ಸದಸ್ಯ:VedashreeD1940563
ನನ್ನ ಹೆಸರು ವೇದಶ್ರೀ ಡಿ .ತಂದೆ ದೇವರಾಜು ಕೆ.ಕೆ. ತಾಯಿ ಜಯಮಾಲಾ .ನಮ್ಮ ಊರು ತುಮಕೂರು ಹತ್ತಿರ ಇರುವ ತುರುವೇಕೆರೆ ತಾಲ್ಲೂಕು .
ತುರುವೇಕೆರೆ ಭಾರತದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆ ಇರುವ ಗ್ರಾಮ ಪಂಚಾಯಿತಿ .ತುರುವೇಕೆರೆಯ ಸ್ಥಳೀಯ ಭಾಷೆ ಕನ್ನಡ ಇಂಗ್ಲಿಷ್ ಮತ್ತು ಹೆಚ್ಚಿನ ಜನ ಕನ್ನಡದಲ್ಲಿ ಮಾತನಾಡುತ್ತಾರೆ .ತುರುವೇಕೆರೆಯ ಹತ್ತಿರದ ವಿಮಾನ ನಿಲ್ದಾಣವೆಂದರೆ ಹಾಸನ್ ವಿಮಾನ ನಿಲ್ದಾಣ .ತುರುವೇಕೆರೆಯ ಸುತ್ತಮುತ್ತಲಿನ ಕೆಲವು ವಿಮಾನ ನಿಲ್ದಾಣಗಳು ಈ ಕೆಳಗಿನಂತಿವೆ
.ಹಾಸನ ವಿಮಾನ ನಿಲ್ದಾಣ
.ಮೈಸೂರು ವಿಮಾನ ನಿಲ್ದಾಣ
.ಜಕ್ಕೂರು ಏರ್ಫೀಲ್ಡ್
ತುರುವೇಕೆರೆಯ ಹತ್ತಿರದ ಶಾಲೆಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ
.ಮಲ್ಲಿಕಾರ್ಜುನ ಪ್ರೌಢಶಾಲೆ
.ಹಳೆಯ ಎಸ್ ವಿ ಪಿ ಪ್ರೌಢಶಾಲೆ .ನಳಂದಾ ಇಂಗ್ಲಿಷ್ ಶಾಲೆ
.ಶಿವಗಂಗಾ ಚಾಲನಾ ಶಾಲೆ
ತುರುವೇಕೆರೆಯ ಸುತ್ತಮುತ್ತಲಿನ ಜಿಲ್ಲೆಗಳು ಈ ಕೆಳಗಿನಂತಿವೆ
.ಹಾಸನ
.ಮಂಡ್ಯ
.ರಾಮನಗರ
.ಮೈಸೂರು
ತೆಂಗಿನ ನಾಡು ಎಂದೇ ಪ್ರಖ್ಯಾತವಾಗಿರುವ ತುರುವೇಕೆರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ .ಬಹಳ ಹಿಂದೆ ಈ ಊರು ಸರ್ವಜ್ಞ ವಿಜಯ ನರಸಿಂಹ ಪುರಿ ಎಂದು ಕರೆಸಿಕೊಂಡಿತ್ತು .ಮಹಾನ್ ಪಂಡಿತರಿಂದ ದಾರ್ಶನಿ ಕರಿಂದ ಕೂಡಿದ ನಾಡಾಗಿತ್ತು .
ತುರುವೇಕೆರೆಯಲ್ಲಿ ಹೇರಳವಾಗಿ ಗೋ ಸಂಪತ್ತು ಮತ್ತು ಜಲ ಸಂಪತ್ತು ಇತ್ತು ಹೀಗಾಗಿ ಈ ಊರು ದೇನುಪುರಿ ಎಂದು ಕರೆಸಿಕೊಂಡಿತ್ತು .ತುರು ಎಂದರೆ ಹಾಡು ಭಾಷೆಯಲ್ಲಿ ಹಸು ಕಾಲಾನಂತರದಲ್ಲಿ ಈ ಊರು ತುರುವೇಕೆರೆ ಯಾಯಿತು ಎಂದು ತಿಳಿದು ಬರುತ್ತದೆ
ಈ ಪವಿತ್ರ ಪುಣ್ಯಭೂಮಿಯಲ್ಲಿ ಹೊಯ್ಸಳರ ದೊರೆ ಮೂರನೇ ನರಸಿಂಹನಿಗೆ ದಂಡನಾಯಕನಾಗಿದ್ದ ಸೋಮಣ್ಣ ನಿರ್ಮಿಸಿದರೆಂದು ಇತಿಹಾಸ ಸಾರುತ್ತದೆ .
ಸೋಮಣ್ಣ ತುರುವೇಕೆರೆಯ ಅಗ್ರಹಾರದಲ್ಲಿ ಶ್ರೀಚೆನ್ನಕೇಶವ ನಿಗಾಗಿ ಏಕಕೂಟ ದೇವಾಲಯವನ್ನು ನಿರ್ಮಿಸಿದ್ದ .ಈ ದೇವಾಲಯ ಸುಂದರ ಕಲ್ಲು ಕಟ್ಟಡವಾಗಿದ್ದು ಪೂರ್ವಾಭಿಮುಖವಾಗಿದೆ ಭಿತ್ತಿಗಳಲ್ಲಿ ಸೂಕ್ಷ್ಮ ಕೆತ್ತನೆಗಳಿದ್ದು ಹೊರ ಭಿತ್ತಿಗಳಲ್ಲಿ ಹರೇ ಕಂಬ ಹಾಗೂ ಅರೆ ಗೋಪುರಗಳ ಶಿಲ್ಪವಿದೆ .ಪ್ರವೇಶ ದ್ವಾರದಲ್ಲಿ ಜಗತಿ ಇದ್ದು ಊರಿನ ಪಂಡಿತರು ಇಲ್ಲಿ ಕುಳಿತು ಓಲೆಗರಿ ಯಲ್ಲಿ ನೂರಾರು ಗ್ರಂಥ ರಚಿಸಿದ್ದಾರೆ ಎಂದು ಹೇಳಲಾಗುತ್ತದೆ ಇದಕ್ಕೆ ಸಾಕ್ಷಿಯಾಗಿ ಓಲೆಗರಿ ಯಲ್ಲಿ ಬರೆಯಲು ತಮ್ಮ ಲೋಹದ ಲೇಖನಿಯನ್ನು ಹರಿತ ಮಾಡಿಕೊಂಡಿರುವುದಕ್ಕೆ ಇಲ್ಲಿರುವ ಕಲ್ಲುಗಳು ಗೆರೆಯಂತೆ ಏಕಪ್ರಕಾರವಾಗಿ ಸವೆದಿರುವ ಇದು ಇನ್ನು ಸಾಕ್ಷಿಯಾಗಿವೆ .
ಎಲ್ಲಾ ಹೊಯ್ಸಳ ದೇವಾಲಯಗಳಂತೆ ಇದು ಸಹ ನಕ್ಷತ್ರಾಕಾರದ ಜಗಲಿಯ ಮೇಲಿದೆ .ಮುಖಮಂಟಪ ,ಸುಖನಾಸಿ ,ಭುವನೇಶ್ವರಿ ,ಜಾಲಾಂಧ್ರ, ಗರ್ಭಗೃಹ ವಿದೆ
ಇಲ್ಲಿ ಶಂಖ ಚಕ್ರ ಗದಾ ಪದ್ಮ ಧಾರಿಯಾದ ಚನ್ನಕೇಶವನ ಸುಂದರ ಕೃಷ್ಣ ಶಿಲೆ ವಿಗ್ರಹವಿದೆ .ದೇವರ ಪ್ರಭಾವಳಿಯಲ್ಲಿ ದಶಾವತಾರದ ಪ್ರಸಂಗಗಳ ಸೂಕ್ಷ್ಮ ಕೆತ್ತನೆಗಳಿವೆ .ಇದನ್ನು ಜಕ್ಕಲ ಚಾರಿ ಕಡೆದ ನೆಂದು ಹೇಳಲಾಗುತ್ತದೆ ಆದರೆ ಇದಕ್ಕೆ ಆಧಾರಗಳಿಲ್ಲ .
ನಾಲ್ಕೂವರೆ ಅಡಿ ಎತ್ತರದ ಚನ್ನಕೇಶವ ಸ್ವಾಮಿಯ ಪಾದದ ಬಳಿ ಲಕ್ಷ್ಮಿಯ ಪುಟ್ಟ ವಿಗ್ರಹವಿದೆ ಈ ದೇವಾಲಯದಲ್ಲಿ ಪ್ರತಿನಿತ್ಯ ಪೂಜೆ ನಡೆಯುತ್ತಿತ್ತು .ನವರಾತ್ರಿಯ ವೇಳೆ ಹತ್ತು ದಿನಗಳ ಕಾಲ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವಿಶೇಷ ಪೂಜೆ ಜರುಗುತ್ತವೆ. ಶ್ರಾವಣ ,ಕಾರ್ತಿಕ ಮಾಸಗಳಲ್ಲಿ ವಿಶೇಷ ಪೂಜೆ ನಡೆಯುತ್ತವೆ .
ಬೇಲೂರು ಹಳೇಬೀಡಿನ ಪ್ರತಿರೂಪದಂತಿರುವ ದೇಗುಲ ಗಳನ್ನೆಲ್ಲ ತುರುವೇಕೆರೆ ತೆಂಗಿನ ತವರು .ತುಮಕೂರು ಜಿಲ್ಲೆಯ ಪ್ರಮುಖ ತಾಲ್ಲೂಕು ತುರುವೇಕೆರೆ .ತುರುವೇಕೆರೆ ತೆಂಗಿನಕಾಯಿ ಬಲು ಪ್ರಸಿದ್ಧ .
ಸಾಹಿತ್ಯ ,ಸಂಸ್ಕೃತಿ ,ಕಲೆ ,ವಾಣಿಜ್ಯ ,ಶಿಕ್ಷಣ ಹಾಗೂ ಕೈಗಾರಿಕಾ ಕೇಂದ್ರವಾಗಿರುವ ತುರುವೇಕೆರೆ ಹಿಂದೆ ತುಮ್ಮನಹಳ್ಳಿಯ ದುಮ್ಮಿ ಒಡೆಯರ ಪಾಳ್ಯ ಪಟ್ಟ ವಾಗಿತ್ತು .ಹೊಯ್ಸಳ ಚಕ್ರವರ್ತಿಗಳ ಕಾಲದಲ್ಲಿ ತುರುವೇಕೆರೆ ತಾಲ್ಲೂಕಿನಲ್ಲಿ ಹಲವು ದೇವಾಲಯಗಳನ್ನು ನಿರ್ಮಿಸಲಾಗಿದೆ .ಈ ಪೈಕಿ ಹೊಸಹಳ್ಳಿಯಲ್ಲಿ ಕಲ್ಲೇಶ್ವರ ದೇವಾಲಯ ವಿದ್ದರೆ ನಾಗಾಪುರದಲ್ಲಿ ಪಾಳು ಬಿದ್ದಿರುವ ವಿಷ್ಣು ಹಾಗೂ ಶಿವದೇವಾಲಯಗಳಿವೆ .ಶಂಕರ ನಾರಾಯಣ ಪುರ ಎಂದು ಕರೆಯಲಾಗುವ ತಂಡಗದಲ್ಲಿ ಶಕಪುರುಷನಾದ ಶಾಲಿವಾಹನನು ಹುಟ್ಟಿದ್ದು ಎಂದು ಇತಿಹಾಸವಿದೆ .
ದುಮ್ಮನಹಳ್ಳಿ ಎಂಬುದು ದುಮ್ಮಿ ಒಡೆಯರ ಪಾಳೆಯಪಟ್ಟ ವಾಗಿತ್ತು ಹೊಸಹಳ್ಳಿಯಲ್ಲಿ ಹೊಯ್ಸಳರ ಕಾಲದ ಕಲ್ಲೇಶ್ವರ ದೇವಾಲಯವಿದೆ .ಕಡೂರಿನ ಭೈರವ ದೇವಾಲಯ ಪ್ರಸಿದ್ಧವಾದದ್ದು. ಮಾಯಸಂದ್ರದಲ್ಲಿ ಮಾಯಮ್ಮ ,ಕೊಲ್ಲಾಪುರದಮ್ಮ ದೇವಾಲಯಗಳಿವೆ
ಮಾಯಸಂದ್ರ ಕ್ಕೆ ಹತ್ತಿರವಿರುವ ರಾಮ ಸಾಗರದಲ್ಲಿರುವ ವರದರಾಜ ದೇವಾಲಯ ಹೆಸರುವಾಸಿಯಾಗಿದ್ದು .ನಾಗಾಪುರದಲ್ಲಿ ಹೊಯ್ಸಳರ ಕಾಲದ ಪಾಳು ಬಿದ್ದಿರುವ ವಿಷ್ಣು ಮತ್ತು ಶಿವ ದೇವಾಲಯಗಳಿವೆ .
ತುರುವೇಕೆರೆಯ ಗಂಗಾಧರೇಶ್ವರ ದೇವಾಲಯ ಕಲ್ಪತರು ನಾಡಿನ ಪುರಾತನ ಸುಂದರ ದೇಗುಲ .ದ್ರಾವಿಡ ಶೈಲಿಯಲ್ಲಿರುವ ದೇವಾಲಯ ಉತ್ತರಾಭಿಮುಖವಾಗಿ .ಉತ್ತರಾಭಿಮುಖವಾಗಿರುವ ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಂಗಾಧರೇಶ್ವರನ ಶಿವಲಿಂಗ ವೈಶಿಷ್ಟ್ಯಪೂರ್ಣವಾಗಿದೆ ಸಿ ಗಂಗಾಧರೇಶ್ವರನ ಶಿವಲಿಂಗ ವೈಶಿಷ್ಟ್ಯಪೂರ್ಣವಾಗಿದೆ .ಶಿವಲಿಂಗದ ಮೇಲೆ ಹೆಡೆ ಬಿಚ್ಚಿದ ನಾಗರಹಾವು ಇದೇ .
ಈ ದೇವಾಲಯ ಪ್ರವೇಶಿಸುತ್ತಿದ್ದಂತೆ ಮಂಟಪದಲ್ಲಿರುವ ಕೃಷ್ಣ ಶಿಲೆಯ ಸುಂದರ ನಂದಿಯ ವಿಗ್ರಹ ಗಮನ ಸೆಳೆಯುತ್ತದೆ .ನುಣುಪಾದ ಕಪ್ಪು ವರ್ಣದ ಏಕಶಿಲೆಯಲ್ಲಿ ಕೆತ್ತಲಾಗಿರುವ ಈ ನಂದಿ ಎಷ್ಟು ಸುಂದರವಾದ ನಂದಿ ಮತ್ತೊಂದಿಲ್ಲ ಎಂಬುದು ಸತ್ಯ .ನಂದಿಯ ವಿಗ್ರಹ ಸುಂದರ ಹಾಗೂ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ್ದು ಮನಮೋಹಕವಾಗಿದೆ .ನಂದಿಯ ವಿಗ್ರಹದ ಕೊರಳಲ್ಲಿ ಶಿಲ್ಪಿ ಗಂಟೆಗಳಲ್ಲ ನಾಲ್ಕು ಸರಗಳನ್ನು ಕಲಾತ್ಮಕವಾಗಿ ಕೆತ್ತಿದ್ದಾನೆ .ನಂದಿಯ ಕಾಲಗಳಲ್ಲಿಯೂ ಕಲಾತ್ಮಕ ಕೆತ್ತನೆಗಳಿವೆ. ದೊಡ್ಡ ಪ್ರಕಾರವಾಗಿರುವ ಈ ದೇವಾಲಯದಲ್ಲಿ ಗಂಗಾಧರೇಶ್ವರ ಮತ್ತು ಪಾರ್ವತಿಯ ಗುಡಿಗಳಿವೆ . ಅಮ್ಮನವರ ಗುಡಿ ದೇವಾಲಯದ ಪ್ರವೇಶದ ಬಲಭಾಗದಲ್ಲಿ ಪೂರ್ವಾಭಿಮುಖವಾಗಿದ್ದರೆ .ಗಂಗಾಧರೇಶ್ವರ ಗುಡಿ ಉತ್ತರಾಭಿಮುಖವಾಗಿದೆ .
ದೇವಾಲಯದ ಪೂರ್ವ ಭಾಗದಲ್ಲಿರುವ ಮಂಟಪದ ಕಂಬದಲ್ಲಿ ಬೇಡರ ಕಣ್ಣಪ್ಪನ ಹುಬ್ಬು ಶಿಲ್ಪವಿದೆ .ಶಿವರಾತ್ರಿಯ ದಿನ ಈ ಮಂಟಪದಲ್ಲಿ ವಿಶೇಷ ಪೂಜೆ ನಡೆಯುತ್ತದೆ ಇದೇ ಮಂಟಪದಲ್ಲಿ ಕಲ್ಲಿನ ಗಂಟೆಯಿಂದ ಇದು ಕಂಚಿನ ಶಬ್ದ ಮಾಡುತ್ತದೆ .ದೇಗುಲದ ಹೊರಭಾಗದಲ್ಲಿ ರಸ್ತೆ ಅಂಚಿನಲ್ಲಿರುವ ಕಲ್ಲಿನ ದೀಪ ಸ್ಪಂದನದ ಮೇಲೆ ಭಕ್ತ ದಂಪತಿ ವಿಗ್ರಹವಿದ್ದು ಈ ವಿಗ್ರಹಗಳು ದೇವಾಲಯ ನಿರ್ಮಿಸಿದ್ದ ಅಣ್ಣಯ್ಯ ನಾಯಕ ಎಂಬ ಪಾಳೇಗಾರ ಹಾಗೂ ಆತನ ಪತ್ನಿ ದೆಂದು ಹೇಳಲಾಗುತ್ತದೆ .ಶಿವಲಿಂಗದ ಮೇಲೆ ಗಂಗೆಯ ನಲ್ಲ ಸುಂದರ ಗಂಗಾಧರೇಶ್ವರನ ಮೂರ್ತಿ ಅತ್ಯಂತ ಮನಮೋಹಕವಾಗಿದೆ .
ತುರುವೇಕೆರೆ ತಾಲ್ಲೂಕಿನಲ್ಲಿ ನೀರಾವರಿಗೆ ಒದಗಿರುವ ಕೆರೆಗಳ ಸಂಖ್ಯೆ 77,ಬಾವಿಗಳು 407.....
ಮಲ್ಲಘಟ್ಟ ಭಾರತದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿರುವ ಒಂದು ಸಣ್ಣ ಗ್ರಾಮ . ಇದು ಮಲ್ಲಘಟ್ಟ ಪಂಚಾಯತ್ ಅಡಿಯಲ್ಲಿ ಬರುತ್ತದೆ .ಇದು ಬೆಂಗಳೂರು ವಿಭಾಗಕ್ಕೆ ಸೇರಿದೆ ಇದು ಜಿಲ್ಲಾ ಪ್ರಧಾನ ಕಚೇರಿ ತರುವ ತುಮಕೂರಿನಿಂದ ಪಶ್ಚಿಮಕ್ಕೆ ೬೬ ಕಿಲೋಮೀಟರ್ ದೂರದಲ್ಲಿದೆ .ತುರುವೇಕೆರೆಯಿಂದ ಹದಿನೈದು ಕಿಲೋಮೀಟರ್. ರಾಜ್ಯ ರಾಜಧಾನಿ ಬೆಂಗಳೂರಿನಿಂದ ನೂರಾ ಇಪ್ಪತ್ತೆಂಟು ಕಿಲೋಮೀಟರ್ .
ತುರುವೇಕೆರೆ ಸೂರ್ಯೋದಯ ಸಮಯ
ತುರುವೇಕೆರೆ ಗ್ರಾಮವು ಯುಟಿಸಿ 5.30 ಸಮಯ ವಲಯದಲ್ಲಿದೆ ಮತ್ತು ಇದು ಭಾರತೀಯ ಪ್ರಾಮಾಣಿತ ಸಮಯವನ್ನು ಅನುಸರಿಸುತ್ತದೆ .ತುರುವೇಕೆರೆ ಸೂರ್ಯೋದಯದ ಸಮಯ ಐಎಸ್ ಟಿಯಿಂದ ಇಪ್ಪತ್ತ್ಮೂರು ನಿಮಿಷಗಳು ಬದಲಾಗುತ್ತದೆ .ತುರುವೇಕೆರೆಯಲ್ಲಿ ವಾಹನ ಚಾಲನೆ ಮಾಡುವ ಭಾಗ ಉಳಿದಿದೆ ಚಾಲನೆಯ ಸಮಯದಲ್ಲಿ ಎಲ್ಲ ವಾಹನಗಳು ಎಡ ಭಾಗವನ್ನು ತೆಗೆದುಕೊಳ್ಳಬೇಕು .ತುರುವೇಕೆರೆ ಜನರು ಅದರ ರಾಷ್ಟ್ರೀಯ ಕರೆನ್ಸಿಯನ್ನು ಬಳಸುತ್ತಿದ್ದಾರೆ ಅದು ಭಾರತೀಯ ರುಪಾಯಿ ಮತ್ತು ಅದರ ಅಂತಾರಾಷ್ಟ್ರೀಯ ಕರೆನ್ಸಿ ಕೋಡ್ ಐಎನ್ಆರ್ ಆಗಿದೆ .
ತುರುವೇಕೆರೆಗೆ 1,610 ಜನಸಂಖ್ಯೆ ಇತ್ತು . 1886 ರಲ್ಲಿ ತುರುವೇಕೆರೆ ಯನ್ನು ಹಳೆಯ ಕಡಬ ತಾಲೂಕಿನಿಂದ ವಿನಿಮಯ ಮಾಡಿಕೊಳ್ಳಲಾಯಿತು ಮತ್ತು ಇದನ್ನು ಉಪ ತಾಲ್ಲೂಕು ಮಾಡಲಾಯಿತು .ತುರುವೇಕೆರೆಗೆ 13,275 ಜನಸಂಖ್ಯೆ ಇತ್ತು.ತುರುವೇಕೆರೆ ಸಮಾಜ ಶಿಕ್ಷಣ ದರವನ್ನು 73% ಹೊಂದಿದೆ .
ಇದು ನನ್ನ ಊರಿನ ಬಗ್ಗೆ ಸಣ್ಣ ಪರಿಚಯ
ಧನ್ಯವಾದಗಳು 😀
ಹೊಯ್ಸಳ ಕಾಲದ ಕಾಳೇಶ್ವರ ದೇವಾಲಯ
ತುರುವೇಕೆರೆಯ ತೆಂಗಿನ ತೋಪು
ನನ್ನ ಹೆಸರು ವೇದಶ್ರೀ ಡಿ. ತಂದೆ ದೇವರಾಜು ಕೆ.ಕೆ, ತಾಯಿ ಜಯಮಾಲಾ .ಸಹೋದರ ಅಕುಲ್ ಡಿ. ತಂದೆ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ. ತಾಯಿ ಗೃಹಿಣಿ. ತಮ್ಮ ಈಗ ಒಂದನೇ ತರಗತಿಯಲ್ಲಿ ಓದುತ್ತಿದ್ದಾನೆ .ನಾವು ಬೆಂಗಳೂರಿನಲ್ಲಿ ಸುಮಾರು ಇಪ್ಪತ್ತು ವರ್ಷದಿಂದ ವಾಸಮಾಡುತ್ತಿದ್ದೇನೆ .
ನಮ್ಮ ಊರು ತುಮಕೂರು ಹತ್ತಿರ ತುರುವೇಕೆರೆ ಎಂಬ ತಾಲ್ಲೂಕು. ಪ್ರತಿವರ್ಷವೂ ರಜೆ ದಿನಗಳಲ್ಲಿ ನಾನು ಊರಿಗೆ ಹೋಗುತ್ತೇನೆ .ಅಲ್ಲಿ ನಮ್ಮ ಅಜ್ಜಿ ತಾತ ಚಿಕ್ಕಪ್ಪ ಚಿಕ್ಕಮ್ಮ ಮತ್ತು ಅವರ ಮಕ್ಕಳು ವಾಸ ಮಾಡುತ್ತಾರೆ .ಊರೆಂದರೆ ಸೊಗಸು ಊರಿಗೆ ಹೋದರೆ ಅಲ್ಲಿ ಗದ್ದೆ, ಹೊಲ ,ಗಿಡ ಮರಗಳು ,ಬೀಸುವ ಗಾಳಿ, ನನ್ನ ಚಿಂತೆಯನ್ನು ಮರೆಸುತ್ತದೆ .ಅಜ್ಜಿಯ ಕಥೆ' ತಾತನ ಬುದ್ಧಿ ಮಾತು ,ಚಿಕ್ಕಪ್ಪ ನಾನು ಮಾಡುವ ಚೇಷ್ಟೆ ,ಚಿಕ್ಕಮ್ಮನ ಕೈ ಅಡುಗೆ ಎಲ್ಲವೂ ನನ್ನನ್ನು ಊರಿಗೆ ಕರೆದೊಯ್ಯುತ್ತದೆ .
ನನಗೆ ಮನೆಯೇ ಮೊದಲ ಪಾಠಶಾಲೆ .ನಾನು ಮೂರನೇ ತರಗತಿಯವರೆಗೆ ಆಕ್ಸ್ಫರ್ಡ್ ಶಾಲೆಯಲ್ಲಿ ಓದಿ ಮುಂದೆ ಹತ್ತನೇ ತರಗತಿಯವರೆಗೂ ಶಾಂತಿನಿಕೇತನ ಶಾಲೆಯಲ್ಲಿ ಓದಿದೆ .ನನ್ನ ಶಾಲಾ ದಿನಗಳು ಬಹಳ ಸೊಗಸಾಗಿದೆ .ನಾನು ನನ್ನ ಶಾಲೆಯಲ್ಲಿ ನಡೆಯುತ್ತಿದ್ದ ಎಲ್ಲ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿದೆ .ನನ್ನ ಶಾಲೆ ನನಗೆ ಶಿಸ್ತು ,ಪ್ರಾಮಾಣಿಕತೆ ,ಹಿರಿಯರಿಗೆ ಗೌರವ ,ಮಾತಿನ ತೀವ್ರತೆ ,ಎಲ್ಲವನ್ನೂ ಎಲ್ಲರನ್ನೂ ಪ್ರೀತಿಸುವುದನ್ನು ಕಲಿಸಿಕೊಟ್ಟಿದೆ .ನಾನು ನನ್ನ ಶಾಲೆಗೆ ಶಾಲಾ ವಾಹನದಲ್ಲಿ ಹೋಗುತ್ತಿದ್ದೆ .ನಾನು ಶಾಲೆಯಲ್ಲಿರುವಾಗ ಲಿಬಾಲ್ ಆಟಗಾರ್ತಿಯಾಗಿದ್ದು . ಶಾಲೆಯಲ್ಲಿ ಇರುವಾಗ ತಾಲ್ಲೂಕು ಮಟ್ಟದಲ್ಲಿ ವಾಲಿಬಾಲ್ ಆಡಿದ್ದೇನೆ .ನನ್ನ ಶಾಲೆ ನನಗೆ ಈ ಜಗತ್ತಿನ ಪರಿಚಯವನ್ನು ಮಾಡಿಸಿ ಜಗತ್ತಿನ ಸೂಕ್ಷ್ಮತೆಯನ್ನು ತಿಳಿಸಿಕೊಟ್ಟಿದೆ.ಶಾಲೆ ಎಂಬುದು ನನ್ನ ಜೀವನದಲ್ಲಿ ಮರೆಯಲಾಗದ ಭಾಗ ಅದು ನನ್ನ ಜೀವನದ ಅತ್ಯಂತ ಮುಖ್ಯವಾದ ಭಾಗವೆಂದರು ತಪ್ಪೇನಿಲ್ಲ .ನನಗೆ ನನ್ನ ಬಾಲ್ಯದ ದಿನಗಳು ಎಂದಿಗೂ ಕಾಡಿಲ್ಲ ಅವನ್ನು ನಾನು ನೆನಪಿಸಿಕೊಂಡರೆ ನನ್ನ ಹೃದಯ ವಿಶಾಲವಾಗುತ್ತದೆ ನಿರ್ಮಲವಾಗುತ್ತದೆ ಚಿಂತೆಗಳಿಂದ ಮುಕ್ತಿ ಆದಂತೆ ಅನಿಸುತ್ತದೆ .
ಮುಂದೆ ನನ್ನ ಹನ್ನೊಂದು ಮತ್ತು ಹನ್ನೆರಡನೇ ತರಗತಿಯನ್ನು ನಾನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದೆ .ಕ್ರೈಸ್ಟ್ ಎಂಬುದು ಕನ್ನಡದಲ್ಲಿ ಬರೀ ಎರಡೇ ಅಕ್ಷರ ವಾಗಿದ್ದರೂ ಅಥವಾ ಆಂಗ್ಲದಲ್ಲಿ ಬರೀ ಐದೇ ಅಕ್ಷರವಾಗಿ ದ್ದರು ಆದರೆ ಅದರ ಅರ್ಥ ಮಾತ್ರ ಬಹಳಷ್ಟಿದೆ. ನಾನು ಒಬ್ಬ ಕ್ರೈಸ್ ಟೈಟ್ ಎಂಬುದು ಬರೀ ಬಾಯಿ ಮಾತಿಗೆ ಹೇಳುವುದಲ್ಲ ಅದು ನಮ್ಮ ಮನಸ್ಸಿಂದ ಬರುವುದು .ಕ್ರೈಸ್ಟ್ ನನಗೆ ಬಹಳಷ್ಟು ಕಲಿಸಿಕೊಟ್ಟಿದೆ ಜಗತ್ತು ಏನು ಎಂಬುದು ತಿಳಿಸಿಕೊಟ್ಟಿದೆ ಜೀವನವೆಂದರೆ ಏನು ಎಂಬುದು ತಿಳಿಸಿಕೊಟ್ಟಿದೆ .ಜಗತ್ತು ಮತ್ತೆ ಜೀವನ ಮಧ್ಯೆ ಇರುವ ಸಣ್ಣ ವ್ಯತ್ಯಾಸವನ್ನು ತಿಳಿಸಿಕೊಟ್ಟಿದೆ .ನನ್ನ ಶಾಲೆ ನನಗೆ ಹೇಗೆ ಬದುಕನ್ನು ಕಟ್ಟಿಕೊಳ್ಳುವುದೆಂದು ಹೇಳಿಕೊಟ್ಟರೆ ನನ್ನ ಕಾಲೇಜು ನನಗೆ ಹೇಗೆ ಬೇರೆಯವರ ಸಂತೋಷದಲ್ಲಿ ನಾವು ಸಂತೋಷ ಪಡೆಯಬೇಕೆಂಬುದು ಕಲಿಸಿಕೊಟ್ಟಿದೆ .
ಈಗ ನಾನು ಇದೇ ಸಂಸ್ಥೆಯ ಯೂನಿವರ್ಸಿಟಿಯಲ್ಲಿ ಓದುತ್ತಿದ್ದೇನೆ ಬಿಎಸ್ಸಿ ಸಿಬಿಝೆಡ್ ಎಂಬ ಕೋರ್ಸ್ನಲ್ಲಿ ಓದುತ್ತಿದ್ದೇನೆ . ನನಗೆ ಇದೇ ಸಂಸ್ಥೆಯ ಯೂನಿವರ್ಸಿಟಿಯಲ್ಲಿ ಸೀಟ್ ದೊರಕಿದ್ದು ತುಂಬಾನೇ ಖುಷಿಯಾಯಿತು ಎಷ್ಟೋ ಜನ ಹಾಕಿದ್ದ ಅರ್ಜಿಯಲ್ಲಿ ನನ್ನ ಅರ್ಜಿ ಆಯ್ಕೆಯಾಗಿದ್ದು ನನಗೆ ತುಂಬಾ ಖುಷಿ ನೀಡಿದೆ ನನ್ನ ಕನಸು ನನಸಾಗಿತ್ತು .
ನಾನು ನನ್ನ ಬಿಡುವಿನ ಸಮಯದಲ್ಲಿ ವಾಲಿಬಾಲ್ ಆಡುತ್ತೇನೆ ,ಕ್ರಿಕೆಟ್ ಆಡುತ್ತೇನೆ ಹಾಗೂ ನನ್ನ ತಮ್ಮನ ಜೊತೆ ಆಟವಾಡುತ್ತಾ ನನ್ನ ಕಾಲವನ್ನು ಕಳೆಯುತ್ತೇನೆ .ನನ್ನ ಶಾಲೆಯ ಸ್ನೇಹಿತರು ನನಗೆ ಬಹಳ ಪ್ರಿಯರು ನಮ್ಮ ಮನೆಯಲ್ಲಿ ಏನೇ ಹಬ್ಬ ಹರಿದಿನ ವಿದ್ದರೂ ಅವರು ನಮ್ಮ ಮನೆಗೆ ಬರುತ್ತಾರೆ ನಾವು ಕೂಡ ಅವರ ಮನೆಗೆ ಹೋಗುತ್ತೇವೆ .ನನ್ನ ಶಾಲೆಯ ದಿನಗಳು ಹೇಗೆ ಸೊಗಸಾಗಿದ್ದವು ಅದೇ ರೀತಿ ನನ್ನ ಶಾಲೆಯ ಸ್ನೇಹಿತರ ಜೊತೆ ನನ್ನ ಒಡನಾಟವೂ ಸೊಗಸಾಗಿದೆ ಮುಂದೆ ಕೂಡ ಸೊಗಸಾಗಿರುತ್ತದೆ .
ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣವೆಂದರೆ ಅದು ನನ್ನ ತಮ್ಮ ಹುಟ್ಟಿದ ಕ್ಷಣ .ನನ್ನ ಎಲ್ಲ ಸ್ನೇಹಿತರು ಅವರ ತಂಗಿ ,ತಮ್ಮ ,ಅಕ್ಕ, ಅಣ್ಣ ಅವರ ಬಗ್ಗೆ ಹೇಳುವಾಗ ನನಗ್ಯಾರೂ ಇಲ್ಲವಾ ಎಂದು ಅನ್ನಿಸುತ್ತಿತ್ತು ಈಗ ಆ ಕೊರಗು ನನ್ನಲ್ಲಿಲ್ಲ .
ಇದು ನನ್ನ ಕಿರು ಪರಿಚಯ
ಧನ್ಯವಾದಗಳು 😊