ಮೌಲ್ಯ (ನೀತಿಶಾಸ್ತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೀತಿಶಾಸ್ತ್ರದಲ್ಲಿ, ಮೌಲ್ಯ ಪದವು ಯಾವುದಾದರೂ ವಸ್ತು ಅಥವಾ ಕ್ರಿಯೆಯ ಪ್ರಾಮುಖ್ಯದ ಪ್ರಮಾಣವನ್ನು ಸೂಚಿಸುತ್ತದೆ. ಯಾವ ಕ್ರಿಯೆಗಳನ್ನು ಮಾಡುವುದು ಅತ್ಯುತ್ತಮ ಹಾಗೂ ಯಾವುದು ಜೀವಿಸುವ ಅತ್ಯುತ್ತಮ ರೀತಿಯಾಗಿದೆ ಎಂದು ನಿರ್ಧರಿಸುವುದು (ಪ್ರಮಾಣಕ ನೀತಿತತ್ತ್ವಗಳು), ಅಥವಾ ಭಿನ್ನ ಕ್ರಿಯೆಗಳ ಅರ್ಥವನ್ನು ವಿವರಿಸುವುದು ಹೀಗೆ ಮಾಡುವುದರ ಗುರಿಯಾಗಿರುತ್ತದೆ. ಮೌಲ್ಯ ವ್ಯವಸ್ಥೆಗಳು ನಿಷೇಧಿತ ಮತ್ತು ವಿಧಾಯಕ ನಂಬಿಕೆಗಳಾಗಿರುತ್ತವೆ; ಅವುಗಳು ಒಬ್ಬ ವ್ಯಕ್ತಿಯ ನೈತಿಕ ವರ್ತನೆಯ ಮೇಲೆ ಪ್ರಭಾವ ಬೀರುತ್ತವೆ ಅಥವಾ ಅವರ ಉದ್ದೇಶಪೂರ್ವಕ ಚಟುವಟಿಕೆಗಳ ಆಧಾರವಾಗಿರುತ್ತವೆ. ಹಲವುವೇಳೆ ಪ್ರಾಥಮಿಕ ಮೌಲ್ಯಗಳು ದೃಢವಾಗಿದ್ದು ದ್ವಿತೀಯಕ ಮೌಲ್ಯಗಳು ಬದಲಾವಣೆಗಳಿಗೆ ಸೂಕ್ತವಾಗಿರುತ್ತವೆ. ಒಂದು ಕ್ರಿಯೆಯನ್ನು ಅಮೂಲ್ಯವಾಗಿಸುವುದು ಪ್ರತಿಯಾಗಿ ಅದು ಹೆಚ್ಚಿಸುವ, ಕಡಿಮೆಮಾಡುವ ಅಥವಾ ಮಾರ್ಪಡಿಸುವ ವಸ್ತುಗಳ ನೈತಿಕ ಮೌಲ್ಯಗಳನ್ನು ಅವಲಂಬಿಸಿರಬಹುದು. "ನೈತಿಕ ಮೌಲ್ಯವಿರುವ" ವಸ್ತುವನ್ನು "ನೈತಿಕ ಅಥವಾ ತಾತ್ವಿಕ ಹಿತ"ವೆಂದು ಕರೆಯಬಹುದು.

ಹೆಚ್ಚಿನ ಓದಿಗೆ[ಬದಲಾಯಿಸಿ]

  • The political algebra of global value change. General models and implications for the Muslim world. Arno Tausch; Almas Heshmati and Hichem Karoui. Hauppauge, New York; Nova Science Publishers, 2015