಚ್ಛಕ್ತಿ ಬಿಲ್ಲುಗಳಂತಹ ವ್ಯತ್ಯಯವಾಗುವ ಬಿಲ್ಲುಗಳನ್ನು ಪಾವತಿಸಲು ಸೂಕ್ತವಾಗಿರುವುದಿಲ್ಲ.
ಸ್ಥಾಯಿ ಆದೇಶಗಳು ನೇರದೇಣಿಗಳಿಂದ (ಡೈರೆಕ್ಟ್ ಡೆಬಿಟ್) ಭಿನ್ನವಾಗಿವೆ; ಎರಡೂ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಪುನರಾವರ್ತಿತ ಹಣ ವರ್ಗಾವಣೆಯನ್ನು ಸ್ಥಾಪಿಸುವ ವಿಧಾನಗಳಾಗಿವೆ, ಆದರೆ ಅವು ವಿಭಿನ್ನ ರೀತಿಗಳಲ್ಲಿ ಕಾರ್ಯನಡೆಸುತ್ತವೆ. ಮೂಲಭೂತ ವ್ಯತ್ಯಾಸವೆಂದರೆ ಸ್ಥಾಯಿ ಆದೇಶಗಳು ಪಾವತಿಸುವವನು ಏರ್ಪಾಟು ಮಾಡಿದ ಸಂದಾಯಗಳನ್ನು ಕಳುಹಿಸುತ್ತವೆ. ನೇರದೇಣಿಗಳನ್ನು ಹಣ ಸ್ವೀಕರಿಸುವವನು ನಿರ್ದಿಷ್ಟಪಡಿಸಿ ಸಂಗ್ರಹಿಸುತ್ತಾನೆ.[೧]
ಉಲ್ಲೇಖಗಳು
[ಬದಲಾಯಿಸಿ]- ↑ "Standing order vs Direct Debit". SmartDebit (in ಬ್ರಿಟಿಷ್ ಇಂಗ್ಲಿಷ್). 2012-04-19. Retrieved 2017-07-05.