ಸದಸ್ಯ:Lisa.b.1940462/ನನ್ನ ಪ್ರಯೋಗಪುಟ
'ಲಿಸ' ಎನ್ನುವ ಪದ ಹೀಬ್ರೂ ಭಾಷೆಯಲ್ಲಿ 'ದೇವರ ಭರವಸೆ' ಅಥವ 'ದೇವರ ಪ್ರಮಾಣ' ಎಂಧರ್ಥ. ಇದೇ ನನ್ನ ಹೆಸರು. ಆದರೆ ಚಿಕ್ಕವಯಸ್ಸಿನಿಂದಲೂ ಮನೆಯವರನ್ನು ಹೊರತುಪಡಿಸಿ ,ಇನ್ನೆಲ್ಲರೂ ನನ್ನನ್ನು 'ಲಿಶ'ಯೆಂದು ಕರೆದದ್ದೆ ಘ್ನಾಪಕ.
[ಬದಲಾಯಿಸಿ]ನಾನು ಹುಟ್ಟಿದ್ದು ಮೈಸೂರಿನ ಮಿಶನ್ ಆಸ್ಪತ್ರೆಯಲ್ಲಿ. ಬೆಳೆದಿದ್ದು ಮಂಡ್ಯ ಬೆಂಗಳೂರಿನಲ್ಲಿ. ನನ್ನ ತಾಯಿ ಶುಶ್ರೂಶಕಿಯಾಗಿದ್ದು ಸರ್ಕಾರಿ ಸೇವೆಯಲ್ಲಿದ್ದಾರೆ.ಅಪ್ಪ ಇನ್ನು ಸ್ವಲ್ಪ ವರುಷ ಇಲ್ಲೇ ಇದ್ದು ದುಡಿದು ನಂತರ ಕೃಶಿ ಕಾಯಕವನ್ನು ಮಾಡಬೇಕೆಂದಿದ್ದಾರೆ. ನನಗೊಬ್ಬ ತುಂಟ ತಮ್ಮನಿದ್ದಾನೆ.ನಮ್ಮಿಬ್ಬರ ನಡುವೆ ನಾಲ್ಕು ವರುಷ ಅಂತರವಿದೆ.
ನಾನು ಹನ್ನೆರಡನೆಯ ತರಗತಿಯ ವರೆಗೂ 'ಕಾರ್ಮೆಲ್ ಕಾನ್ವ್ಂಟ್' ಶಾಲೆಯಲ್ಲಿ ಓದಿದೆ. ಈಗ ಬಿ.ಎ.ಸ್ಸಿಗೆಂದು ಕ್ರಿಸ್ತ ವಿದ್ಯಾಲಯ ಸೇರಿದ್ದೇನೆ. ನಾನು ಓದಿದ ಶಾಲೆಯು 'ಸಿಸ್ಟರ್ಸ್'ಗಳಿಂದ ಸ್ಥಾಪಿತವಾಗಿದ್ದು ಅವರೇ ಶಾಲೆಯ ನಿರ್ವಾಹಕರಾಗಿದ್ದರು.ಅಲ್ಲಿಯ ವಾತಾವರಣ ಶಿಸ್ತು,ಭಕ್ತಿ,ಮಾನವೀಯ ಮೌಲ್ಯಗಳಿಂದ ಸಮೃದ್ದವಾಗಿದ್ದು ನನಗೀಮುಖಾಂತರ ತಿಳುವಳಿಕೆಯನ್ನು ನಿವೇದಿಸಿತು.
ಅಪ್ಪ - ಅಮ್ಮ ಬಡತನ ಕಷ್ಟಗಳಲ್ಲಿ ಬೆಳೆದರೂ, ನಮಗೆ ಆ ಅನುಭವ ಬೇಡವೆಂದು ಒಳ್ಳೆಯ ವಿಧ್ಯಾಭ್ಯಾಸ ನೀಡುತಿದ್ದಾರೆ.ನಿಜವಾಗಲೂ ತಂದೆ - ತಾಯಿ ದೇವರ ಪ್ರತಿಬಿಂಬ.ಏಳನೇ ತರಗತಿಯವರೆಗೂ ನಾನು ತುಂಬಾ ತಲಹರಟೆ,ತುಂಟಿಯಾಗಿದ್ದೆ .ಆದರೆ ೮,೯,೧೦ ನೇ ತರಗತಿಗೆ ಬರುವಷ್ಟರಲ್ಲಿ ಗಂಭೀರವಾದೆ. ಹತ್ತನೇ ತರಗತಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣಾಳಾದೆ.
'ವಿಗ್ಯನ/ಸೈನ್ಸ್' ವಿಧ್ಯಾರ್ಥಿನಿಯಾದ ನನಗಂತೂ ಪಿ.ಯು.ಸಿ. ನರಕದ ಜಾಹಿರಾತಿನಹಾಗಿತ್ತು.ಹತ್ತನೇಯ ತರಗತಿಯವರೆಗೂ ,ನನಗೇನಾಗಬೇಕೆಂಬ ಗುರಿ ಇರಲಿಲ್ಲ. ಸೈನ್ಸ್ ಇಷ್ಟಾವಿತ್ತು ಅದಕ್ಕೆ ಓದಿದೇ ಹೊರತು ವೈದ್ಯೆ ಅಥವ ಇನ್ಜಿನೀಯರ್ ಆಗಬೇಕೆಂದಲ್ಲ. ಪರಿಸರ ಪ್ರೇಮಿ ಹಾಗು ಪರಸ್ಪರ - ಸಹಬಾಳ್ವೆಯನ್ನು ನಂಬಿದ್ದ ನನಗೆ ಮೊದಲು ಅರಣ್ಯಧಿಕಾರಿ ಆಗಬೇಕೆನಿಸಿತು.ಆದರೆ ಕ್ರಮೇಣ ನಮ್ಮ ದೇಶದ ಪ್ರತಿಯೊಂದು ಕ್ಶೇತ್ರದಲ್ಲೂ, ಹಂತದಲ್ಲೂ ನಡೆಯುವ ಭ್ರಷ್ಟಾಚಾರವನ್ನು ಗಮನಿಸಿದ ನನಗೆ ಇನ್ನೂ ಹೆಚ್ಚೇನಾದರೂ ಮಾಡಬೇಕೆನಿಸಿತು. ನಮ್ಮ ದೇಶದ ಈ ಸ್ಥಿತಿಯ ಬಗ್ಗೆ ಸ್ವಲ್ಪ ಸಂಶೊದನೆ ಮಾಡಿದೆ. ಇದಕ್ಕೆ ಕಾರಣ ರಾಜಕಾರಣಿಗಳೇ ? ಧರ್ಮವೇ? ನಮ್ಮ ಆಚಾರಗಳೇ ? ಶ್ರೀಮಂತರೇ? ಬಡವರೇ? ನನಗೆ ಗೊತ್ತಾಗಲ್ಲಿಲ್ಲ.ಕೊನೆಗೆ ತೋಚಿತು ,ಇದಕ್ಕೆ ಕಾರಣ ಸಾಮಾನ್ಯ ಜನರಾದಂತ ನಾವುಗಳೇ. ನಮ್ಮಲ್ಲಿ ವಿಧ್ಯಾಭ್ಯಾಸ ಸಾಕ್ಷರತೆ ಹೆಚ್ಚಿದರೂ , ಹಳೆಯ ಮೂಡನಂಬಿಕೆ, ಜಾತಿ ಪದ್ದತಿಗಳೆನೂ ಕಡಿಮೆಯಾಗಿ ಜನರೇನೂ ವಿಶಾಲ ಮನೋಭಾವದವರಾಗಿಲ್ಲ.ಈಗಿನ ಯುವಕ-ಯುವತಿಯರಿಗೆ ದೇಶ ಪ್ರೇಮ ಬರೀ ಆಗಸ್ಟ್ ೧೫ ಮತ್ತು ಜನವರಿ ೨೬ಕ್ಕೆ ಮಾತ್ರ ಹುಟ್ಟುತ್ತದೆ. ನಮ್ಮ ದೇಶದ ಸಂಸ್ಕ್ರತಿ, ಕಲೆ, ಆಚಾರ, ಸ್ವಾತಂತ್ರ ಹೊರಾಟಗಾರರು,ಸೈನ್ಯೆ,ಇವುಗಳ ಬಗ್ಗೆ ಕನಿಷ್ಟ ಆಸಕ್ತಿ ಹೊಂದಿದ್ದಾರೆ.
'ಇಂದಿನ ಮಕ್ಕಳು ನಾಳಿನ ಪ್ರಜೆ'
[ಬದಲಾಯಿಸಿ]ಹಾಗಾಗಿ ಮಕ್ಕಳನ್ನು ಒಳ್ಳೆಯ ಪ್ರಜೆಗಳ್ಳನ್ನಾಗಿ ಮಾಡುವ ಒಂದು ಉದ್ಯೋಗ ಮಾಡಬೇಕೆನಿಸಿತು. ಅದು ಶಿಕ್ಷಣ ಕ್ಷೇತ್ರ ಮಾತ್ರ. ಈಗ ನಾನು ಒಂದುತ್ತಮ ಶಿಕ್ಷಕಿಯಾಗಬೇಂದಿದ್ದೇನೆ.
ನನಗೆ ಸಂಗೀತವೆಂದರೆ ಬಲು ಇಷ್ಟ .೧೯೬೦-೧೯೯೦ ಅವಧಿಯಲ್ಲಿರುವ ಇಂಗ್ಲಿಷ್ ಹಾಡುಗಳೆಂದರೆ ಪಂಚ ಪ್ರಾಣ.ಹಳೇ ಕನ್ನಡ ,ತಮಿಳು, ತೆಲುಗು, ಹಿಂದಿ ಸಿನೆಮಾ ನೋಡುತ್ತೇನೆ.
ಒಂದು ವಿಷಯದ ಮೇಲೆ ಯಾರ ಅಭಿಪ್ರಾಯವೂ ನನ್ನನ್ನು ತೃಪ್ತಿಪಡಿಸದು.ನಾನೇ ಸ್ವಂತ ಅರಿತು,ತಿಳಿದುಕೊಳ್ಳಲು ಇಚ್ಚಿಸುತ್ತೇನೆ.ನನ್ನ ತಾಯಿ ಮಲಯಾಳಿ, ತಂದೆ ತೆಲುಗಿನವರು, ಆದರೆ ಮನೆಯಲ್ಲಿ ಹಾಗು ಇನ್ನಿತರೆಡೆ ಮಾತಾಡುವುದು ಕನ್ನಡದಲ್ಲೇ.
[ಬದಲಾಯಿಸಿ]ನಾನು ಹುಟ್ಟಿದ್ದು ಈ ನಮ್ಮ ಗಂಧದನಾಡಿನಲ್ಲಿಯೇ, ಕನ್ನಡಿಗಳೆಂದೆನಿಸಿಕೊಳ್ಳಲು ಧನ್ಯಳಾಗಿದ್ದೇನ
[ಬದಲಾಯಿಸಿ]
ಮೇಲೆ ತಿಳಿಸಿದ ಹಾಗೆ ಅಮ್ಮನ ಊರು ಕೊಡಗು ಅಪ್ಪನ ಊರು ಚ್ಚಿಕ್ಕಬಳ್ಳಾಪುರ.ಆದರೆ ನಾವು ಕೆಲ ಕಾಲ ಮೈಸೂರಿನಲ್ಲೂ ನೆಲೆಸಿದ್ದೆವು. ನನಗೂ ನನ್ನ ತಮ್ಮನಿಗೂ
ಈ ಮೂರೂ ಜಾಗದ ಪರಿಚಯವಿದೆ.
"ಮೈಸೂರು" ಎಂದೊಡನೆ ಮನಸ್ಸಿನಲ್ಲಿ ಬರುವ ವಿಶಯ ,ಮನದಲ್ಲೇ ಬೀರುವ ಸುವಾಸನೆ "ಮೈಸೂರು ಮಲ್ಲಿಗೆ " ಯದ್ದು.
"ಅಂಬಾವಿಲಾಸ ಅರಮನೆ" ಎಂದು ಪ್ರಸಿದ್ದವಾಗಿರುವ ಮೈಸೂರು ಅರಮನೆ,ನಮ್ಮ ದೇಶದಲ್ಲಿರುವ ಅತಿ ದೊಡ್ಡ ಅರಮನೆಗಳಲ್ಲಿ ಒಂದಾಗಿದೆ. ಇದು ೧೪ನೇ ಶತಮಾನದಲ್ಲಿ "ರಾಜರಿಶಿ"ಎಂದು ಮಹಾತ್ಮಗಾಂಧಿಯವರಿಂದ ಕರೆಸಿಕೊಂಡ ಶ್ರಿ ಮಹರಾಜ ಕ್ರಿಶ್ಣರಾಜ ಒಡಯರ್ ೪ ಅವರ ಕಾಲದಲ್ಲಿ ಕಟ್ಟಲಾಗಿದೆ.ಅರಮನೆಯ ಒಳಗೆಲ್ಲಾ ಚಿನ್ನದ ಲೇಪನದ ಕಲಾ ವೈಭವ, ಅರಮನೆಯ ಮುಂಬಾಗದಲ್ಲಿ ಏಳು ವಿಶಾಲವಾದ ಮತ್ತು ಎರಡು ಚಿಕ್ಕ ಕಮಾನುಗಳಿವೆ. ಚಚೌಕದ ಕಂಬಗಳು, ಮೇಲೆ ಸುಂದರ ವಿನ್ಯಾಸದ ಗೋಪು,ವಿಶಾಲವಾದ ಮೈದಾನ, ಸುಂದರ ಹಾಗು ಮನಮೋಹರ ಶಿಲ್ಪಗಳಿಂದ ಅಲಂಕೃತಗೊಂಡಿದೆ.
ಮೈಸೂರು ಪ್ರಾಣಿ ಸಂಗ್ರಹಾಲಯ
.ಮೈಸೂರು ಮೃಗಾಲಯವನ್ನು ೧೮೯೨ರಲ್ಲಿ, ಮಹರಾಜ ಚಾಮರಾಜ ಒಡೆಯರವರು ಸ್ಥಾಪಿಸಿದರು.೨೫೦ ಎಕರೆಯಶ್ಟು ವಿಶಾಲವಾಗಿರು ಈ ಮೃಗಾಲಯ ಅನೇಕ ವಿಭಿನ್ನ ಜೀವ ಸಂಕುಲಗಳಿಗೆ ತಾಣವಾಗಿದೆ. ಜಿರಾಫೆ,ಆನೆ,
ನೀರಾನೆ,ಕೋತಿ,ಸಿಂಹ,ಹುಲಿ,ಚಿರತೆ,ಕತ್ತೆಕಿರುಬ,ಜೀಬ್ರಾ,ಗೇಂಡಾಮೃಗ,ನವಿಲು,ವಿಧ-ವಿಧವಾದ ಗಿಳಿಗಳು, ಅನೇಕ ತರಹದ ಹಾವುಗಳು......ಇನ್ನು ಹಲವಾರು ಪ್ರಾಣಿ ಹಕ್ಕಿಗಳಿಂದ ಕೂಡಿದೆ.
"ಕೊಡಗು" ಎಂದಕೂಡಲೆ ಕಾಫಿ ತೋಟ, ಕರಿ ಮೆಣಸು, ಹಲಸು-ಮಾವು,ಬೆಟ್ಟ ಗುಡ್ಡ, ಮಂಜಿನಿಂದಕೂಡಿದ ಮುಂಜಾನೆ ಇವುಗಳ ಚಿತ್ರ ಕಣ್ತುಂಬುತ್ತದೆ.
"ರಾಜಾಸ್ ಸೀಟ್" ಅಂದರೆ ರಾಜನ ಆಸನ ಎಂದರ್ಥ್. ಇಲ್ಲಿನ ಪ್ರಕೃತಿ ನಯನ ಮನೋಹರವಾಗಿದೆ. ಸುತ್ತ- ಮುತ್ತಲಿನಲ್ಲಿ
ವಿವಿಧ ಬಗೆಯ ಹೂಗಿಡಗಳಿವೆ.
"ನಾಮ್ದ್ರೋಲಿಂಗ್ ಆಶ್ರಮ" ಮತ್ತು "ಚಿನ್ನದ ದೇವಸ್ಥಾನ":
ಮೇಲೆ ತಿಳಿಸಿರುವ ಆಶ್ರಮ ಮೈಸೂರಿನಿಂದ ಸುಮಾರು ೮೭ ಕೀ.ಮೀ. ದೂರದಲ್ಲಿದೆ. ಇದು ಒಂದು ಸುಂದರ ಬೌಧ
ಸನ್ಯಾಸಿಗಳ ಆಶ್ರಮವಾಗಿದ್ದು, ಮಡಿಕೇರಿಯ ಬೈಲಕುಪ್ಪೆಯಲ್ಲಿದೆ.
ಬೈಲಕುಪ್ಪೆ ನಮ್ಮ ದೇಶದ ಎರಡನೆ ಟಿಬೆಟ್ ಗೊತ್ತುವಳಿಯಾಗಿದೆ.
*ಚಿನ್ನದ ದೇವಸ್ಥಾನ ,ಸುಮಾರು ೫೦೦೦ ಹೆಚ್ಚು "ಸಂಘ" ಸಂಸ್ಥೆಯ ಸನ್ಯಾಸ-ಸನ್ಯಾಸಿನಿಯರಿಗೆ ವಾಸಸ್ಥಳವಾಗಿದೆ.
ಬೌಧ ಧರ್ಮದ ಅತಿ ದೊಡ್ಡ ಶಿಕ್ಶಣ ಕೇಂದ್ರ ವಾಗಿದೆ. ಒಳಗಿನ ಗೋಡೆಗಳ ಮೇಲೆ ಟಿಬೆಟಿನ ಬೌಧ ಪುರಾಣ ಸಂಬಂಧವಾದ ಚಿತ್ರಗಳು ಬಿಡಿಸಲಾಗಿದೆ.
ಎವೆಲ್ಲವೂ ವೀಕ್ಶಿಸಲು ವೈಭವಶಾಲಿ ಹಾಗು ನಿಶ್ಚಲವಾಗಿ ಕಾಣಿಸುತ್ತದೆ.