ಕಿವಿಯ ಹಾಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾನವನ ಕಿವಿಹಾಲೆಯು (ಲೊಬ್ಯುಲಸ್ ಆರಿಕ್ಯುಲೇ) ಬಿರುಸಾದ ಸರಂಧ್ರ ಹಾಗೂ ಕೊಬ್ಬುಳ್ಳ ಸಂಯೋಜಕ ಅಂಗಾಂಶಗಳಿಂದ ರಚಿಸಲ್ಪಟ್ಟಿದೆ. ಇದು ಉಳಿದ ಹೊರಗಿವಿಯಂತೆ (ಕಿವಿಯ ಬಾಹ್ಯ ರಚನೆ) ದೃಢ ಹಾಗೂ ಸ್ಥಿತಿಸ್ಥಾಪಕವಾಗಿರುವುದಿಲ್ಲ. ಕೆಲವು ಸಂದರ್ಭದಲ್ಲಿ ಕೆಳಗಿನ ಹಾಲೆಯು ಮುಖದ ಬದಿಗೆ ಜೋಡಣೆಗೊಂಡಿರುತ್ತದೆ. ಕಿವಿಹಾಲೆಯು ಮೃದ್ವಸ್ಥಿಯನ್ನು ಹೊಂದಿರುವುದಿಲ್ಲವಾದ್ದರಿಂದ[೧], ಇದಕ್ಕೆ ಹೇರಳವಾಗಿ ರಕ್ತದ ಪೂರೈಕೆಯಾಗುತ್ತದೆ ಮತ್ತು ಕಿವಿಗಳನ್ನು ಬೆಚ್ಚಗಿಡಲು ಹಾಗೂ ಸಮತೋಲನವನ್ನು ಕಾಪಾಡಲು ನೆರವಾಗಬಹುದು. ಆದರೆ, ಸಾಮಾನ್ಯವಾಗಿ ಕಿವಿಹಾಲೆಗಳು ಯಾವುದೇ ಪ್ರಮುಖ ಜೈವಿಕ ಕ್ರಿಯೆಯನ್ನು ಹೊಂದಿವೆ ಎಂದು ಪರಿಗಣಿಸಲಾಗಿಲ್ಲ.[೨] ಕಿವಿಯ ಹಾಲೆಯು ಅನೇಕ ನರತುದಿಗಳನ್ನು ಹೊಂದಿರುತ್ತದೆ, ಮತ್ತು ಕೆಲವು ಜನರಿಗೆ ಇದು ಕಾಮಪ್ರಚೋದಕ ಪ್ರದೇಶವಾಗಿರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Steinberg, Avraham (2003). Encyclopedia of Jewish Medical Ethics: a Compilation of Jewish Medical Law on All Topics of Medical Interest. Jerusalem: Feldheim Publishers. p. 350.
  2. Popelka (31 August 1999). "Re:Why do we have earlobes, what are they for, since when?". MadSci Network. Retrieved 16 July 2015.