ವಿಷಯಕ್ಕೆ ಹೋಗು

ಹಾನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಾನಿ ಎಂದರೆ ಹಲವುವೇಳೆ ಒಂದು ಭೌತಿಕ ವಸ್ತುವಿನಲ್ಲಾಗುವ ಯಾವುದೇ ಬದಲಾವಣೆ, ಮತ್ತು ಇದು ಅದರ ಮೊದಲಿನ ಸ್ಥಿತಿಗಿಂತ ಕೀಳಾಗುವಂತೆ ಮಾಡುತ್ತದೆ. ಸ್ಥೂಲವಾಗಿ ಇದನ್ನು "ಪ್ರಸಕ್ತ ಅಥವಾ ಭವಿಷ್ಯದ ಕಾರ್ಯನಿರ್ವಹಣೆಯನ್ನು ಬಾಧಿಸುವ ವ್ಯವಸ್ಥೆಯೊಳಗೆ ಪರಿಚಯಿಸಲ್ಪಟ್ಟ ಬದಲಾವಣೆಗಳು" ಎಂದು ವ್ಯಾಖ್ಯಾನಿಸಬಹುದು.[] ಹಾನಿಯು ಖಡಾಖಂಡಿತವಾಗಿ ವ್ಯವಸ್ಥೆಯ ಕಾರ್ಯಕ್ಷಮತೆಯ ಸಂಪೂರ್ಣ ನಷ್ಟವನ್ನು ಸೂಚಿಸುವುದಿಲ್ಲ, ಬದಲಾಗಿ ಆ ವ್ಯವಸ್ಥೆಯು ಅದರ ಅತ್ಯಂತ ಅನುಕೂಲಕರ ರೀತಿಯಲ್ಲಿ ಕಾರ್ಯನಿರ್ವಹಿಸುತಿಲ್ಲ ಎಂಬುದನ್ನು ಸೂಚಿಸುತ್ತದೆ. ಭೌತಿಕ ವಸ್ತುಗಳ ಹಾನಿಯೆಂದರೆ "ಅವು ಮುರಿಯುವುದಕ್ಕೆ ಕಾರಣವಾಗುವ ಕ್ರಮವಾಗಿ ಹೆಚ್ಚಾಗುವ ಭೌತಿಕ ಪ್ರಕ್ರಿಯೆ",[] ಮತ್ತು ಗೋಚರವಾಗದಿದ್ದರೂ, ರಚನೆಯನ್ನು ದುರ್ಬಲವಾಗಿಸುವ ಯಾಂತ್ರಿಕ ಒತ್ತಡವನ್ನು ಒಳಗೊಳ್ಳುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Farrar, C.R., Sohn, H., Park, G., "Converting Large Sensor Array Data into Structural Health Information", in Andrew Smyth, Raimondo Betti, The 4th International Workshop on Structural Control (2005), p. 67.
  2. Jean Lemaitre, A Course on Damage Mechanics (2013).


"https://kn.wikipedia.org/w/index.php?title=ಹಾನಿ&oldid=915101" ಇಂದ ಪಡೆಯಲ್ಪಟ್ಟಿದೆ