ಸೀಗೆ ಕಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೀಗೆ ಬೀಜಕೋಶಗಳು

ಸೀಗೆಯು ಲೆಗ್ಯುಮಿನೋಸೀ ಕುಟುಂಬದ ವಿಮೋಸೀ ಉಪಕುಟುಂಬಕ್ಕೆ ಸೇರುವ ಅಕೇಸಿಯ ಕಾನ್ಸಿನ್ನ ಎಂಬ ಪ್ರಭೇದದ ಮುಳ್ಳಿನ ಮರಬಳ್ಳಿ. ಹಳ್ಳಿಗಳಲ್ಲಿ ಬೇಲಿಗಳಲ್ಲಿ ಬೆಳೆಸುತ್ತಾರೆ. ಕಾಡಿನ ಇನ್ನಿತರ ಮರಗಳ ಮೇಲೆ ಹಬ್ಬಿ ತುಂಬ ಹುಲುಸಾಗಿ ಬೆಳೆಯುವುದುಂಟು. ಇದರ ಕಾಯಿಯಿಂದ ಮಾಡುವ ಪುಡಿಯೇ ಸೀಗೆಪುಡಿ. ತಲೆಗೂದಲನ್ನು ತೊಳೆಯಲು ಪ್ರಾಚೀನ ಕಾಲದಿಂದಲೂ ವಿಶೇಷವಾಗಿ ಬಳಸುತ್ತಾ ಬಂದಿದ್ದಾರೆ.[೧] ಅಕೇಸಿಯ ಪೆನ್ನೇಟ ಎಂಬ ಇನ್ನೊಂದು ಪ್ರಭೇದವಿದೆ. ಇದು ಕಾಡು ಸೀಗೆಬಳ್ಳಿ.

ಇದು ಆಯುರ್ವೇದಿಕ ಔಷಧೀಯ ಸಸ್ಯಗಳಲ್ಲಿ ಒಂದು. ಇದನ್ನು ಕೃತಕ ಆಯುರ್ವೇದಿಕ ಶ್ಯಾಂಪೂಗಳಲ್ಲೂ ಸೇರಿಸಲಾಗುತ್ತದೆ. ಇದನ್ನು ಉಪಯೋಗಿಸಲು, ಬೀಜಕೋಶಗಳು, ಎಲೆಗಳು ಮತ್ತು ಸಸ್ಯದ ತೊಗಟೆಯನ್ನು ಒಣಗಿಸಿ ಪುಡಿ ಮಾಡಲಾಗುತ್ತದೆ, ಮತ್ತು ನಂತರ ಪೇಸ್ಟ್ ಆಗಿ ಮಾಡಲಾಗುತ್ತದೆ. ಈ ಸಾಂಪ್ರದಾಯಿಕ ಶ್ಯಾಂಪೂ ಸಲ್ಫೇಟ್ ಹೊಂದಿರುವ ಶ್ಯಾಂಪೂ ಉಂಟುಮಾಡುವಷ್ಟು ಸಾಮಾನ್ಯ ಪ್ರಮಾಣದ ಬುರುಗನ್ನು ಉಂಟುಮಾಡುವುದಿಲ್ಲವಾದರೂ, ಇದನ್ನು ಒಳ್ಳೆ ಸ್ವಚ್ಛಕವೆಂದು ಪರಿಗಣಿಸಲಾಗಿದೆ. ಇದು ಸೌಮ್ಯವಾಗಿದ್ದು, ಕೂದಲಿನಿಂದ ನೈಸರ್ಗಿಕ ತೈಲಗಳನ್ನು ತೆಗೆಯುವುದಿಲ್ಲ.

ಉಲ್ಲೇಖಗಳು[ಬದಲಾಯಿಸಿ]

  1. "Acacia concinna - Shikakai". www.flowersofindia.net. Retrieved 8 September 2018.