ಮಧ್ಯಾಹ್ನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಧ್ಯಾಹ್ನದ ಸೂರ್ಯ, ಕೇರಳದಿಂದ ಕಂಡಾಗ

ಮಧ್ಯಾಹ್ನ ಎಂದರೆ ಹಗಲಿನ ಸಮಯದ ೧೨ ಗಂಟೆ, ಮತ್ತು ಮಧ್ಯರಾತ್ರಿಯ ೧೨ ಗಂಟೆಗೆ ವಿರುದ್ಧವಾಗಿದೆ. ನಡುಹಗಲು ಶಬ್ದವು ಇದಕ್ಕೆ ಸಮನಾರ್ಥವಾಗಿದೆ, ಆದರೆ ಇದು ಭಿನ್ನ ಪರಿಕಲ್ಪನೆಯಾಗಿದೆ ಮತ್ತು ಹಗಲಿನ ಅವಧಿಯ ಮಧ್ಯಬಿಂದುವನ್ನು ಸೂಚಿಸುತ್ತದೆ. ಮಧ್ಯಾಹ್ನ ಮತ್ತು ನಡುಹಗಲು ಒಂದೇ ಸಮಯದ್ದಾಗಿಲ್ಲದಿರಬಹುದು.

ಸೌರ ಮಧ್ಯಾಹ್ನ ಎಂದರೆ ಸೂರ್ಯನು ಸ್ಥಳೀಯ ಬಾಹ್ಯಾಕಾಶ ಮಧ್ಯಾಹ್ನರೇಖೆಯನ್ನು ಸಂಪರ್ಕಿಸಿದಂತೆ ಕಾಣುವ ಸಮಯ. ಇದು ಸೂರ್ಯನು ಆಕಾಶದಲ್ಲಿ ತನ್ನ ಅತಿ ಎತ್ತರದ ಬಿಂದುವನ್ನು ತಲುಪಿದಂತೆ ತೋರುವ ಸಮಯ. ಇದು ೧೨ ಗಂಟೆ ಮಧ್ಯಾಹ್ನ ಸ್ಪಷ್ಟ ಸೌರ ಸಮಯವಾಗಿರುತ್ತದೆ ಮತ್ತು ಇದನ್ನು ನೆರಳು ಗಡಿಯಾರವನ್ನು ಬಳಸಿ ವೀಕ್ಷಿಸಬಹುದು. ಸೌರ ಮಧ್ಯಾಹ್ನದ ಸ್ಥಳೀಯ ಅಥವಾ ಗಡಿಯಾರದ ಸಮಯವು ರೇಖಾಂಶ ಮತ್ತು ದಿನಾಂಕವನ್ನು ಅವಲಂಬಿಸಿರುತ್ತದೆ.[೧]

ಉಲ್ಲೇಖಗಳು[ಬದಲಾಯಿಸಿ]

  1. "The Sun as an Energy Resource".

ಬಾಹ್ಯ ಸಂಪರ್ಕಗಳು[ಬದಲಾಯಿಸಿ]