ದೇವಾಂಗ ಪುರಾಣ
ದೇವಾಂಗ ಮೂಲ ಪುರುಷ - ಶ್ರೀ ದೇವಲ ಮಹರ್ಷಿ ದೇವರ ದಾಸಿಮಯ್ಯ
[ಬದಲಾಯಿಸಿ]"ದೇವಾಂಗ: ಪ್ರಥಮ: ಸೃಷ್ಟಿ : ಶಂಕರಸ್ಯ ಮಹಾತ್ಮನ; ವಿದ್ಯಾಧರೋ ದ್ವಾಪರದೌ; ಮದ್ಯೇ ಬೂತ್ ಪುಷ್ಪದಂತಕ; ಅಂತ್ಯೆವತಾರೋ, ಬೇತಾಳ, ಕತಾವರರುಚಿ ಸ್ತತಾ; ಚಿತ್ರಯೋಗೀ, ದೇವಶಾಲಿ, ದೇವದಾಸೋಭಾವಂ ಸ್ತುತಂ:"
ತ್ರೈಲೋಕ್ಯದವರ ಮಾನ ರಕ್ಷಣೆಗೆ ವಸ್ತ್ರವಿಲ್ಲದಿರಲು, ಮತ್ತು ಜ್ಞಾನ ದೀಕ್ಷೆಗೆ, ಸೂತ್ರವಿಲ್ಲದಿರಲು, ಸಕಲ ಅನನ್ಯ ಪ್ರಾರ್ಥನೆಯ ಮೇರೆಗೆ, ಶಿವನ ಚಿಚ್ಚಕ್ತಿಯಿಂದ ಅವತರಿಸಿ, ಪ್ರಪಥಮವಾಗಿ ವಸ್ತ್ರ - ಸೂತ್ರ ನಿರ್ಮಿಸಿ ಕೊಟ್ಟು ಕರುಣಿಸಿದ ಶ್ರೀ ದೇವಲ ( ದೇವಾಂಗ ) ಮಹರ್ಷಿಗಳ ವಂಶಜರೇ ದೇವಾಂಗರು.
ಮೂಲದ ಪುರಾಣ: ದೇವಾಂಗ ಬ್ರಾಹ್ಮಣರ ಮೂಲವನ್ನು ಹೊಂದಿವೆ.ಅವುಗಳಲ್ಲಿ ಬಹುತೇಕ ರೇಷ್ಮೆ ಮತ್ತು ಹತ್ತಿ ಬಟ್ಟೆ ನೇಕಾರರು.ವಿಜಯನಗರ ಕಾಲದಲ್ಲಿ ಯೋಧರು ಇದ್ದರು. ತಮ್ಮ ಸ್ಥಳೀಯ ರಾಜ್ಯದ ಇಂದಿಗೂ ಅವರು ಪ್ರಮುಖ ಸಮುದಾಯ ರೂಪಿಸಲು ಅಲ್ಲಿ ಉಜ್ಜಯಿನಿಯ ಸಾಮ್ರಾಜ್ಯವಾಗಿತ್ತು. ಅವರ ಮುಖ್ಯ ದೇವತೆ ಚೌಡೇಶ್ವರಿ.
ದೇವಾಂಗ ಪುರಾಣ: ದೇವಾಂಗರು, ದೇವ ಬ್ರಾಹ್ಮಣರಾಗಿದ್ದಾರೆ. ದೇವಾಂಗ ದೇವಲ ಮಹರ್ಷಿ ಎಂಬ ಋಷಿ ತಮ್ಮ ನೇಯ್ಗೆ ಸಂಪ್ರದಾಯದ ಉಗಮಸ್ಥಾನವೆಂದು ದೇವಲ ಮಹರ್ಷಿಯೇ ನೇಯ್ಗೆಯ ಮೊದಲ ವ್ಯಕ್ತಿ. ಪರಶಿವನ ಹಣೆಗಣ್ಣಿನಿಂದ ಮಹರ್ಷಿ ಅವತರಿಸಿದರೆಂಬ ಪ್ರತೀತಿಯೂ ಇದ್ದ ಕಾರಣ 'ದೇವಾಂಗ' (ದೇವರ ಒಂದು ಅಂಗ) ಎಂದು ಕರೆಯಲ್ಪಡುತ್ತಾರೆ.ದೇವಾಂಗನು ವಿದ್ಯಾಧರ ,ಪುಷ್ಪದಂತ ಬೇತಾಳ, ವರರುಚಿ ,ಚಿತ್ರಯೋಗಿ, ದೇವಶಾಲಿ, ಕೊನೆಯ ಅವತಾರವೇ ದೇವರ ದಾಸಿಮಯ್ಯ. ಏಳು ಅವತಾರ ಪುರುಷರಿಗೆ ಮೂಲ ಪುರುಷ "ದೇವಾಂಗ"ನಾದನು. ಇಂದಿನ ದೇವಾಂಗ ಜನಾಂಗದ ಕುಲ ಗುರುವಾದರು ದೇವರ ದಾಸಿಮಯ್ಯ. ಚೌಡೇಶ್ವರಿ ತಾಯಿ ಈ ಸಮೂಹದ ಕುಲ ದೇವತೆ. ಈ ಮಹಾತ್ಮರು ಗಾಯತ್ರೀ ಮಂತ್ರದ ಉಪಾಸಕರಾಗಿ, ಅದರ ಮಹಿಮೆಯನ್ನು ಸಾರಿದರು. ಪ್ರತಿಯೊಬ್ಬ ಮಾನವನು, ಉತ್ತಮ ಸಂಸ್ಕೃತಿ, ಧರ್ಮ, ಆಚಾರವಾಗಿ ನಡೆಸಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ದಾಸಿಮಯ್ಯನವರು ಪ್ರಪಂಚಕ್ಕೆ ತಿಳಿಸಿ ಹೇಳಿದರು.
ಶ್ರೀ ಗಾಯತ್ರಿ ಪೀಠ :- ಸಮಸ್ತ ದೇವಾಂಗ ಸಮಾಜದ ವಿವಿಧ ಪಂಗಡಗಳಿಗೆಲ್ಲ " ಶ್ರೀ ಗಾಯತ್ರೀ ಪೀಠ "ವೆಂಬ ಹೆಸರಿನಲ್ಲಿ ಸ್ಥಾಪನೆಯಾಗಿರುವುದು ವಿಶ್ವದ ದೇವಾಂಗ ಸಮಾಜದ ಜನಾಂಗಕ್ಕೆ ಇದು ಹೆಮ್ಮೆಯ ಸಂಗತಿ. ಗಾಯತ್ರೀಯ (ಯಜ್ನೋಪವೀತ) ಸೃಷ್ಟಿಯ ಮೂಲ ಕಾರಣ ಗಾಯತ್ರೀಗೆ ತ್ರಿಪಾದಗಳನ್ನು (ಯಜ್ನೋಪವೀತದ ಮೂರು ಎಳೆಗಳು) ತಂತು ಸೂತ್ರಗಳನ್ನು ನೀಡಿ ವಿಶ್ವದಲ್ಲಿ ಸಂಸ್ಕೃತಿ ಸಂಸ್ಕಾರದ ವಿಧಿ ವಿಧಾನಗಳನ್ನು ಉದ್ಧರಿಸಿದವನು ದೇವಾಂಗನು. ದೇವಾಂಗ ಸಮಾಜದ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾ ಸಂಸ್ಥಾನ ಇತಿಹಾಸದ ಪ್ರಸಿದ್ಧ ದೇವಿಯಾಗಿ ಪೂಜಿಸಿ, ಶ್ರೀ ಗಾಯತ್ರೀ ಮಂತ್ರವನ್ನು ಜಪಿಸಿ ಕೊಂಡು ಬಂದಿರುವ ಜಗತ್ತಿನ ಮಹಾನ್ ಪೀಠ ಹಾಗೂ ಧಾರ್ಮಿಕ ಶಕ್ತಿ ಕೇಂದ್ರ, ಶ್ರೀ ಗಾಯತ್ರಿ ಪೀಠ ವಾಗಿದೆ.