ಹೆದೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆದೆಯು ಬಿಲ್ಲಿನ ಬಾಗು ಪಟ್ಟಿಯ ಎರಡು ತುದಿಗಳನ್ನು ಜೋಡಿಸುತ್ತದೆ ಮತ್ತು ಬಾಣವನ್ನು ಪ್ರಕ್ಷೇಪಿಸುತ್ತದೆ. ಅಪೇಕ್ಷಣೀಯ ಗುಣಗಳಲ್ಲಿ ಹಗುರವಾದ ತೂಕ, ಸವೆತ ನಿರೋಧಕತೆ, ಮತ್ತು ಜಲ ನಿರೋಧಕತೆ ಸೇರಿವೆ. ಹೆದೆಯ ಮಧ್ಯದಲ್ಲಿ ದ್ರವ್ಯರಾಶಿಯು ಅತ್ಯಂತ ಹೆಚ್ಚಿನ ಪರಿಣಾಮ ಹೊಂದಿರುತ್ತದೆ; ಹೆದೆಯ ಮಧ್ಯದಲ್ಲಿ ಒಂದು ಗ್ರಾಮ್‍ನಷ್ಟು ಹೆಚ್ಚಿನ ದ್ರವ್ಯರಾಶಿಯು ಬಾಣದ ವೇಗವನ್ನು ತುದಿಗಳಲ್ಲಿ ಸುಮಾರು ೩.೫ ಗ್ರಾಮ್ ಹೆಚ್ಚಿನ ದ್ರವ್ಯರಾಶಿಯಷ್ಟು ಕಡಿಮೆ ಮಾಡುತ್ತದೆ.[೧]

ಹೆದೆಯ ವಸ್ತುಗಳು[ಬದಲಾಯಿಸಿ]

ಸಾಂಪ್ರದಾಯಿಕ ವಸ್ತುಗಳಲ್ಲಿ ನಾರುಬಟ್ಟೆ, ಸೆಣಬ್ಯ್, ಇತರ ತರಕಾರಿ ನಾರುಗಳು, ಸ್ನಾಯು, ರೇಷ್ಮೆ, ಮತ್ತು ಕಚ್ಚಾ ತೊಗಲು ಸೇರಿವೆ. ತುರ್ತು ಪರಿಸ್ಥಿತಿಯಲ್ಲಿ ಬಹುತೇಕ ಯಾವುದೇ ನಾರನ್ನು ಬಳಸಬಹುದು. ಆಧುನಿಕ ಹಿಂಬಾಗು ಬಿಲ್ಲು ಅಥವಾ ಸಂಯುಕ್ತ ಬಿಲ್ಲಿನ ಮೇಲೆ ನೈಸರ್ಗಿಕ ನಾರುಗಳು ಬಹಳ ಅಸಾಮಾನ್ಯವಾಗಿರುತ್ತವೆ, ಆದರೆ ಈಗಲೂ ಪರಿಣಾಮಕಾರಿಯಾಗಿವೆ ಮತ್ತು ಈಗಲೂ ಸಾಂಪ್ರದಾಯಿಕ ಮರದ ಅಥವಾ ಸಂಯುಕ್ತ ಬಿಲ್ಲುಗಳಲ್ಲಿ ಬಳಸಲ್ಪಡುತ್ತವೆ. ತಂತಿ ಮತ್ತು ತೊಗಲಿನ ಹೆದೆಗಳು ನೀರಿನಿಂದ ತೀವ್ರವಾಗಿ ಪ್ರಭಾವಿತವಾಗಬಹುದು.

ಉಲ್ಲೇಖಗಳು[ಬದಲಾಯಿಸಿ]

  1. Design and Construction of Flight Bows - a supplement to "The Design and Construction of Composite Recurve Bows" by John Clark. Ausbow Industries, not dated
"https://kn.wikipedia.org/w/index.php?title=ಹೆದೆ&oldid=895107" ಇಂದ ಪಡೆಯಲ್ಪಟ್ಟಿದೆ