ಸದಸ್ಯ:Thripura V R/ನನ್ನ ಪ್ರಯೋಗಪುಟ 2
ಬೇ ಅಥವಾ ಲಾರೆಲ್ ಎಲೆಗಳು
[ಬದಲಾಯಿಸಿ]ಬೇ ಅಥವಾ ಲಾರೆಲ್ ಎಲೆಗಳನ್ನು ಲಾರೆಸ್ ನೊಬಿಲಿಸ್ ಎಂಬ ಹೆಸರಿನಿಂದ ಕರೆಯುತ್ತಾರೆ.
ವಿವರಣೆ ಮತ್ತು ವ್ಯಾಪ್ತಿ
[ಬದಲಾಯಿಸಿ]ಲಾರೆಲ್ ಅಥವಾ ಬೆಳೆಗಳು ಲಾರೆಲ್ ನೊಬಿಲಿಸ್ ಲಿನ್ ಮರದ ಒಣಗಿಸಿದ ಎಲೆಗಳು. ಈ ಮರಗಳು ಮೆಡಿಟರೇನಿಯನ್ ದೇಶಗಳಲ್ಲಿ ಮುಖ್ಯವಾಗಿ ಗ್ರೀಸ್ ಸ್ಪೇನ್ ಮತ್ತು ಪೋರ್ಚುಗಲ್ ನಲ್ಲಿ ಬೆಳೆಯುತ್ತವೆ. ಏಷ್ಯಾ ಮೈನರ್ ಮತ್ತು ಮಧ್ಯ ಅಮೆರಿಕದಲ್ಲಿ ಇದನ್ನು ಬೆಳೆಸುತ್ತಾರೆ. ಕೆಲವು ಕಡೆ ಭಾರತದಲ್ಲಿ ಇದನ್ನು ಬೆಳೆಯಲು ಪ್ರಯತ್ನಿಸಿದರೂ ಅದು ಚೆನ್ನಾಗಿ ಬರುವುದಿಲ್ಲ. ಎಲೆಯ ಮೇಲ್ಭಾಗವು ಹಸಿರಾಗಿದ್ದು, ತಿಳಿಹಸಿರು ಅರಿಶಿನ ಬಣ್ಣದ್ದಾಗಿರುತ್ತದೆ. ಲಾರೆಲ್ ಎಲೆಗಳನ್ನು ಪೂರ್ತಿ ಅಥವಾ ಮುರಿದು ಉಪಯೋಗಿಸುತ್ತಾರೆ. ಇದರ ವಾಸನೆಯೂ ಮೃದುಮಧುರ ವಾಗಿರುತ್ತದೆ ಸ್ವಲ್ಪ ಕಹಿಯಾಗಿರುತ್ತದೆ. ಈ ಎಲೆಗಳು ಪೋಟರಿ ಕೋದ ಬೇರಂ ಮರ ( ಪಿಮೆಂಟ್ ರೆಸಿಮೊಸಾ ಮಿಲ್, ವಂಶ ಮಿರ್ಟೇಸಿ) ಅಥವಾ ಕ್ಯಾಲಿಫೋರ್ನಿಯಾದ ಬೇಲಾರೆಲ್. ಇವುಗಳಿಗೆ ತಪ್ಪಾಗಿ ತಿಳಿಯಬಾರದು, ಸ್ವೀಟ್ ಡೇ ಅಥವಾ ಲಾರೆಲ್ ಎಲೆಗಳು ಪ್ರಾಚೀನಕಾಲದಿಂದ ಮೆಡಿಟರೇನಿಯನ್ ದೇಶಗಳಲ್ಲಿ ಬೆಳೆಸುತ್ತಿರುವ ನಿತ್ಯ ಹಸುರಿನ ಹಸುರಿನ ಗಟ್ಟಿಮುಟ್ಟಾದ ಮರ ಅಥವಾ ಪೊದೆಯಿಂದ ತೆಗೆದ ಪದಾರ್ಥ. ಈ ಎಲೆಗಳ ಉದ್ದ ೨.೫-೭.೫ ಸೆಂಟಿಮೀಟರ್ ಮತ್ತು ಅಗಲ ೧.೬-೨.೬ ಸೆಂಟಿಮೀಟರ್ ಎಲೆಯ ಮಧ್ಯದಲ್ಲಿ ಇರುತ್ತದೆ. ಎಲೆಯು ಅಂಡಾಕಾರವಾಗಿದ್ದು, ತೊಟ್ಟು ಮತ್ತು ತುದಿಗಳಲ್ಲಿ ಚೂಪಾಗಿರುತ್ತದೆ.
ಮರದ ಒಣಗಿಸಿದ ಕಾಯಿಯನ್ನು ಬೇ ಬರ್ರೀಸ್ ಔಷಧಗಳಲ್ಲಿ ಉಪಯೋಗಿಸಲು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಈ ಕಾಯಿಯು ೧.೫ ಸೆಂ.ಮೀ ಉದ್ದ, ಅಂಡಾಕಾರವಾಗಿದ್ದು ಕಪ್ಪು ಬಣ್ಣ ಮತ್ತು ಸುಕ್ಕು ಸುಖದ ಹೊರ ಮೈ ಹೊಂದಿರುತ್ತದೆ. ಎಲೆಗಳನ್ನು ಭಟ್ಟಿ ಇಳಿಸಿದಾಗ ವಿಶಿಷ್ಟ ಮಧುರ ಸಾಂಬಾರ ವಾಸನೆಯುಳ್ಳ ಕಜಪುಟ್ ವಾಸನೆಯನ್ನು ಹೋಲುವ ೧-೩% ಚಂಚಲ ತೈಲವನ್ನು ಕೊಡುತ್ತದೆ. ಇನ್ನೊಂದು ವರದಿಯ ಪ್ರಕಾರ ಹೊಸ ಎಲೆ ಮತ್ತು ರೆಂಬೆಗಳು ೦.೫ % ಒಣಗಿದ ಎಲೆಗಳು ೦.೮ ಪರ್ಸೆಂಟ್ ತೈಲವನ್ನೂ ಕೊಡುತ್ತದೆ .
ಸಂಯೋಜನೆ
[ಬದಲಾಯಿಸಿ]ಎ.ಎಸ್.ಟಿ.ಎ ಪ್ರಕಾರ ಬೆ ಎಲೆಗಳ ಸಂಯೋಜನೆ ಒಣಗಿದ ಎಲೆ ಈ ರೀತಿ ಇದೆ.
ತೇವಾಂಶ: ೪.೫% ಸಸಾರಜನಕ ಪದಾರ್ಥ: ೭.೬% ಜಿಡ್ಡು:೮.೮%, ನಾರು:೨೫.೨% ಶರ್ಕರ ಪದಾರ್ಥಗಳು ೫೦.೨ % ಒಟ್ಟುಬೂದಿ: ೩.೭% ಕ್ಯಾಲ್ಸಿಯಂ ೧.೦% ರಂಜಕ: ೦.೧೧% ಶೇಕಡ ಸೋಡಿಯಂ ೦.೦೨% ಪೊಟ್ಯಾಷಿಯಂ:೭.೬ % ಕಬ್ಬಿಣ:೦.೫೩% ವಿಟಮಿನ್ಗಳು: ( ಮೀ.ಗ್ರಾಂ\೧೦೦) ವಿಟಮಿನ್ ಬಿ೧ ( ಥೈಯಮಿನ್) ೦.೧%; ವಿಟಮಿನ್ ಬಿ೨ (ರಿಬೋಪ್ಲಾ ವಿನ್): ೦.೪೨; ನಯಾಸಿನ್; ೨.೦; ವಿಟಮಿನ್ ಸಿ (ಆ್ಯಸ್ಯಾರ್ಬಿಕ್ ಆಮ್ಲ) ೪೬.೬ ಮತ್ತು ವಿಟಮಿನ್ ಎ: ೫೪೫ ಅಂತರರಾಷ್ಟ್ರೀಯ ಯೂನಿಟ್ಗಳು (ಐ.ಯು), ಉಷ್ಣಜನಕ ಶಕ್ತಿ; (ಆಹಾರ ಶಕ್ತಿ) ೪೧೦ ಕ್ಯಾಲರಿ ಪ್ರತಿ ೧೦೦ ಗ್ರಾಂಗೆ.
ಇಟಲಿ ಬರ್ಲಿನ್ನಿನ ಮುಸ್ಟರ್ ಪ್ರಯೋಗ ಕೇಂದ್ರದಲ್ಲಿ ಮಾಡಿದ ಎಲೆಗಳ ವಿಶೇಷಣ ಈ ರೀತಿಯ ಸಂಯೋಜನೆ ತೋರಿಸಿತು. ತೇವಾಂಶ: ೯.೪%; ಸಸಾರಜನಕ ಪದಾರ್ಥ: ೮.೩೪% ಎಣ್ಣೆ: ೪.೪೯%; ಚಂಚಲ ತೈಲ: ೩.೬೩% ಮದ್ಯಸಾರದಲ್ಲಿ ತೆಗೆದಸಾರ: ೨೫.೦೧% ಸಾರಜನಕ ರಹಿತಸಾರ: ೩೮.೩೩%; ನಾರು:೩೧.೮೩% ಮತ್ತು ಬೂದಿ: ೪.೫೩% ಒಣಗಿಸಿದ ಬೇ ಎಲೆಗಳಲ್ಲಿ ೧೩.೮೪% ಪೆಂಟೋಸಾನ್ ಶರ್ಕರಗಳು ಇವೆ.
ಚಂಚಲ ತೈಲ
[ಬದಲಾಯಿಸಿ]ಪ್ಯಾರಿಯ ವರದಿಯಂತೆ ಲಾರೆಲ್ ಎಲೆಗಳು ೧.೩% ಚಂಚಲ ತೈಲ ಕೊಡುತ್ತದೆ. ಅದರ ಲಕ್ಷಣಗಳು ಈ ರೀತಿ ಇವೆ. ಸಾಪೇಕ್ಷ ಸಾಂದ್ರತೆ ೦.೯೧೫-೦೯೩೦; ದೃಕ್ ಪರ್ಯಾಯ (ಆಪ್ಟಿಕಲ್ ರೊಟೇಷನ್) ೨೦ಡಿಗ್ರಿ.ಸಿ- ೧೫ಡಿಗ್ರಿ ಯಿಂದ – ೨೨ ಡಿಗ್ರಿ.ಸಿ; ವಕ್ರೀಕರಣ ಸೂಚ್ಯಂಕ (ರಿಫ್ರಾಕ್ಟಿವ್ ಇಂಡೆಕ್ಸ್) ೨೦ ಡಿಗ್ರಿ.ಸಿ; ೧.೪೬೭೦- ೧೪೭೭೫; ಮುಖ್ಯ ಘಟಕ: ಸಿನಿಯೋಲ್ ೨೫-೫೦%. ವಿಲೀನತ್ವ: ೧ ಭಾಗ ತೈಲ ೮೦% ಮದ್ಯಸಾರದ ೩ ಭಾಗಗಳಲ್ಲಿ. ಇದರ ಪ್ರಮುಖ ಘಟಕವಾದ ಸಿನಿಯೋಲ್(೫೦% ವರೆಗೆ) ಒಂದು ಬಣ್ಣರಹಿತ ದ್ರವ, ಇದಕ್ಕೆ ತೀಕ್ಷ್ಣವಾದ ಕರ್ಪೂರವನ್ನು ಹೋಲುವ ವಾಸನೆಯು ತಂಪಾದ ರುಚಿಯು ಇರುತ್ತದೆ. ಇದರಲ್ಲಿ ಇರುವ ಇತರ ಸಾವಯವ ಸಂಯುಕ್ತಗಳು.
ಪೈನಿಂಗ್, ಫಿಲಂಡ್ರೀಮ್, ಲಿನಲೂಲ್, ಟರ್ಪಿನಿಯಲ್, ಜೆರೇನಿಯಾಲ್, ಯೂಜಿವಾಲ್, ಯೂಜಿನಾಲ್ ಆಸಿಟೇಟ್, ಮಿಥೈಲ್ ಯೂಜಿನಾಲ್, ಹಲವು ಎಸ್ಟರ್ ಪದಾರ್ಥಗಳು ಮತ್ತು ಆಸಿಟಿಕ್, ಐಸೋಬ್ಯುಟಿರಿಕ್ ಮತ್ತು ಐಸೋವ್ಯಾಲರಿಕ್ ಆಮ್ಲಗಳು.
ಉಪಯೋಗಗಳು
[ಬದಲಾಯಿಸಿ]ಬೇ ಎಲೆಗಳು ಪ್ರಪಂಚದ ಅತ್ಯಂತ ಹಳೆಯ ಸಸ್ಯ ಸಾಂಬಾರ. ಗ್ರೀಕ್ ಮತ್ತು ರೋಮನ್ ಜನರು ತಮ್ಮ ವೀರರನ್ನು ಆನಂದಿಸಲು ಲಾರೆಲ್ ಎಲೆಗಳ ದಂಡೆಯನ್ನು ಅಭಿನಂದಿಸಲು ಲಾರಲ್ ಎಲೆಗಳ ದಂಡೆಯನ್ನು ಅರ್ಪಿಸುತ್ತಿದ್ದರು. ಈ ಎಲೆಗಳನ್ನು ವಿನಿಗರ್ ಹಾಕಿದ ಹಂದಿಕಾಲು, ಕುರಿಮಾಂಸ, ಹಂದಿನಾಲಿಗೆ ಉಪ್ಪಿನಕಾಯಿಗಳಲ್ಲಿ ಉಪಯೋಗಿಸುತ್ತಾರೆ. ವಿನಿಗರ್ ಹಾಕಿದ ಹಂದಿ ಕಾಲು ಕುರಿಮಾಂಸ ಹಂದಿ ನಾಲಿಗೆ ಉಪ್ಪಿನಕಾಯಿಗಳಲ್ಲಿ ಬಳಸುತ್ತಾರೆ. ಸೂಪುಗಳು, ಸ್ಪ್ಯೂ, ಮಾಂಸ ಮತ್ತು ಬೇಟೆ ಮಾಂಸದ ಅಡಿಗೆಗಳು, ನೀನು ಮತ್ತು ಗೊಜ್ಜುಗಳು, ಉಪ್ಪಿನಕಾಯಿಗಳು ಮುಂತಾದವುಗಳಲ್ಲಿಯೂ ಈ ಎಲೆಗಳನ್ನು ಸುವಾಸನೆಗಾಗಿ ಹಾಕುತ್ತಾರೆ.
ಎಲೆಗಳು ಮತ್ತು ಹಣ್ಣುಗಳಿಗೆ ಉತ್ತೇಜಕ ಮತ್ತು ಮಾದಕ ಗುಣಗಳಿವೆ. ಇವನ್ನು ಹಿಂದೆ ಉನ್ಮಾದರೋಗ, ಅಮೆನೋರಿಯಾ ಮತ್ತು ಜಠರ ವಾಯುವಿನ ತೊಂದರೆಗಳಿಗೆ ಉಪಯೋಗಿಸುತ್ತಿದ್ದರು. ಈಗಲೂ ಕೆಲವು ವೇಳೆ ಅವನು ಕುಡಿಯುವ ಔಷಧಿಗಳಲ್ಲಿ ಸೇರಿಸುವುದುಂಟು. ಲಾರೆಲ್ ಕಾಯಿಗಳಿಂದ ತೆಗೆದ ತೈಲವನ್ನು ಉಳುಕು ನೋವಿನ ನಿವಾರಣೆಗೆ ಹೊರಭಾಗಕ್ಕೆ ಲೇಪಿಸುವರು. ಆದರೆ ಇದರ ಮುಖ್ಯ ಉಪಯೋಗ ಪಶುವೈದ್ಯದಲ್ಲಿದೆ. ರುಚಿಕರವಾಗಿ ಮತ್ತು ಸುವಾಸನೆಗಾಗಿ ಆಹಾರದಲ್ಲೂ ಮಿಠಾಯಿಗಳನ್ನು ಉಪಯೋಗಿಸುತ್ತಾರೆ. ಹಿಂದೆ ತಿಳಿಸಿದಂತೆ ಇದರ ಅಡಿಗೆ ಉಪಯೋಗಗಳು ಅನೇಕ ಲಾರೆಲ್ ಎಲೆಗಳನ್ನು ಪೂರ್ತಿ ಅಥವಾ ಮುರಿದ ರೂಪದಲ್ಲಿ ಚೀಲಗಳಲ್ಲಿ ೫೫ ಪಾಂಡು ಅಥವಾ ೧೧೦ ಅಳತೆಯಲ್ಲಿ ತುಂಬುವರು ಎಲೆಗಳನ್ನು ಪುಡಿ ಮಾಡುವುದು ಅಪರೂಪ.
ಕಾಯಿಯು ೨೦-೩೪% ಸುವಾಸನೆಯನ್ನು ಎಣ್ಣೆ ಕೊಡುತ್ತದೆ. ಇದನ್ನು ಔಷಧಗಳಲ್ಲಿ ಪಶುವೈದ್ಯ ದಲ್ಲಿ ಮತ್ತು ಸುಗಂಧ ಮಿಶ್ರಣಗಳನ್ನು ಬಳಸುತ್ತಾರೆ ವ್ಯಾಪಾರಗಳನ್ನು ನೀರಿನ ಮೇಲೆ ತೇಲುವ ಎಣ್ಣೆಯನ್ನು ಬೇರ್ಪಡಿಸಿ ಪಡೆಯುವರು ಇದು ಹಸಿರು ಬಣ್ಣದಾಗಿದ್ದು, ಅದರ ಲಕ್ಷಣಗಳು ಈ ರೀತಿ ಇರುತ್ತದೆ. ಕಾಯಿಗಳನ್ನು ಅತಿಸಾರ ಪ್ಯೂರ್ ಮತ್ತು ಜಲೋಧರ ರೋಗಗಳಲ್ಲಿ ಬಳಸುತ್ತಾರೆ ಯುರೋಪಿನಲ್ಲಿ ಗರ್ಭಪಾತ ಮಾಡಿಸಲು ಬಳಸುತ್ತಾರೆ ಹೊಸದಾಗಿ ೦.೫% ಮಧುರ ಸಾಂಬಾರ ವಾಸನೆಯನ್ನು ಕೊಡುತ್ತದೆ ತೈಲದ ವಾಸನೆಯನ್ನು ಹೋಲುತ್ತದೆ.
ಉಲ್ಲೇಖಗಳು
[ಬದಲಾಯಿಸಿ]#ಡಾ. ರಾಜೇಶ್ವರಿ, ಮನೆಯಲ್ಲಿ ಪ್ರಕೃತಿ ಚಿಕಿತ್ಸೆ, ಸಪ್ನ ಬುಕ್ ಹೌಸ್, ಬೆಂಗಳೂರು, ೧೯೯೮.
#ಜೆ.ಎಸ್. ಪೃಥಿ, ಸಂಬಾರ ಜಿನಸಿಗಳು ಮತ್ತು ರುಚಿಕಾರಕಗಳು, ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ, ೧೯೯೫.