ಉಬರಡ್ಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಬರಡ್ಕ ಗ್ರಾಮದ ಮಿತ್ತೂರು ಕೇ೦ದ್ರ ಸ್ಥಾನವೆಂದು ಕರೆದುಕೊಳ್ಳುವ ಸ್ಥಳವಾಗಿದೆ, 'ಮಿತ್ತೂರು ಎನ್ನುವ ಈ ಸ್ಥಳ ನಾಮದ ಬಗ್ಗೆ ಸಹಜವಾಗಿಯೇ ಎತ್ತರದ ಊರು ಎನ್ನುವುದು ಸ್ಪಷ‍್ಟವಾಗುತ್ತದೆ.'ಉಬರ್'ಎನ್ನುವ ಪದಕ್ಕೆ 'ಮೇಲೇರು' ಎನ್ನುವ ಅ‍ರ್ಥವಿದೆ.ತುಳುನಾಡಿನಲ್ಲಿ ಜೂನ್ ತಿಂಗಳಲ್ಲಿ ಬರುವ ಆರಂಭದ ಮಳೆಯ ಸಂದರ್ಭದಲ್ಲಿ ಹೊಳೆ ಮೀನುಗಳು ಎತ್ತರದ ಕಡೆಗೆ ಚಲಿಸುವುದು ಪ್ರಾಕೃತಿಕ ಸಹಜತೆ.ಮುಖ್ಯವಾಗಿ ಮೀನುಗಳು ಮೊಟ್ಟೆ ಇಡುವ,ಮರಿ ಮಾಡುವ ಕಾರಣಕ್ಕಾಗಿ ಹೀಗೆ ಮೇಲೇರುತ್ತದೆ.ಈ ಕ್ರಿಯೆಯನ್ನು ತುಳುವರು 'ಉಬೇರ್' ಹತ್ತುವುದು ಎನ್ನುತ್ತಾರೆ. ಹೀಗೆ ಮೀನುಗಳು 'ಉಬೇರ್' ಹತ್ತುವ ಅಡ್ಕ/ಬಯಲ್/ಬೈಲನ್ನು ಕ್ರಮೇಣ 'ಉಬರಡ್ಕ'ಎಂದು ಕರೆಯಲಾಗಿದೆ.

ಬೌಗೋಳಿಕ[ಬದಲಾಯಿಸಿ]

ಇತರ ಪ್ರದೇಶಗಳು[ಬದಲಾಯಿಸಿ]

ಸುಳ್ಯಕೋಡಿ[ಬದಲಾಯಿಸಿ]

ಇದೊಂದು ಇತಿಹಾಸಿಕ ಘಟನಾ ಕಾರಣ ಮೂಲವಾಗಿ ರೂಪುಗೊಂಡ ಸ್ಥಳನಾಮವಾಗಿದೆ. ಕೋಡಿ ಎಂದರೆ ಬದಿ, ಮೂಲೆ ಎನ್ನುವ ಅರ್ಥಗಳಿವೆ. ಸುಳ್ಯವನ್ನು ಹಿಂದೆ ಬೀಡು ಬಲ್ಲಾಳರು ಆಳುತ್ತಿದ್ದರು.ಸುಳ್ಯ ಪನ್ನೆಬೀಡಿನ ಬಲ್ಲಾಳ ಸಂತತಿ ಉಬರಡ್ಕದಲ್ಲಿತ್ತು.ಸುಳ್ಯ ಪನ್ನೆಬೀಡು ದುರ್ಬಲವಾದ ತರುವಾಯಸುಳ್ಯಕೋಡಿ-ಕೊಟ್ಟರಾದ ಬಲ್ಲಾಳರು ಅಮರ ಸುಳ್ಯದ ಆಡಳಿತ ನೋಡಿಕೊಳ್ಳುತ್ತಿದ್ದರು.ಸುಳ್ಯದೊಂದು ಕೋಡಿಯಲ್ಲಿರುವ ಈ ಸ್ಥಳದಲ್ಲಿ ಸೀಮೆ ಕಟ್ಟಳೆಯವರು ಬಂದು ದೈವ-ದೇವರ ಆಡಳಿತ ಸಂಭಂಧಿಯಾಗಿ ಸೇರುತ್ತಿದ್ದರು.ಹೀಗೆ ಸೇರುತ್ತಿದ್ದ ಈ ಸ್ಥಳ ಮುಂದೆ ಸುಳ್ಯದವರು ಸೇರುವ ಕೋಡಿ 'ಸುಳ್ಯಕೋಡಿ'ಯಾಯಿತೆಂದು ಪ್ರತೀತಿ.

ಬಳ್ಳಡ್ಕ[ಬದಲಾಯಿಸಿ]

ಈ ಹೆಸರಿನ ಸ್ಥಳವು ಉಬರಡ್ಕ ಗ್ರಾಮದಲ್ಲಿದೆ.ಸುಳ್ಯ ಕೇಂದ್ರದಿಂದ ಸುಮಾರು ೨ಕಿ.ಮೀ. ಅಂತರದ ಪೂರ್ವ ಭಾಗದಲ್ಲಿದೆ.ಭತ್ತದ ಬೆಳೆಗೆ ಹೆಸರುವಾಸಿಯಾಗಿರುವ ಈ ಸ್ಥಳವು ಬಯಲು ಪ್ರದೇಶವಾಗಿದ್ದು,ಸುತ್ತ ಗುಡ್ಡೆಗಳಿಂದ ಅಮೃತವಾಗಿದೆ.ಬಯಲುಸ್ಥಳವನ್ನು ತುಳುವಿನಲ್ಲಿ 'ಅಡ್ಕ' ಎನ್ನಲಾಗುತ್ತದೆ. ಪ್ರಾಚೀನವಾಗಿ ಈ ಪ್ರದೇಶವನ್ನು ಸುಳ್ಯಕೋಡಿ,ಕೊಟ್ಟಾರದ ಬಲ್ಲಾಳರು ಆಳ್ವಿಕೆ ನಡೆಸುತ್ತಿದ್ದರು,ಅಲ್ಲದೆ ಈ ಅಡ್ಕವು ಇವರಿಗೆ ಸೇರಿತ್ತು. ಬೀಡಿನ ಎತ್ತುಗಳು ಮತ್ತು ಕುದುರೆಗಳಿಗೆ ಮೇಯಲು ಬಳಸುತ್ತಿದ್ದ ಈ ಸ್ಥಳವು ಕ್ರಮೇಣ ಬಳ್ಳಡ್ಕವಾಯಿತೆಂದು ಪ್ರತೀತಿ.ಭೌಗೋಳಿಕ ದೃಷ್ಟಿಯಿಂದ ಭೋಳ್+ಅಡ್ಕ ಕ್ರಮೇಣ ಬಳ್ಳಡ್ಕವಾಗಿರುವ ಸಾಧ್ಯತೆ ಇದೆ.'ಬಳ್ಳ' ಎನ್ನುವ ಪದಕ್ಕೆ ಅಳತೆಮಾನ ಎನ್ನುವ ಅರ್ಥವು ಇದೆ.ಕೃಷಿ ಮುಖ್ಯವಾದ ಭತ್ತವನ್ನು ಅಳತೆ ಮಾಡುವುದಕ್ಕೆ 'ಕಳಸೆ' ಎನ್ನುವ ಅಳತೆಮಾನವನ್ನು ಬಳಸುತ್ತಿದ್ದರು.ಹತ್ತು ಕಳಸೆಯ ಅಳತೆಯನ್ನು ಒಂದು 'ಬಳ್ಳ' ಎಂದು ಕರೆಯುತ್ತಿದ್ದರು.ಭತ್ತ ಬೆಳೆಯುವ,ಹೆಚ್ಚು ಬೆಳೆ ನೀಡುವ 'ಬೈಲ್'ಎನ್ನುವ ಅರ್ಥದಲ್ಲಿ ಬಳ್ಳ+ಅಡ್ಕ >'ಬಳ್ಳಡ್ಕ ಆಗಿದೆ ಎಂದು ವಾಡಿಕೆಯಲ್ಲಿ ಹೇಳಲಾಗುತ್ತದೆ.[೧] [೨]

ಉಲ್ಲೇಖಗಳು[ಬದಲಾಯಿಸಿ]

  1. ಸ್ಥಳನಾಮಗಳು ಮತ್ತು ಐತಿಹಗಳು;(ಸಂ) ಪೂವಪ್ಪ ಕಣಿಯೂರು ;೨೦೧೬ ಪ್ರ:ಕನ್ನಡ ಸಂಘ ಎನ್.ಎಮ್.ಸಿ.ಸುಳ್ಯ ಪುಟಸಂಖ್ಯೆ;೧೨-೧೩.
  2. http://www.onefivenine.com/india/villages/Dakshin-Kannad/Sulya/Sulya-_1a-Ubaradka-Road-Dakshina-Kannada
"https://kn.wikipedia.org/w/index.php?title=ಉಬರಡ್ಕ&oldid=1017939" ಇಂದ ಪಡೆಯಲ್ಪಟ್ಟಿದೆ