ಸದಸ್ಯ:ASHWINI V ASHU/WEP

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                              ಫ್ಲಿಪ್ಕಾರ್ಟ್

ಆಧುನಿಕ ಯುಗದಲ್ಲಿ ಜನರು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸುಲಭ ಮಾರ್ಗ ಹುಡುಕುತ್ತಾರೆ. ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಕುಳಿತು ಅಂತರ್ಜಾಲದ ಉಪಯೋಗದಿಂದ ತಮ್ಮ ಅಭಿರುಚಿಗೆ ತಕ್ಕಂತಹ ವಸ್ತುಗಳನ್ನು ಖರೀದಿಸಲು ಫ್ಲಿಪ್ಕಾರ್ಟ್ ಸಹಾಯ ಮಾಡುತ್ತದೆ. ಜನರು ತಮ್ಮ ಸಮಯವನ್ನು ಉಳಿಸಲು ಬಹಳ ಉಪಯುಕ್ತವಾದ ಆಪ್ಲಿಕೇಶನ್ ಇದಾಗಿದೆ.

ಫ್ಲಿಪ್ಕಾರ್ಟ್ ಪ್ರೈ.ಲಿ. ಒಂದು ಇ-ಕಾಮರ್ಸ್ ಕಂಪನಿ ಹಾಗೂ ಗ್ರಾಹಕರಿಗೆ ಆನ್ ಲೈನ್ ಮೂಲಕ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ಕಲ್ಪಿಸುವ ವಿಭಿನ್ನ ಪ್ರಯತ್ನ ಇದಾಗಿದೆ. ಈ ಕಂಪನಿಯು ಮೂಲತಃ ಸ್ಥಾಪಿತಗೊಂಡಿದ್ದು ಬೆಂಗಳೂರಿನಲ್ಲಿ. ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಅಕ್ಟೋಬರ್ ೨೦೦೭ ನೇ ಇಸವಿಯಲ್ಲಿ ಕಂಪನಿಯನ್ನು ಸ್ಥಾಪಿಸಿದರು. ಆರಂಭದ ದಿನಗಳಲ್ಲಿ ಈ ಕಂಪನಿಯು ಪುಸ್ತಕಗಳ ಮಾರಾಟಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿತ್ತು. ನಂತರದ ದಿನಗಳಲ್ಲಿ ಎಲೆಕ್ಟ್ರಾನಿಕ್, ಫ್ಯಾಶನ್ ಮತ್ತು ಮೇಕಪ್ ವಸ್ತುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿತು. ಫ್ಲಿಪ್ಕಾರ್ಟ್ ನ ಪ್ರಸ್ತುತ ಸಿಇಓ ಕಲ್ಯಾಣ್ ಕೃಷ್ಣಮೂರ್ತಿ. ೨೦೧೭ರ ವರದಿಯ ಪ್ರಕಾರ ಫ್ಲಿಪ್ಕಾರ್ಟ್ ನ ಆದಾಯ ₹೧೯೯ ಬಿಲಿಯನ್. ಅಲ್ಲದೆ ಕಂಪನಿ ೩೦,೦೦೦ ಕ್ಕಿಂತ ಹೆಚ್ಚಿನ ನೌಕರರನ್ನು ಹೊಂದಿದೆ. ಕಂಪನಿಯು ವಾಣಿಜ್ಯ ವಿಭಾಗಕ್ಕೆ ಸೇರಿದ. ಈಗ ಫ್ಲಿಪ್ಕಾರ್ಟ್ ನ ಶೇಖಡ ೭೭ ರಷ್ಟು ಮಾಲೀಕತ್ವವನ್ನು ವಾಲ್ಮಾರ್ಟ್ ಕಂಪನಿಯು ಹೊಂದಿದೆ.

ಫ್ಲಿಪ್ಕಾರ್ಟ್ ಕಂಪನಿಗೆ ಅಮೆಜಾನ್ ಮತ್ತು ಸ್ನಾಪ್ ಡೀಲ್ ಕಂಪನಿಗಳು ಪ್ರತಿಸ್ಪರ್ಧಿಗಳಾಗಿವೆ. ಮಾರ್ಚ್ ೨೦೧೮ ರಲ್ಲಿ ಭಾರತದ ಇ-ಕಾಮರ್ಸ್ ಉದ್ಯಮದಲ್ಲಿ ಫ್ಲಿಪ್ಕಾರ್ಟ್ ಶೇಖಡ ೩೯.೫ ರಷ್ಟು ಮಾರ್ಕೆಟ್ ಶೇರ್ ಹೊಂದಿದೆ. ಫ್ಲಿಪ್ಕಾರ್ಟ್ ಕಂಪನಿಯ ಮೊಬೈಲ್ ಫೋನ್ ಮಾರಾಟದಲ್ಲಿ ಉಳಿದ ಎಲ್ಲಾ ಕಂಪನಿಯನ್ನು ಹಿಂದಿಕ್ಕಿತು. ಅಲ್ಲದೆ ಫೋನ್ ಪೇ, ಮೊಬೈಲ್ ಪೆಮೆಂಟ್ ಮುಂತಾದವುಗಳ ಮಾಲೀಕತ್ವ ಹೊಂದಿದೆ. ಭಾರತದಲ್ಲಿ ಫ್ಲಿಪ್ಕಾರ್ಟ್ ಗ್ರಾಹಕರನ್ನು ಸೆಳೆಯಲು ಇಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಕ್ಕೆ ಉತ್ತಮ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡುತ್ತದೆ. ಇದರಿಂದ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಉಪಯುಕ್ತವಾದ ಮಾರ್ಗ ಕಂಡುಕೊಂಡಿದೆ.

೨೫ ನವೆಂಬರ್ ೨೦೧೪ ರ ವರದಿಯಲ್ಲಿ, ಪ್ರಮುಖ ಮಾಧ್ಯಮವೊಂದು ಫ್ಲಿಪ್ಕಾರ್ಟ್ ಒಂದು ಸಂಕೀರ್ಣ ವ್ಯವಹಾರ ರಚನೆಯ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ಮಾಡಿದೆ, ಇದರಲ್ಲಿ ಒಂಬತ್ತು ಸಂಸ್ಥೆಗಳು ಸೇರಿವೆ, ಕೆಲವು ಸಿಂಗಾಪುರದಲ್ಲಿ ನೋಂದಾಯಿತವಾಗಿವೆ ಮತ್ತು ಕೆಲವು ಭಾರತದಲ್ಲಿವೆ. 2012 ರಲ್ಲಿ, ಫ್ಲಿಪ್ಕಾರ್ಟ್ ಸಹ-ಸಂಸ್ಥಾಪಕರು ಡಬ್ಲ್ಯುಎಸ್ ರಿಟೇಲ್ ಅನ್ನು ರಾಜೀವ್ ಕುಚಾಲ್ ನೇತೃತ್ವದ ಹೂಡಿಕೆದಾರರ ಒಕ್ಕೂಟಕ್ಕೆ ಮಾರಾಟ ಮಾಡಿದರು.

ಫ್ಲಿಪ್ಕಾರ್ಟ್ ಕಂಪನಿಯ ಸಂಸ್ಥಾಪಕರಾದ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಅವರಿಗೆ ಅನೇಕ ಪ್ರಶಸ್ತಿ ದೊರೆತಿದೆ. ಭಾರತದ ಪ್ರಮುಖ ಆರ್ಥಿಕ ದಿನಪತ್ರಿಕೆ ದಿ ಎಕನಾಮಿಕ್ ಟೈಮ್ಸ್ ನಿಂದ ಸಚಿನ್ ಬನ್ಸಾಲ್ ಅವರಿಗೆ 2012–2013ರ ವರ್ಷದ ಉದ್ಯಮಿ ಪ್ರಶಸ್ತಿ ನೀಡಲಾಯಿತು. ಸೆಪ್ಟೆಂಬರ್ 2015 ರಲ್ಲಿ, ಇಬ್ಬರು ಸಂಸ್ಥಾಪಕರು ಫೋರ್ಬ್ಸ್ ಇಂಡಿಯಾ ಶ್ರೀಮಂತ ಪಟ್ಟಿಗೆ ಪ್ರವೇಶಿಸಿ 86 ನೇ ಸ್ಥಾನದಲ್ಲಿದ್ದರು ಮತ್ತು ಅವರ ಮೌಲ್ಯ 1.3 ಬಿಲಿಯನ್ ಡಾಲರ್.

ಫ್ಲಿಪ್ಕಾರ್ಟ್ ನಲ್ಲಿ ವಸ್ತು ಖರೀದಿಸುವ ಅನೇಕ ಗ್ರಾಹಕರು ಕೆಲವು ಬಾರಿ ಕಳಪೆ ವಸ್ತು, ವಸ್ತುವಿನ ಬೆಲೆ ವ್ಯತ್ಯಾಸ ಹೀಗೆ ಮುಂತಾದ ತೊಂದರೆಗಳನ್ನು ಎದುರಿಸಿದ್ದಾರೆ. ಇದನ್ನು ಹೊರತುಪಡಿಸಿ ಗ್ರಾಹಕರು ಆನ್ ಲೈನ್ ಖರೀದಿಯಿಂದ ಅನೇಕ ಉಪಯೋಗ ಪಡೆದುಕೊಳ್ಳಬಹುದು. ತಮ್ಮ ಸಮಯ , ಅಭಿರುಚಿಗೆ ತಕ್ಕಂತಹ ವಸ್ತುಗಳನ್ನು ಖರೀದಿಸಲು ಫ್ಲಿಪ್ಕಾರ್ಟ್ ಒಂದು ಒಳ್ಳೆಯ ಸೌಲಭ್ಯ.