೨೦೦೮ರ ಬೆಂಗಳೂರು ಸರಣಿ ಸ್ಫೋಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೨೦೦೮ರ ಜುಲೈ ೨೫ ರಂದು ಕರ್ನಾಟಕದ ರಾಜಧಾನಿ ಬೆಂಗಳೂರಿನ ಒಂಭತ್ತು ವಿವಿಧ ಸ್ಥಳಗಳಲ್ಲಿ ಒಂದೇ ದಿನ ಭಯೋತ್ಪಾದಕರು ಬಾಂಬ್ ಗಳನ್ನೂ ಸ್ಫೋಟಮಾಡಿದರು. ಇದರಿಂದಾಗಿ ಒಬ್ಬರು ಅಸುನೀಗಿ ಸುಮಾರು ಇಪ್ಪತ್ತು ಜನರು ಗಾಯಾಳುಗಳಾದರು. ಬೆಂಗಳೂರು ನಗರ ಪೋಲೀಸರ ಪ್ರಕಾರ ಕಡಿಮೆ ತೀಕ್ಷ್ಣತೆ ಇರುವ ಬಾಂಬ್ ಗಳನ್ನು ಟೈಮರ್ ಗಳನ್ನು ಬಳಸಿ ಸ್ಫೋಟಿಸಲಾಗಿದೆ. ಅದೇ ವರ್ಷದ ಮೇ ೨೮ ರಂದು ರಾಜಸ್ಥಾನಜೈಪುರದಲ್ಲಿ ಸರಣಿ ಬಾಂಬ್ಗಳನ್ನು ಸ್ಫೋಟಿಸಿ ಜನಸಾಮಾನ್ಯರು ಆತಂಕಗೊಳ್ಳುವಂತ ಪರಿಸ್ಥಿತಿ ಉಂಟು ಮಾಡಿದ್ದ ಆತಂಕವಾದಿಗಳು ಅದರ ಮುಂದುವರೆದ ಭಾಗವೋ ಎಂಬಂತೆ ಬೆಂಗಳೂರಿನಲ್ಲಿ ಸ್ಫೋಟ ನಡೆಸಿದ್ದರು.

'ದಿ ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆ ತನ್ನ ವರದಿಯಲ್ಲಿ ಈ ಘಟನೆಗೆ ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ ಅಥವಾ ಲಷ್ಕರ್-ಎ-ತೋಯಿಬಾ ಕಾರಣವಾಗಿರುವ ಬಲವಾದ ಅನಿಸಿಕೆಗಳನ್ನು ವ್ಯಕ್ತಪಡಿಸಿತು. ಭಾರತದ ಇಂಟೆಲಿಜೆನ್ಸ್ ಬ್ಯುರೋ ಈ ಸಂಘಟನೆಗಳ ಕೈವಾಡವನ್ನು ತಿರಸ್ಕರಿಸಲಿಲ್ಲ, ಆದರೆ ಪೊಲೀಸ್ ಪಡೆ ತಕ್ಷಣವೇ ಘಟನೆಗೆ ಯಾರನ್ನು ಹೊಣೆ ಮಾಡಲು ಸಾಧ್ಯವಿಲ್ಲವೆಂದು ಹಿಂದೆಗೆಯಿತು. ಬೆಂಗಳೂರಿನ ಸರಣಿ ಸ್ಫೋಟ ನಡೆದ ಮರುದಿನವೇ ಅಹಮದಾಬಾದಿನಲ್ಲೂ ಅಂತಹುದೇ ಸ್ಫೋಟಗಳು ನಡೆದಿದ್ದವು.

ಬಾಂಬ್ ಸ್ಫೋಟ[ಬದಲಾಯಿಸಿ]

ಜುಲೈ ೨೫ರ ಮಧ್ಯಾಹ್ನ ೧.೩೦ರ ಸುಮಾರಿಗೆ ಮೂರು ಬಾಂಬ್ ಗಳು ಸ್ಫೋಟಗೊಂಡವೆಂದು ಮೊದಮೊದಲು ವರದಿಯಾಯಿತಾದರೂ ನಂತರದ ವರದಿಗಳು ಅವುಗಳನ್ನು ಕಡಿಮೆ ತೀಕ್ಷ್ಣತೆ ಹೊಂದಿದ್ದ ಬಾಂಬ್ ಗಳು ಎಂದು ಖಾತ್ರಿಪಡಿಸಿದವು. ಮಧ್ಯಾಹ್ನ ೧.೩೦ಕ್ಕೆ ಮೈಸೂರು ರಸ್ತೆಯ ನಾಯಂಡನಹಳ್ಳಿಯಲ್ಲಿ ಒಂದು ಬಾಂಬ್ ಸ್ಫೋಟವಾಯಿತು. ಇಪ್ಪತ್ತು ನಿಮಿಷಗಳ ತರುವಾಯು ಹೊಸೂರು ರಸ್ತೆಯ ಮಡಿವಾಳದಲ್ಲಿ ಎರಡು ಬಾಂಬ್ಗಳು ಸ್ಫೋಟಗೊಂಡವು ಇಪ್ಪತ್ತು ನಿಮಿಷದ ನಂತರ ಅಂದರೆ ೨.೧೦ರ ಸುಮಾರಿಗೆ ಆಡುಗೋಡಿಯಲ್ಲಿ ಬಾಂಬ್ ಸ್ಫೋಟವಾಯಿತು. ಇನ್ನು ಮೂರು ಬಾಂಬ್ ಗಳು ಮಾಲಿ ಆಸ್ಪತ್ರೆ, ಲಾಂಗ್ ಫೋರ್ಡ್ ರಸ್ತೆ ಹಾಗು ರಿಚ್ ಮಂಡ್ ವೃತ್ತದಲ್ಲಿ ಸ್ಫೋಟಗೊಂಡವೆಂದು ವರದಿಯಾಯಿತು. ಮಡಿವಾಳದಲ್ಲಿ ಸ್ಫೋಟಗೊಂಡ ಬಾಂಬ್ ಜನನಿಬಿಡ ಶಾಪಿಂಗ್ ಮಾಲ್ ಫೋರಮ್ ಮಾಲ್ ಸಮೀಪದಲ್ಲಿ ಸ್ಫೋಟಗೊಂಡಿದ್ದು ಆತಂಕಕ್ಕೆ ಕಾರಣವಾಗಿತ್ತು.[೧]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ""ಬೆಂಗಳೂರು ಸರಣಿ ಸ್ಫೋಟ ಎಲ್ಲಿ, ಯಾವಾಗ?"".

ಆಕರಗಳು[ಬದಲಾಯಿಸಿ]