ಮೈಲಹಳ್ಳಿ ರೇವಣ್ಣ
ಡಾ.ಮೈಲಹಳ್ಳಿ ರೇವಣ್ಣ ಜಾನಪದ ವಿದ್ಯಾಂಸರು, ಸಂಶೋಧಕರು, ಮಾರ್ಗದರ್ಶಕರು, ಪ್ರಾಧ್ಯಾಪಕರು, ಜನಪದ ಕಲಾವಿದರು, ಡಾ.ಬಾಬು ಜಗಜೀವನ್ ರಾಮ್ ಅಧ್ಯಯನ ಪೀಠದ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ.
ಸಂಕ್ಷಿಪ್ತ ಪರಿಚಯ
[ಬದಲಾಯಿಸಿ]ಮೈಲಹಳ್ಳಿ ರೇವಣ್ಣ ಹುಟ್ಟಿದ್ದು ೦೧.೦೬.೧೯೫೬, ಚಿತ್ರದುರ್ಗ ಜಿಲ್ಲೆಯ ತುರುವನೂರಿನಲ್ಲಿ. ತಂದೆ-ಮೈಲಹಳ್ಳಿ ನಿಂಗಪ್ಪ, ಬಯಲಾಟದ ಕಲಾವಿದರು. ತಾಯಿ ಶ್ರೀಮತಿ ಶಾಂತಮ್ಮ, ಜಾನಪದ ಕಲಾವಿದೆ. ೨೦೦೦ದ ವರ್ಷದಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು- ಇವರಿಂದ "ಜಾನಪದ ಪ್ರಶಸ್ತಿ"ಗೆ ಭಾಜನರಾಗಿದ್ದರು. ಸಹೋದರರು- ಭೀಮಪ್ಪ, ಜಯಣ್ಣ, ಪತ್ನೀ ಪದ್ಮಜ, ಮಕ್ಕಳು ದೀಪಾ, ರೂಪ, ಶಿಲ್ಪ.
ವಿದ್ಯಾಭ್ಯಾಸ
[ಬದಲಾಯಿಸಿ]ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಡಶಾಲೆಯನ್ನು ತುರುವನೂರಿನಲ್ಲಿ ಮುಗಿಸಿ, ಪಿ.ಯು.ಸಿ ಹಾಗೂ ಬಿ.ಎ ಪದವಿಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಿತ್ರದುರ್ಗದಲ್ಲಿ ಮಾಡಿದ್ದಾರೆ. ಎಂ.ಎ ಕನ್ನಡ ಮತ್ತು ಪಿಎಚ್.ಡಿ ಪದವಿಗಳನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮಾಡಿದ್ದಾರೆ. ಇವರ ಸಂಶೋಧನಾ ಮಹಾಪ್ರಬಂಧದ ಹೆಸರು " ಚಿತ್ರದುರ್ಗ ಜಿಲ್ಲೆಯ ಮಾದಾರರ ಜನಪದ ಸಾಹಿತ್ಯ". ಮಾರ್ಗದರ್ಶಕರು-ಡಾ.ಡಿ.ಕೆ.ರಾಜೇಂದ್ರ.
ವೃತ್ತಿ/ಅವಧಿ
[ಬದಲಾಯಿಸಿ]- ಸಂಶೋಧನಾ ಸಹಾಯಕರು, ಮೈಸೂರು ವಿಶ್ವವಿದ್ಯಾನಿಲಯ ಜಾನಪದ ವಿಭಾಗ-೧೯೮೧-೧೯೮೭ರವರೆಗೆ
- ಉಪನಿರ್ದೇಶಕರು- ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ-೧೯೮೭-೨೦೧೦
- ಪ್ರಾಧ್ಯಾಪಕರು ಹಾಗೂ ನಿರ್ದೇಶಕರು ಡಾ.ಬಾಬು ಜಗಜೀವನ ರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣ ಕೇಂದ್ರ-೨೦೧೦-೨೦೧೬
ಪ್ರಕಟಿತ ಕೃತಿಗಳು
[ಬದಲಾಯಿಸಿ]- ಅಡವಿಗುಮಾರ ಮತ್ತು ಇತರ ಕತೆಗಳು
- ದೀಪದ ಕೆಳಗೆ ಕತ್ತಲೆ(ಗಾದೆಗಳ ಸಂಕಲನ)
- ಮಾದಾರ ಸಂಸ್ಕೃತಿ ಮತ್ತು ಸಾಹಿತ್ಯ
- ಗಂಡು ಮೆಟ್ಟಿದ ನಾಡು (ಮಕ್ಕಳಿಗಾಗಿ)
- ನಮ್ಮ ಒಡಪುಗಳು (ಸಾಕ್ಷರರಿಗಾಗಿ)
- ಒಗಟಿನ ಕಥೆಗಳು (ಸಾಕ್ಷರರಿಗಾಗಿ)
ವಿಮರ್ಶಾತ್ಮಕ ಕೃತಿಗಳು
[ಬದಲಾಯಿಸಿ]- ಕವಿ ಕಾವ್ಯ ವಿಚಾರ
- ಜಾನಪದ ಚಾವಡಿ
ಜೀವನ ಚರಿತ್ರೆ
[ಬದಲಾಯಿಸಿ]- ಸಿದ್ದವನಳ್ಳಿ ನಿಜಲಿಂಗಪ್ಪ
- ಡಾ.ಜೀ.ಶಂ.ಪ
ಸಂಪಾದಿತ ಕೃತಿಗಳು
[ಬದಲಾಯಿಸಿ]- ಚಿತ್ರದುರ್ಗ ಸುತ್ತಿನ ಜನಪದ ಕಾವ್ಯಗಳು
- ಜಂಬು ನೇರ್ಲಣ್ಣು ಜಗ್ಗಿ ಬಿದ್ದಾವೆ (ಒಗಟುಗಳ ಸಂಕಲನ)
- ಚಿತ್ರದುರ್ಗ ಜಿಲ್ಲೆಯ ಜನಪದ ಸಾಹಿತ್ಯ
- ಜನಪದ ಪುರಾಣ ಕಾವ್ಯಗಳು
- ಜನಪದ ಸಾಮಾಜಿಕ ಕಥಾನಕಗಳು
- ಜನಪದ ಗಾದೆ ಮತ್ತು ಒಗಟುಗಳು
ಗ್ರಂಥ ಸಂಪಾದನೆ
[ಬದಲಾಯಿಸಿ]- ಭವನ ಭಿಕ್ಷಾಟನೆ
- ಸಿದ್ದೇಶ್ವರ ಪುರಾಣ
- ಹರಿವಿಲಾಸ
- ದೇವರಾಜ ಸಾಂಗತ್ಯ
ಇತರರೊಡನೆ ಸಂಪಾದಿಸಿದ ಕೃತಿಗಳು
[ಬದಲಾಯಿಸಿ]- ಜಾನಪದ ಬೆಡಗು (ಪ್ರೊ.ಸುಧಾಕರ ಸಂಸ್ಮರಣ ಕೃತಿ)
- ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ (ಜಾನಪದ ಸಂಪುಟ)
- ಜಾನಪದ (ಕನ್ನಡ ವಿಷಯ ಕೋಶ)
- ಮಾನವಿಕ ಕರ್ನಾಟಹ ತ್ರೈಮಾಸಿಕ ಪತ್ರಿಕೆ, ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
- ಮರಳಿ ಮನೆಗೆ ಮೈಸೂರು ವಿಶ್ವವಿದ್ಯಾನಿಲಯ
ಪ್ರಧಾನ ಸಂಪಾದಕತ್ವದಲ್ಲಿ ಬಂದ ಕೃತಿಗಳು
[ಬದಲಾಯಿಸಿ]- ನೆನಪು ಸಂಜೀವಿನಿ ಸಂಪುಟ-೧,೨,೩ - ೨೦೧೪
- ಡಾ.ಬಾಬೂ ಜಗಜೀವನರಾಮ್ ಹೋರಾಟದ ಬದುಕು-೨೦೧೪
- ಧೀಮಂತ ರಾಷ್ಟ್ರನಾಯಕ ಬಾಬೂ ಜಗಜೀವನರಾಮ್
- ಜಾತಿ ಪದ್ದತಿಯ ಸವಾಲುಗಳು
ನಿರ್ವಹಿಸಿರುವ ಜವಾಬ್ದಾರಿಗಳು
[ಬದಲಾಯಿಸಿ]ಅಧ್ಯಕ್ಷರಾಗಿ
[ಬದಲಾಯಿಸಿ]- ಅಧ್ಯಯನ ಮಂಡಳಿ (ಬಿ.ಓ.ಎಸ್)-ಮದ್ರಾಸ್ ವಿಶ್ವವಿದ್ಯಾನಿಲಯ ಚೆನ್ನೈ
- ಪರೀಕ್ಷಾ ಮಂಡಳಿ (ಬಿ.ಓ.ಇ) ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
- ಬಾಬೂಜಿ ಅಧ್ಯಯನ ಮಂಡಳಿ -ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
- ಸ್ನಾತಕೋತ್ತರ ಸೈಕ್ಷಣಿಕ ಉದ್ಯೋಗಿಗಳ ಸಂಘ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
ಉಪಾಧ್ಯಕ್ಷರಾಗಿ
[ಬದಲಾಯಿಸಿ]- ಫ್ಯಾಮಿಲಿ ಪ್ಲಾನಿಂಗ್ ಅಸೊಸಿಯೇಷನ್ ಆಫ್ ಇಂಡಿಯಾ ಮೈಸೂರು ಶಾಖೆ
- ಇನೋವೇಟಿವ್, ಮೈಸೂರು
ಕಾರ್ಯಾಧ್ಯಕ್ಷರು
[ಬದಲಾಯಿಸಿ]ದಸರಾ ಜನಪದೋತ್ಸವ ಸಮಿತಿ ೨೦೦೮-೨೦೧೦
ಸಂಘ-ಸಂಸ್ಥೆಗಳ ಸದಸ್ಯತ್ವ
[ಬದಲಾಯಿಸಿ]- ಕನ್ನಡ ಜಾಗೃತಿ ಸಮಿತಿ ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರ, ಕರ್ನಾಟಕ ಸರ್ಕಾರ-೨೦೧೬
- ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು
- ನಗರ ಗ್ರಂಥಾಲಯ, ಮೈಸೂರು
- ಗಾಂಧಿಭವನ ಅಧ್ಯಯನ ಮಂಡಳಿ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
- ವಿದ್ಯಾರ್ಥಿ ಕ್ಷೇಮಪಾಲನಾ/ಪ್ರಾಧ್ಯಾಪಕರ ಕ್ಷೇಮಾಭಿವೃದ್ದಿ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
- ಆಜೀವ ಸದಸ್ಯರು- ಕನ್ನಡ ಸಾಹಿತ್ಯ ಪರಿಷತ್ತು
- ಸಲಹಾ ಸಮಿತಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ
- ಡಾ.ಬಾಬೂ ಜಗಜೀವನರಾಮ್ ಅಧ್ಯಯನ ಪೀಠ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
- ಎಸ್ಸಿ, ಎಸ್ಟಿ ಸ್ಥಾಯಿ ಸಮಿತಿ ವಿಶೇಷ ಘಟಕ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
- ಕಾರ್ಯಕಾರಿ ಸದಸ್ಯ-ಕರ್ನಾಟಕ ದಲಪದ ಪ್ರಾಧಿಕಾರ, ಮೈಸೂರು
- ಕಿರು ಸಂಶೋಧನಾ ಯೋಜನೆಯ ಆಯ್ಕೆ ಸಮಿತಿ, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಗೊಟಗೋಡಿ, ಶಿಗ್ಗಾವಿ ತಾಲ್ಲೂಕು, ಹಾವೇರಿ ಜಿಲ್ಲೆ
- ಕಿರು ಸಂಶೋಧನಾ ಯೋಜನೆಯ ಆಯ್ಕೆ ಸಮಿತಿ, ದಲಿತ ಕ್ರೈಸ್ತರು ಸಾಂಸ್ಕೃತಿಕ ಶೋಧ, ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು
- ಕಲಾನಿಕಾಯ-ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
- ಕಾಲೇಜು ಅಭಿವೃದ್ದಿ ಮಂಡಳಿ ಸಲಹಾ ಸಮಿತಿ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
- ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ- ಬೆಂಗಳೂರು ವಿಶ್ವವಿದ್ಯಾನಿಲಯ
- ತಾತ್ಕಾಲಿಕ ಅಧ್ಯಾಪಕರ ನೇಮಕಾತಿ ಸಮಿತಿ, ತಜ್ಞ ಸದಸ್ಯ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಗೊಟಗೋಡಿ, ಶಿಗ್ಗಾವಿ ತಾಲ್ಲೂಕು, ಹಾವೇರಿ ಜಿಲ್ಲೆ
- ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬೂ ಜಗಜೀವನರಾಮ್ ಜನ್ಮ ದಿನಾಚರಣೆಯ ಸಲಹಾ ಸಮಿತಿ
ಸನ್ಮಾನ/ಪ್ರಶಸ್ತಿ/ಗೌರವಗಳು
[ಬದಲಾಯಿಸಿ]- ಜಾನಪದ ರಕ್ಷಕ ಪ್ರಶಸ್ತಿ-ಶ್ರೀ ಮುರುಘ ರಾಜೇಂದ್ರ ಬೃಹನ್ಮಠ ಶ್ರೀ ಶಿವಮೂರ್ತಿ ಸ್ವಾಮೀಜಿ-ಚಿತ್ರದುರ್ಗ -೧೯೯೭
- ಡಾ.ಅಂಬೇಡ್ಕರ್ ಫೆಲೋಶಿಫ್ ಅವಾರ್ಡ್- ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ, ನವದೆಹಲಿ-೧೯೯೯
- ಕುವೆಂಪು ಸಾಹಿತ್ಯ ರತ್ನ ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಕಲಾ ನಿಕೇತನ- (ರಿ)ಬೆಂಗಳೂರು-೨೦೧೪
- ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು- ಹೋಬಳಿ ಮಟ್ಟ, ತುರುವನೂರು, ಚಿತ್ರದುರ್ಗ ಜಿಲ್ಲೆ-೨೦೧೭
ಉಲ್ಲೇಖ
[ಬದಲಾಯಿಸಿ]- https://kn.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಮಾನವಿಕ_ಕರ್ಣಾಟಕ
- https://vijaykarnataka.indiatimes.com/district/mysuru/book-release-on-april-20/articleshow/46867847.cms
- https://www.prajavani.net/amp?params=LzIwMTQvMDUvMjkvMjMzNTg5
- https://karnatakasahithyaacademy.org/?page_id=1998 Archived 2019-05-22 ವೇಬ್ಯಾಕ್ ಮೆಷಿನ್ ನಲ್ಲಿ.
- m.varthabharati.in/article/2017_12_05/107214