ಸದಸ್ಯ:NidhiPRao1940556
ನನ್ನ ಹೆಸರು ನಿಧಿ ಪ್ರಹ್ಲಾದ್ ರಾವ್. ನನ್ನ ವಯಸ್ಸು ಹದಿನೆಂಟು.
ನಾನು ಸೆಪ್ಟೆಂಬರ್ 25, 2000 ರಂದು ಜನಿಸಿದೆ. ನಾನು ಹುಟ್ಟಿ ಬೆಳೆದ ಊರು ಬೆಂಗಳೂರು, ಕರ್ನಾಟಕದ ರಾಜಧಾನಿ. ದೇಶದ ಹಾಗೂ ವಿಶ್ವದ ಎಲ್ಲೆಡೆಯಿಂದಲೂ ಜನರು ನನ್ನ ಊರಿನಲ್ಲಿ ನೆಲೆಸಿದ್ದಾರೆ.ಇಂತಹ ಮಿಶ್ರ ವಾತಾವರಣದಲ್ಲಿ ಬೆಳೆದಿರುವುದು ನನಗೆ ಬೇರೆ ದೇಶ ಹಾಗೂ ರಾಜ್ಯಗಳ ಜನರನ್ನು ಹಾಗೂ ಅವರ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಲು ಬಹಳ ಸಹಾಯಕವಾಗಿದೆ. thumb|ನಮ್ಮ ಸುಮಧುರ ಊರು ಬೆಂಗಳರಿನಲ್ಲಿರುವ ವಿಧಾನ ಸೌಧ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವನ, ಲಾಲ್ಬಾಗ್, ಕಬ್ಬನ್ ಪಾರ್ಕ್ ಇವೆಲ್ಲವೂ ಆಕರ್ಷಕ ಪ್ರವಾಸಿ ಸ್ಥಾನಗಳಗಿವೆ. ಉದ್ಯಾನ ನಗರಿ ಎಂದೇ ಪ್ರಸಿದ್ಧವಾದ ಬೆಂಗಳೂರು, ಹಲವಾರು ಉದ್ಯಾನವನಗಳು ಹಾಗೂ ಕೆರೆಗಳನ್ನು ಹೊಂದಿದೆ. ಇಂದಿಗೂ, ಬೆಂಗಳೂರು ಬೆಳೆಯುತ್ತಿರುವ ನಗರಿ. ಕೆಂಪೇಗೌಡರು ಕಟ್ಟಿದ ಈ ಊರು ದಿನೇದಿನೇ ಪ್ರಸಿದ್ಧತೆಯಲ್ಲಿ ಹೆಚ್ಚುತ್ತಲಿದೆ. ನಮ್ಮ ಊರಿನ ವಾತಾವರಣ ಹಾಗೂ ಆಹ್ಲಾದಕರವಾದ ಉಷ್ಣಾಂಶತೆಯನ್ನು ಹೊರದೇಶಿಗರು ಹಾಗೂ ಬೇರೆ ರಾಜ್ಯಗಳ ಜನರು ಮೆಚ್ಚಿ ಇಲ್ಲಿಗೆ ಬರುತ್ತಾರೆ.
ನನ್ನ ತಂದೆ ಮತ್ತು ತಾಯಿ ಇಬ್ಬರೂ ಬಹಳ ಸ್ಫೂರ್ತಿದಾಯಕವಾಗಿ, ನನ್ನ ಜೀವನದ ಬೆನ್ನೆಲುಬಾಗಿ ನಿಂತಿದ್ದಾರೆ. ಅವರನ್ನು ತಂದೆ ತಾಯಿಯಾಗಿ ಗೌರವದಿಂದ ಮಾತ್ರವಲ್ಲ, ಗೆಳೆತನದ ವಿಶ್ವಾಸದಿಂದ ಅವರನ್ನು ಕಾಣುತ್ತೇನೆ.
ನನ್ನ ಪ್ರೀತಿಯ ತಮ್ಮ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ನಾನು 10ನೇ ತರಗತಿವರೆಗೆ ಶ್ರೀ ಕುಮಾರನ್ ಪಬ್ಲಿಕ್ ಶಾಲೆಯಲ್ಲಿ ಓದಿದೆ. ವಿ ವಿ ಪುರಂನ ಭಗವಾನ್ ಮಹಾವೀರ ಜೈನ ಕಾಲೇಜಿನ ವಿಜ್ಞಾನ ಭಾಗದಲ್ಲಿ ನನ್ನ ಪದವಿಪೂರ್ವ ಶಿಕ್ಷಣ ಮುಗಿಸಿದೆ. ಈಗ ನಾನು ಕ್ರೈಸ್ಟ್ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಬಿಎಸ್ಸಿ ಓದುತ್ತಿದ್ದೇನೆ. ವಿಶ್ವವಿದ್ಯಾಲಯದಲ್ಲಿ ನನಗೆ ಹಕ್ಕಿಗಳನ್ನು ಕಂಡು ಹಿಡಿಯುವ ಹವ್ಯಾಸವು ಬಹಳ ಇಷ್ಟ . ನಮ್ಮ ವಿಶ್ವವಿದ್ಯಾಲಯದಲ್ಲಿ ಹಕ್ಕಿಗಳ ಅಪಾರ ಸಂಖ್ಯೆ ಹಾಗೂ ವೈವಿಧ್ಯತೆ ಇರುವುದರಿಂದ ಈ ಹವ್ಯಾಸವು ಬಹಳ ಆಹ್ಲಾದಕರ ಹಾಗೂ ಕಲಿಕೆಗೆ ಸಹಾಯಕವಾಗಿದೆ. ನನಗೆ ವಿಜ್ಞಾನ ಮತ್ತು ಸಾಹಿತ್ಯದ ಬಗ್ಗೆ ತುಂಬಾ ಆಸಕ್ತಿ ಇದೆ. ಪುಸ್ತಕ ಓದುವುದು ಬಹಳ ಇಷ್ಟ.ನನಗೆ ಕನ್ನಡದಲ್ಲಿ ಅಚ್ಚುಮೆಚ್ಚಿನ ಲೇಖಕರೆಂದರೆ ಎಸ್ಎಲ್ ಭೈರಪ್ಪನವರು. ಬಾಲ್ಯದಲ್ಲಿ ನನ್ನ ತಾಯಿ ತಂದೆ ಈ ಹವ್ಯಾಸವನ್ನು ಬೆಳೆಸಿಕೊಳ್ಳಲು ನನ್ನನ್ನು ಹುರಿದುಂಬಿಸಿದರು. ಕನ್ನಡ ಮತ್ತು ಆಂಗ್ಲ ಭಾಷೆಗಳ ಪುಸ್ತಕಗಳನ್ನು ಓದುತ್ತೇನೆ. ಅಡುಗೆ ಮಾಡುವುದು, ವಿಜ್ಞಾನದ ಬಹಳಷ್ಟು ವಿಷಯಗಳ ಬಗ್ಗೆ ಚರ್ಚಿಸುವುದು ಇವೆರಡೂ ನನ್ನ ಪ್ರೀತಿಯ ಹವ್ಯಾಸಗಳು. ಗಜ್ಜರಿ ಹಲ್ವಾ ನನಗೆ ಬಹಳ ಇಷ್ಟವಾದ ಭಾರತೀಯ ಖಾದ್ಯ. ಗೆಳೆಯ ಗೆಳತಿಯರೊಡನೆ ಊರನ್ನು ಸುತ್ತುವುದು ಹಾಗೂ ಕೂತು ಹರಟೆ ಹೊಡೆಯುವುದು ಬಹಳ ಇಷ್ಟ. ನನ್ನ ಗೆಳೆಯ ಗೆಳತಿಯರು ನನ್ನ ಜೀವನದ ಬಹಳ ಮುಖ್ಯ ಭಾಗ ಆಗಿದ್ದಾರೆ. ಓದಿನಲ್ಲೂ ಮೋಜಿನಲ್ಲಿ ಭಾಗವಹಿಸಿ ನನ್ನ ಜೀವನವನ್ನು ಇನ್ನೂ ರಸಭರಿತವಾಗಿಸಿದ್ದಾರೆ.ಬೆಂಗಳೂರಿನಲ್ಲಿರುವ ಎಲ್ಲ ಜಾಗಗಳಲ್ಲಿ ನನಗೆ ತುಂಬಾ ಇಷ್ಟವಾಗುವ ಜಾಗ ಮಹಾತ್ಮ ಗಾಂಧಿ ರಸ್ತೆ. ಇಲ್ಲಿಯ ಅಂಗಡಿಗಳು, ಖಾನಾವಲಿಗಳನ್ನು ನಾನು ನನ್ನ ಸ್ನೇಹಿತರ ಜೊತೆ ಮತ್ತೆ ಮತ್ತೆ ಭೇಟಿ ಮಾಡುತ್ತೇನೆ.
ಭವಿಷ್ಯದಲ್ಲಿ ಒಬ್ಬ ವಿಜ್ಞಾನಿ ಅಥವಾ ವೈದ್ಯೆ ಆಗುವುದು ನನ್ನ ಆಸೆ. ಭಾರತದಲ್ಲಿ ಮಹಿಳಾ ವಿಜ್ಞಾನಿಗಳು ಬಹಳ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ. ನಾನು ಅವರಲ್ಲಿ ಒಬ್ಬಳಾಗಿ ಮಹಿಳಾ ವಿಜ್ಞಾನಿಗಳ ಸಂಖ್ಯೆಯನ್ನು ಹೆಚ್ಚಿಸಲು ಆಶಿಸುತ್ತೇನೆ . ನನ್ನ ಜೀವನದ ಗುರಿ ಭಾರತದ ಒಬ್ಬ ಒಳ್ಳೆಯ ಪ್ರಜೆಯಾಗುವುದು.
ನಾನು ಕಳೆದ ಮೂರು ವರ್ಷಗಳಿಂದ ನಾನಾ ವಿಧವಾದ ಭಾಷೆಗಳನ್ನು ಕಲಿಯುವ ಪ್ರಯತ್ನ ಮಾಡಿದ್ದೇನೆ. ಕೊರಿಯನ್, ಜಪಾನೀಸ್, ಚೀನೀ ಭಾಷೆಗಳನ್ನು ನಾನು ಕಲಿಯುವ ಪ್ರಯತ್ನ ಮಾಡಿದ್ದೇನೆ. ಈ ನಡುವೆ ನನಗೆ ನಮ್ಮ ಊರಿನ ಜನರಲ್ಲಿರುವ ಭಾಷಾಭಿಮಾನ, ಕನ್ನಡ ಭಾಷೆಯ ಮೇಲಿನ ಬದ್ಧತೆಯ ಬಗ್ಗೆ ಬಹಳ ಆಸಕ್ತಿ ಮೂಡಿದೆ. ಕನ್ನಡದವರು ತಮ್ಮ ಭಾಷೆಯನ್ನು ಬಿಟ್ಟುಕೊಟ್ಟು ಬೇರೊಬ್ಬರ ಭಾಷೆಯನ್ನು ತಮ್ಮದಾಗಿಸಿಕೊಳ್ಳುವುದನ್ನು ನೋಡಿದಾಗ ನನಗೆ ಅಚ್ಚರಿ ಮೂಡಿತು. ಕನ್ನಡ ಲೇಖಕನ ಮಗಳಾಗಿಯು, ಕನ್ನಡದ ಇಂದಿನ ಸ್ಥಿತಿಯು ನನಗೆ ತುಂಬ ತಡವಾಗಿ ಅರ್ಥವಾಯಿತು. ಜೀವನ ಶಾಸ್ತ್ರದ ಒಬ್ಬ ವಿದ್ಯಾರ್ಥಿನಿಯಾಗಿ ಹೇಗೆ ಪ್ರಾಣಿ ಪಕ್ಷಿಗಳ ಬಗ್ಗೆ ಅಪಾರ ಪ್ರೀತಿ, ಬದ್ಧತೆಯನ್ನು ತೋರುತ್ತೇನೋ, ಹಾಗೆ ಕನ್ನಡದ ವಿದ್ಯಾರ್ಥಿನಿಯೂ ಹೌದು. ಕನ್ನದವನ್ನು ಬಳಸಿ ಬೇರವರಿಗೂ ಕಲಿಸುವ ಕರ್ತವ್ಯ ನನ್ನದು.
ನಮ್ಮ ವಿಶ್ವವಿದ್ಯಾಲಯಕ್ಕೆ ಹೊರಗಡೆಯಿಂದ ಬರುವ ಎಲ್ಲ ವಿದ್ಯಾರ್ಥಿಗಳಿಗೂ ನಾನು ಕನ್ನಡವನ್ನು ಕಲಿಸುವ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ. ಕನ್ನಡದಲ್ಲಿ ಆಸಕ್ತಿಯನ್ನು ತೋರುವ ಹೊರ ಜಾಗಗಳಿಂದ ಬರುವ ಎಲ್ಲರಿಗೂ ನನ್ನ ಅಭಿನಂದನೆ. ಈ ಸಂಪಾದನೆಯು ನನ್ನ ಜೀವನವನ್ನು ವರ್ಣಿಸುವ ಒಂದು ಸಣ್ಣದಾದ ಪ್ರಯತ್ನ.