ವಿಷಯಕ್ಕೆ ಹೋಗು

ಕ್ರೌರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ರೌರ್ಯವು ವೇದನೆಯನ್ನು ಉಂಟುಮಾಡುವಲ್ಲಿ ಅನುಭವಿಸುವ ಸಂತೋಷ ಅಥವಾ ಸ್ಪಷ್ಟ ಪರಿಹಾರವು ಸರಾಗವಾಗಿ ಲಭ್ಯವಿದ್ದರೂ ಮತ್ತೊಬ್ಬರ ವೇದನೆಯ ಸಂಬಂಧವಾಗಿ ನಿಷ್ಕ್ರಿಯತೆ ಹೊಂದಿರುವುದು.[] ಹಿಂಸಾನಂದವನ್ನು ಕೂಡ ಈ ಕ್ರಿಯೆ ಅಥವಾ ಪರಿಕಲ್ಪನೆಯ ರೂಪಕ್ಕೆ ಸಂಬಂಧಿಸಬಹುದು. ವೇದನೆಯನ್ನು ಉಂಟುಮಾಡುವ ಕ್ರೂರ ರೀತಿಗಳು ಹಿಂಸೆಯನ್ನು ಒಳಗೊಳ್ಳಬಹುದು, ಆದರೆ ಒಂದು ಕ್ರಿಯೆಯು ಕ್ರೂರವಾಗಿರಲು ನಿಶ್ಚಯಾತ್ಮಕ ಹಿಂಸೆಯು ಅತ್ಯಗತ್ಯವಿಲ್ಲ. ಉದಾಹರಣೆಗೆ, ಒಬ್ಬ ವ್ಯಕ್ತಿಯು ನೀರಿನಲ್ಲಿ ಮುಳುಗಿ ಸಹಾಯ ಬೇಡುತ್ತಿರಲು ಮತ್ತೊಬ್ಬ ವ್ಯಕ್ತಿಯು ಯಾವುದೇ ಹಾನಿ ಅಥವಾ ಅಪಾಯವಿಲ್ಲದೇ ಸಹಾಯ ಮಾಡುವುದು ಸಾಧ್ಯವಿದ್ದರೂ, ಕೇವಲ ನಿರಾಸಕ್ತಿ ಅಥವಾ ಪ್ರಾಯಶಃ ಚೇಷ್ಟೆಸಹಿತ ಮೋಜಿನಿಂದ ನೋಡುತ್ತಿದ್ದರೆ, ಆ ವ್ಯಕ್ತಿಯು ಹಿಂಸಾತ್ಮಕದ ಬದಲು ಕ್ರೂರವಾಗಿರುತ್ತಾನೆ.

"ಪ್ರತಿಯೊಂದು ಇತರ ದುರ್ಗುಣದಂತೆ ಕ್ರೌರ್ಯಕ್ಕೆ ಅದರ ಸ್ವಂತದಾಚೆಗಿನ ಯಾವುದೇ ಉದ್ದೇಶ ಬೇಕಾಗಿಲ್ಲ; ಅದಕ್ಕೆ ಕೇವಲ ಅವಕಾಶದ ಅಗತ್ಯವಿದೆ" ಎಂದು ಜಾರ್ಜ್ ಈಲಿಯಟ್ ಹೇಳಿದನು.[]

ಉಲ್ಲೇಖಗಳು

[ಬದಲಾಯಿಸಿ]
  1. "Definition of CRUEL". www.merriam-webster.com (in ಇಂಗ್ಲಿಷ್). Retrieved 2019-03-17.
  2. "Cruelty Quotes". BrainyQuote. Retrieved 2013-08-18.


"https://kn.wikipedia.org/w/index.php?title=ಕ್ರೌರ್ಯ&oldid=952257" ಇಂದ ಪಡೆಯಲ್ಪಟ್ಟಿದೆ