ಪಿಸ್ತೂಲು
ಗೋಚರ
ಪಿಸ್ತೂಲು ಒಂದು ಬಗೆಯ ಕೈಬಂದೂಕು.[೧] ಪಿಸ್ತೂಲು ೧೬ನೇ ಶತಮಾನದಲ್ಲಿ ಹುಟ್ಟಿಕೊಂಡಿತು. ಮುಂಚಿನ ಕೈಬಂದೂಕುಗಳನ್ನು ಯೂರೋಪ್‍ನಲ್ಲಿ ೧೬ನೇ ಶತಮಾನದಲ್ಲಿ ಉತ್ಪಾದಿಸಲಾಯಿತು. ಇಂದು ಅತ್ಯಂತ ಸಾಮಾನ್ಯ ಬಗೆಯ ಪಿಸ್ತೂಲುಗಳೆಂದರೆ ಒಂದೇಟು ಮತ್ತು ಅರೆಸ್ವಯಂಚಾಲಿತ ಪಿಸ್ತೂಲುಗಳು. ಕಾನೂನುಗಳು ಹಾಗೂ ನಿಯಮಗಳ ಕಾರಣ ಸ್ವಯಂಚಾಲಿತ ಪಿಸ್ತೂಲುಗಳು ಕಡಿಮೆ ಸಾಮಾನ್ಯವಾಗಿವೆ.
ಒಂದೇಟು
[ಬದಲಾಯಿಸಿ]ಒಂದೇಟಿನ ಕೈಬಂದೂಕುಗಳನ್ನು ಮುಖ್ಯವಾಗಿ ಚಕಮಕಿಚಾಪು ಹಾಗೂ ಮಸ್ಕಿಟ್ ಆಯುಧಗಳ ಯುಗದಲ್ಲಿ ಕಾಣಲಾಯಿತು. ಆಗ ಪಿಸ್ತೂಲಿಗೆ ಸೀಸದ ಗುಂಡನ್ನು ತುಂಬಿ ಅದನ್ನು ಚಕಮಕಿ ಸ್ಫೋಟಕದಿಂದ, ಮತ್ತು ನಂತರ ಸಂಘರ್ಷಣ ಕುಲಾವಿಯಿಂದ ಹೊತ್ತಿಸಲಾಗುತ್ತಿತ್ತು. ಆದರೆ, ತಂತ್ರಜ್ಞಾನ ಸುಧಾರಿಸಿದಂತೆ, ಒಂದೇಟು ಪಿಸ್ತೂಲು ಕೂಡ ಸುಧಾರಿಸಿತು. ಹೊಸ ಕಾರ್ಯನಿರ್ವಹಣಾ ವಿಧಾನಗಳನ್ನು ಸೃಷ್ಟಿಸಲಾಯಿತು, ಮತ್ತು ಆ ಕಾರಣದಿಂದ ಇವನ್ನು ಇಂದೂ ಉತ್ಪಾದಿಸಲಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]