ವಿಷಯಕ್ಕೆ ಹೋಗು

ಪ್ರಯೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಹಳ ಚಿಕ್ಕ ಮಕ್ಕಳು ಕೂಡ ಪ್ರಪಂಚದ ಬಗ್ಗೆ ಮತ್ತು ಎಲ್ಲವೂ ಹೇಗೆ ಕೆಲಸಮಾಡುತ್ತವೆ ಎಂದು ತಿಳಿದುಕೊಳ್ಳಲು ಮೂಲಭೂತ ಪ್ರಯೋಗಗಳನ್ನು ಮಾಡುತ್ತವೆ.

ಪ್ರಯೋಗ ಎಂದರೆ ಒಂದು ಕಲ್ಪಿತ ಸಿದ್ಧಾಂತವನ್ನು ಬೆಂಬಲಿಸಲು, ಅಲ್ಲಗಳೆಯಲು ಅಥವಾ ಊರ್ಜಿತಗೊಳಿಸಲು ನಡೆಸಲಾದ ಪ್ರಕ್ರಿಯೆ. ಪ್ರಯೋಗಗಳು ಒಂದು ನಿರ್ದಿಷ್ಟ ಅಂಶವನ್ನು ಬದಲಾಯಿಸಿದಾಗ ಏನು ಫಲಿತಾಂಶವಾಗುತ್ತದೆ ಎಂದು ಪ್ರದರ್ಶಿಸುವ ಮೂಲಕ ಕಾರಣ ಮತ್ತು ಪರಿಣಾಮದ ಬಗ್ಗೆ ಒಳನೋಟವನ್ನು ಒದಗಿಸುತ್ತವೆ. ಪ್ರಯೋಗಗಳು ಗುರಿ ಮತ್ತು ವ್ಯಾಪ್ತಿಯಲ್ಲಿ ಬಹಳವಾಗಿ ಬದಲಾಗುತ್ತವೆ, ಆದರೆ ಯಾವಾಗಲೂ ಪುನರಾವರ್ತಿಸಬಲ್ಲ ಪ್ರಕ್ರಿಯೆ ಮತ್ತು ಫಲಿತಾಂಶಗಳ ತಾರ್ಕಿಕ ವಿಶ್ಲೇಷಣೆಯ ಮೇಲೆ ಅವಲಂಬಿಸಿರುತ್ತವೆ. ನೈಸರ್ಗಿಕ ಪ್ರಾಯೋಗಿಕ ಅಧ್ಯಯನಗಳು ಕೂಡ ಅಸ್ತಿತ್ವದಲ್ಲಿವೆ.

ಗುರುತ್ವವನ್ನು ಅರ್ಥಮಾಡಿಕೊಳ್ಳಲು ಒಂದು ಮಗುವು ಮೂಲಭೂತ ಪ್ರಯೋಗಗಳನ್ನು ಮಾಡಬಹುದು. ವಿಜ್ಞಾನಿಗಳ ತಂಡಗಳು ಒಂದು ವಿದ್ಯಮಾನದ ಬಗೆಗಿನ ತಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಲು ವರ್ಷಾನುಗಟ್ಟಲೆಯ ವ್ಯವಸ್ಥಿತ ತನಿಖೆಯನ್ನು ಮಾಡಬಹುದು. ವಿಜ್ಞಾನ ತರಗತಿಯಲ್ಲಿ ವಿದ್ಯಾರ್ಥಿ ಕಲಿಕೆಗೆ ಪ್ರಯೋಗಗಳು ಮತ್ತು ಇತರ ಬಗೆಗಳ ಸಕ್ರಿಯ ಭಾಗವಹಿಕೆಯ ಚಟುವಟಿಕೆಗಳು ಬಹಳ ಮುಖ್ಯವಾಗಿವೆ. ವಿಶೇಷವಾಗಿ ಪ್ರಯೋಗಗಳನ್ನು ಕ್ರಮೇಣವಾಗಿ ಬಳಸಿದಾಗ ಪರೀಕ್ಷಾ ಅಂಕಗಳನ್ನು ಹೆಚ್ಚಿಸಬಲ್ಲವು ಮತ್ತು ಮಕ್ಕಳು ತಾವು ಕಲಿಯುತ್ತಿರುವ ವಿಷಯದಲ್ಲಿ ಹೆಚ್ಚು ತೊಡಗಿಕೊಳ್ಳಲು ಮತ್ತು ಆಸಕ್ತಿ ಹೊಂದಲು ನೆರವಾಗಬಲ್ಲವು.[]

ಉಲ್ಲೇಖಗಳು

[ಬದಲಾಯಿಸಿ]
  1. Stohr-Hunt, Patricia (1996). "An Analysis of Frequency of Hands-on Experience and Science Achievement". Journal of Research in Science Teaching. 33 (1): 101–109. Bibcode:1996JRScT..33..101S. doi:10.1002/(SICI)1098-2736(199601)33:1<101::AID-TEA6>3.0.CO;2-Z.


"https://kn.wikipedia.org/w/index.php?title=ಪ್ರಯೋಗ&oldid=973876" ಇಂದ ಪಡೆಯಲ್ಪಟ್ಟಿದೆ