ವಿಷಯಕ್ಕೆ ಹೋಗು

ಗಂಭರಿ ದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಂಭರಿ ದೇವಿ (೧೯೨೨ – ೮ ಜನವರಿ ೨೦೧೩), ಹಿಮಾಚಲ ಪ್ರದೇಶದ, ಬಿಲಾಸ್ ಪುರ ಜಿಲ್ಲೆಯಿಂದ ಹಿರಿಯ ಭಾರತೀಯ ಜಾನಪದ ಗಾಯಕ, ಜಾನಪದ ತಜ್ಞ ಆಡಳಿತಗಾರರೆನಿಸಿದ್ದು ಮತ್ತು ನೃತ್ಯಗಾರ್ತಿ ಪಟುವಾದದ್ದು ಇವರ ಹೆಗ್ಗಳಿಕೆ.[]ಹಿಮಾಚಲ ಪ್ರದೇಶದ ಜಾನಪದ ಸಂಸ್ಕೃತಿಗೆ ನೀಡಿದ ಕೊಡುಗೆಯಿಂದ ಗಮನಸೆಳೆದಿದ್ದಾರೆ. []

ಹಿರಿಮೆ

[ಬದಲಾಯಿಸಿ]

ಗಂಭರಿ ದೇವಿ ರಿಗೆ ಟಾಗೋರ್ ಅಕಾಡಮಿ ಪ್ರಶಸ್ತಿ (ಟಾಗೋರ್ ಅಕಾಡಮಿ ಪುರಸ್ಕಾರ), ಸಂಗೀತ ನಾಟಕ ಅಕಾಡೆಮಿ, ನ್ಯಾಷನಲ್ ಅಕಾಡೆಮಿ ಫಾರ್ ಮ್ಯೂಸಿಕ್, ಡಾನ್ಸ್ ಅಂಡ್ ಡ್ರಾಮ ಹೀಗೆ ಹತ್ತು ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ. ೨೦೧೧ ರಲ್ಲಿ, ರವೀಂದ್ರನಾಥ ಠಾಕೂರರ ೧೫೦ ನೇ ಜನ್ಮ ದಿನೋತ್ಸವ ಸಮ್ದರ್ಭದಲ್ಲಿ, ಭಾರತದಾದ್ಯಂತ ಇರುವ ೧೦೦ ಕಲಾವಿದರಿಗೆ ಕೊಡಮಾಡಿದ ಪ್ರಶಸ್ತಿಯಲ್ಲಿ ಗಂಭರಿ ದೇವಿ ಸಹ ಪ್ರಶಸ್ತಿ ಪಡೆದರು. ೨೦೦೧ ರಲ್ಲಿ ಆಕೆ ಹಿಮಾಚಲ ಅಕಾಡೆಮಿ ಆಫ್ ಆರ್ಟ್ಸ್ ನಿಂದ ಪ್ರಶಸ್ತಿ ಪಡೆದರು. ಆಕೆ ೮ ಜನವರಿ ೨೦೧೩ ರಂದು ತಮ್ಮ ೯೧ ನೇ ವಯಸ್ಸಿನಲ್ಲಿ ನಿಧನರಾದರು. []

ಬಾಲ್ಯ

[ಬದಲಾಯಿಸಿ]

ಈಕೆ ಹುಟ್ಟಿದ್ದು ಹಿಮಾಚಲ ಪ್ರದೇಶದ ಬಿಲಾಸ್ ಪುರ್ ಜಿಲ್ಲೆಯ ಬಂದ್ಲಾ ಗ್ರಾಮದಲ್ಲಿ ೧೯೨೨ ರಲ್ಲಿ. ೮ನೇ ವಯಸ್ಸಿಗೆ ಪ್ರದರ್ಶನ ಆರಂಭಿಸಿದಳು. ಅವಳು ಹಳ್ಳಿಯ ಇತರ ಹುಡುಗಿಯರಂತೆ ಪ್ರಾರಂಭಿಕ ವಯಸ್ಸಿನಲ್ಲಿ ಮದುವೆಯಾದಳು. ವಿವಾಹ ಆದ ಕೂಡಲೆ ಸಾಧಾರಣವಾಗಿ ಹಾಡುಗಾರಿಕೆ ಮತ್ತು ನೃತ್ಯಗಳಿಂದ ದೂರ ಎಂದೇ ಭಾವನ ಹೆಚ್ಚು ಇದ್ದ ಕಾಲದಲ್ಲಿ ಸಹಾ, ಗಂಭರಿ ದೇವಿ ವಿವಾಹದ ಹೊರತಾಗಿಯೂ ಆಕೆ ಜಾನಪದ ಪ್ರದರ್ಶನದಲ್ಲಿ ತಮ್ಮ ಬದುಕನ್ನು ಮುಡಿಪು ಮಾಡಿ ಇಟ್ಟರು.

ವೃತ್ತಿ

[ಬದಲಾಯಿಸಿ]

ಸಮಾಜದ ಹಿರಿಕರು, ನಿಧಾನವಾಗಿ ತನ್ನ ಸಾಮಾಜಿಕ ಭೇದವನ್ನು ಮರೆತು, ವಿವಿಧ ಸಂದರ್ಭಗಳಲ್ಲಿ ಕಾರ್ಯ ನಿರ್ವಹಿಸಲು ಗಂಭರಿ ದೇವಿ ರನ್ನು ಆಹ್ವಾನಿಸುವುದಕ್ಕೆ ಶುರು ಮಾಡಿದರು. ಗಂಭರಿ ದೇವಿ ರ ಪ್ರತಿಭೆ. ಆಕೆ ಅಂತಿಮವಾಗಿ ಎಷ್ಟು ಜನಪ್ರಿಯವಾಗಿದ್ದಳು ಎಂದರೆ ಆಕೆಯ ಅಭಿನಯವಿಲ್ಲದೆ ಯಾವುದೇ ಕಾರ್ಯವು ಸಂಪೂರ್ಣವಾಗುವಂತಿರಲಿಲ್ಲ. ಇಂತಹ ಆಕೆಯ ಪ್ರಭಾವ ಮತ್ತು ಕಲೆಯ ಹಿರಿಮೆಯನ್ನು ಜನರು ಮನಗಂಡರು. ಗಂಭರಿ ದೇವಿ ಪ್ರದರ್ಶನಗಳಿಗಾಗಿ ದೂರದ ಊರುಗಳಿಂದ ಜನರು ಕೂಡ ನೋಡಲು ಬರಲು ಪ್ರಾರಂಭಿಸಿದರು ಮತ್ತು ಅದೇ ಊರಿನವರು ಅವಳ ಪ್ರದರ್ಶನ ಮತ್ತು ಹಾಜರಾತಿಯ ಇಲ್ಲದೆಯೇ ವಿವಾಹ ಸಮಾರಂಭಗಳನ್ನು ಆಚರಣೆಗಳನ್ನು ಮಾಡಲಾಗದು ಎಂದು ಪರಿಗಣಿಸಿದರು. ಆಕೆಯನ್ನು ಆಕೆಯ ಕಾಲದ ಮಾತಾನೀ ವಿಗ್ರಹವೆಂದು ಪರಿಗಣಿಸಲಾಗಿತ್ತು. ಗಂಭರಿ ದೇವಿ ತಮ್ಮ ಹಾಡುಗಾರಿಕೆಗಾಗಿ ತಮ್ಮ ಜೊತೆಯಲ್ಲಿ ಒಬ್ಬ ಡ್ರಮ್ಮರ್ ಮತ್ತು ಒಬ್ಬ ಕುಸ್ತಿಪಟು (ಪಿಸ್ಟು ಉರ್ಫ್ ಬಸಂತ ಪೆಹಲ್ವಾನ್)ವನ್ನು ತಮ್ಮ ಜೊತೆಗೆ ಒಯ್ಯುತ್ತಾರೆ. ಬಸಂತ ಪೆಹಲ್ವಾನ್ ಮತ್ತು ಗಂಭರಿ ದೇವಿ ಕಾನೂನುಬದ್ಧವಾಗಿ ಮದುವೆಯಾಗದ ಕಾರಣ, ಎಂದಿಗೂ ಈ ಜೋಡಿಗೆ ಪತಿತ ಸಮಾಜದಿಂದ ಹೆಚ್ಚಿನ ಶತ್ರುತ್ವ ಎದುರಾಗಿತ್ತು. ಸಮಾಜವು, ಆಕೆಯ ಪ್ರದರ್ಶನಗಳನ್ನು ಆನಂದಿಸಬಹುದಾಗಿತ್ತು. ಆದರೆ ಸಹ ಬಾಳ್ವೆ ಅನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ದೇವಿಯು ನಂತರ ತನ್ನ ಪ್ರೀತಿಯನ್ನು ತ್ಯಾಗ ಮಾಡಿದಳು ಮತ್ತು ಸ್ವತಃ ದೇವಿ ಕೋರಿಕೆಯ ಮೇರೆಗೆ, ಬಸಂತ ಪೆಹಲ್ವಾನ್ ನಂತರ ಮತ್ತೊಬ್ಬ ಮಹಿಳೆಯನ್ನು ವಿವಾಹವಾದರು.

ಅವಳು ತನ್ನ ಇಳಿ ವಯಸ್ಸಿನವರೆಗೂ ಪ್ರದರ್ಶನ ಮುಂದುವರಿಸಿದಳು. ೨೦೧೨ರ ನಂತರ, ಗಂಭರಿ ದೇವಿ ತನ್ನ ಜೀವನದ ಕಳೆದ ಕೆಲವು ತಿಂಗಳುಗಳಲ್ಲಿ ತನ್ನ ಆರೋಗ್ಯದ ಸಮಸ್ಯೆಗಳಿಂದಾಗಿ, ಆಕೆ ಪ್ರದರ್ಶನ ಸ್ಥಗಿತಗೊಳಿಸಿದ್ದಳು.

ಬದುಕನ್ನು ತನ್ನ ಅಸಾಧಾರಣ ಧೈರ್ಯದಿಂದ ಹಾಡುವ ಮತ್ತು ನೃತ್ಯದ ಲಕ್ಷಣಗಳ ಮೂಲಕ ಹಲವಾರು ಹೃದಯಗಳನ್ನು ಗೆದ್ದಳು.

ಆಕೆ ಟಾಗೋರ್ ಅಕಾಡೆಮಿ ಪ್ರಶಸ್ತಿಯನ್ನು (ಟಾಗೋರ್ ಅಕಾಡೆಮಿ ಪುರುಕರ್) ಸಂಗೀತ್ ನಾಟಕ ಅಕಾಡೆಮಿಯ ೨೦೦೧ ರಲ್ಲಿ ಪಡೆದರು. ಹಿಮಾಚಲ ಅಕಾಡೆಮಿ ಆಫ್ ಆರ್ಟ್ಸ್ ನಿಂದ ಜೀವಮಾನ ಸಾಧನೆ ಪ್ರಶಸ್ತಿ ೨೦೦೧ರಲ್ಲಿ ಪಡೆದದ್ದು, ಅವರ ನೆಚ್ಚಿನ ನೆನಪಾಗಿ ಉಳಿದಿದೆ .


ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-03-05. Retrieved 2020-03-31.
  2. https://books.google.com/books?id=IQDkxM0GTw4C&pg=PA151
  3. http://www.amarujala.com/news/states/himachal-pradesh/folk-singer-gambhari-devi-passes-away/