ಘರಾಣೆ
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ, ಘರಾಣೆ ಎಂದರೆ ಭಾರತೀಯ ಉಪಖಂಡದಲ್ಲಿನ ಸಾಮಾಜಿಕ ಸಂಘಟನೆಯ ವ್ಯವಸ್ಥೆ. ಇದು ಸಂಗೀತಗಾರರು ಅಥವಾ ನರ್ತಕರನ್ನು ವಂಶ ಅಥವಾ ಶಿಷ್ಯವೃತ್ತಿಯ ಮೂಲಕ, ಮತ್ತು ಒಂದು ನಿರ್ದಿಷ್ಟ ಸಂಗೀತ ಶೈಲಿಯ ಅನುಸರಣೆಯ ಮೂಲಕ ಸಂಬಂಧಿಸುತ್ತದೆ. ಘರಾಣೆಯು ಸಮಗ್ರ ಸಂಗೀತಶಾಸ್ತ್ರ ಸಂಬಂಧಿ ವಿಚಾರಪರಂಪರೆಯನ್ನು ಕೂಡ ಸೂಚಿಸುತ್ತದೆ. ಈ ವಿಚಾರಪರಂಪರೆಯು ಕೆಲವೊಮ್ಮೆ ಒಂದು ಘರಾಣೆಯಿಂದ ಮತ್ತೊಂದು ಘರಾಣೆಗೆ ಗಣನೀಯವಾಗಿ ಬದಲಾಗುತ್ತದೆ.
ಘರಾಣೆಗಳು ಮೂರು ಬಗೆಯದ್ದಾಗಿವೆ: ಗಾಯನ ಘರಾಣೆಗಳು, ವಾದ್ಯ ಘರಾಣೆಗಳು ಮತ್ತು ನೃತ್ಯ ಘರಾಣೆಗಳು.
ಗಾಯನ ಘರಾಣೆಗಳಲ್ಲಿ ಖ್ಯಾಲ್ ಘರಾಣೆಗಳು, ಧ್ರುಪದ್ ಘರಾಣೆಗಳು, ಮತ್ತು ಠುಮ್ರಿ ಘರಾಣೆಗಳು ಎಂದು ಮೂರು ವಿಭಾಗಗಳು. ಖ್ಯಾಲ್‍ನಲ್ಲಿನ ಘರಾಣೆ ವ್ಯವಸ್ಥೆಯು ಗುರು-ಶಿಷ್ಯ ಪರಂಪರೆಯಲ್ಲಿ ಮೂಲಹೊಂದಿದೆ. ಮೊಘಲ್ ಸಾಮ್ರಾಜ್ಯವು ಕ್ರಮೇಣ ಪತನವಾಗುತ್ತಿದ್ದಂತೆ ಈ ಘರಾಣೆ ಪದ್ಧತಿ ಮೇಲೆ ಬಹಳ ಪ್ರಭಾವ ಬೀರಿತು. ಕೆಲವು ಪ್ರಮುಖ ಖ್ಯಾಲ್ ಘರಾಣೆಗಳೆಂದರೆ ಗ್ವಾಲಿಯರ್ ಘರಾಣೆ, ಆಗ್ರಾ ಘರಾಣೆ, ಕಿರಾನಾ ಘರಾಣೆ, ಪಟಿಯಾಲಾ ಘರಾಣೆ, ಇಂದೋರ್ ಘರಾಣೆ ಇತ್ಯಾದಿ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Gharanas of Hindustani Music
- Gharana Tradition, by Prof. R.C. Mehta