ಚರ್ಚೆಪುಟ:ಆದಿ ಶಂಕರ
ಗೋಚರ
- ಲೇಖನಕ್ಕೆ ಯಾರೋ ಆಂಗ್ಲದಲ್ಲಿ ಒಂದಷ್ಟು ಸೇರಿಸಿದ್ದರು. ಲೇಖನದಿಂದ ಅಳಿಸಿ ಕೆಳಗೆ ಲಗತ್ತಿಸಿದ್ದೇನೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 06:36, ೫ January ೨೦೦೬ (UTC)
ವಿಶೇಷ ಟಿಪ್ಪಣಿ
[ಬದಲಾಯಿಸಿ]- 'ಅದ್ವೈತ ಅಂದರೆ ಎರಡನೆಯದಿಲ್ಲದ್ದು. ಇದು ಶಂಕರರು ಸ್ಥಾಪಿಸಿದ್ದಲ್ಲ. ಅದ್ವೈತ ಪದವು ಮಾಂಡೂಕ್ಯ ಉಪನಿಷತ್ತಿನ ಮಂತ್ರದಲ್ಲಿ ಹೀಗಿದೆ - ’ನಾಂತಃ ಪ್ರಜ್ಞಮ್ ನ ಬಹಿಷ್ಪ್ರಜ್ಞಮ್ ನೋಭಯತಃ ಪ್ರಜ್ಞಮ್---- ಶಾನ್ತಮ್ ಶಿವಮ್ ಅದ್ವೈತಮ್ ಚತುರ್ಥಮ್ ಮನ್ಯನ್ತೇ ಸ ಆತ್ಮಾ ಸವಿಜ್ಞೇಯಃ ||’ ಎಂದು ತಿಳಿಸುತ್ತಿದೆ. ಶಂಕರರು ಇದನ್ನು ತೋರಿಸಿಕೊಟ್ಟಿದ್ದಾರೆ. ಅವರು ಅದ್ವೈತಮತ ಸ್ಥಾಪನಾಚಾರ್ಯರಲ್ಲ. ಮತ ಎಂದರೆ ಒಬ್ಬರ ಅಭಿಪ್ರಾಯ. ಶಂಕರರು ತೋರಿಸಿರುವ ತತ್ತ್ವ ಸಾರ್ವತ್ರಿಕ ಪರಿಪೂರ್ಣಾನುಭವದಮೆಲೆ ನಿಂತಿದೆ. ಭಗವಾನ್ ಶಂಕರರ ಜೀವನ ಚರಿತ್ರೆ ಭಾರತದಲ್ಲಿ ೧೯ ಬೇರೆ ಬೇರೆ ಶಂಕರ ವಿಜಯಗಳಲ್ಲಿ ಪ್ರಸ್ಥಾಪಿತವಾಗಿರುವುದು ಸರಿಯಷ್ಟೆ. ನಮಗೆ ಮಹಾತ್ಮರ ಜೀವನ ಚರಿತ್ರೆಗಿಂತ ಅವರು ಏನು ಹೇಳಿದ್ದಾರೆ, ಅವರ ಕಾರ್ಯಗಳೇನು, ಅದು ನಮಗೆಷ್ಟು ಉಪಯೋಗವಾಗಿದೆ, ಇಂದಿಗೂ ಲಭ್ಯವೆ ? ಎನ್ನುವುದು ಮುಖ್ಯ. ಮುಖ್ಯವಾಗಿ ಶಂಕರರು ಪ್ರಸ್ಥಾನತ್ರಯಗಳಿಗೆ ( ಬಾದರಾಯಣಾಚಾರ್ಯರ ಬ್ರಹ್ಮ ಸೂತ್ರಗಳು, ಶ್ರೀಮದ್ಭಗವದ್ಗೀತೆ, ದಶ ಉಪನಿಷತ್ತುಗಳು) ಪದ( ವ್ಯಾಕರಣ ) ವಾಕ್ಯ( ಮೀಮಾಂಸಾ) ಪ್ರಮಾಣ ( ನ್ಯಾಯ ದರ್ಶನ ) ಗಳಿಂದ ಭಾಷ್ಯವನ್ನು ಮೂಲ ಸಂಸ್ಕೃತದಲ್ಲಿ ಬರೆದಿದ್ದು, ಕರ್ಣಾಟಕ ಶಂಕರರೆಂದು ಪ್ರಸಿದ್ಧವಾಗಿರುವ ಹೊಳೆನರಸಿಪುರದ ಪರಮಪುಜ್ಯ ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು ೧೨೦೦ ವರ್ಷಗಳ ನಂತರ ಮೊಟ್ಟ ಮೊದಲು ಯಥಾವತ್ ಅಚುಕಟ್ಟಾಗಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
- ಭಗವಾನ್ ಶಂಕರರಂತೆ ನಮ್ಮೆಲ್ಲರ ದುಃಖಗಳಿಗೂ ಅಜ್ಞಾನವೇ( ಜ್ಞಾನಾಭಾವ, ಸಂಶಯ ಜ್ಞಾನ, ವಿಪರೀತ ಜ್ಞಾನ) ಕಾರಣ. ಇದು ಪ್ರತ್ಯಯರೂಪ ( ಮಾನಸಿಕ). ಅದ್ವೈತತತ್ತ್ವವನ್ನು ಸಕಲ ಮಾನವರೂ ಅರ್ಥಮಾಡಿಕೊಳ್ಳಬಹುದು, ಇದಕ್ಕೆ ಜಾತಿ, ಮತ, ಲಿಂಗ, ದೇಶ ಇವುಗಳ ಪರಿಮಿತಿ ಇಲ್ಲ. ಬ್ರಹ್ಮ ಸತ್ಯಮ್ ಜಗನ್ಮಿಥ್ಯಾ -ಎಂಬುದು ವೇದದ ವಾಕ್ಯವಲ್ಲ ಹಾಗೂ ಶಂಕರರು ಹೇಳಿಲ್ಲ. ಇದು ವೇದಾನ್ತ ಡಿಂಡಿಮ ಎಂಬ ಶ್ಲೋಕದ ವಾಕ್ಯ. ಜಗನ್ಮಿಥ್ಯಾ ಎಂದರೆ ’ಜಗತ್ತು ತೋರುವ ರೂಪದಿಂದಿಲ್ಲ ’ ಉದಾ- ಹೆಸರು ಮೇಜು, ಕುರ್ಚಿ, ಬಾಗಿಲು.. ಇರುವುದು ಮರವೇ. ಇತ್ಯಾದಿ. ಅದೇರೀತಿ ಇರುವುದು ಮನುಷ್ಯರು,ಪ್ರಾಣಿಗಳು..ಇರುವುದು ಚರ್ಮ, ಮಾಂಸ, ಮೂಳೆ,ರಕ್ತ..ಇತ್ಯಾದಿ. ಹೆಸರುಗಳು ಅನೇಕ ತತ್ತ್ವ ಒಂದೇ.
ಆತ್ಮನು ಸತ್ತಮೇಲೆ ಬ್ರಹ್ಮ ಆಗುವುದಿಲ್ಲ ತಿಳಿದಿರಲಿ ತಿಳಿಯದಿರಲಿ ಇರುವುದೇ ಬ್ರಹ್ಮ ಸ್ವರೂಪ.
- ವೇದಾಂತದ ಸಂದೇಶಗಳು ಅರ್ಥವಾಗಲು , ಅನುಭವಕ್ಕೆ ಬರಲು ೪ ಯೋಗ್ಯತೆಗಳು ಬೇಕೇ ಬೇಕು- ೧. ನಿತ್ಯಾನಿತ್ಯ ವಸ್ತುವಿವೇಕ, ೨. ಇಲ್ಲಿನ ಮತ್ತು ಪರಲೋಕದ ಫಲ, ಭೋಗಗಳಲ್ಲಿ ವಿರಾಗ, ೩. ಶಮಾದಿ ಸಾಧನ ಸಂಪತ್ತು, ಮತ್ತು ೪. ಮುಮುಕ್ಷುತ್ವ( ನನ್ನ ನಿಜ ಸ್ವರೂಪವನ್ನು ಹೇಗಾದರೂ ತಿಳಿಯಲೇಬೇಕು ಎಂಬ ತವಕ).
- Casmurthy
- (ಚರ್ಚೆ | ಕಾಣಿಕೆಗಳು)
ನೋಡಿ
[ಬದಲಾಯಿಸಿ]- ಆದಿ ಶಂಕರರು ಅದ್ವೈತಕ್ಕೆ ಒಂದು ಸ್ಪಷ್ಟ ಸಿದ್ಧಾಂತ ರೂಪ ಕೊಟ್ಟವರು. ಶ್ರೀ ಗೌಡ ಪಾದಮುನಿಗಳ ಅದ್ವೈತ ವಾದವನ್ನು ಮುಂದುವರೆಸಿದವರು.
ಆದಿ ಶಂಕರರು ಮತ್ತು ಅದ್ವೈತBschandrasgr ೦೯:೧೫, ೪ ಜೂನ್ ೨೦೧೩ (UTC) ಸದಸ್ಯ:Bschandrasgr/ಪರಿಚಯ (ಬಿ.ಎಸ್.ಚಂದ್ರಶೇಖರ-ಇಕ್ಕೇರಿ ರಸ್ತೆ ಸಾಗರ ಶಿವಮೊಗ್ಗ)