ಜಯರಾಮನ್ ಚಂದ್ರಶೇಖರ್
ಜಯರಾಮನ್ ಚಂದ್ರಶೇಖರ್ | |
---|---|
ಜನನ | ೨೩ ಅಕ್ಟೋಬರ್ ೧೯೫೨[೧] ಕರ್ನಾಟಕ ,ಭಾರತ |
ವಾಸಸ್ಥಳ | ಬ್ರಾಂಡ್ಫೋರ್ಡ್ ಸೆಂಟರ್ , ಕನೆಕ್ಟಿಕಟ್ , ಯುಎಸ್‌ಎ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ |
|
ಸಂಸ್ಥೆಗಳು |
|
ಅಭ್ಯಸಿಸಿದ ವಿದ್ಯಾಪೀಠ |
|
ಡಾಕ್ಟರೇಟ್ ಸಲಹೆಗಾರರು |
|
ಪ್ರಸಿದ್ಧಿಗೆ ಕಾರಣ | ಸಾವಯವ ಅಣುಗಳ ರಚನೆ ಮತ್ತು ಬಂಧದ ಕುರಿತು ಅಧ್ಯಯನ |
ಗಮನಾರ್ಹ ಪ್ರಶಸ್ತಿಗಳು |
|
ಜಯರಾಮನ್ ಚಂದ್ರಶೇಖರ್ (ಜನನ ೧೯೫೨) ಭಾರತೀಯ ಕಾಂಪ್ಯೂಟೇಶನಲ್ ರಸಾಯನಶಾಸ್ತ್ರಜ್ಞ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಸಾವಯವ ರಸಾಯನಶಾಸ್ತ್ರದ ಮಾಜಿ ಪ್ರಾಧ್ಯಾಪಕರಾಗಿದ್ದಾರೆ . ಅವರು ಸಾವಯವ ಅಣುಗಳ ರಚನೆ ಮತ್ತು ಬಂಧದ ಬಗ್ಗೆ ಅಧ್ಯಯನಕ್ಕಾಗಿ ಹೆಸರುವಾಸಿಯಾಗಿದ್ದಾರೆ ಹಾಗೂ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯಲ್ಲಿ ಚುನಾಯಿತರಾಗಿದ್ದಾರೆ . ೧೯೯೫ ರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ,ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ನಿಂದ ಭಾರತೀಯ ಅತ್ಯುನ್ನತ ವಿಜ್ಞಾನ ಪ್ರಶಸ್ತಿಗಳಲ್ಲಿ ಒಂದಾದ ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು .
ಜನನ ಮತ್ತು ಶಿಕ್ಷಣ
[ಬದಲಾಯಿಸಿ]ಜಯರಾಮನ್ ರವರು ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ೨೩ ಅಕ್ಟೋಬರ್ ೧೯೫೨ ರಂದು ಜನಿಸಿದರು . [೨] ೧೯೭೦ ರಲ್ಲಿ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಪದವಿ ಪಡೆದರು ಮತ್ತು ೧೯೭೨ ರಲ್ಲಿ ತಮ್ಮ ಸ್ನಾತಕೋತ್ತರ ಪದವಿಗಾಗಿ ಮದ್ರಾಸ್ ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಸೇರಿದರು. ಅವರು ಎಸ್ಐ ಸುಬ್ರಮಣ್ಯನ್ ರವರ ಮಾರ್ಗದರ್ಶನದಲ್ಲಿ ಕಂಪ್ಯೂಟರ್ ರಸಾಯನಶಾಸ್ತ್ರ ಮತ್ತು ಸೈದ್ಧಾಂತಿಕ ಸಾವಯವ ರಸಾಯನಶಾಸ್ತ್ರದ ಕುರಿತು ಡಾಕ್ಟರೇಟ್ ಅಧ್ಯಯನಕ್ಕಾಗಿ ಐಐಟಿ ಮದ್ರಾಸ್ ನಲ್ಲಿ ಮುಂದುವರೆದರು ಮತ್ತು ಅಲ್ಲಿ ಅವರು ೧೯೭೭ ರಲ್ಲಿ ಪಿಎಚ್ಡಿ ಪದವಿಯನ್ನು ಪಡೆದರು.[೩] ಜಯರಾಮನ್ ರವರು ತಮ್ಮ ಪೋಸ್ಟ್ ಡಾಕ್ಟೋರಲ್ ಅಧ್ಯಯನವನ್ನು ಯುನಿವರ್ಸಿಟಿ ಆಫ್ ಎರ್ಲಾಂಜೆನ್ - ನ್ಯೂರೆಂಬರ್ಗ್ ನಲ್ಲಿ ಪ್ರಾರಂಭಿಸಿದರು . ಭಾರತಕ್ಕೆ ಹಿಂದಿರುಗಿದ ನಂತರ , ಇವರು ಜೈವಿಕ ರಸಾಯನಶಾಸ್ತ್ರ ವಿಭಾಗದ ಸದಸ್ಯರಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಗೆದ್ದ ಸೇರಿಕೊಂಡರು ಮತ್ತು ಅಲ್ಲಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದಾಗ ಅವರು ಬ್ರಾನ್ಫೋರ್ಡ ನ ನ್ಯೂರೋಜನ್ ಕಾರ್ಪೊರೇಶನ್ ಗೆ ತೆರಳಿ ಅಲ್ಲಿ ತಮ್ಮ ಸಂಶೋಧನೆಗಳನ್ನು ಮುಂದುವರಿಸಿದರು.
ಲೀಗಸಿ
[ಬದಲಾಯಿಸಿ]ಚಂದ್ರಶೇಖರ್ ರವರು ಸಾವಯವ ಅಣುಗಳ ರಚನೆ , ಬಂಧನ ಹಾಗೂ ರಾಸಾಯನಿಕ ಪ್ರತಿಕ್ರಿಯಾತ್ಮಕ ಮೇಲಿನ ಪರಿಣಾಮಗಳ ಮೇಲೆ ವ್ಯಾಪಕವಾಗಿ ಕಾರ್ಯ ನಿರ್ವಹಿಸುವುದರ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ . ಅವರ ನಂತರದ ಸಂಶೋಧನೆಗಳು : ಎಲೆಕ್ಟ್ರಾನಿಕ್ ಪರಿಮಾಣ , ರಚನೆ , ಅವುಗಳ ಆಣ್ವಿಕ ಗುಣಗಳ ಲೆಕ್ಕಾಚಾರ .[೪] ಅವರು ಮೂರು ಪುಸ್ತಕಗಳು ಮತ್ತು ಅನೇಕ ಪರಾಮರ್ಶೆ ಲೇಖನಗಳನ್ನು ಕೊಡುಗೆಯಾಗಿ ನೀಡಿದ್ದಾರೆ .[೫]
ಪ್ರಶಸ್ತಿಗಳು
[ಬದಲಾಯಿಸಿ]- ಡಾ. ಹುಸೇನ್ ಜಹೀರ್ ಯಂಗ್ ಸೈಂಟಿಸ್ಟ್ ಪ್ರಶಸ್ತಿ .[೬]
- ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಇಲಾಖೆಯು , ಅತ್ಯುನ್ನತ ಭಾರತೀಯ ವಿಜ್ಞಾನ ಪ್ರಶಸ್ತಿಗಳಲ್ಲಿ ಒಂದಾದ ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು - ೧೯೯೫ .[೭][೮]
- ಸೈಟೀಷನ್ ಲಾರೆಟ್ ಅವಾರ್ಡ್ - ೨೦೦೪ .[೯]
ಉಲ್ಲೇಖಗಳು
[ಬದಲಾಯಿಸಿ]- ↑ Fellow Profile
- ↑ ಜನನ
- ↑ Ph.d
- ↑ ಪ್ರಕಟಣೆಗಳು
- ↑ Publications of fellows
- ↑ "ಡಾ. ಹುಸೇನ್ ಜಹೀರ್ ಯಂಗ್ ಸೈಂಟಿಸ್ಟ್ ಪ್ರಶಸ್ತಿ". Archived from the original on 2020-08-02. Retrieved 2019-06-05.
- ↑ ಭಟ್ನಗರ್ ಪ್ರಶಸ್ತಿ ಪುರಸ್ಕೃತರು
- ↑ ಕೆಮಿಕಲ್ ಸೈನ್ಸಸ್
- ↑ Business Standard Last Updated at February 06 2013 17:00 IST