ರಹ್ಮಾನಿಯ್ಯಃ ಅರಬಿಕ್ ಕಾಲೇಜು
ಕಲ್ಲಿಕೋಟೆಯ ಬಡಗರ ತಾಲ್ಲೂಕಿನ ಕಡಮೇರಿ ಎಂಬಲ್ಲಿ 1972ರಲ್ಲಿ ಸ್ಥಾಪಿತವಾದ ಧಾರ್ಮಿಕ - ಲೌಕಿಕ ಸಮನ್ವಯ ವಿದ್ಯಾಸಂಸ್ಥೆಯಾಗಿದೆ ರಹ್ಮಾನಿಯ್ಯಃ ಅರಬಿಕ್ ಕಾಲೇಜು. ದಕ್ಷಿಣ ಭಾರತದ ಮೊಟ್ಟಮೊದಲ ಸಮನ್ವಯ ವಿದ್ಯಾಲಯವಾಗಿ ಇದು ಪ್ರಸಿದ್ಧಿ ಪಡೆದಿದೆ. ಪ್ರಮುಖ ವಿದ್ವಾಂಸರೂ ಸೂಫೀವರ್ಯರೂ ಆದ ಮರ್ಹೂಂ ಚೀಕಿಲೋಟ್ ಕುಂಞಮ್ಮದ್ ಮುಸ್ಲಿಯಾರ್ ಈ ಸಂಸ್ಥೆಯನ್ನು ಸ್ಥಾಪಿಸಿದರು. ವಿವಿಧ ಶಿಕ್ಷಣ ಕೇಂದ್ರಗಳು ಹಲವು ಸೆಕ್ಷನುಗಳೊಂದಿಗೆ ಶಿಕ್ಷಣ, ಆಹಾರ ಮತ್ತು ವಸತಿ ಸೌಕರ್ಯ ಸಂಪೂರ್ಣ ಉಚಿತವಾಗಿ ವಿದ್ಯಾರ್ಥಿಗಳಿಗೆ ಇಲ್ಲಿ ನೀಡಲಾಗುತ್ತಿದೆ.
ರಹ್ಮಾನಿಯ್ಯಃ ಸಿಲೆಬಸ್
[ಬದಲಾಯಿಸಿ]8 ವರ್ಷ ಎಂ.ಎ ಯೊಂದಿಗೆ 'ರಹ್ಮಾನಿ' ಎಂಬ ಬಿರುದು ಕೋರ್ಸ್ ಇಲ್ಲಿ ನೀಡಲಾಗುತ್ತಿದೆ. ಸಾಂಪ್ರದಾಯಿಕ ದರ್ಸೀ ಕಿತಾಬುಗಳೊಂದಿಗೆ ಅರಬಿಕ್, ಉರ್ದು, ಇಂಗ್ಲಿಷ್ ಭಾಷಾ ಶಿಕ್ಷಣ ಹಾಗೂ ಕಂಪ್ಯೂಟರ್ ತರಬೇತಿ, ಕುತುಬ್ ಖಾನ, ಡಿಜಿಟಲ್ ರೆಫರೆನ್ಸ್ ಲೈಬ್ರರಿ, ಆಲಿಯ್ಯ, ಆಲಮಿಯ್ಯ, ಫಾಝಿಲಿಯ್ಯ ಮತ್ತು ಇಖ್ಸಾಇಯ್ಯ ಎಂಬೀ ನಾಲ್ಕು ಸೆಕ್ಷನುಗಳಿರುವ ಕೋರ್ಸಿನಲ್ಲಿ ಕೇರಳ ಸಿಲೆಬಸ್ ಪ್ರಕಾರವಿರುವ +2 ಹಾಗೂ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳು. ಸಮಕಾಲೀನ ವಿಷಯಗಳಲ್ಲಿ ಅಕಾಡೆಮಿಕ್ ಸೆಮಿನಾರ್ಗಳು, ವಿವಿಧ ವಿಷಯಗಳಲ್ಲಿ ಪ್ರಾಜೆಕ್ಟ್ ಹಾಗೂ ತಿಸೀಸ್ ಪ್ರೋಗ್ರಾಂ ಒಳಗೊಂಡ ಅತ್ಯಾಧುನಿಕ ಸಿಲೆಬಸ್. ಸದ್ಯ ಮುನ್ನೂರಕ್ಕೂ ಮಿಕ್ಕ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಬಹ್ಜತುಲ್ ಉಲಮಾ
[ಬದಲಾಯಿಸಿ]ಕಾಲಕ್ಕೆ ಮುಂಚೆಯೇ ಸಂಚರಿಸಿದ ವಿದ್ಯಾರ್ಥಿ ಸಂಘಟನೆಯಾಗಿದೆ ಬಹ್ಜತುಲ್ ಉಲಮಾ ಸ್ಟುಡೆಂಟ್ಸ್ ಅಸೋಸಿಯೇಷನ್. ವಿವಿಧ ಯೋಜನೆಗಳಿಗೆ ನೇತೃತ್ವ ನೀಡಿ ಸಮುದಾಯಕ್ಕೆ ತಮ್ಮದೇ ಆದ ಭಾಗೀದಾರಿಕೆಯನ್ನು ವಹಿಸಲು ಸಂಘಟನೆಗೆ ಸಾಧಿಸಿದೆ. ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಲ್ಲಿ ಸಂಘಟನೆ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಮಲಯಾಳದ ಪ್ರಥಮ ಅಹ್ಲುಸ್ಸುನ್ನ ವೆಬ್ಸೈಟ್ನ ನೇತೃತ್ವ ಸಂಘಟನೆ ವಹಿಸುತ್ತಿದೆ. ಮೌಲಿಕ ಓದುವಿಕೆಯ ಗೌರವ ತಿಳಿಸುವ ಹಲವಾರು ಪುಸ್ತಕಗಳನ್ನು ಹೊರ ತರುತ್ತಿರುವ ಬಹ್ಜತ್ ಪಬ್ಲಿಷಿಂಗ್ ಬ್ಯೂರೋ(ಬಿ ಪಿ ಬಿ), ಧರ್ಮ ಪ್ರಬೋಧನೆ, ಸಾಮೂಹಿಕ ಸೇವೆ ಎಂಬಿತ್ಯಾದಿ ಗುರಿಗಳೊಂದಿಗೆ ಕಾರ್ಯಾಚರಿಸುತ್ತಿರುವ ಇಸ್ಲಾಮಿಕ್ ಪ್ರೊಪಗೇಷನ್ ಸೆಲ್(ಐ ಪಿ ಸಿ), ಭಾಷಣ ಪ್ರಬಂಧ ಭಾಷಾಂತರಗಳ ತರಬೇತಿಗಳಿಗೆ ಸಾಹಿತ್ಯ ಸಮಾಜ, ವಿದ್ಯಾರ್ಥಿಗಳ ಸಹಾಯ ಹಸ್ತಕ್ಕಾಗಿ ವೆಲ್ಫೇರ್ ಸೆಲ್, ಹೊಸ ಬರಹಗಾರರನ್ನು ಸೃಷ್ಟಿಸುವುದಕ್ಕಾಗಿ ಅಲ್ ಬಲ್ಜಃ(ಅರಬಿಕ್), ಅಲ್ ಬಹ್ಜಃ(ಮಲಯಾಳಂ), ಬಹಾರ್(ಉರ್ದು), ದ ಗ್ಲೋರಿ(ಇಂಗ್ಲಿಷ್) ಮುಂತಾದ ವಿವಿಧ ಭಾಷೆಗಳಲ್ಲಿನ ಕೈಬರಹ ಮ್ಯಾಗಝೀನ್ಗಳು, ಇ-ರಿಸೋರ್ಸ್, ಬೃಹತ್ತಾದ ಗ್ರಂಥಾಲಯ, ವಾಚನಾಲಯ, ಉದ್ಯೋಗ ತರಬೇತಿ ಕೇಂದ್ರ, ಪಬ್ಲಿಕ್ ರಿಲೇಶನ್ ವಿಭಾಗ, ಮುಂತಾದವುಗಳು ಸಂಘಟನೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿದೆ. ವಿದ್ಯಾರ್ಥಿಗಳ ಅವಶ್ಯಕ ಚಿಕಿತ್ಸೆಗಳು, ಸ್ಟೋರ್ ಸೌಕರ್ಯಗಳು ಸಂಘಟನೆ ನೀಡುತ್ತಿದೆ.
ಅಲ್ ಖಾಫಿಲ
[ಬದಲಾಯಿಸಿ]ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ನಡ ವಿದ್ಯಾರ್ಥಿಗಳ ಬಹುಮುಖ ಅಭಿವೃದ್ಧಿಗಾಗಿ ಕಾರ್ಯಾಚರಿಸುತ್ತಿರುವ ಸಂಘಟನೆಯಾಗಿದೆ ಅಲ್ ಖಾಫಿಲ ಸ್ಟೂಡೆಂಟ್ಸ್ ಅಸೋಸಿಯೇಶನ್(ಅಖ್ಸಾ). ಭಾಷಣ-ಬರಹಗಳ ವಿಕಾಸಕ್ಕಾಗಿ ಸಾಹಿತ್ಯ ಪೋಷಕ ವೇದಿಕೆ, ಕನ್ನಡ ಭಾಷೆಯಲ್ಲಿನ ವಾಚನಾಶೀಲತೆಯನ್ನು ಬೆಳೆಸಲು ಬೃಹತ್ತಾದ ಗ್ರಂಥಾಲಯ ಹಾಗೂ ಹೊಸ ಲೇಖಕರನ್ನು ರೂಪೀಕರಿಸುವುದಕ್ಕಾಗಿ ಪ್ರಕಾಶನ ವೇದಿಕೆ ಸಂಘಟನೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿದೆ.
ಸಹ ಸಂಸ್ಥೆಗಳು
[ಬದಲಾಯಿಸಿ]- ರಹ್ಮಾನಿಯ್ಯಃ ಬೋರ್ಡಿಂಗ್ ಮದ್ರಸ
- +2 ಕೋಚಿಂಗ್ ಸೆಂಟರ್
- ಮಹಿಳಾ ಕಾಲೇಜು
- ನಿರ್ಗತಿಕ ಮಂದಿರ
- ಪಬ್ಲಿಕ್ ಸ್ಕೂಲ್
- ಕಂಪ್ಯೂಟರ್ ಮತ್ತು ಟೆಕ್ನಿಕಲ್ ಇನ್ಸ್ಟಿಟ್ಯೂಟ್
- ಹೈಸ್ಕೂಲ್
- ಹೈಯರ್ ಸೆಕೆಂಡರಿ ಸ್ಕೂಲ್ 
ಹೊರತಾಗಿ ರಹ್ಮಾನಿಯ್ಯಃ ಸಿಲೆಬಸ್ ಪ್ರಕಾರ ವಿವಿಧ ಜಿಲ್ಲೆಗಳಲ್ಲಿ ಅಫಿಲ್ಯೇಟೆಡ್ ಕಾಲೇಜುಗಳು ಕಾರ್ಯಾಚರಿಸುತ್ತಿವೆ.