ಸದಸ್ಯ:Abhidha sha/ನನ್ನ ಪ್ರಯೋಗಪುಟ
ಹೈಪೊಕ್ಸಿಯ ಎಂದರೆ ನಮ್ಮ ದೇಹದ ಅಥವ ದೇಹದ ಪ್ರದೆಶದಲ್ಲಿ ಸಾಕಷ್ಟು ಆಮ್ಲಜನಕದ ಕೊರತೆಯಿಂದಾಗಿ ಉಂಟಾಗುವ ಕಾಯಿಲೆಯಾಗಿದೆ. ಹೈಪೊಕ್ಸಿಯವನ್ನು ಮೊದಲು ಅನೋಕ್ಸಿಯ ಎಂದು ಕರೆಯುತ್ತಿದ್ದರು.[೧] ಹೈಪೊಕ್ಸಿಯವು,ಹೈಪೊಕ್ಸಿಮಿಯ ಮತ್ತು ಅನೊಕ್ಸಿಮಿಯದಿಂದ ಭಿನ್ನವಾಗಿದೆ,ಆ ಹೈಪೊಕ್ಸಿಯವು ಆಮ್ಲಜನಕದ ಪುರೈಕೆಗೆ ಅಸಮಾಪಾ೯ಕವದ ಅವಸ್ಥೆಯನ್ನು ಸುಚಿಸುತ್ತದೆ,ಅದರೆ ಹೈಪೊಕ್ಸಿಮಿಯ ಮತ್ತು ಅನೋಕ್ಸಿಮಿಯವು ನಿದಿ೯ಷ್ಟವಾಗಿ ಕಡಿಮೆ ಅಥವ ಶುನ್ಯ ಅಪದಮನಿಯ ಆಮ್ಲಜನಕ ಸರಬರಾಜನ್ನು ಹೊಂದಿರುವುದಾಗಿದೆ. ಆಮ್ಲಜನಕದ ಪುರೈಕೆಯು ಸಂಪುಣ೯ ಅಭವವಿರುವ ಹೈಪೊಕ್ಸಿಯವನ್ನು ಅನೊಕ್ಸಿಯ ಎಂದು ಕರೆಯುತ್ತರೆ.
ವಗೀ೯ಕರಣ
[ಬದಲಾಯಿಸಿ]- ಹೈಪೊಕ್ಸಿಯದ ಆಕ್ರಮನವನ್ನು ಅವಲಂಬಿಸಿ,ಅದನ್ನು ವಿಂಗಡಿಸಲಾಗಿದೆ
- ತಿವ೯ವಾದ ಹೈಪೊಕ್ಸಿಯ-ಇದು ಹಠಾತ್ ಆಕ್ರಮನ ಮತ್ತು ಕಡಿಮೆ ಅವಧಿಯನ್ನು ಹೊಂದಿದೆ.
- ದಿಘ೯ಕಾಲದ ಹೈಪೊಕ್ಸಿಯ-ಇದು ಕ್ರಮೇಣ ಆಕ್ರಮಣ ಮತ್ತು ದಿಘ೯ ಅವಧಿಯನ್ನು ಹೊಂದಿದೆ.
- ಹೈಪೊಕ್ಸಿಯವು ಕಾರಣವನ್ನು ಅವಲಂಭಿಸಿ ಈಗೆ ಉಪವಿಭಾಗವಾಗಿದೆ
ಹೈಪೊಕ್ಸಿಕ್ ಹೈಪೊಕ್ಸಿಯ-ಇದು ಪ್ರೆರಿತ ಗಾಳಿ ಅಥವ ಅಪದಮನಿಯ ರಕ್ತದ ಆಮ್ಲಜನಕದ ಒತ್ತಡದಲ್ಲಿ ಕಡಿಮೆಯಾಗುವ ಒಂದು ರಿತಿಯ ಹೈಪೊಕ್ಸಿಯವಾಗಿದೆ.
ಹೈಪೊಕ್ಸಿಕ್ ಹೈಪೊಕ್ಸಿಯದ ಯಾಂತ್ರಿಕ ವ್ಯವಸ್ಥೆ
- ಪ್ರೆರಿತ ಗಾಳಿ ಅಥವ ಅಪದಮನಿಯ ರಕ್ತದ ಆಮ್ಲಜನಕದ ಒತ್ತಡದಲ್ಲಿ ಕಡಿಮೆಯಾಗುವುದು.
- ಹಿಮೋಗ್ಲೋಬಿನ್ನ ಆಮ್ಲಜನಕದ ಸಾಗಿಸುವ ಸಾಮರ್ಥ್ಯ ಸಾಮಾನ್ಯವಾಗಿದೆ.
- ಅಂಗಾಂಶಕ್ಕೆ ರಕ್ತ ಪೂರೈಕೆ ಸಾಮಾನ್ಯವಾಗಿದೆ.
- ಅಂಗಾಂಶದಿಂದ ಆಮ್ಲಜನಕವನ್ನು ಬಳಸುವುದು ಸಾಮಾನ್ಯವಾಗಿದೆ.
ರಕ್ತಹೀನತೆ<refhttps://www.britannica.com/science/anemic-hypoxia ></ref>-ಇದು ಹಿಮೋಗ್ಲೋಬಿನ್ನ ಆಮ್ಲಜನಕದ ಸಾಗಿಸುವ ಸಾಮರ್ಥ್ಯ ಕಡಿಮೆಯಾಗುವ ಕಾರಣದಿಂದಾಗಿ ಉಂಟಾಗುವ ಹೈಪೊಕ್ಸಿಯವಾಗಿದೆ.
ರಕ್ತಹೀನತೆಯ ಯಾಂತ್ರಿಕ ವ್ಯವಸ್ಥೆ
- ಹಿಮೋಗ್ಲೋಬಿನ್ನ[೩] ಆಮ್ಲಜನಕದ ಸಾಗಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ.
- ಪ್ರೆರಿತ ಗಾಳಿ ಅಥವ ಅಪದಮನಿಯ ರಕ್ತದ ಆಮ್ಲಜನಕದ ಒತ್ತಡ ಸಾಮಾನ್ಯವಾಗಿದೆ.
- ಅಂಗಾಂಶಕ್ಕೆ ರಕ್ತ ಪೂರೈಕೆ ಸಾಮಾನ್ಯವಾಗಿದೆ.
- ಅಂಗಾಂಶದಿಂದ ಆಮ್ಲಜನಕವನ್ನು ಬಳಸುವುದು ಸಾಮಾನ್ಯವಾಗಿದೆ.
ಸ್ತಿರವಾದ ಹೈಪೊಕ್ಸಿಯ-ಈ ರೀತಿಯ ಹೈಪೊಕ್ಸಿಯಾದಲ್ಲಿ ಅಂಗಾಂಶಗಳಿಗೆ ಆಮ್ಲಜನಕಯುಕ್ತ ರಕ್ತದ ಕಡಿಮೆ ಪೂರೈಕೆ ಇರುತ್ತದೆ.
ಸ್ತಿರವಾದ ಹೈಪೊಕ್ಸಿಯದ ಯಾಂತ್ರಿಕ ವ್ಯವಸ್ಥೆ
- ಅಂಗಾಂಶಕ್ಕೆ ಆಮ್ಲಜನಕಯುಕ್ತ ರಕ್ತ ಕಡಿಮೆಯಾಗುತ್ತದೆ.
- ಪ್ರೆರಿತ ಗಾಳಿ ಅಥವ ಅಪದಮನಿಯ ರಕ್ತದ ಆಮ್ಲಜನಕದ ಒತ್ತಡ ಸಾಮಾನ್ಯವಾಗಿದೆ.
- ಹಿಮೋಗ್ಲೋಬಿನ್ನ ಆಮ್ಲಜನಕದ ಸಾಗಿಸುವ ಸಾಮರ್ಥ್ಯ ಸಾಮಾನ್ಯವಾಗಿದೆ.
- ಅಂಗಾಂಶದಿಂದ ಆಮ್ಲಜನಕವನ್ನು ಬಳಸುವುದು ಸಾಮಾನ್ಯವಾಗಿದೆ.
ಹಿಸ್ಟೋಟೊಕ್ಸಿಕ್ ಹೈಪೊಕ್ಸಿಯ-ಈ ವಿಧಧ ಹೈಪೊಕ್ಸಿಯದಲ್ಲಿ ಅಂಗಂಶದಿಂದ ಆಮ್ಲಜನಕದ ಬಳಕೆ ಕಡಿಮೆಯಾಗುವುದು.
ಹಿಸ್ಟೋಟೊಕ್ಸಿಕ್ ಹೈಪೊಕ್ಸಿಯದ ಯಾಂತ್ರಿಕ ವ್ಯವಸ್ಥೆ
- ಅಂಗಾಂಶದಿಂದ ಆಮ್ಲಜನಕದ ಬಳಕೆಯಲ್ಲಿ ಕಡಿಮೆಯಾಗಿದೆ.
- ಪ್ರೆರಿತ ಗಾಳಿ ಅಥವ ಅಪದಮನಿಯ ರಕ್ತದ ಆಮ್ಲಜನಕದ ಒತ್ತಡ ಸಾಮಾನ್ಯವಾಗಿದೆ.
- ಹಿಮೋಗ್ಲೋಬಿನ್ನ ಆಮ್ಲಜನಕದ ಸಾಗಿಸುವ ಸಾಮರ್ಥ್ಯ ಸಾಮಾನ್ಯವಾಗಿದೆ.
- ಅಂಗಾಂಶಕ್ಕೆ ರಕ್ತ ಪೂರೈಕೆ ಸಾಮಾನ್ಯವಾಗಿದೆ.
ಹೈಪೊಕ್ಸಿಯದ ಚಿಕಿತ್ಸೆ
- ಹೈಪೋಕ್ಸಿಕ್ ಹೈಪೊಕ್ಸಿಯಾದಲ್ಲಿ ಆಮ್ಲಜನಕ ಚಿಕಿತ್ಸೆ[೪] 100% ಪರಿಣಾಮಕಾರಿಯಾಗಿದೆ.
- ಆಮ್ಲೀಯ ಹೈಪೋಕ್ಸಿಯಾದಲ್ಲಿ ಆಮ್ಲಜನಕ ಚಿಕಿತ್ಸೆ 70% ಪರಿಣಾಮಕಾರಿಯಾಗಿದೆ.
- ಸ್ತಿರವಾದ ಹೈಪೋಕ್ಸಿಯಾದಲ್ಲಿ ಆಮ್ಲಜನಕ ಚಿಕಿತ್ಸೆ 50% ಪರಿಣಾಮಕಾರಿಯಾಗಿದೆ.
- ಆಮ್ಲಜನಕ ಚಿಕಿತ್ಸೆಯು ಹಿಸ್ಟೊಟಾಕ್ಸಿಕ್ ಹೈಪೋಕ್ಸಿಯಾ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗುವುದಿಲ್ಲ.