ವಿಷಯಕ್ಕೆ ಹೋಗು

ಸದಸ್ಯ:Gowtham1940545

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು

[ಬದಲಾಯಿಸಿ]

ನನ್ನ ಹೆಸರು ಗೌತಮ್ ಬಿ (ಗೌತಮ್ ಬಂಡಾ). ನಾನು ೯ ನವೆಂಬರ್ ೨೦೦೧ ರಲ್ಲಿ ಜನಿಸಿದ್ಧೇನೆ. ನನ್ನ ಜನ್ಮ ಸ್ಥಳ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮ. ನನ್ನ ತಾಯಿಯ ಹೆಸರು ಶ್ರೀದೇವಿ ನನ್ನ ತಂದೆಯ ಹೆಸರು ಮಂಜುನಾಥ್. ನನ್ನ ಬಾಲ್ಯದ ಶಿಕ್ಷಣ ಅನಂತಪುರದಲ್ಲಿ ಮುಗಿಸಿದೆ. ನನ್ನ ಪ್ರಾಥಮಿಕ ಶಿಕ್ಷಣ ಹಾಗು ಹಿರಿಯ ಪ್ರಾಥಮಿಕ ಶಿಕ್ಷಣ ಬೆಂಗಳೂರಿನ ಬ್ರೈಟ್ ಫ್ಯೂಚರ್ ಇಂಗ್ಲೀಷ್ ಸ್ಕೂಲಿನಲ್ಲಿ ಮಾಡಿದೆ. ನಾನು ನನ್ನ ಎಸೆಸೆಲ್ಸಿ ಪರೀಕ್ಷೆಯನ್ನು ೯೪.೪% ಶೇಕಡಾದೊಂದಿಗೆ ಉತ್ತಿರ್ಣನಾದೆ. ಹಾಗು ನಾನು ನನ್ನ ಮುಂದಿನ ಶಿಕ್ಷಣಕ್ಕಾಗಿ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನಲ್ಲಿ ಸೇರಿದೆ. ನನ್ನ ದ್ವಿತೀಯ ಪದವಿ ಪೂರ್ವ ಪರೀಕ್ಷೆಯನ್ನು ೭೪.೪% ಶೇಕಡಾದೊಂದಿಗೆ ಉತ್ತಿರ್ಣನಾದೆ.ಹಾಗು ನಾನು ನನ್ನ ಈಗಿನ ಬಿಎಸ್ಸಿ ಪದವಿಯನ್ನು ಕ್ರೈಸ್ಟ್ ಡೀಮ್ಡ್ ಟು ಬಿ ಯೂನಿವರ್ಸಿಟಿಯಲ್ಲಿ ಮಾಡುತ್ತಿದ್ದೇನೆ. ನನ್ನ ಜೀವನದಲ್ಲಿ ನನ್ನ ಮೇಲೆ ಹೆಚ್ಚಾಗಿ ಪ್ರಭಾವಮುಡಿದ್ದು ಎರಡೇ ವಿಷಯ ಒಂದು ಕನ್ನಡ ಭಾಷೆ ಮತ್ತು ಇನ್ನೊಂದು ಸಿನಿಮಾ ಚಿತ್ರಕಥೆ ಸಂಭಾಷಣೆ ನಿರ್ದೇಶನ ಮಾಡುವ ಬಯಕೆ.


ನನ್ನಲ್ಲಿ ಕನ್ನಡದ ಸ್ಪೂರ್ತಿಯನ್ನು ತುಂಬಿದ್ದು ಮಾತ್ರ ನನ್ನ ಶಿಕ್ಷಕರು. ನನ್ನ ಶಾಲಾ ದಿನಗಳಿಂದ ನನ್ನ ಶಿಕ್ಷಕರು ನನಗೆ ಕನ್ನಡದ ಸೊಬಗನ್ನು ಹೇಳಿ ಕನ್ನಡದ ಹಿರಿಮೆಯನ್ನು ಕೇಳಿ ನನ್ನಲ್ಲಿ ಕನ್ನಡದ ಮೇಲೆ ಅಪಾರವಾದ ಪ್ರೀತಿ ಬೆಳೆಯಿತು. ಕೇವಲ ಕನ್ನಡ ಶಿಕ್ಷಕರಲ್ಲದೆ ನಮ್ಮ ಶಾಲೆಯ ಇಂಗ್ಲೀಷ್ ಶಿಕ್ಷಕಿ ಕೂಡಾ ನನ್ನಲ್ಲಿ ಕನ್ನಡದ ಮೇಲೆ ಪ್ರೀತಿಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿತು. ಕನ್ನಡಕ್ಕೆ ನನ್ನನು ಅರ್ಪಿಸಬೇಕೆನಿಸಿದ್ದು ನನ್ನ ಪದವಿ ಪೂರ್ವ ಕಾಲೇಜಿನಲ್ಲಿ. ನಮ್ಮ ಕನ್ನಡ ಶಿಕ್ಷಕರು ಕನ್ನಡ ಭಾಷೆಯನ್ನು ಮಾತಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ನೊಂದು ಹೇಳುವ ಮಾತುಗಳು ನನಗೆ ಇನ್ನೂ ನೆನಪಿದೆ. ಹಾಗಾ ನಾನು ನನ್ನ ಸ್ನೇಹಿತ ಕನ್ನಡದ ಕುರಿತು ಕನ್ನಡಕ್ಕೆ ಆಗುವ ಅನ್ಯಾಯದ ಕುರಿತು ಇತರರಿಗೆ ತಿಳಿಸುವ ಪ್ರಯತ್ನ ಪಡಬೇಕೆಂದು ಯೋಚಿಸಿದೆವು. ಹಾಗಾ ನಾನು ಹಾಡುಗಳನ್ನು ಬರೆಯಲು ಆರಂಭಿಸಿದೆ. ಕನ್ನಡದ ಬಗ್ಗೆ ಹಾಗೂ ಭಾರತದ ಇತಿಹಾಸದ ಬಗ್ಗೆ ಹಾಡು ಬರೆಯಲು ಶುರು ಮಾಡಿದೆ. ನಾನು ಕೇವಲ ನಾನು ಕಂಡದ್ದು ಹಾಗು ನಾನು ತಿಳಿದದ್ದನ್ನು ಮಾತ್ರ ಬರೆಯಲು ಆರಂಭಿಸಿದೆ. ನಾನು ಎಂದಿಗೂ ಸೋತರು ಕೂಡ ಪ್ರಯತ್ನವನ್ನು ನಿಲ್ಲಿಸುವುದಿಲ್ಲ. ನಾನು ಬರೆದ ಹಾಡುಗಳನ್ನು ಕಾಲೇಜಿನ ಪತ್ರಿಕೆಗೆ ಸೇರಿಸಲು ನೀಡಿದೆ ಆದರೆ ಆತ ಒಮ್ಮೆಯೂ ಕೂಡಾ ಅದನ್ನು ಓದಲಿಲ್ಲ. ಆದರೂ ಕೂಡಾ ನಾನು ನನ್ನ ಪ್ರಯತ್ನವನ್ನು ನಿಲ್ಲಿಸಲಿಲ್ಲ.

ನನಗೆ ನನ್ನ ಬಾಷೆ ಸಂಸ್ಕೃತಿ ಕಲೆ ಸಾಹಿತ್ಯ ಎಂದರೆ ಎಳ್ಳಿಲ್ಲದಷ್ಟು ಪ್ರೀತಿ. ನನ್ನ ಹುಟ್ಟೂರಾದ ಕಿನ್ನಾಳ ಗ್ರಾಮದಲ್ಲಿ ಕಿನ್ನಾಳ ಕಲೆ ವಿಶ್ವಪ್ರಸಿದ್ಧ ಹಾಗಿನ ವಿಜಯನಗರ ಅರಸರ ಕಾಲದಿಂದಲೂ ಅದೂ ಪ್ರಸಿಧ್ಧ. ಆದರೆ ಈಗ ಅದು ನಿದಾನವಾಗಿ ಗತಿಸಿ ಹೋಗುತ್ತಿದೆ. ಕಿನ್ನಾಳ ಕಲೆಯನ್ನು ಕಲಿಯಲು ವಿವಿಧ ರಾಷ್ಟ್ರಗಳಿಂದ ಜನರು ನಮ್ಮ ಊರಿಗೆ ಬಂದು ಕಲಿಯುತ್ತಾರೆ ಅದರೆ ನಮ್ಮ ಜನಕ್ಕೆ ಅದರ ಆಸಕ್ತಿಯಿಲ್ಲ. ಕಿನ್ನಾಳ ಕಲೆಯನ್ನು ಉಳಿಸಿಕೊಂಡು ಬರುವ ಚಿತ್ರಕರರಿಗೆ ಸರ್ಕಾರದಿಂದ ಪ್ರೋತ್ಸಾಹವಿಲ್ಲ. ಇನ್ನು ಕೆಲವು ವರ್ಷಗಳಲ್ಲಿ ಅದು ಗುಂದುಹೋಗುತ್ತದೆ. ಅದಕ್ಕೆ ನನ್ನ ಊರಿನ ಕಲೆಯನ್ನು ಕಾಪಾಡಿಕೊಳ್ಳುವ ಜವಾಬ್ಧಾರಿ ನನಗೆ ಇದೆ. ನನ್ನ ಜನ್ಮಸ್ಥಳ ಕೊಪ್ಪಳ ಜಿಲ್ಲೆ ಮೊದಲಿಗೆ ಇದು ರಾಯಚೂರು ಜಿಲ್ಲೆಯಲ್ಲಿ ಸೇರಿತ್ತು. ನನ್ನ ಜಿಲ್ಲೆ ಕರ್ನಾಟಕದ ಬರ ಜಿಲ್ಲೆಗಳಲ್ಲಿ ಒಂದು. ಅದಕ್ಕೆ ಬಿಸಿಲ ನಾಡು ಹಾಗೂ ಬಯಲು ಸೀಮೆ ಎಂಬ ಹೆಸರು ಇರುವುದುಂಟು. ನೀರಾವರಿಗಾಗಿ ತುಂಗಾಭದ್ರಾ ಅಣೆಕಟ್ಟು ಇದ್ದರೂ ಅದರ ಹೂಳು ತೆಗೆಯುವ ಕೆಲಸ ಮಾಡಲು ಸರ್ಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ರಾಜಕೀಯವೆಂಬುದು ಎಲ್ಲರಿಗೂ ತಿಳಿದ ವಿಷಯವೇ ಇದರ ಬಗ್ಗೆ ಯಾವ ರಾಜಕರಣಿಯು ತಲೆಕೆಡಿಸಿಕೊಳ್ಳಲ್ಲ. ಇದರ ಬಗ್ಗೆಯೂ ನನಗೆ ಚಿಂತೆಯಿದೆ. ಇವೆಲ್ಲದರ ಜೊತೆಗೆ ನನ್ನ ಕನಸು ಸಿನಿಮಾ ನಿರ್ದೇಶನ. ಆದರೆ ಅದರ ಬಗ್ಗೆ ನನಗೆ ತಿಳುವಳಿಕೆ ಇಲ್ಲ ಆದರೆ ಕಲಿಯುವ ಆಸಕ್ತಿ. ನನಗೆ ಸೋಲಿನ ಬಯವಿಲ್ಲ ನಾನು ಸೋತರು ಕೂಡ ನನ್ನ ಪ್ರಯತ್ನ ನಿಲ್ಲುವುದಿಲ್ಲ.

ಕಿನ್ನಾಳ

[ಬದಲಾಯಿಸಿ]

ನನ್ನ ಹೆಸರು ಗೌತಮ್ ಬಿ. ನನ್ನ ತಂದೆಯ ಹೆಸರು ಮಂಜುನಾಥ್ ನನ್ನ ತಾಯಿಯ ಹೆಸರು ಶ್ರೀದೇವಿ. ನನ್ನ ಹುಟ್ಟೂರು ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮ.