ಸದಸ್ಯ:Pushpa.r1910169/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ಅಂಚೆ ಪತ್ತಿನ ಸಹಕಾರ ಸಂಘ ನಿಯಮಿತ

ಕರ್ನಾಟಕ ಅಂಚೆ ಪತ್ತಿನ ಸಹಕಾರ ಸಂಘ ನಿಯಮಿತವನ್ನು ಸುಮಾರು 55 ವರ್ಷಗಳಿಂದ ನಡೆಸಿಕೊಂಡುಬಂದಿದ್ದಾರೆ.

ಅಂಚೆ ಪೆಟ್ಟಿಗೆ

Iಈ ಸಂಘದ ಉದ್ದೇಶವೇನೆಂದರೆ ಕರ್ನಾಟಕದ ಅಂಚೆ ಇಲಾಖೆಯ ನೌಕರರಿಗೆ ಸಾಲವನ್ನು ಕಡಿಮೆ ಬಡ್ಡಿ ರೂಪದಲ್ಲಿ ನೀಡುವುದು. ಪ್ರತಿ ತಿಂಗಳು ನೌಕರರು ತಮ್ಮ ಸಂಬಳವನ್ನು ತೆಗೆದುಕೊಂಡರು ಸಹ ಕೆಲವು ನೌಕರರಿಗೆ ತಮ್ಮ ಸಂಬಳ ಹಣವನ್ನು ಮೀರಿ ಹೆಚ್ಚು ಹಣದ ಅವಶ್ಯಕತೆ ಇರುತ್ತದೆ ಅಂತಹ ನೌಕರರಿಗೆ ಕರ್ನಾಟಕ ಅಂಚೆ ಪತ್ತಿನ ಸಹಕಾರ ಸಂಘವು ಕೆಳಗೆ ಇರುವ ಈ ಎಲ್ಲಾ ಅವಶ್ಯಕತೆಗಳಿಗೆ ಸಾಲವನ್ನು ನೀಡಿತ್ತದೆ.

ವಿವಿಧ ಸಾಲಗಳು[ಬದಲಾಯಿಸಿ]

ನೌಕರರಿಗೆ ಅನುಕೂಲವಾಗಲು ನೀಡುವ ಸಾಲಗಳು:

• ಮದುವೆಗೆ ಸಾಲ

• ಮನೆ ರಿಪೇರಿಗೆ ಸಾಲ

ಗಣಕಯಂತ್ರ ಖರೀದಿಸಲು ಸಾಲ - ಶೂನ್ಯ ಬಡ್ಡಿ

ಶಿಕ್ಷಣ ಸಾಲ

• ಹಬ್ಬದ ಸಾಲ - ಶೂನ್ಯ ಬಡ್ಡಿ

• ಎಂ ಪಿ ಎಲ್ ಸಾಲ

• ವಿವಿದೋದ್ದೆಶ ಸಾಲ

ಈ ಎಲ್ಲಾ ಸಾಲಗಳನ್ನು ಹಣದ ಅವಶ್ಯಕತೆ ಇರುವ ಕರ್ನಾಟಕದ ಅಂಚೆ ಇಲಾಖೆ ನೌಕರರಿಗೆ ಕರ್ನಾಟಕ ಅಂಚೆ ಪತ್ತಿನ ಸಹಕಾರ ಸಂಘವು ನೀಡುತ್ತದೆ. ಈ ಸಾಲವು ನೌಕರರಿಗೆ ಹೊರೆಯಾಗದಂತೆ ಸಂಘವು ಪ್ರತಿ ತಿಂಗಳು ಅಸಲು ಮತ್ತು ಬಡ್ಡಿ ಎರಡುನ್ನು ಕಂತಿನ ರೂಪದಲ್ಲಿ ನೌಕರರ ಸಂಬಳದಲ್ಲಿ ಕಡಿತಗೊಳಿಸುತ್ತದೆ. ಈ ಮೇಲೆ ಇರುವ ಯಾವುದಾದರು ಒಂದು ಸಾಲ ಪಡೆಯಬೇಕೆಂದರು ಆ ನೌಕರನು ಈ ಸಂಘದಲ್ಲಿ ಸದಸ್ಯನಾಗಿರಬೇಕು (ಮೆಂಬರ್ ಆಗಿರಬೇಕು). ಸಾಲ ಪಡೆಯುವ ನೌಕರನು ಈ ಸಂಘದಲ್ಲಿ ಸದಸ್ಯನಲ್ಲ ಎಂದರೆ ಆ ನೌಕರನು ಸಾಲವನ್ನು ಪಡೆಯಲು ಸಾಧ್ಯವಿಲ್ಲ. ಕರ್ನಾಟಕ ಅಂಚೆ ಪತ್ತಿನ ಸಹಕಾರ ಸಂಘದ ಜವಾಬ್ದಾರಿಯನ್ನು ಹೊಂದಿರುವ ಆಡಳಿತ ಮಂಡಳಿ ಸದಸ್ಯರು ಈ ಎಲ್ಲಾ ಸಾಲದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ.

ಆಡಳಿತ ಮಂಡಳಿ ಸದಸ್ಯರು[ಬದಲಾಯಿಸಿ]

ಆಡಳಿತ ಮಂಡಳಿ ಸದಸ್ಯರು

ಅಧ್ಯಕ್ಷರು - ಶ್ರೀ ಜಿ. ಜಾನಕಿರಾಂ

ಉಪಾಧ್ಯಕ್ಷರು - ಶ್ರೀ ವಿ. ಕೃಷಮೂರ್ತಿ

ನಿರ್ದೇಶಕರು - ಶ್ರೀ ಚಂದ್ರಸ್ವಾಮಿ

ನಿರ್ದೇಶಕರು - ಶ್ರೀಮತಿ ಎನ್. ಸರಸ್ವತಮ್ಮ

ನಿರ್ದೇಶಕರು - ಶ್ರೀ ವಿ. ಪುರುಷೋತ್ತಮ್

ನಿರ್ದೇಶಕರು - ಶ್ರೀ ಸಿ. ನಾರಾಯಣಸ್ವಾಮಿ

ನಿರ್ದೇಶಕರು - ಶ್ರೀ ಆರ್. ಲೋಕನಾಥ

ನಿರ್ದೇಶಕರು - ಶ್ರೀಮತಿ ಸಿ ಎಸ್. ಸೌಮ್ಯ

ನಿರ್ದೇಶಕರು - ಶ್ರೀ ಎಂ. ನಾಗರಾಜ

ನಿರ್ದೇಶಕರು - ಶ್ರೀ ಎಂ.ಕೆ. ನಾಗರಾಜ

ನಿರ್ದೇಶಕರು - ಶ್ರೀ ಬಿ. ಕೇಶವಮೂರ್ತಿ

ನಿರ್ದೇಶಕರು - ಶ್ರೀ ಮಹಮ್ಮದ್ ಹುಸೇನ್

ನಿರ್ದೇಶಕರು - ಶ್ರೀ ಆರ್. ಶ್ರೀನಿವಾಸ್

ನಿರ್ದೇಶಕರು - ಶ್ರೀ ಎಂ. ಜೆ. ಮನು

ನಿರ್ದೇಶಕರು - ಶ್ರೀ ಡಿ. ವಿಶ್ವನಾಥ್

ಸಾಲದ ಬಗ್ಗೆ ವಿವರ[ಬದಲಾಯಿಸಿ]

ಕರ್ನಾಟಕ ಅಂಚೆ ಪತ್ತಿನ ಸಹಕಾರ ಸಂಘ ನಿಯಮಿತ ಸಾಲವನ್ನು ನೌಕರರಿಂದ ಇಂಪಡೆಯುವ ವಿಧಾನದ ಬಗ್ಗೆ ಮಾಹಿತಿಯನ್ನು ನೀಡಿದೆ.

ಸಾಲವನ್ನು ಇಂಪಡೆಯುವ ವಿಧಾನ

1.ಮದುವೆಯ ಸಾಲ

ಕರ್ನಾಟಕ ಅಂಚೆ ಇಲಾಖೆಯ ನೌಕರರ ಮದುವೆಗೆ ಅಥವಾ ನೌಕರರ ಮಕ್ಕಳ ಮಾದುವೆಗೆ ಸಾಲವನ್ನು ಪಡೆಯಬಹುದು. ಸಾಲ ತೀರಿಸುವ ವಿಧಾನ - ಕಂತಿನ ರೂಪದಲ್ಲಿ 25 ಕಂತುಗಳನ್ನು ಅಸಲು ಮತ್ತು ಬಡ್ಡಿ ಎರಡು ನೌಕರನ ಸಂಬಳದಲ್ಲಿ ಕಡಿತಗೊಳ್ಳುತ್ತದೆ.

2.ಮನೆ ರಿಪೇರಯ ಸಾಲ

ಸಂಘದ ಸದಸ್ಯರಾಗಿರುವ ಅಂಚೆ ನೌಕರರಿಗೆ ತಮ್ಮ ಮನೆಯ ರಿಪೇರಿಗೆ ಹಣವನ್ನು ನೀದಲ್ಲಾಗುತ್ತದೆ. ಈ ಸಾಲವನ್ನು ಕಂತಿನ ರೂಪದಲ್ಲಿ ಅಸಲು, ಬಡ್ಡಿ ಎರಡನ್ನು ಕಟ್ಟಲು 36 ಕಂತುಗಳನ್ನು ನಿಗದಿಪಡಿಸಿದ್ದಾರೆ.

3.ಗಣಕಯಂತ್ರ ಖರೀದಿಸಲು ಸಾಲ

ಕರ್ನಾಟಕದ ಅಂಚೆ ನೌಕರರಿಗೆ ಗಣಕಯಂತ್ರವನ್ನು ಅವಶ್ಯಕತೆ ಇರುವವರಿಗೆ ಖರೀದಿಸಲು ಸೌಲಭ್ಯವನ್ನು ನೀಡಿದೆ. ನೌಕರರು ತಮ್ಮ ಮಕ್ಕಳಿಗೆ ಗಣಕಯಂತ್ರವನ್ನು ಕೊಡಿಸಲು ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಈ ಸಂಘದಿಂದ ಬಡ್ಡಿ ಇಲ್ಲದೆ ಸಾಲವನ್ನು ಪಡೆಯಬಹುದು. ಈ ಸಾಲವು ಸಹ ಕಂತಿನ ರೂಪದಲ್ಲಿ ಬರೀ ಅಸಲು ಮಾತ್ರ ನೌಕರರ ಸಂಬಳದಲ್ಲಿ ಕಡಿತಗೊಳಿಸಲಾಗುತ್ತದೆ.

4.ಎಂ ಪಿ ಎಲ್ ಸಾಲ

ಎಂ ಪಿ ಎಲ್ (ವಯಕ್ತಿಕ ಸಾಲ) ಹಣದ ಅವಶ್ಯಕತೆ ಇರುವ ಮತ್ತು ವಯಕ್ತಿಕ ಸಾಲವಿರುವ ನೌಕರರು ಈ ಸಾಲವನ್ನು ಕರ್ನಾಟಕ ಅಂಚೆ ಪತ್ತಿನ ಸಂಘದಿಂದ ಪಡೆಯುತ್ತಾರೆ. ಈ ಸಾಲವನ್ನು ಅಸಲು ಮತ್ತು ಬಡ್ಡಿ ಎರಡನ್ನು ತೀರಿಸಲು 80 ಕಂತುಗಳು ನೌಕರರ ಸಂಬಳದಲ್ಲಿ ಕಡಿತಗೊಳ್ಳುತ್ತದೆ.

5.ಹಬ್ಬದ ಸಾಲ

ಕರ್ನಾಟಕ ಅಂಚೆ ನೌಕರರು ಹಬ್ಬದ ಸಮಯದಲ್ಲಿ ಹಣದ ಅವಶ್ಯಕತೆ ಇರುವವರು ಸಂಘದಿಂದ ಶೂನ್ಯ ಬಡ್ದಿಯ ಸಾಲವನ್ನು ಪಡೆಯಬಹುದು. ಈ ಸಾಲವನ್ನು ಕಂತಿನ ರೂಪದಲ್ಲಿ ಬರೀ ಅಸಲು ತೀರಿಸಲು 10 ಕಂತುಗಳನ್ನು ನೌಕರರ ಸಂಬಳದಲ್ಲಿ ಕಡಿತಗೊಳಿಸುತ್ತಾರೆ.

6.ವಿವಿದೋದ್ದೇಶ ಸಾಲ

ಕರ್ನಾಟಕ ಅಂಚೆ ನೌಕರರಿಗೆ ಇತರೆ ವಸ್ತುಗಳನ್ನು ಖರೀದಿಸಲು ಹಣದ ಅವಶ್ಯಕತೆಗಳಿಗೆ ಸಂಘದಿಂದ ಸಾಲದ ಸೌಲಭ್ಯವನ್ನು ನೀಡಲಾಗುತ್ತದೆ.ಅಂಚೆ ನೌಕರರು ತಮ್ಮ ಮನೆಗೆ ಸಾಮಗ್ರಿಗಳನ್ನು ಖರೀದಿಸಲು, ಚಿನ್ನ ಖರೀದಿಸಲು ಇನ್ನು ಮುಂತಾದವುಗಳಿಗೆ ಸಾಲವನ್ನು ಪಡೆಯುತ್ತಾರೆ. ಈ ಸಾಲವನ್ನು ಸಹಾ ಕಂತಿನ ರೂಪದಲ್ಲೇ ನೌಕರರ ಸಂಬಳದಲ್ಲಿ ಕಡಿತಗೊಳಿಸಲಾಗುತ್ತದೆ.

ಈ ಎಲ್ಲಾ ಸಾಲಗಳನ್ನು ಕರ್ನಾಟಕ ಅಂಚೆ ಪತ್ತಿನ ಸಹಕಾರ ಸಂಘ ನಿಯಮಿತದಲ್ಲಿ ಸದಸ್ಯರಾಗಿರುವ(ಮೆಂಬರ್ ಆಗಿರುವ) ಕರ್ನಾಟಕ ಅಂಚೆ ನೌಕರರಿಗೆ ನೀಡಲಾಗುತ್ತದೆ. ಈ ಎಲ್ಲಾ ಸಾಲವನ್ನು ಕಂತಿನ ರೂಪದಲ್ಲಿ ನೌಕರರ ಸಂಬಳದಲ್ಲಿ ಕಡಿತಗೊಳಿಸುತ್ತದೆ.

ಆಡಳಿತ ಮಂಡಳಿ ಸಭೆಯಲ್ಲಿ ಸದಸ್ಯರುಗಳಿಗೆ ವಿತರಿಸುವ ಸಾಲಗಳನ್ನು ಕೆಳಕಂಡಂತೆ ಹೆಚ್ಚಿಸಲಾಗಿದೆ.

1. ಸದಸ್ಯರು ಈಗಾಗಲೆ ನೀಡುತ್ತಿರುವ ಮದುವೆ ಸಾಲವನ್ನು ರೂ.1,00,000/- ದಿಂದ 2,00,000/- ಕ್ಕೆ ಹೆಚ್ಚಿಸಲಾಗಿದೆ. ಇದಕ್ಕೆ ಈಗಾಗಲೆ ನೀಡುತ್ತಿರುವ ಬಡ್ಡಿ ಶೇ.12% (ಕಡಿತ ವಿಧಾನದಲ್ಲಿ) ಹಾಗೂ 25 ಕಂತುಗಳನ್ನು ನಿಗದಿಪಡಿಸಿದೆ.

2. ಸದಸ್ಯರುಗಳಿಗೆ ಈಗಾಗಲೆ ನೀಡುತ್ತಿರುವ ಮನೆ ರಿಪೇರಿ ಸಾಲವನ್ನು ರೂ.1,00,000/- ದಿಂದ 1,50,000/- ಕ್ಕೆ ಹೆಚ್ಚಿಸಲಾಗಿದೆ. ಇದಕ್ಕೆ ಈಗಾಗಲೇ ನೀಡುತ್ತಿರುವ ಬಡ್ಡಿ ಶೇ. 12% (ಕಡಿತ ವಿಧಾನದಲ್ಲಿ) ಹಾಗೂ 36 ಕಂತುಗಳನ್ನು ನಿಗದಿಪಡಿಸಿದೆ.

3. ಗಣಕಯಂತ್ರ ಖರೀದಿಸುವ ಸದಸ್ಯರುಗಳಿಗೆ ಕಂಪೆನಿಗಳಿಂದ ಕೊಟೇಶನ್ ತಂದು ಕಂಪೆನಿಗಳಿಗೆ ನೇರವಾಗಿ ಇ ಸಿ ಎಸ್ ಮತ್ತೆ ಮೂಲಕ ಪಾವತಿಸಿ ಗಣಕಯಂತ್ರ ಖರೀದಿಸಲು ಕ್ರಮವಿಡಲಾಗುತ್ತಿತ್ತು. ಆದರೆ ಕೆಲವು ಸದಸ್ಯರು ಗಣಕಯಂತ್ರವನ್ನು ಖರೀದಿಸದೆ ಕಂಪೆನಿಗಳಿಂದ ಕಡಿಮೆ ಮೊತ್ತವನ್ನು ಪಡೆದುಕೊಳ್ಳುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಗಣಕಯಂತ್ರ ಸಾಲ ಪಡೆಯಲು ಸದಸ್ಯರುಗಳಿಗೆ ಗರಿಷ್ಠ ರೂ. 50,000/- ಗಳನ್ನು ಮಂಜೂರು ಮಾಡಿ ಸದಸ್ಯರ ಬ್ಯಾಂಕ್ ಖಾತೆಗಳಿಗೆ ಇ ಸಿ ಎಸ್ ಮೂಲಕ ಜಮಾ ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ.

4. ಸದಸ್ಯರುಗಳಿಗೆ ಎಂಪಿಎಲ್ ಸಾಲ ರೂ. 200,000/- ಗಳನ್ನು 80 ಕಂತುಗಳಲ್ಲಿ ಶೇ.10% ರಂತೆ (ಕಡಿತ ವಿಧಾನದಲ್ಲಿ) ಪಾವತಿಸಲಾಗುತ್ತಿದೆ.

5. ಸದಸ್ಯರುಗಳಿಗೆ ಹಬ್ಬದ ಸಾಲ ರೂ.10,000/- ಗಳನ್ನು 10 ಕಂತುಗಳಲ್ಲಿ ಶೇ.10% ರಂತೆ (ಕಡಿತ ವಿಧಾನದಲ್ಲಿ) ಪಾವತಿಸುತ್ತದೆ.

6. ಸಂಘವು ಸದಸ್ಯರೊಂದಿಗೆ ಸಾಲ ವ್ಯವಹಾರಗಳಲ್ಲಿ ಗರಿಷ್ಠ ರೂ.20,000/- ಗಳವರೆಗೆ ನಗದು ವ್ಯವಹಾರ ನಡೆಸುತ್ತಿದೆ, ಇತ್ತೀಚಿನ ಆದಾಯ ತೆರಿಗೆ ಇಲಾಖೆಯ ಆಕ್ಷೇಪಣೆಯಿಂದ ವರ್ಷವೊಂದಕ್ಕೆ ರೂ.ಒಂದು ಕೋಟಿಗೂ ಹೆಚ್ಚು ನಗದು ವ್ಯವಹಾರವನ್ನು ನಡೆಸಿದರೆ, ಪ್ರತಿಶತ ಶೇ.2% ರಷ್ಟು ತೆರಿಗೆಯನ್ನು ಸಂಘವು ಪಾವತಿಸಬೇಕಿದ್ದು, ಇದು ಸಂಘಕ್ಕೆ ಆರ್ಥಿಕ ಹೊರೆಯಾಗಿರುತ್ತದೆ. ಆದ್ದರಿಂದ ಮಾನ್ಯ ಸದಸ್ಯರು ಇನ್ನು ಮುಂದೆ ಇ.ಸಿ.ಎಸ್, ಚೆಕ್ ಹಾಗೂ ಅಂಚೆ ಇಲಾಖೆಯ ಐಪಿಪಿಬಿ ಅಕೌಂಟ್ ಮೂಲಕ ಸಂಘದೊಂದಿಗೆ ವ್ಯವಹರಿಸಲು ಕೋರಿದೆ. ಬ್ಯಾಂಕ್ ಖಾತೆ ಹೊಂದಿರದ ಸದಸ್ಯರು ಅಂಚೆ ಇಲಾಖೆಯ ಐಪಿಪಿಬಿ ಖಾತೆ ತೆರೆದು ಸಂಘದೊಂದಿಗೆ ವ್ಯವಹರಿಸಲು ಕೋರಿದೆ.

7. ಸಂಘವು ಮುಂಬರುವ ದಿನಗಳಲ್ಲಿ ಸದಸ್ಯರು ಚಿನ್ನ ಖರೀದಿಸಲು ಸಾಲ ಮಂಜೂರು ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ವಿಷಯವನ್ನು ಮಾನ್ಯ ಸದಸ್ಯರು ತಿಳಿಸಲು ಆಡಳಿತ ಮಂಡಳಿಯು ಹರ್ಷಿಸುತ್ತದೆ.

8. ಸದಸ್ಯರುಗಳಿಗೆ ಈಗಾಗಲೇ ವಿವಿದೋದ್ದೇಶ ಸಾಲ, ತ್ರಿಫ್ಟ್ ಸಾಲ, ಮದುವೆ ಸಾಲ, ಶಿಕ್ಷಣ ಸಾಲ, ಗಣಕಯಂತ್ರ ಸಾಲ, ಹಬ್ಬದ ಸಾಲ, ಮನೆ ರಿಪೇರಿ ಸಾಲಗಳನ್ನು ಪ್ರತಿ ಮೇ 12ನೇ ತಾರೀಖಿನವರೆಗೆ ಸಾಲಗಳನ್ನು ಮಂಜೂರು ಮಾಡಿ ಪಾವತಿಸಲಾಗುತ್ತದ್ದು, ಇನ್ನು ಮುಂದೆ ತಿಂಗಳು ಪೂರ್ತಿ ಸಾಲಗಳನ್ನು ಮಂಜೂರಿ ಮಾಡಿ ಪಾವತಿಸುವ ಕ್ರಮವಿಡಲಾಗಿದೆ. ಸದಸ್ಯರುಗಳು ಯಾವುದೇ ಶಿಫಾರಸ್ಸು /ಮಧ್ಯವರ್ತಿಗಳ ಸಂಪರ್ಕವಿಲ್ಲದೆ ನೇರವಾಗಿ ಸಂಘದಲ್ಲಿಯೇ ಸಾಲವನ್ನು ಪಡೆಯಬಹುದಾಗಿದೆ. ತಾವು ಸಂಘಕ್ಕೆ ಅರ್ಜಿಯನ್ನು ಸಲ್ಲಿಸಿದ ದಿನವೇ ಅಥವಾ ಮಾರನೆ ದಿನವೇ ತಮ್ಮ ಅರ್ಜಿಯನ್ನು ಮಂಜೂರು ಮಾಡಿ ಸಾಲವನ್ನು ಇಸಿಎಸ್ ಮೂಲಕ ಪಾವತಿಸಲು ಕ್ರಮವಿಡಲಾಗುತ್ತದೆ.

ಈ ಎಲ್ಲಾ ನಿಯಮಗಳು, ಸಾಲದ ಸೌಲಭ್ಯಗಳು ಬರೀ ಕರ್ನಾಟಕ ಅಂಚೆ ಪತ್ತಿನ ಸಹಕಾರ ಸಂಘದ ಸದಸ್ಯರಾಗಿರುವ ಅಂಚೆ ಇಲಾಖೆ ನೌಕರರಿಗೆ ಮಾತ್ರ ನೀಡಲಾಗುತ್ತದೆ.

[೧]

  1. https://upload.wikimedia.org/wikipedia/commons/a/aa/Indian_Post_Box.jpg