ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಸದಸ್ಯ:1840365varshithN/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ




ಮುನ್ನುಡಿ

[ಬದಲಾಯಿಸಿ]

ಸಾಧನೆ" ಈ ಪದಕ್ಕೆ ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ಅರ್ಥ, ಕೆಲವೊಬ್ಬರು ಹಣ-ಆಸ್ತಿ-ಅಂತಸ್ತಿನಿಂದ ಸಾಧನೆಯನ್ನು ಅಳೆಯುವವರು, ಹಲವರು ಸಾಮಾಜಿಕ ಸ್ಥಾನಮಾನದಿಂದ ಮತ್ತಷ್ಟು ಜನ ಛಲ-ಬಲ-ಹಂಬಲದಿಂದ ಸಾಧಿಸಿದ ಮಹತ್ಕಾರ್ಯಗಳನ್ನು ಸಾಧನೆ ಎನ್ನುವವರು. ಆದರೆ ನನ್ನ ಜೀವನದಲ್ಲಿ ನಾನು ನನ್ನ ಗುರು ಹಿರಿಯರಿಂದ ಕಲಿತ ದೇನೆಂದರೆ ಈ ಎಲ್ಲ ಸಾಧನೆಗಳು ಒಂದು ಬದಿಯಲ್ಲಿಟ್ಟು ನಾವು ನಮ್ಮ ವ್ಯಕ್ತಿತ್ವವನ್ನು ಒಂದು ಒಳ್ಳೆಯ ರೀತಿಯಲ್ಲಿ ನಿರ್ಮಿಸಿ ನಾವು ನಮ್ಮ ಸಮಾಜಕ್ಕೆ ಏನಾದರೊಂದು ಕೊಡುಗೆಯನ್ನು ನೀಡಿ ಹೋಗಬೇಕು ನಾವು ಸಮಾಜದಿಂದ ಏನನ್ನು ಪಡೆದಿದ್ದೆವು ಅದಕ್ಕಿನ ಹೆಚ್ಚಿನದ್ದು ನಾವು ನಮ್ಮ ಸಮಾಜಕ್ಕೆ ಹಿಂದಿರುಗಿಸಿ ಹೋಗಬೇಕು. ನಾವು ನಾಲ್ಕಾರು ಜನರ ಜೀವನದಲ್ಲಿ ಉಪಯೋಗವಾಗಿ ಹಾಗೂ ನಮ್ಮ ಸುತ್ತಮುತ್ತಲಿನ ಜನರನ್ನು ಸಂತೋಷದಿಂದಿರಲು ಕಾರಣರಾಗಿ ಬಾಳಿ ಹೋಗಬೇಕು.ಹಾಗೆಂದು ಸಾಧನೆಯನ್ನು ನಿಲ್ಲಿಸುವುದಲ್ಲ, ಆದರೆ ನಮ್ಮ ಜೀವನದ ಪರಮೋಚ್ಚ ಗುರಿ ಆ ಸಾಧನೆ ಆಗಿರಬಾರದು ಬದಲಾಗಿ ಜನರಿಗೆ ಪ್ರೀತಿ ಸ್ನೇಹವನ್ನು ಹಂಚಿ ನಮ್ಮ ಜೀವನದ ಅಮಲು ಕ್ಷಣವನ್ನು ಆನಂದದಿಂದ ಕಳೆಯಬೇಕು.

ಬಾಲ್ಯಾ ಹಾಗು ಕುಟುಂಬ

[ಬದಲಾಯಿಸಿ]

ನನ್ನ ಹೆಸರು ವಷಿ೯ತ್. ನನ್ನ ತಂದೆಯ ಹೆಸರು ನಿರಂಜನ್ ರಾವ್, ಮೂಲತಹ ಬೆಂಗಳೂರಿನವರು ಸಿ ಕೆ ಬಿರ್ಲಾ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ, ತಾಯಿ ವಿಧ್ಯಾವಾತಿ, ಕಾಲೇಜಿನಲ್ಲಿ ಲೆಕ್ಚರರ್ ಆಗಿ ಕಾರ್ಯ ನಿರ್ವಹಿಸುತ್ತಾರೆ.ನನಗೊಬ್ಬಳು ಮುದ್ದಾದ ತಂಗಿ ಇದ್ದಾಳೆ ಅವಳ ಹೆಸರು ಗುನ್ಜನ್. ನನಗೆ ಚಿಕ್ಕಂದಿನಿಂದಲೂ ಯಾವುದೇ ರೀತಿಯ ಕಷ್ಟಗಳ ಅರಿವಾಗದ ಹಾಗು ಯಾವುದೆ ತರಹದ ಕೊರತೆಗಳ ಅನುಭವವಾಗಲಿ ಇರಲಿಲ್ಲ. ನಾನು ಹತ್ತನೇ ತರಗತಿಯಲ್ಲಿರುವಾಗ, ಅಂತಿಮ ಪರೀಕ್ಷೆಯ ಸಮಯ ಹತ್ತಿರ ಬರುತ್ತಿದ್ದಂತೆ ನನ್ನ ತಾಯಿಯು ಟಿಬಿ ಕಾಯಿಲೆಯಿಂದಾಗಿ ಹಾಸಿಗೆ ಹಿಡಿದರು. ಆ ಸಮಯದಲ್ಲಿ ನನ್ನ ಗೆಳೆಯನ ತಾಯಿ ನೇರವಾಗಿ ಬಂದು ನನ್ನ ಓದಿಗೆ ಅನುಕೂಲ ಮಾಡಿಕೊಟ್ಟರು.ಅವರ ಮನೆಯಲ್ಲಿ ಇಟ್ಟುಕೊಂಡು ಅವರ ಮಗನಂತೆ ನನ್ನನ್ನು ಓದಲು ಪ್ರೋತ್ಸಾಹಿಸಿದರು. ಈ ರೀತಿ ಯಾವುದೇ ಸ್ವಾರ್ಥವಿಲ್ಲದೇ ಸಹಾಯ ಮಾಡುವುದನ್ನು ಕಣ್ಣಾರೆ ಕಂಡು ಬೆರಗಾದೆ. ಈ ರೀತಿ ಅವರಿಂದ ಪ್ರೋತ್ಸಾಹಿ ಗೊಂಡು ನಾನು ನನ್ನ ಜೀವನದಲ್ಲಿ ಯಾವತ್ತೂ ಸಹಾಯಕ್ಕೆ ಹಿಂದೇಟು ಹಾಕಬಾರದೆಂದು ನಿರ್ಧರಿಸಿದೆ.

ಬದಲಾವಣೆಯ ಪರ್ವಕಾಲ

[ಬದಲಾಯಿಸಿ]

ಮುಂದೆರಡು ವರ್ಷಗಳ ವಿದ್ಯಾಭ್ಯಾಸವನ್ನು ನಾನು ರಾಮಕೃಷ್ಣ ಆಶ್ರಮ ಬೈಲೂರಿನಲ್ಲಿ ಇದ್ದು, ಅಲ್ಲಿನ ಸರಕಾರಿ ಕಾಲೇಜಿನಲ್ಲಿ ಮುಗಿಸಿದೆ. ಅಲ್ಲಿದ್ದ ಎರಡು ವರ್ಷಗಳ ಕಾಲ ನಾನು ಬಹಳಷ್ಟು ವಿಚಾರಗಳನ್ನು ಕಲಿತೆ, ಜೀವನದಲ್ಲಿ ಯಾವುದು ಸರಿ ಯಾವುದು ತಪ್ಪು, ನಮ್ಮ ನಡೆ ನುಡಿ ವರ್ತನೆ ಆಚಾರ ವಿಚಾರ ಹೇಗಿರಬೇಕು, ಇದಲ್ಲದೆ ಬೇರೆ ಬೇರೆ ಕಾರ್ಯ ಕೌಶಲ್ಯಗಳನ್ನು ಕಲಿತು , ಉದಾಹರಣೆಗೆ ವಿದ್ಯುತ್ಕಾರ್ಮಿಕ ಕೆಲಸ , ಕೊಳಾಯಿಗಾರ ಕೆಲಸ, ಕಲ್ಲು ಹೊಡೆಯುವ ಕೆಲಸ, ಬಡಿಗೆಯ ಕೆಲಸ, ಈ ಎಲ್ಲವನ್ನು ಸ್ವಲ್ಪ ಕಲಿತಿದ್ದೇನೆ ಹಾಗೆ ಅಲ್ಲಿ ಶಾಲೆಗೆ ಹೋಗಬೇಕೆಂದರೆ ಎಂಟು ಕಿಲೋಮೀಟರ್ ಸೈಕಲ್ನಲ್ಲಿ ಪ್ರಯಾಣಿಸಬೇಕಾಗಿತ್ತು ಹಾಗಾಗಿ ನನ್ನ ಶಾರೀರಿಕ ಬಲವು ಕೂಡ ಹೆಚ್ಚಾಗಿತ್ತು. ಹೀಗೆ ಅಲ್ಲಿ ಕಳೆದ ಎರಡು ವರ್ಷಗಳು ನನ್ನ ಜೀವನದ ಪರಿವರ್ತನೆಗೆ ಸಹಾಯಕವಾಯಿತು .ಅಲ್ಲಿದ್ದಷ್ಟು ಕಾಲ ಕೆಲವೊಮ್ಮೆ ಸ್ವಾಮಿ ವಿವೇಕಾನಂದರ ಪುಸ್ತಕವನ್ನು ಓದುವುದರಿಂದ ದೇಶ ಸೇವೆಯ ಆಸೆಯೂ ಇನ್ನಷ್ಟು ದೃಢವಾದ ಕಾರಣ ನಾನು ಸೈನಿಕನಾಗಬೇಕೆಂದು ನಿರ್ಧರಿಸಿದೆ.

ಕಾಲೇಜು ಮೆಟ್ಟಲು ಹತ್ತುವಾಗ

[ಬದಲಾಯಿಸಿ]

ನನಗೆ ಮೊದಲಿನಿಂದಲೂ ಕೂಡ ಭೌತಶಾಸ್ತ್ರ ಎಂದರೆ ಆಸಕ್ತಿ ಅಲ್ಲಿನ ಶಿಕ್ಷಕರು ಕೂಡ ಕಲಿಸುವ ರೀತಿಯು ನನ್ನಲ್ಲಿ ಇನ್ನಷ್ಟು ಆಸಕ್ತಿಯನ್ನು ಹುಟ್ಟಿಸಿತು.ಈ ಆಸಕ್ತಿಯ ನನಗೆ ಕ್ರೈಸ್ಟ್ ಕಾಲೇಜಿನಲ್ಲಿ ಬಿಎಸ್ಸಿಯನ್ನು ಮಾಡಲು ಪ್ರೋತ್ಸಾಹಿಸಿತು.

ನನ್ನ ಹವ್ಯಾಸ ಚಿತ್ರಕಲೆಯನ್ನು ಬಿಡಿಸುವುದು, ಯಾವುದೇ ಒಂದು ಕಲೆಯೂ ಮನಸ್ಸಿಗೆ ಮುದ ನೀಡುವುದು ಜೊತೆಗೆ ಮೆದುಳನ್ನು ಚುರುಕುಗೊಳಿಸುತ್ತದೆ, ಹಾಗೂ ಸೈಕ್ಲಿಂಗ್.

ಸಂಕ್ಷಿಪ್ತವಾಗಿ ನನ್ನ ಜೀವನದ ಉದ್ದೇಶವು ಸಹಾಯ ಮಾಡುವುದಾಗಿದೆ ಅದು ದೇಶದ್ದಾಗಿರಲಿ ಸಮಾಜದ್ದಾಗಿರಲಿ ಅಥವಾ ಯಾವುದೇ ಒಬ್ಬ ವ್ಯಕ್ತಿಯದಾಗಿರಲಿ.