ಚಚಡಿ
ಚಚಡಿ ಇದು ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಒಂದು ಪ್ರಮುಖ ಗ್ರಾಮ. ಸುಮಾರು ೮೫೦ ವರ್ಷಗಳಷ್ಟು ಹಳೆಯ ಗ್ರಾಮ.[೧] ಚಚಡಿ ಗ್ರಾಮವು ಮೊದಲು ಜಹಗೀರ್ ಆಗಿದ್ದು, ಮೊದಲು ವಿಜಯನಗರ, ನಂತರ ಬಹಮನಿ ಮತ್ತು ಕೊನೆಗೆ ಕಿತ್ತೂರು ಸಂಸ್ಥನದ ಭಾಗವಾಗಿತ್ತು
ಇಲ್ಲಿನ ದೇಸಾಯಿ ಕುಟುಂಬದ ವಾಡೆ (ಕೋಟೆ) ಇದ್ದು, ಇಲ್ಲಿನ ಆಳಿಕೆದಾರರು ಆಗಿದ್ದರು.
ಚಚಡಿ ಗ್ರಾಮವು ಹತ್ತಿರದ ಗ್ರಾಮಗಳಿಗೆ ಶೈಕ್ಷಣಿಕ, ಆರೋಗ್ಯ ಮತ್ತು ಮಾರುಕಟ್ಟೆಯ ಕೇಂದ್ರವಾಗಿದೆ.
ಹತ್ತಿರದ ೩೫೦ ಗ್ರಾಮಗಳ ಆಳ್ವಿಕೆ ಚಚಡಿ ಅಧಿಕಾರಕ್ಕೆ ಒಳಪಟ್ಟಿತ್ತು. ಸರದಾರ್ ವೀರಪ್ಪ ಗುರಪ್ಪ ದೇಸಾಯಿ ಅವರ ಅಧಿಕಾರದ ಅಡಿಯಲ್ಲಿ ಹೆಸರುವಾಸಿ ಆಗಿತ್ತು. ಅದಲ್ಲದೆ ಇಲ್ಲಿನ ದೇಸಾಯಿ ಕುಟುಂಬ KLE ಸಂಸ್ಥೆಯ ಅಧ್ಯಕ್ಷರಾಗಿಯೂ ನಾಡಿನ ಸೇವೆ ಸಲ್ಲಿಸಿದ್ದಾರೆ.
ಪ್ರತಿ ಮಂಗಳವಾರ ಸಂತೆ. ಗ್ರಾಮದಲ್ಲಿ ಕೆನರಾ ಬ್ಯಾಂಕಿನ ಬ್ರಾಂಚ್ ಇದೆ
ಇಲ್ಲಿನ ಗ್ರಾಮ ದೇವತೆಯಾದ ಶ್ರೀ ಸಂಗಮೇಶ್ವರನ ದೇವಸ್ಥಾನ ಇದೆ .ಶ್ರಾವಣ ಮಾಸದ ಕೊನೆಯ ಸೋಮವಾರ ಗ್ರಾಮದ ವಾರ್ಷಿಕ ಜಾತ್ರೆ ನಡೆಯುತ್ತದೆ.
ದೇಸಾಯಿ ಕುಟುಂಬ, ಜೊತೆಗೆ ಗ್ರಾಮದ ಎಲ್ಲರಿಂದ ದಸರಾ ಹಬ್ಬದಂದು ವಿಜೃಂಭಣೆಯಿಂದ ಸೀಮೋಲ್ಲಂಘನ ಕಾರ್ಯಕ್ರಮ ನಡೆಯುತ್ತದೆ. ಸೀಮೋಲ್ಲಂಘನ ಕಾರ್ಯಕ್ರಮ ಸಾಯಂಕಾಲದಂದು ಗ್ರಾಮದ ಹಿರಿಯರ ಮಾರ್ಗದರ್ಶನದಲ್ಲಿ ಭಜಂತ್ರಿ ಸಂಗೀತ ಮತ್ತು ನೃತ್ಯದೊಂದಿಗೆ ಜರಗುತ್ತದೆ
ಚಚಡಿ ಗ್ರಾಮವು ಹತ್ತಿರದ ಗ್ರಾಮಗಳಿಗೆ ಶೈಕ್ಷಣಿಕ, ಆರೋಗ್ಯ ಮತ್ತು ಮಾರುಕಟ್ಟೆಯ ಕೇಂದ್ರವಾಗಿದೆ
ಉಲ್ಲೇಖಗಳು
[ಬದಲಾಯಿಸಿ]