ಹುರುಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹುರುಳಿ ಸಸ್ಯವು ಡೆಲಿಖೊಸ್‍ ಬೈಫ್ಲೊರಸ್ ಎಂಬ ಪ್ರಭೇದದಿಂದ ಕರೆಯಲ್ಪಡುತ್ತದೆ. ಈ ಸಸ್ಯ ಲೆಗ್ಯುಮಿನೆಸೀ ಅಥವಾ ಫ್ಯಾಬೇಸೀ ಕುಟುಂಬದ ಪ್ಯಾಪಿಲ್ಯೊನಿಯೆಸಿಯೇ ಉಪಕುಟುಂಬಕ್ಕೆ ಸೇರುತ್ತದೆ. ಇಂಗ್ಲಿಷಿನಲ್ಲಿ ಹಾರ್ಸ್‍ಗ್ರಾಮ್, ಹಿಂದಿಯಲ್ಲಿ ಕುಲ್‍ತಿ ಮತ್ತು ಕನ್ನಡದಲ್ಲಿ ಹುರುಳಿ ಎಂದು ಕರೆಯುತ್ತಾರೆ. ಇದು ತೆವಳಿಕೊಂಡು ಹಬ್ಬುವ ಒಂದು ಬಳ್ಳಿ. ಇದನ್ನು ಹೆಚ್ಚಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಬೆಳೆಯುತ್ತಾರೆ. ಬೀಜಗಳನ್ನು ಬೇಯಿಸಿ ಅಥವಾ ಹುರಿದು ತಿನ್ನಲಾಗುತ್ತದೆ. ಇದರ ಹಸುರು ಸೊಪ್ಪನ್ನು ಪ್ರಾಣಿಗಳಿಗೆ ಆಹಾರವಾಗಿ ಕೊಡಲಾಗುತ್ತದೆ; ಅಥವಾ ಹಸಿರು ಗೊಬ್ಬರವಾಗಿ ಉಪಯುಕ್ತವಾಗುತ್ತದೆ. ಹಳ್ಳಿಮುಕ್ಕನಿಗೆ ಹಳ್ಳಿಕಜ್ಜಾಯ ಎಂಬ ಗಾದೆಮಾತು ಕನ್ನಡದಲ್ಲಿದ್ದು ಈ ಧಾನ್ಯದಿಂದ ಕಜ್ಜಾಯ ತಯಾರಿಸುತ್ತಿದ್ದರೆಂದು ತಿಳಿದುಬರುತ್ತದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  • Kadam SS, Salunkhe DK (1985). "Nutritional composition, processing, and utilization of horse gram and moth bean". Crit Rev Food Sci Nutr. 22 (1): 1–26. doi:10.1080/10408398509527416. PMID 3899515.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಹುರುಳಿ&oldid=913013" ಇಂದ ಪಡೆಯಲ್ಪಟ್ಟಿದೆ