ಮೋಹನ್ ಮಾರ್ನಾಡ್
ಮೋಹನ್ ಮಾರ್ನಾಡ್ | |
---|---|
Born | ಮೋಹನ. ದಕ್ಷಿಣ ಕನ್ನಡ ಜಿಲ್ಲೆಯ ಮಾರ್ನಾಡ್ ಗ್ರಾಮದಲ್ಲಿ, ಶ್ರೀ ಹೊನ್ನಪ್ಪ ಶೆಟ್ಟಿ ಹಾಗೂ ಸರಸ್ವತಿ ಶೆಟ್ಟಿಯವರ ಮಗನಾಗಿ,೧೯೭೪, ಫೆಬ್ರವರಿ, ೨೧ ರಂದು ಜನಿಸಿದರು. |
Nationality | ಭಾರತೀಯ |
Education | ಬಿ.ಕಾಂ., |
Occupation | ಟೆಲಿವಿಶನ್ ನಲ್ಲಿ ಸುಮಾರು ಒಂದು ಲಕ್ಷಕ್ಕೂ ಮಿಕ್ಕ ಜಾಹಿರಾತುಗಳಿಗೆ ಕನ್ನಡವಲ್ಲದೆ ಇತರ ಭಾಷೆಗಳಲ್ಲೂ ಧ್ವನಿ ಸಂಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. |
Known for | ನಾಟಕ ಕರ್ತೃ, ರಂಗನಟ, ನಿರ್ದೇಶಕ, ಟೆಲಿವಿಶನ್ ಪ್ರೊಡಕ್ಷನ್ ನಲ್ಲಿ ಸಶಕ್ತ ಕೆಲಸಮಾಡಿದ್ದಾರೆ.ಡಬ್ಬಿಂಗ್ ಕಲಾವಿದ,ಲೇಖಕ, ಕವಿ, ಸಂಘಟಕ, |
ಮೋಹನ್ ಮಾರ್ನಾಡ್, ಮುಂಬಯಿನಗರದ ಕನ್ನಡ ರಂಗಭೂಮಿಯ ಒಬ್ಬ ನಟ, ನಾಟಕ ಕರ್ತ, ನಿರ್ದೇಶಕ, ಹಾಗೂ ಸಂಘಟಕ. ರಂಗಭೂಮಿ, ಟೆಲಿವಿಶನ್ ವಲಯದಲ್ಲಿ ದುಡಿಯುತ್ತಿದ್ದಾರೆ.
ಜನನ,ವಿದ್ಯಾಭ್ಯಾಸ
[ಬದಲಾಯಿಸಿ]ಮೋಹನ, ದಕ್ಷಿಣ ಕನ್ನಡ ಜಿಲ್ಲೆಯ ಮಾರ್ನಾಡ್ ಹೊನ್ನಪ್ಪ ಶೆಟ್ಟಿ, ಹಾಗೂ ಸರಸ್ವತಿಶೆಟ್ಟಿ ದಂಪತಿಗಳ ಪುತ್ರನಾಗಿ ೧೯೬೪, ಫೆಬ್ರವರಿ, ೨೧ ರಂದು ಜನಿಸಿದರು. ೧೯೭೭ ರಲ್ಲಿ ತಮ್ಮ ೬ ನೆಯ ತರಗತಿಯ ಬಳಿಕ ಮುಂಬಯಿ ಶಹರಿಗೆ ಬಂದು, ಸ್ವಲ್ಪಕಾಲ ಅಲ್ಲಿನ ಕ್ಯಾಂಟಿನ್, ಹೋಟೆಲ್ ಗಳಲ್ಲಿ ದುಡಿದರು. ಮುಂಬಯಿ ನಗರದ ವೀಟಿ ರೈಲ್ವೆ ಸ್ಟೇಶನ್ ನ ಬಝಾರ್ ಗೇಟ್ ಬಳಿ, ಫ್ರೀ ನೈಟ್ ಕನ್ನಡ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ಕನ್ನಡ ಭವನ ಜೂನಿಯರ್ ಕಾಲೇಜ್, ಸಿದ್ಧಾರ್ಥ ಕಾಲೇಜ್ ನಲ್ಲಿ ಬಿ.ಕಾಂ ಪದವಿಪಡೆದರು. ನಂತರ ಉದ್ಯೋಗ ಸೇರಿದ ಮೇಲೆಯೂ ನಾಟಕದ ಬಗ್ಗೆ ಆಸಕ್ತಿಹೊಂದಿದ್ದರು. ಕಲಾಜಗತ್ತು ಸಂಸ್ಥೆಗೆ ಸೇರಿ, ಪ್ರಧಾನ ನಟರಾಗಿ ಆಯ್ಕೆಗೊಂಡರು.
ಬರೆದ ನಾಟಕಗಳು
[ಬದಲಾಯಿಸಿ]ಮಿಲನ (ಕನ್ನಡ), ಯಮಲೋಕೊಡು ಪೆಲಿಟಿಕ್ಸ್, ಕಕುಂಮಮ, ಕಲುವೆರೆಕುಂಟು,ಮಡಿಮಲ್ಪುನಾಯೆ (ತುಳು), ಬಲ್ಪುನ ಕುಲಾಗಿ ಡಪ್ಪುನಕುಲಾ,
ಏಕಾಂಕ ನಾಟಕಗಳು
[ಬದಲಾಯಿಸಿ]ವರ್ಷ ೧೯೯೧ ರಲ್ಲೇ 'ಸಂಯುಕ್ತ ಕರ್ನಾಟಕ ಕನ್ನಡ ಪತ್ರಿಕೆ'ಯ ಪರಿಚಯ ಲೇಖನದಲ್ಲಿ ಮುಂಬಯಿ ರಂಗಭೂಮಿಯ 'ಸೂಪರ್ ಸ್ಟಾರ್ ಕನ್ನಡಿಗ' ಎಂಬ ಪ್ರಶಂಸೆ ಪ್ರಕಟಗೊಂಡಿತ್ತು. ನಾಟಕ ರಂಗದಲ್ಲಿ ಗಟ್ಟಿ ಅನುಭವಿ, ಟೀ.ವಿ ಧಾರಾವಾಹಿಯಲ್ಲೂ ಅಭಿನಯಕ್ಕಾಗಿ ಅಧಿಕಾರಿ ಬ್ರದರ್ಸ್, ಝೀಟೀವಿ, ಪಂಡಿತ ಫಿಲ್ ಚಕ್ಕರ್,ಗಳಲ್ಲಿ ಕಾಣಿಸಿಕೊಂಡರು. ೧೯೯೫ ನಲ್ಲಿ ಮುಂಬಯಿನಗರದ ೪೦ ಜನ ಕಲಾವಿದರನ್ನು ಒಟ್ಟುಗೂಡಿಸಿಕೊಂಡು 'ಟಿಪ್ಪುಸುಲ್ತಾನ್' ಐತಿಹಾಸಿಕ ನಾಟಕ ನಿರ್ದೇಶಿಸಿ ಪ್ರಮುಖ ಪಾತ್ರನಿರ್ವಹಿಸಿದರು.
ಹೆಸರಾಂತ ನಿರ್ದೇಶಕರ ಜೊತೆಯಲ್ಲಿ
[ಬದಲಾಯಿಸಿ]೯೦ ರ ದಶಕದನಂತರ, ಡಾ, ವ್ಯಾಸರಾವ ನಿಂಜೂರ ರವರು ರಚಿಸಿದ, "೪೦ ರ ನಲುಗು" ನಾಟಕವನ್ನು ನಿರ್ದೇಶಿಸಿದರು. ಈ ನಾಟಕ ೮ ಬಾರಿ ಪ್ರದರ್ಶನ ಕಂಡಿತು. ಖ್ಯಾತ ನಿರ್ದೆಶಕರುಗಳ ನಾಟಕಗಳಲ್ಲಿ ತಮ್ಮ ಯೋಗದಾನವನ್ನು ನೀಡಿದ್ದಾರೆ.
ನಿರ್ದೇಶನ
[ಬದಲಾಯಿಸಿ]ನಾಟಕಗಳು : ದೆವ್ವದಮನೆ, ನಾವಿಲ್ಲ, ರಾಗ,ಬಿಡುಗಡೆ, ಕಕುಂದಮ, ಟಿಪ್ಪುಸುಲ್ತಾನ್, ೪೦ ರ ನಲುಗು. ಜಾಹಿರಾತುಗಳು ೬. ೧೩ ಎಪಿಸೋಡಿನ ಕನ್ನಡ ಧಾರಾವಾಹಿ 'ಕಥಾಧಾರೆ'ಗೆ,ಸಂಭಾಷಣೆ, ನಟನೆ, ಸಹ-ನಿರ್ದೇಶನ ಮಾಡಿದರು. 'ಸ್ವಾಮೀ ಸ್ವಾಮೀ', ಕನ್ನಡ ಧಾರಾವಾಹಿಯಲ್ಲಿ ನಟನೆ, ಸಂಗೀತ ರಚನೆ ಒದಗಿಸಿದ್ದರು. ಹಿಂದಿ ಧಾರಾವಾಹಿ, 'ಚಾಣಕ್ಯ', 'ಫಿಲ್ಮ್ ಚಕ್ಕರ್', 'ಕಮಾಂಡರ್' ನಲ್ಲಿ ಪಾತ್ರನಿರ್ವಹಣೆ. ಹೆಸರಾಂತ ನಿರ್ದೇಶಕ, ಎಮ್.ಎಸ್.ಸತ್ಯುರವರ ನಿರ್ದೇಶನದಲ್ಲಿ 'ಜ್ಞಾನ ಪೀಠ ಪ್ರಶಸ್ತಿ' ಪಡೆದ ತಗಳಿ ಶಿವಶಂಕರ್ ಪಿಳ್ಳೈ ರವರ 'ಕಯರ್' ಟೆಲಿವಿಶನ್ ಸಹನಿರ್ದೇಶನ, (Thakazhi Sivasankara Pillai (17 April 1912 – 10 April 1999) ಮತ್ತು ಇಟ್ಟುನಾಣು ಪಾತ್ರ,ನಿರ್ವಹಿಸಿದ್ದಾರೆ.
ಮಾರ್ನಾಡ್ ಅಸೋಸಿಯೇಟ್ಸ್ ಸಂಸ್ಥೆಯ ಸ್ಥಾಪನೆ
[ಬದಲಾಯಿಸಿ]ಮೋಹನ್ ಮಾರ್ನಾಡ್ ರವರು, ಮುಂಬಯಿನ ಅಂಬಾನಿ ಮಾಲಕತ್ವದ 'ಮುದ್ರಾ ಜಾಹಿರಾತು ಸಂಸ್ಥೆ'ಯಲ್ಲಿ ಕೆಲಸಮಾಡಿದ್ದಾರೆ. ಜಾಹಿರಾತುಗಳಿಗೆ ಲೇಖನ ಬರೆಯುವುದಲ್ಲದೆ, ಕಾಪಿರೈಟ್, ಮತ್ತು ಕಂಠದಾನವನ್ನೂ ಮಾಡಿ ಅನುಭವಗಳಿಸಿದರು. ಮುಂದೆ "ಮಾರ್ನಾಡ್ ಅಸೋಸಿಯೇಟ್ಸ್" [೧] ಎಂಬ ತಮ್ಮದೇ ಆದ ಜಾಹಿರಾತು ಸಂಸ್ಥೆಯನ್ನು ಸ್ಥಾಪಿಸಿದರು. ಅವರು ಹಲವಾರು ಭಾಷೆಗಳ ಜಾಹಿರಾತುಗಳ ಚಿತ್ರೀಕಣಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.
ಡಬ್ಬಿಂಗ್ ಕಲಾವಿದನಾಗಿ
[ಬದಲಾಯಿಸಿ]ಹಾಲಿವುಡ್ ಚಲನಚಿತ್ರ,'Fast and Furious' [೨]ನ್ನು 'ವೇಗ ಮತ್ತು ಉದ್ವೇಗ' 'Vega Mattu Udwega-8' (VU-8) ಎಂಬ ಕನ್ನಡದ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಚಲನಚಿತ್ರದಲ್ಲಿ ಕಂಠದಾನ ಮಾಡಿದ ಅರುಶಾ, ಸುವರ್ಣ,ಶಿವರಾಜ್ ಸುವರ್ಣ ಮೊದಲಾದವರುಗಳ ಜೊತೆಯಲ್ಲಿ ಮೋಹನ್ ಮಾರ್ನಾಡರೂ ಸೇರಿದ್ದಾರೆ.
ಪ್ರಶಸ್ತಿ, ಗೌರವಗಳು
[ಬದಲಾಯಿಸಿ]- ಅಭಿನಯ ಚಕ್ರವರ್ತಿ ಪ್ರಶಸ್ತಿ,
- ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಜನ್ಮಶತಾಭ್ದಿ ಸಂದರ್ಭದಲ್ಲಿ ಕನ್ನಡ ಸಂಘ, ಹೊರನಾಡು ಕನ್ನಡಿಗರಿಗೆ ಏರ್ಪಡಿಸಿದ ಸಣ್ಣ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದರು.
- ಮಿನಿ ಕಾದಂಬರಿ ಸ್ಪರ್ಧೆಯಲ್ಲಿ ಮೊದಲನೆಯ ಬಹುಮಾನ,
- ೨೦೦೬ ರಲ್ಲಿ, 'ಸುದ್ದ' ಡಿಜಿಟಲ್ ಚಲನ ಚಿತ್ರ, ಏಷ್ಯನ್ ಚಿತ್ರೋತ್ಸವದಲ್ಲಿ ಭಾರತೀಯ ವಿಭಾಗದ ಶ್ರೇಷ್ಠ ಚಲನಚಿತ್ರವೆಂದು ಪ್ರಶಸ್ತಿ ಪಡೆದಿದೆ. [೩]
- ೨೦೦೭ ರಲ್ಲಿ 'ಜ್ಞಾನಮಂದಾರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಕಾಡೆಮಿ, ಬೆಂಗಳೂರಿನ ಗಾಯನ ಸಮಾಜ ರಂಗಮಂದಿರದಲ್ಲಿ 'ಸುವರ್ಣ ಕರ್ನಾಟಕ ಸಮಾಜರತ್ನ ರಾಜ್ಯ ಪ್ರಶಸ್ತಿ'
- ಮಂಗಳೂರು ಚಿತ್ರನಿರ್ಮಾಪಕರ ಸಂಘದಿಂದ ನಾಗರಿಕ ಪ್ರಶಸ್ತಿ,
- ಉಡುಪಿಯ ಎಂ.ಜಿ.ಎಂ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳುನಾಟಕ ಸ್ಪರ್ಧೆಯಲ್ಲಿ, ನಾಯಕನ ಪಾತ್ರಮಾಡಿ, ೬ ಬಾರಿ ಬಹುಮಾನಗಳಿಸಿದರು.
- ಉಡುಪಿಯ ಸುಮನಸ ಕೊಡವೂರು ಅಂತರ್ಗತದಲ್ಲಿ 'ರಾಷ್ಟ್ರೀಯ ಬಹುಭಾಷಾ ನಾಟಕೋತ್ಸವ'ದಲ್ಲಿ ಗೌರವಿಸಲಾಯಿತು.
- ೨೦೧೩ ರಲ್ಲಿ 'ಕಾಂತಾವರ ಕನ್ನಡ ಸಂಘ'ದಿಂದ ಪ್ರಶಸ್ತಿ.
- ೨೦೧೫ ರಲ್ಲಿ ಕನ್ನಡ ಕಲಾಕೇಂದ್ರದ ಪ್ರಶಸ್ತಿ,
- ಮುಂಬಯಿ 'ಸುವರ್ಣ ಶ್ರೀ ಪ್ರಶಸ್ತಿ',
- ಮುದ್ರಾಡಿ ನಾಟ ಸಂಸ್ಥೆ ಗೌರವ ಪ್ರದಾನ,
- ಹೊರನಾಡು ಕನ್ನಡಿಗ ಪ್ರಶಸ್ತಿಗಳು,ಹಲವಾರು.
- ವರ್ಷ ೨೦೧೮ ರ, ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. [೪], [೫], [೬]
- ಮುಂಬಯಿ ವಿಶ್ವವಿದ್ಯಾಲಯ (ಕಲೀನಾ) 'ವಿದ್ಯಾನಗರಿಯ ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನ'ದಲ್ಲಿ 2018ರ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೋಹನ್ ಮಾರ್ನಾಡ್ ಅವರಿಗೆ ಪ್ರಶಸ್ತಿ ಪ್ರದಾನ. ಡಿಸೆಂಬರ್,೧, ೨೦೧೯ [೭], [೮]
ಪರಿವಾರ
[ಬದಲಾಯಿಸಿ]ಮುಂಬಯಿಯ ಬಾಂದ್ರ ಜಿಲ್ಲೆಯಲ್ಲಿ ವಾಸವಾಗಿರುವ ಮೋಹನ ಮಾರ್ನಾಡ್ ರವರಿಗೆ ಸೀಮಾ ಮಾರ್ನಾಡ್ ಎಂಬ ಪತ್ನಿ, ಹಾಗೂ ಮಾನವಿ ಮಾರ್ನಾಡ್ ಎಂಬ ಪುತ್ರಿ ಇದ್ದಾಳೆ.
ಉಲ್ಲೇಖಗಳು
[ಬದಲಾಯಿಸಿ]- ↑ "ಯಾವಮೋಹನ ಮುರುಳಿ ಕರೆಯಿತು" ಉದಯವಾಣಿ ಪತ್ರಿಕೆ, ಜನವರಿ, ೧೬, ೨೦೧೮
- ↑ Now, Hollywood blockbuster dubbed into Kannada set for release, dailyhunt.in,19rh, April
- ↑ ಕರಾವಳಿಯಲ್ಲಿ ಮೂವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ "ಸುದ್ದ' ಡಿಜಿಟಲ್ ಚಲನಚಿತ್ರ 2006ರಲ್ಲಿ ಏಷ್ಯನ್ ಚಿತ್ರೋತ್ಸವದಲ್ಲಿ ಭಾರತೀಯ ವಿಭಾಗದ ಶ್ರೇಷ್ಠ ಚಲನಚಿತ್ರವೆಂದು ಪ್ರಶಸ್ತಿ ಪಡೆದಿದೆ.
- ↑ Mumbai: Popular dramatist Mohan Marnad selected for Karnataka Nataka Academy award, daijiworld.com, Dec, 15, 2018
- ↑ mangalorean.com, Dec,14,2018,೨೦೧೮ ನೇ ಸಾಲಿನ ನಾಟಕ ಅಕಾಡೆಮಿ ಪ್ರಶಸ್ತಿಗೆ ರಂಗ ನಟ ಮೋಹನ್ ಮಾರ್ನಾಡ್ ಆಯ್ಕೆ
- ↑ Mohan Marnad, renowned theater artiste, playwright, director of Mumbai was chosen to confer Karnataka Nataka Academy Award – 2018,bellevision.com,15,Dec,2018
- ↑ ಉದಯವಾಣಿ ಪತ್ರಿಕೆ,ಮುಂಬಯಿ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ನಾಟಕಅಕಾಡೆಮಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನ. 30ರಂದು ಅಪರಾಹ್ನ ಸಾಂತಾಕ್ರೂಜ್ ಪೂರ್ವದ ಮುಂಬಯಿವಿ.ವಿ.ಯ ಕಲೀನಾ ವಿದ್ಯಾನಗರಿಯ ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ 2018ರ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೋಹನ್ ಮಾರ್ನಾಡ್ ಅವರಿಗೆ ಪ್ರಶಸ್ತಿ ಪ್ರದಾನ. ಡಿಸೆಂಬರ್,೧, ೨೦೧೯
- ↑ Mohan marnad presented Karnataka Nataka academy award-Daiji world.com,6th,Dec,2019