ವಿಷಯಕ್ಕೆ ಹೋಗು

ಕೃಷ್ಣರಾಜ ಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೃಷ್ಣರಾಜ ಪುರ: ನಗರವು ರಾಜಧಾನಿ ಬೆಂಗಳೂರು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಕೃಷ್ಣರಾಜ ಪುರ ತಾಲ್ಲೂಕನ್ನು ಬೆಂಗಳೂರು ಪೂರ್ವ ತಾಲ್ಲೂಕು ಎಂದು ಕರೆಯುತ್ತಾರೆ ಮತ್ತು ಕಸಬಾ ಹೋಬಳಿಯ ಕೇಂದ್ರವಾಗಿದೆ. ಕೃಷ್ಣರಾಜ ಪುರ ತಾಲೂಕು 329 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ.

ಆಡಳಿತದ ಅನುಕೂಲಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ)ಯನ್ನು ತಾಲೂಕುವಾರು ರಚನೆ ಮಾಡಲಾಗಿದೆ.

ಸಾ.ಶ 1537ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ಬೆಂಗಳೂರು ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ. ಭಾರತದ ೫ನೆಯ ದೊಡ್ಡ ಮಹಾನಗರವಾಗಿರುವ ಬೆಂಗಳೂರು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ೩ನಯ ಸ್ಥಾನದಲ್ಲಿದೆ. ಜಗತ್ತಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ತರವಾದ ಕಾಣಿಕೆ ನೀಡುತ್ತಾ ಬಂದಿರುವ ಕಾರಣ ಬೆಂಗಳೂರು ವಿಶ್ವಾದ್ಯಂತ ಭಾರತದ 'ಸಿಲಿಕಾನ್ ವ್ಯಾಲಿ' ಎಂದೇ ಪ್ರಸಿದ್ಧ. ಸಮುದ್ರ ಮಟ್ಟದಿಂದ ಸುಮಾರು ೩೦೦೦ ಅಡಿ (೯೧೪.೪ ಮೀ)ಗಳಿಗಿಂತ ಎತ್ತರದಲ್ಲಿರುವ ಬೆಂಗಳೂರು ನಗರವು ವರ್ಷವಿಡೀ ಆಹ್ಲಾದಕರ ವಾತಾವರಣ ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ಹೊಂದಿದೆ. 'ಕಬ್ಬನ್ ಪಾರ್ಕ್', 'ಲಾಲ್ ಬಾಗ್'ಗಳಂತಹ ದೊಡ್ಡ ಉದ್ಯಾನವನಗಳನ್ನು ಹೊಂದಿರುವ ಈ ನಗರವು 'ಉದ್ಯಾನ ನಗರಿ' ಎಂದೂ ಪ್ರಸಿದ್ಧ. ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉಗಳ ಅಚ್ಚುಮೆಚ್ಚಿನ ೧೦ ನಗರಗಳಲ್ಲಿ ಬೆಂಗಳೂರು ಕೂಡ ಒಂದು.