ಸದಸ್ಯ:PARTHANARAYANA K R
ಕುಟುಂಬ
[ಬದಲಾಯಿಸಿ]ನನ್ನ ಹೆಸರು ಪಾರ್ಥನಾರಾಯಣ ಕೆ.ಆರ್. ನಾನು ಕರ್ನಾಟಕ ರಾಜ್ಯದ, ಚಿತ್ರದುರ್ಗ ಜಿಲ್ಲೆಯ, ಚಳ್ಳಕೆರೆ ತಾಲೂಕಿನ, ಕನೆಕಲ್ ಎಂಬ ಗ್ರಾಮದ ರಾಮಚಂದ್ರ ಮತ್ತು ರೂಪ ದಂಪತಿಗಳ ಮಗನಾಗಿ, ೨೦೦೦ನೇ ಇಸವಿಯ ಆಗಸ್ಟ್ ತಿಂಗಳ ೪ನೇ ತಾರೀಖಿನಂದು ಜನಿಸಿದೆ. ನನ್ನ ಅಕ್ಕನ ಹೆಸರು ಗೌತಮಿ. ನಾನು ಚಿಕ್ಕವನಾದ್ದರಿಂದ ಎಲ್ಲರಿಗೂ ಅಚ್ಚುಮೆಚ್ಚು. ಅಮ್ಮ ನನ್ನನ್ನು ಮುದ್ದಾಗಿ, ಬಹಳ ಪ್ರೀತಿಯಿಂದ ಬೆಳೆಸಿದರು. ಅಪ್ಪ ನನ್ನನ್ನು ಚೆನ್ನಾಗಿ ಓದಿಸಬೇಕಂದು, ದೊಡ್ಡ ಆಫೀಸರ್ ಮಾಡಬೇಕೆಂದು ಕನಸು ಕಂಡರು. ಚಿಕ್ಕ ವಯಸ್ಸಿನಲ್ಲಿ ನಾನು ಕೇಳಿದ ಎಲ್ಲವನ್ನೂ ಕೊಡಿಸುತ್ತಿದ್ದರು,ನನ್ನನ್ನು ತುಂಬಾ ಮುದ್ದು ಮಾಡುತ್ತಿದ್ದರು. ಕುಟುಂಬದಲ್ಲಿಯೇ ನಾನು ತುಂಬ ತುಂಟ ಹುಡುಗ.ನಾನೆಂದರೆ ಅಕ್ಕನಿಗೆ ತುಂಬ ಇಷ್ಟ.ಅವಳ ಜೊತೆಗೆ ಅನೇಕ ಬಾರಿ,ಊರು ಸುತ್ತಿದ್ದೇನೆ,ಊಟ ಮಾಡಿದ್ದೇನೆ, ಅವಳೆಂದರೆ ನನಗೂ ಪ್ರಾಣ.
ವಿದ್ಯಾಭ್ಯಾಸ
[ಬದಲಾಯಿಸಿ]ನನ್ನನ್ನು ಶಾಲೆಗೆ ಸೇರಿಸಬೇಕೆಂದು ಯೋಚಿಸಿ, ವಾರಿಯರ್ಸ್ ಇಂಗ್ಲೀಷ್ ಶಾಲೆಗೆ ಸೇರಿಸಿದರು. ಆ ಶಾಲಾ ಜೀವನ ತುಂಬಾ ಅದ್ಭುತವಾಗಿತ್ತು.ಅಲ್ಲಿ ಮಮತಾ ಎಂಬ ಶಿಕ್ಷಕಿ ನನಗೆ ಮೊದಲ ಬಾರಿಗೆ ಅಕ್ಷರ ಕಳುಹಿಸಿದರು. ಬಹಳ ಪ್ರೀತಿಯಿಂದ ಅವರು ನಮಗೆಲ್ಲರಿಗೂ ಅಕ್ಷರ ಕಳುಹಿಸಿ ಕೊಟ್ಟರು.ಅವರ ದಯೆಯಿಂದ ನಾವೆಲ್ಲರೂ ಅಕ್ಷರವಂತರಾಗಿದ್ದೇವೆ.ಶಾಲೆಯಲ್ಲಿ ಅನೇಕ ಸ್ನೇಹಿತರ ಪರಿಚಯವಾಯಿತು. ಅವರೆಲ್ಲರೂ ನನ್ನ ಗೆಳೆಯರಾಗುತ್ತಿದ್ದಾರೆ ಎಂದು ತಿಳಿಯದ ವಯಸ್ಸಿನಲ್ಲಿಯೇ ಅವರೆಲ್ಲರೂ ನನ್ನ ಗೆಳೆಯರಾಗಿ ಹೋಗಿದ್ದರು.ಅವರ ಜೊತೆಗೆ ಇಡೀ ಶಾಲೆಯನ್ನು ಸುತ್ತಿ ನೋಡಿದೆ.ಅವರೊಂದಿಗೆ ಸದಾ ಇರುತ್ತಿದ್ದೆ.ಹೀಗೆ ೮ನೇ ತರಗತಿಯವರೆಗೆ ಬಂದೆ,ನಂತರ ಹೊಸ ಶಿಕ್ಷಕರ ಪರಿಚಯವಾಯಿತು. ನನಗೆ ಉತ್ತಮ ಮಾರ್ಗದರ್ಶನ ದೊರೆಯಿತು. ಹೀಗೇ ಸಮಯ ಕಳೆದಿದ್ದೇ ಗೊತ್ತಾಗದ ರೀತಿಯಲ್ಲಿ ೧೦ನೇ ತರಗತಿಗೆ ಬಂದೆವು. ಶಾಲೆಯಿಂದ ದೆಹಲಿ,ಆಗ್ರಾ,ಪಂಜಾಬ್,ವಾಘಾ ಬೋರ್ಡರ್ ಗೆ ಪ್ರವಾಸ ಕೈಗೊಂಡಿದ್ದೆವು.
ಹತ್ತನೇ ತರಗತಿಯೆಂದು ನಮ್ಮೆಲ್ಲರ ಮೇಲೆ ಒತ್ತಡ ಹಾಕಲು ಶುರುಮಾಡಿದರು. ಸದಾ ಓದುತ್ತಲೇ ಇರಬೇಕೆಂದು ಹೇಳುತ್ತಿದ್ದರು.ಅಂತೆಯೇ ನಾವೆಲ್ಲ ಓದಲು ಶುರು ಮಾಡಿದ್ದೆವು.ಅಲ್ಲಿ ಎಲ್ಲಾ ಶಿಕ್ಷಕರೂ ಒಳ್ಳೆಯ ವಿಧ್ಯಾಭ್ಯಾಸ ನೀಡಿದರು, ಅವರ ನೆರವಿನಿಂದ ಬಹಳ ಚೆನ್ನಾಗಿ ಓದ ತೊಡಗಿದೆ.ಅಂತೂ ಇಂತೂ ಪರೀಕ್ಷೆಗಳು ಹತ್ತಿರ ಬಂದೇ ಬಿಟ್ಟವು.
ಅದಕ್ಕಾಗಿ ವಿಶೇಷ ತರಗತಿಗೆ ಹೋಗಲು ಪ್ರಾರಂಭಿಸಿದೆ. ಪರೀಕ್ಷೆಯ ದಿನ ಬಂದೇ ಬಿಟ್ಟಿತು. ಎಲ್ಲಾ ಪರೀಕ್ಷೆಗಳನ್ನು ಅದ್ಭುತವಾಗಿ ಬರೆದೆ.ನನ್ನ ಎಲ್ಲಾ ಗೆಳತಿಯರೂ ಚೆನ್ನಾಗಿ ಬರೆದರು. ರಜೆಯಲ್ಲಿ ನಾನು ಕುಟುಂಬದ ಸಮೇತ ತಿರುಪತಿ ದೇವಸ್ಥಾನ, ಕಾನಿಪಾಕಂ ದೇವಾಲಯಗಳಿಗೆ ಭೇಟಿ ಮಾಡಿದ್ದೆವು. ಪರೀಕ್ಷಾ ಫಲಿತಾಂಶಗಳು ಬಂದೆ ಬಿಟ್ಟವು. ಕಾತುರದಿಂದ ಫಲಿತಾಂಶ ನೋಡಿದೆ ನಾನು ೮೪% ಅಂಕಗಳನ್ನು ಗಳಿಸಿದ್ದೆ. ಎಲ್ಲರ ಮುಖದಲ್ಲಿ ಮಂದಹಾಸ ಮೂಡಿತು. ಅಪ್ಪ ಅಮ್ಮ ನಿಗೆ ಎಲ್ಲಿಲ್ಲದ ಸಂತೋಷವಾಯಿತು.
ಮುಂದೆ ಪಿಯುಸಿ ಗಾಗಿ ಕಾಲೇಜನ್ನು ಹುಡುಕಲು ಶುರು ಮಾಡಿದರು.ನಾನು ಚಳ್ಳಕೆರೆ ತಾಲೂಕಿನ ಶ್ರೀ ವಾಸವಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ದಾಖಲಾತಿ ಮಾಡಿಸಿದೆ.ಅಲ್ಲಿ ಹೊಸ ಗೆಳೆಯರನ್ನು ಪರಿಚಯ ಮಾಡಿಕೊಂಡೆ. ಅವರ ಜೊತೆಗೆ ಇಡೀ ಕಾಲೇಜನ್ನು ಸುತ್ತಿ ನೋಡಿದೆ, ದೊಡ್ಡ ಪ್ರಮಾಣ ಕಟ್ಟಡಗಳ ಕಾಲೇಜು ಇದು. ಅಧ್ಯಾಪಕರ ನೆಚ್ಚಿನ ವಿದ್ಯಾರ್ಥಿ ನಾನಾಗಿದ್ದೆ.ಕ್ಲಾಸ್ ರೆಪ್ ಕೂಡ ಆದೆ. ಅಂತೂ ಆಟ ಆಡುತ್ತಾ ಪ್ರಥಮ ಪಿಯುಸಿ ಮುಗಿಸಿದೆ. ದ್ವಿತೀಯ ಪಿಯುಸಿ ಚೆನ್ನಾಗಿ ಓದಬೇಕೆಂದು ಎಲ್ಲಾ ಕಡೆಯಿಂದ ಒತ್ತಡ ನನ್ನ ಮೇಲೆ ಬೀಳುತ್ತಾ ಹೋಯಿತು. ಅಲ್ಲಿ ಕೂಡ ಗೆಳೆಯರ ಜೊತೆಗೆ ಆಟ ಆಡುತ್ತಾ ಕಾಲ ಕಳೆದೆ. ನಂತರ ಅಲ್ಲಿನ ಅಧ್ಯಾಪಕರ ನೆರವಿನಿಂದ ನಾನು ಉತ್ತಮ ವ್ಯಾಸಂಗ ಮಾಡಿದೆ.ಪರೀಕ್ಷೆಗಳು ಹತ್ತಿರ ಬಂದೇ ಬಿಟ್ಟವು. ಎಲ್ಲರೂ ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಗಳಿಸಬೇಕೆಂದು ನಿಶ್ಚಯಿಸಿದೆವು.ಅಂತೆಯೆ ಚನ್ನಾಗಿ ಪರೀಕ್ಷೆಗಳನ್ನು ಬರೆದೆವು. ನಾನು ೯೧% ಅಂಕಗಳನ್ನು ಗಳಿಸಿದೆ. ಎಲ್ಲರೂ ಖುಷಿಯಾದರು. ನನಗೂ ತುಂಬಾ ಸಂತೋಷವಾಯಿತು.
ಓದಿದ ಪುಸ್ತಕಗಳು
[ಬದಲಾಯಿಸಿ]ವಿಂಗ್ಸ್ ಆಫ್ ಫೈರ್,ಆವರಣ,ಪರ್ವ,ಯಾಣ ಎಂಬ ಪುಸ್ತಕಗಳನ್ನು ಓದಿದೆ. ಚಿತ್ರನಟ ಸುದೀಪ್ ಅವರನ್ನು ಭೇಟಿ ಮಾಡಿದ್ದೆ. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ.
ಕ್ರೈಸ್ಟ್ ಯೂನಿವರ್ಸಿಟಿ
[ಬದಲಾಯಿಸಿ]ಡಿಗ್ರಿ ಮಾಡಲು ಅನೇಕರ ಸಲಹೆ ಮೇರೆಗೆ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯ ಸೇರಿದೆ.ಮನೆಯವರನ್ನು ಬಿಟ್ಟು ಇಲ್ಲಿ ಪಿ.ಜಿ.ಯಲ್ಲಿ ಉಳಿದುಕೊಂಡಿದ್ದೇನೆ.ಮನೆಯವರ ನೆನಪು ಸದಾ ನನ್ನನ್ನು ಕಾಡುತ್ತಿದೆ.ಇಲ್ಲಿ ಅನೇಕ ಹೊಸ ಹಾಗೂ ಒಳ್ಳೆಯ ಗೆಳೆಯರನ್ನು ಪಡೆದುಕೊಂಡಿದ್ದೇನೆ. ಅಶೋಕ, ಅನುಷ್,ಚೇತನ ಎಂಬ ಜೀವ ಗೆಳೆಯರನ್ನು ಪಡೆದಿದ್ದೇನೆ. ಅವರ ಜೊತೆಯಲ್ಲಿ ಅನೇಕ ಕಡೆ ಸುತ್ತಾಡಿದ್ದೇನೆ.ಜೀವನದಲ್ಲಿ ಯಶಸ್ವಿಯಾಗಬೇಕೆಂದು ದಿನನಿತ್ಯ ಅವಕಾಶಗಳಿಗಾಗಿ ಕಾದು ಕುಳಿತಿದ್ದೇನೆ.