ಸಭಾಂಗಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಯೆನಾ ಸ್ಟೇಟ್ ಆಪರಾದ ಸಭಾಂಗಣ

ಸಭಾಂಗಣವು (ಸಭಾಮಂದಿರ, ಸಭಾಗೃಹ) ಪ್ರೇಕ್ಷಕರು ಪ್ರದರ್ಶನಗಳನ್ನು ಕೇಳಲು ಮತ್ತು ನೋಡಲು ಸಾಧ್ಯವಾಗಲು ನಿರ್ಮಿಸಲಾದ ಕೋಣೆ. ಮನೋರಂಜನಾ ಸ್ಥಳಗಳು, ಸಮುದಾಯ ಭವನಗಳು ಮತ್ತು ನಾಟಕಶಾಲೆಗಳಲ್ಲಿ ಸಭಾಂಗಣಗಳನ್ನು ಕಾಣಬಹುದು. ಇವನ್ನು ಪೂರ್ವಾಭ್ಯಾಸ, ಪ್ರಸ್ತುತಿ, ಪ್ರದರ್ಶನ ಕಲಾ ತಯಾರಿಕೆ, ಅಥವಾ ಕಲಿಕೆಯ ಸ್ಥಳವಾಗಿ ಉಪಯೋಗಿಸಬಹುದು.

ಸಭಾಂಗಣದ ರಚನೆ[ಬದಲಾಯಿಸಿ]

ಆಧುನಿಕ ನಾಟಕಶಾಲೆಯಲ್ಲಿನ ಪ್ರೇಕ್ಷಕರನ್ನು ಪ್ರದರ್ಶನಕಾರದಿಂದ ಸಾಮಾನ್ಯಾವಾಗಿ ರಂಗಸ್ಥಳದ ಕಮಾನು ಬೇರ್ಪಡಿಸುತ್ತದೆ, ಆದರೆ ಇತರ ಪ್ರಕಾರಗಳ ರಂಗಮಂಚಗಳು ಸಾಮಾನ್ಯವಾಗಿವೆ.

ಸಭಾಂಗಣದಲ್ಲಿನ ಪ್ರತಿ ಭಾಗದಲ್ಲಿನ ಆಸನಗಳಿಗೆ ವಿಧಿಸಲಾದ ಬೆಲೆಯು ಸಾಮಾನ್ಯವಾಗಿ ರಂಗಮಂಚದ ನೋಟದ ಗುಣಮಟ್ಟದ ಪ್ರಕಾರ ಬದಲಾಗುತ್ತದೆ. ಕುಳಿತುಕೊಳ್ಳುವ ಪ್ರದೇಶಗಳು ಕೆಳಗಿನವುಗಳಲ್ಲಿ ಕೆಲವನ್ನು ಅಥವಾ ಎಲ್ಲವನ್ನೂ ಒಳಗೊಳ್ಳಬಹುದು:

  • ಸ್ಟಾಲ್‍ಗಳು, ಆರ್ಕೆಸ್ಟ್ರಾ ಅಥವಾ ವೇದಿಕೆ: ಕೆಳಗಿನ ಸಮತಲ ಪ್ರದೇಶ, ಸಾಮಾನ್ಯವಾಗಿ ರಂಗಸ್ಥಳದ ಮಟ್ಟಕ್ಕೆ ಅಥವಾ ಅದರ ಕೆಳಗಿರುತ್ತದೆ.
  • ಬಾಲ್ಕನಿಗಳು ಅಥವಾ ಗ್ಯಾಲರಿಗಳು: ಸಭಾಂಗಣದ ಹಿಂದಿನ ಭಾಗದಲ್ಲಿರುವ ಒಂದು ಅಥವಾ ಹೆಚ್ಚು ಎತ್ತರಿಸಿದ ಆಸನದ ವೇದಿಕೆಗಳು. ದೊಡ್ಡ ನಾಟಕಶಾಲೆಗಳಲ್ಲಿ, ಅನೇಕ ಸ್ತರಗಳು ಸ್ಟಾಲ್‍ಗಳ ಹಿಂದೆ ಅಥವಾ ಅವುಗಳ ಮೇಲೆ ಲಂಬವಾಗಿ ಸ್ಥಿತವಾಗಿರುತ್ತವೆ.
  • ಬಾಕ್ಸ್‌ಗಳು: ಸಾಮಾನ್ಯವಾಗಿ ರಂಗಸ್ಥಳದ ಮುಂದೆ, ಪಕ್ಕದಲ್ಲಿ ಮತ್ತು ಅದರ ಸ್ತರದ ಮೇಲೆ ಅತ್ಯಂತ ನಿಕಟವಾಗಿ ಇರುತ್ತವೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಸಭಾಂಗಣ&oldid=1172007" ಇಂದ ಪಡೆಯಲ್ಪಟ್ಟಿದೆ