ವಿಷಯಕ್ಕೆ ಹೋಗು

ಮಲೆಕುಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಲೆಕುಡಿ ಜನಾಂಗದ ಸಾಮಜಿಕ,ಆರ್ಥಿಕ, ರಾಜಕೀಯ,ಶೈಕ್ಷಣಿಕ ಮತ್ತು ಆರೋಗ್ಯದ ಸ್ಥಿತಿಗತಿಯ ಅಧ್ಯಯನ ವರದಿ

ಮಲೆಕುಡಿ ಬುಡಕಟ್ಟು ಜನಾಂಗ: ಥಳಥಳಿಸುವ ಹಸಿರು,ಸೂತ್ತಲೂ ಹಬ್ಬಿದ ನೀಲರಾಶಿ,ದೂರದಲ್ಲೆಲ್ಲೋ ಧುಮುಕುವ ನೀರು, ಅಗಾಧ ಹಸಿರಿನ ಗರ್ಭದಲ್ಲಿ ಅಲ್ಲೊಂದು ಇಲ್ಲೊಂದು ಕಡೆ ಅಡಗಿ ಕುಳಿತ ಮಲೆಕುಡಿಯರ ಸುಂದರ ಗುಡಿಸಲ ತಾಣಗಳು.ಅವುಗಳನ್ನು ಸುತ್ತುವರೆದ ತೆಂಗು,ಏಲಕ್ಕಿ,ಮೆಣಸು ಮುಂತಾದ ಬಳ್ಳಿಗಳ, ಬನದ ಸಿರಿ.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ,ಸುಳ್ಯ,ಬಂಟ್ವಾಳ ಮತ್ತು ಪುತ್ತೂರು ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ದುರ್ಗಮ ಪ್ರದೇಶದ ಕಣಿವೆ ಕಂದರಗಳಲ್ಲಿ ನೆಲೆ ಕಂಡುಕೊಂಡಿರುª ಮಲೆಕುಡಿ ಜನಾಂಗದ ಕರ್ನಾಟಕದ ಅತ್ಯಂತ ಮೂಲನಿವಾಸಿಗಳಲ್ಲಿ ಒಂದು ಶಿರಾಡಿ ಮತ್ತು ಚಾರ್ಮುಡಿ ಘಟಗಳ ನಡುವಿನ ಅಭೇದಿತ ಹೆಗ್ಗಾಡಿ ನಡುವೆ ಗುರುತಿಸಿಕೊಂಡಿರುವ ಇಳಿಮಲೆ,ಬಾಂಜಾರು ಮಲೆ ಹಾಗೂ ಅಂಬಾಟಿಮಲೆ ಪರ್ವತ ಪ್ರದೇಶಗಳು ಮಲೆಕುಡಿಯರ ಪ್ರಿಯವಾದ ತಾಣ, ಧರ್ಮಸ್ಥಳ,ಉಜಿರೆ,ನೆರಿಯ,ಶಿಶಿಲ,ಮುಂಡಾಜೆ,ಕಿಳಿಂಜೆ,ಹಾಲಂಗಾಯಿ,ಇವೇ ಇವರ ಪ್ರಮುಖ ವ್ಯವಹಾರದ ಸ್ಥಳಗಳು.ಇವುಗಳಲ್ಲಿ ಧರ್ಮಸ್ಥಳ ಮತ್ತು ಉಜಿರೆ ಕೆಲವು ಮಲೆಕುಡಿಯರ ಪಾಲಿಗೆ ಮಹಾನಗರಗಳು ಅಲ್ಲಿಂದಾಚಗೆ ಪ್ರಪಂಚ ನೋಡದವರೇ ಹೆಚ್ಚು...

ಮೇಲಿನಂಥ ಅರಣ್ಯ ಸಮೃದ್ಧಿಯಲ್ಲಿ ಮಲೆಕುಡಿಯರು ಬದುಕಿದ್ದರೂ ಅವರು ನಿಜವಾಗಿ ಸುಖಿಗಳಾಗಿಯೇ ಬದುಕುತಿಲ್ಲ. ಎಲ್ಲ ಬುಡಕಟ್ಟು ಜನಾಂಗಗಳಂತೆ ಇವರು ಆನೇಕ ಸೌಲಭ್ಯಗಳಿಂದ ವಂಚಿತರಾಗಿಯೇ ಬಡವರಾಗಿಯೇ ಬದುಕುತ್ತಿದ್ದಾರೆ. ಇವರು ವಸಿಸುವ ಮನೆ ಮತ್ತು ಅದರ ಸುತ್ತ ಇರುವ ಹತ್ತಿಪ್ಪತ್ತು ಅಡಿಜಾಗ ಮಾತ್ರ ಇವರದು. ಉಳಿದಭೂಮಿ ಇವರದಲ್ಲ. ನೂರಾರು ವರ್ಷಗಳಿಂದ ಈ ಬುಡಕಟ್ಟು ಜನಾಂಗ ಅದೇ ಅರಣ್ಯದ ಆವರಣದಲ್ಲಿ ಬದುಕಿ ಬಂದಿದ್ದರೂ ಅಲ್ಲಿಯ ಭೂಮಾಲಿಕತ್ವದ ಒಡೆತನ ಅವರಿಗಿಲ್ಲ. ನಾಗರಿಕ ಬದುಕಿನ ಜನ ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯಗಳಲ್ಲಿ ಬಹುದೊಡ್ಡ ದೊಡ್ಡ ತೋಟಗಳನ್ನು ಆಕ್ರಮಿಸಿಕೊಂಡು ಕೃಷಿ ಗೈಯ್ಯುತ್ತಿದ್ದಾರೆ. ಅಲ್ಲಿ ಮಲೆಕುಡಿಯರು ಕೂಲಿಗಾಳಗಿ ಕೆಲಸ ಮಾಡಿಕೊಂಡಿದ್ದಾರೆ.ಏಲಕ್ಕಿ ತೋಟಗಳಲ್ಲಿ ಕೂಲಿ, ಅರಣ್ಯಗಳ ಪ್ಲಾಂಟೇಶನ್, ಕೆಲಸ ಮರ ಕಡಿಯುವುದು ಮುಂತಾದ ಕೆಲಸಗಳನ್ನು ಮಾಡಿಕೊಂಡಿದ್ದಾರೆ. ಇವರು ಮಾಡುವ ಕೆಲಸಕ್ಕೆ ತುಂಬಾ ಕಡಿಮೆ ಕೂಲಿಯನ್ನು ಪಡೆಯುವರು, ಇತ್ತೀಚೆಗೆ ಮಲಯಾಳಿಗಳು ಈ ಬುಡಕಟ್ಟು ಜನಾಂಗ ಸಮೂಹ ವಾಸಿಸುವ ನೆಲವನ್ನು ಆಕ್ರಮಿಸಿ ಕೊಳ್ಳುತ್ತಿದ್ದಾರೆ.

ಮಲೆಕುಡಿಯರ ಹಾಡಿಯಲ್ಲಿ ಹೇಳಿಕೊಳ್ಳುವಂಥ ಕಲೆಗಳೇನೂ ಉಳಿದಿಲ್ಲ. ಕೊನೆಗೆ ಕೋಲಾಟದ ಒಂದು ಬಗೆಯೂ ಉಳಿದಿಲ್ಲ. ಸಂಕ್ರಾಂತಿ, ದೀಪಾವಳಿ ಇವರ ಮುಖ್ಯವಾದ ಹಬ್ಬಗಳು. ಆದರೆ ಈ ಹಬ್ಬಗಳು ಬುಡಕಟ್ಟು ಹಬ್ಬಗಳೇ ಅನ್ನುವುದು ಅನುಮಾನ.ಸಾಮಾನ್ಯವಾಗಿ ಬುಡಕಟ್ಟುಗಳದು ಅವರದೇ ಆದ ಸಾಮೂಹಿಕ ಜಾತ್ರೆಗಳಿರುತ್ತವೆ,ಹಬ್ಬಗಳಿರುವುದಿಲ್ಲ.’ಕೆಡ್ಡಸ’ ಎಂಬ ಕೃಷಿ ಸಂಬಂಧದ ಆಚರಣೆಗಳನ್ನು ಇವರು ಆಚರಿಸುತ್ತಾರೆ, ಅಂದರೆ ವ್ಯವಸಾಯ ಆರಂಭವಾಗುವಾಗ ಬೂಮಿಗೆ ಮಾಡುವ ಪೂಜೆ ಈ ಕೆಡ್ಡಸ ಆಚರಣೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ ಮಲೆಕುಡಿಯರಲ್ಲಿ ಅಲ್ಲದೆ, ಎಲ್ಲ ಕೃಷಿಕರಲ್ಲೂ ಇದೆ. ಮಲೆಕುಡಿಯರು ಕಲ್ಲುರ್ಟಿ,ಪಂಜುರ್ಲಿ,ಅಂಬಾಟಿಮಲೆದೈವ ಭೈರವ ಹಾಗೂ ಧರ್ಮಸ್ಥಳದ ಮಂಜುನಾಥನನ್ನು ಆರಾಧಿಸುತ್ತಾರೆ.ಧರ್ಮಸ್ಥಳದ ಪ್ರಭಾವ ಬುಹುತೇಕ ಎಲ್ಲ ಬುಡಕಟ್ಟು ಜನಾಂಗಗಳ ಮೇಲೂ ಆಗಿದೆ. ಇತರೇ ಬುಡಕಟ್ಟುಗಳಿಗೆ ಹೋಲಿಸಿದರೆ ಮಲೆಕುಡಿಯರು ಸ್ವಲ್ಪ ಹೆಚ್ಚು ತಿಳುವಳಿಕೆ ಹೊಂದಿದವರಾಗಿದ್ದಾರೆ.

ಮಲೆಕುಡಿ ಬುಡಕಟ್ಟು ಸಮುದಾಯದ ಹೆಸರಿನ ಬಗ್ಗೆ : ಮಲೆಕುಡಿ ಜನಾಂಗದ ಬಗ್ಗೆ ಯಾವುದೆ ಗ್ರಾಂಥಿಕ ಇತಿಹಾಸ ಇಲ್ಲ ಇವರು ಬೆಟ್ಟಗುಡ್ಡಗಳಲ್ಲಿ ವಾಸಿಸುವುದರಿಂದ ಇವರನ್ನು ಸಾಮಾನ್ಯವಾಗಿ ಮಲೆಕುಡಿ ಬುಡಕಟ್ಟಿನ ಜನರು ಎಂದು ಕರೆಯುತ್ತಾರೆ ಆದರೆ ಇವರಿಗೆ ಇವರದೇ ಆದ ಒಂದು ಜಾನಪದ ಇತಿಹಾಸವಿದೆ. ಮಲೆಕುಡಿಯರ ಮೂಲ ಕಥೆಸಾಮಾನ್ಯವಾಗಿ ಬುಡಕಟ್ಟುಗಳು ತಮ್ಮ ಸಮೂಹ ಈ ಭೂಮಿಯಮೇಲೆ ಹೇಗೆ ಹುಟ್ಟಿಕೊಂಡಿತು, ತಮ್ಮ ಮೂಲಪುರುಷ ಯಾರು ಎಂಬುದರ ಬಗ್ಗೆ ಕಥೆಗಳನ್ನು ಹೊಂದಿರುತ್ತವೆ ಅಂದರೆ ಇ ಜಗತ್ತಿಗೆ ತಮ್ಮ ಬುಡಕಟ್ಟು ಸಮೂಹದವನೇ ಮೂಲ ಪುರುಷ ಎಂಬಂತೆ ಕಥೆ ಹೇಳಿಕೊಳ್ಳುವುದುಂಟು ಅಂತೆಯೇ ಮಲೆಕುಡಿಯರಲ್ಲೂ ಈ ಬಗೆಯ ಕಥೆಗಳಿವೆ.ಆ ಕಥೆಯಲ್ಲಿ ಒಂದು ಹೀಗಿದೆ ಈಶ್ವರನು ಯಾವಾಗಲೂ ಭೂಲೋಕವನ್ನು ಪರಿಪಾಲಿಸುವಂಥ ದೈವ. ಈ ಭೂಲೋಕದ ಸಕಲ ಪ್ರಾಣಿಗಳಿಗೂ ಅನ್ನ ನೀರು ನೀಡುತ್ತ ಬಂದವನು. ಪಾರ್ವತಿಗೆ ಒಮ್ಮೆ ಈಶ್ವರನ ಜತೆ ಹೊರಟು ಅವನು ಭೂಲೋಕದ ಸಕಲ ಪ್ರಾಣಿಗಳಿಗೂ ಹೇಗೆ ಆಹಾರ ನೀರು ಹೇಗೆ ಹಂಚುತ್ತಾನೆಂದು ನೋಡಬೇಕೆಂಬ ಆಸೆಯುಂಟಾಯಿತು. ಈ ಆಸೆಯನ್ನು ಪಾರ್ವತಿ ಶಿವನ ಮುಂದೆ ವ್ಯಕ್ತಪಡಿಸಿದಳು. ಅದಕ್ಕೆ ಈಶ್ವರನು ಪಾರ್ವತಿಯನ್ನು ಬರುವುದು ಬೇಡ, ಬಂದರೆ ತನ್ನ ಜತೆ ಕಾಡುಮೆಡು ಸುತ್ತಬೇಕಾಗುತ್ತದೆ, ಎಂದು ಹೇಳಿದ. ಅದಲ್ಲದೆ ಪಾರ್ವತಿಗೆ ಆಗತಾನೆ ಒಂದು ಮಗುವಾಗಿದ್ದು ಅದಕ್ಕೆ ಅವಳು ಆಗಾಗ ಹಾಲು ಕುಡಿಸಬೇಕಾಗಿತ್ತು. ಹೀಗಾಗಿ ಪಾರ್ವತಿ ಭೂಲೋಕ ಸುತ್ತಲು ಬಂದರೆ ಮಗುವಿಗೆ ಆ ದಿನ ಹಾಲು ಕುಡಿಸದೆ, ಎದೆಯಲ್ಲಿ ಹಾಲು ಕಟ್ಟಿಕೊಳ್ಳುತ್ತದೆ. ಎಂತಲೂ ಈಶ್ವರನು ಹೇಳಿದ. ಆದರೆ ಪಾರ್ವತಿ ಈಶ್ವರನ ಮಾತನ್ನು ಕೇಳಲಿಲ್ಲ. ಆ ದಿನ ತನಗೆ ತುಂಬಾ ಬೇಸರವಾಗಿದ್ದುರಿಂದ ಜತೆಯಲ್ಲಿ ಬರುವೆನೆಂದು ಹಠ ಮಾಡಿದಳು. ಇಬ್ಬರೂ ಭೂಲೋಕದ ಕಡೆ ಬಂದು ಕಾಡಿನ ಎಡೆಯಲ್ಲಿ ಹೊರಟರು. ಹೀಗೆ ಕಾಡಿನ ಸಕಲ ಪ್ರಾಣಿಗಳನ್ನು ನೋಡಿಕೊಂಡು ಬಹಳ ಹೊತ್ತು ಹೋಗುವಲ್ಲಿ, ಪಾರ್ವತಿಗೆ ಎದೆಯಲ್ಲಿ ಹಾಲುತುಂಬಿ ಕೊಂಡಿತು. ಆಗ ಈಶ್ವರನು ಸಿಟ್ಟಾಗಿ ಪಾರ್ವತಿ ನಿನಗೆ ನಾನು ಕೈಲಾಸದಲ್ಲೇ ಹೇಳಿದೆ, ನೀನು ಬರುವುದು ಬೇಡ ಎಂದು. ಈಗ ನೋಡು ಎಂಥ ತಾಪತ್ರಯ ಆಯಿತು ಎಂದ.ಅದಕ್ಕೆ ಪಾರ್ವತಿ ಎದೆ ನೋವು ತಾಳಲಾರದೆ ನೋವು ಅನುಭವಿಸತೊಡಗಿದಳು. ಆಗ ಈಶ್ವರನ ಮಾತಿನಂತೆ ಪಾರ್ವತಿ ಒಂದು ಗಿಡದ ಬಳಿಬಂದು ಮಣ್ಣು ತೆಗೆದು ಬೊಂಬೆ ಮಾಡಿ ಅದಕ್ಕೆ ಜೀವ ಬರಿಸಿ ಎದೆಯ ಹಾಲು ಕುಡಿಸಿ ನೋವು ಶಮನ ಮಾಡಿಕೊಂಡಳಂತೆ.ಇನ್ನು ಇಲ್ಲಿ ಸೃಷ್ಟಿಸಿದ ಮಗುವನ್ನು ಕೈಲಾಸಕ್ಕೆ ಕೊಂಡು ಹೊದರೆ ಜನಕ್ಕೆ ಅನುಮಾನವಾಗಬಹುದೆಂದು ಅಲ್ಲೆ ಮಗುವನ್ನು ಬಿಟ್ಟು ಹೋಗಲು ಯೋಚಿಸಿದಳು ಹಾಗೆ ಮಗುವನ್ನು ಒಚಿಟಿ ಬಿಟ್ಟು ಹೋಗುವುದು ಒಳ್ಳೆಯದಲ್ಲವೆಂದು ತಿಳಿದು ಒಂದು ಹೆಣ್ಣನ್ನು ಸೃಷ್ಟಿಮಾಡಿ ಅವರಿಬ್ಬರೂ ಒಟ್ಟಿಗೆ ಬದುಕುವಂತೆ ಮಾಡಿ ಕೈಲಾಸಕ್ಕೆ ಹೋದರು.ಹೀಗೆ ನೋವು ಹತ್ತಿದ ಮೊಲೆಯಹಾಲು ಕುಡಿದು ಅರಣ್ಯದಲ್ಲಿ ಬೆಳದ ಶಿಶುವಿಗೆ ಮೊಲೆಕುಡಿಯ ಎಂದು ಹೆಸರಾಯಿತು ಎಂದು ಕಥೆ ಹೇಳುತ್ತಾರೆ. ಈ ಮೊಲೆಕುಡಿಯನೇ ಕಾಲಕ್ರಮೇಣ ಮಲೆಕುಡಿಯನಾದ ಎನ್ನುತ್ತಾರೆ. ಮಲೆಕುಡಿಯರ ಬಗ್ಗೆ ಮಮತ್ತೊಂದು ವಿವರವಿದೆ ಆದರೆ ಈ ಕಥೆ ಹೇಳುತ್ತಾರೆ.

ಉಪಪಂಗಡಗಳು ಮತ್ತು ಕುಲಬೆಡಗು ಬಳ್ಳಿ :ಮಲೆಕುಡಿ ಬುಡಕಟ್ಟು ಸಮುದಾಯದಲ್ಲಿ 15 ಕ್ಕೂ ಹೆಚ್ಚು ಉಪ ಪಂಗಡಗಳಿದ್ದು ಕೆಲವು ಗ್ರಾಮಗಳಲ್ಲಿ ಒಂದೋಂದು ಉಪ ಪಂಗಡದ ಜನರು ಪ್ರತ್ಯೇಕವಾಗಿ ವಾಸಿಸುತ್ತಾರೆ ಮತ್ತು ಕೆಲವು ಗ್ರಾಮಗಳಲ್ಲಿ ಎಲ್ಲ ಉಪ ಪಂಗಡದ ಜನರು ಜೋತೆಯಾಗಿ ವಾಸಿಸುತ್ತಾರೆ ಹಾಗೂ ಇತರೆ ಉಪ ಪಂಗಡದ ಜನರೋಂದಿಗೆ ಹೊಂದಾಣಿಕೆಯಿಂದ ಸಾಮರಸ್ಯವಾಗಿ ವಾಸಿಸುತ್ತಿದ್ದಾರೆ.

ಮನೆತನದ ಹೆಸರು ಮತ್ತು ಮನೆಯ ಪ್ರಕಾರಗಳು :ಕೆಲವು ಮಲೆಕುಡಿ ಮನೆಗಳಿಗೆ ಮನೆತನದ ಹೆಸರು ಇದ್ದರೂ ಪ್ರಸ್ತುತದಲ್ಲಿ ಅವು ಬಳಕೆಯಲಿಲ್ಲಿ. ಹೆಚ್ಚಿನ ಮಲೆಕುಡಿ ಕುಟುಂಬಗಳಿಗೆ ಯಾವುದೇ ಮನೆತನದ ಹೆಸರುಗಳು ಇರುವುದಿಲ್ಲ. ಹಾಲಿ ವಾಸವಿರುವ ಮನೆ ಮತ್ತು ಯಾವತರದ್ದು :ಮಲೆಕುಡಿ ಜನರು ಬೆಟ್ಟದ ತುದಿಯಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದು ಇವರು ಬೆಟ್ಟದ ಇಳಿಜಾರಿನಲ್ಲಿ ನೀರು ಹರಿಯುವ ಜಾಗಗಳಲ್ಲಿ ಮನೆ ಕಟ್ಟಿಕೊಂಡಿದ್ದಾರೆ.ಇವರ ಮನೆಗಳಲ್ಲಿ ಅಡಿಗೆ ಮನೆ, ಮಲಗುವ ಕೊಣೆ, ನಡುಮನೆ,ಬೂತದ ಮನೆ ಮತ್ತು ಸಾಮಾನು ಸರಂಜಾಮು ಇಡುವ ಕೊಣೆಯನ್ನು ಕಟ್ಟಿಕೊಂಡಿದ್ದಾರೆ.ಇವರ ಮನೆಗಳು ಕೇಂಪು ಬಣ್ಣದಿಂದ ಕೂಡಿವೆ. ಮಲೆಕುಡಿ ಜನಾಂಗದ ಜನರು ವಾಸಿಸುವ ಮನೆಗಳು ಸ್ವಂತ ಜಾಗದಲ್ಲಿ ನಿರ್ಮಿಸಿಕೊಂಡ ಮನೆಗಳಾಗಿವೆ ಹೆಚ್ಚಿನ ಮಲೆಕುಡಿ ಜನರು ಹೆಂಚಿನ ಮನೆಗಳಲ್ಲಿ ವಾಸವಾಗಿದ್ದು ಕೆಲವರು ಶೀಟಿನ ಮನೆಗಳಲ್ಲಿ ವಾಸಿಸುವ ಬಡವರಾಗಿದ್ದಾರೆ.

ಕುಟುಂಬದ ವಿಧ ಮತ್ತು ಪಡಿತರ ಚೀಟಿ ಯಾವ ರೀತಿಯದು : ಎಲ್ಲಾ ಮಲೆಕುಡಿ ಕುಟುಂಬಗಳು ಪಿತೃ ಪ್ರಧಾನ ಕುಟುಂಬಗಳಾಗಿದ್ದು ಕುಟುಂಬದ ನಿರ್ಧಾರಗಳನ್ನು ಮನೆಯ ಮುಖ್ಯಸ್ಥ ತಂದೆ ಅಥವಾ ಮನೆಯ ಹಿರಿಯ ಮಗ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮಲೆಕುಡಿ ಕುಟುಂಬಗಳು ಎಪಿಎಲ್ ಬಿಪಿಎಲ್ ಮತ್ತು ಅಂತ್ಯೋದಯ ಮೂರು ರೀತಿಯ ಪಡಿತರ ಚೀಟಿಯನ್ನು ಹೊಂದಿದ್ದು ಹೆಚ್ಚಿನ ಕುಟುಂಬಗಳು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದಾರೆ ನಂತರದ ಸ್ಥಾನದಲ್ಲಿ ಎಪಿಎಲ್ ಪಡಿತರ ಚೀಟಿಯನ್ನು ಹೊಂದಿರುವವರು ಇದ್ದಾರೆ ಹಾಗು ಅತಿಕಡಿಮೆ ಸಂಖೈಯಲ್ಲಿ ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರುವವರು ಇದ್ದಾರೆ.

ಬೀದಿ,ಮನೆ ವಿದ್ಯುತ್ ವ್ಯವಸ್ಥೆ : ಹೆಚ್ಚಿನ ಮಲೆಕುಡಿ ಕುಟುಂಬಗಳು ವಿದ್ಯುತ್ ದೀಪದ ವ್ಯವಸ್ಥೆಯನ್ನು ಹೊಂದಿವೆ ಹಾಗೂ ಕೆಲವು ಕುಟುಮಭಗಳು ಇನ್ನೂ ಸೀಮೇಎಣ್ಣೆದೀಪಗಳಲ್ಲೇ ವಾಸಮಾಡುತ್ತಿವೆ. ಸೌರ ದೀಪ ವ್ಯವಸ್ಥೆ ಕಂಡುಬರುವುದಿಲ್ಲ ಹಾಗೂ ಮಲೆಕುಡಿ ಜನರು ವಾಸಿಸುವ ಗ್ರಾಮಗಳಲ್ಲಿ ಕೆಲವು ಗ್ರಾಮಗಳು ಬೀದಿದೀ¥ದ ವ್ಯವಸ್ಥೆÀ ಹೊಂದಿದ್ದರೆ ಕೆಲವು ಗ್ರಾಮಗಳು ಬೀದಿದೀದ ವ್ಯವಸ್ಥೆಯನ್ನು ಹೊಂದಿಲ್ಲ.

ಕುಡಿಯುವ ನೀರಿನ ಬಗ್ಗೆ :ಮಲೆಕುಡಿ ಜನಾಂಗದ ಎಲ್ಲಾ ಕುಟುಂಬಗಳು ಕುಡಿಯಲು ಭಾವಿ ನೀರಿನ ವ್ಯವಸ್ಥೆಯನ್ನು ಹೊಂದಿವೆ ಕೆಲವು ಕುಟುಂಬಗಳು ಕುಡಿಯಲು ನದಿ, ಕಾಲುವೆ, ಝರಿ ನೀರನ್ನು ಕುಡಿಯಲು ಬಳಸುತ್ತಾರೆ. ಭಾವಿಗಳು ಮನೆಯ ಆವರಣದೊಳಗೆ ಇದ್ದು ಸಾರ್ವಜನಿಕ ಬಾವಿಗಳು ಮತ್ತು ಬೀದಿ ಕೊಳಾಯಿ ಹಾಗೂ ಕೈಪಂಪುಗಳು ಅಷ್ಟೋಂದು ಕಂಡು ಬರುವುದಿಲ್ಲ.

'ಶೌಚಾಲಯದ ಬಗ್ಗೆ ಮಾಹಿತಿ :'ಪ್ರತಿಯೊಂದು ಮಲೆಕುಡಿ ಜನಾಂಗದ ಕುಟುಂಬವು ಸೌಚಾಲಯವನ್ನು ಹೊಂದಿವೆ. ಶೌಚಾಲಯವು ಮನೆಯ ಆವರಣದಿಂದ ಪ್ರತ್ಯೇಕವಾಗಿವೆ. ಕೆಲವು ಮಲೆಕುಡಿ ಕುಟುಂಬಗಳು ಶೌಚಾಲಯವನ್ನು ಗ್ರಾಮಪಂಚಾಯಿತಿ ಸೌಲಭ್ಯಗಳಿಂದ ನಿರ್ಮಿಸಿ ಕೊಂಡಿದ್ದರೆ ಇನ್ನೂ ಕೆಲವು ಕುಟುಂಬಗಳು ಸ್ವಂತ ಖರ್ಚಿನಿಂದ ಸೌಚಾಲಯ ನಿರ್ಮಿಸಿಕೊಡಿದ್ದಾರೆ. '

ವಲಸೆ ಮತ್ತು ವಲಸೆಗೆ ಕಾರಣಗಳು' :ಮಲೆಕುಡಿ ಸಮುದಾಯದ ಯಾವುದೇ ಕುಟುಂಬಗಳು ವಲಸೆ ಬಂದಿಲ್ಲ ಇವರು ಇಲ್ಲಿನ ಮೂಲ ನಿವಾಸಿಗಳಾಗಿದ್ದಾರೆ ಆದರೆ ಕೆಲವರು ಮದುವೆಯ ನಂತರ ಹೆಂಡತಿ ಮನೆಯಲ್ಲಿಯೇ ವಾಸವಾಗಿದ್ದಾರೆ. 'ಆದಾಯ ಮತ್ತು ಆದಾಯದ ಮೂಲಗಳು;' ಪ್ರತಿಯೊಂದು ಮಲೆಕುಡಿ ಜನಾಂಗದ ಕುಟುಂಬಗಳ ಆದಾಯವು ಉತ್ತಮವಾಗಿಲ್ಲ ಮಲೆಕುಡಿ ಕುಟುಂಬಗಳ ವಾರ್ಷಿಕ ಆದಾಯವು 20000ರೂ ಗಳಿಂದ ಗರಿಷ್ಠ 35000 ರೂಗಳು ವರಗೆ ಇದೆ. ಇವರ ಆದಾಯ ಮೂಲಗಳೇಂದರೆ ಹೆಚ್ಚಿನ ಜನರು ದಣಿಗಳ ಭೂಮಿಯಲ್ಲಿ ಕೂಲಿ ಕೆಲಸ ಮಾಡುತ್ತಾರೆ.ಪುರುಷರು ಕೃಷಿಯಲ್ಲಿ ತೊಡಗಿ ಆದಾಯ ಸಂಪಾಧನೆ ಮಾಡಿದರೆ ಮಹೀಳೆಯರು ಮನೆಯಲ್ಲಿ ಕುಳಿತು ಬೀಡಿಕಟ್ಟುವುದು, ಹೈನುಗಾರಿಕೆ ಹಾಗೂ ಕೂಲಿ ಕೆಲಸ ಮಾಡಿ ಅದಾಯ ಸಂಪಾಧನೆ ಮಾಡುತ್ತಾರೆ.

ಭೂ ಹಿಡುವಳಿ ಮತ್ತು ವಿವರ : ಹೆಚ್ಚಿನ ಮಲೆಕುಡಿ ಕುಟುಂಬಗಳು ಬೂಮಿಯನ್ನು ಹೊಂದಿಲ್ಲ ಕಲವೆ ಕೆಲವು ಕುಟುಂಬಗಳು ಬೂಮಿಯನ್ನು ಹೊಂದಿವೆ ಆದರೆ ಅದರ ಪ್ರಮಾಣ ಸಣ್ಣ ಭೂ ಹಿಡುವಳಿಯಾಗಿದೆ ಹೆಚ್ಚಿನ ಕುಟುಮಭಗಳು ಜೀವನೋಪಾಯಕ್ಕಾಗಿ ಕಾಡಿನ ಪ್ರದೇಶವನ್ನು ಕೃಷಿ ಬೂಮಿಯನ್ನಾಗಿ ಮಾಡಿಕೊಂಡಿದ್ದಾರೆ ಇವರಿಗೆ ಯಾವುದೇ ಹಕ್ಕು ಪತ್ರಗಳು ಸಿಕ್ಕಿಲ್ಲ ಹೆಚ್ಚಿನ ಕುಟುಂಬಗಳು ಮನೆ ನಿರ್ಮಿಸಿಕೊಂಡಿರು ಸೆಂಟ್ಸ್ ಜಾಗಕ್ಕೆ ಮಾತ್ರ ಹಕ್ಕು ಪತ್ರ ಸಿಕ್ಕಿದೆ. ಸ್ಥಿರ ಮತ್ತು ಚರ ಆಸ್ತಿಗಳು : ಕೆಲವು ಕುಟುಂಬಗಳು ಸ್ಥಿರ ಮತ್ತು ಚರ ಆಸ್ತಿಯನ್ನು ಹೊಂದಿದ್ದರೆ ಕೆಲವು ಕೆಲವು ಕುಟುಂಬಗಳು ಸ್ಥಿರ ಮತ್ತು ಚರ ಆಸ್ತಿಯನ್ನು ಹೊಂದಿಲ್ಲ.

ಸಾಕು ಪ್ರಾಣಿಗಳು : ಮಲೆಕುಡಿ ಜನಾಂಗದ ಜನರು ಕೆಲವು ಪ್ರಾಣಿಗಳ ಮೇಲೆ ತುಂಬ ಪ್ರೀತಿಯನ್ನು ಹೊಂದಿದ್ದು ಅವಯಗಳನ್ನು ಸಾಕಲು ಪ್ರಾರಂಭ ಮಾಡಿದ್ದಾರೆ ಪ್ರತಿಯೊಂದು ಮನೆಯಲ್ಲಿ 2ಕ್ಕಿಂತ ಹೆಚ್ಚು ನಾಯಿಗಳನ್ನು ಮತ್ತು ಬೆಕ್ಕುಗಳನ್ನು ಹಾಗು ಹಸು ಮತ್ತು ಕೋಳಿಗಳನ್ನು ಸಾಕಿದ್ದಾರೆ ಇವುಗಲನ್ನು ಹೊರತುಪಡಿಸಿ ಬೇರೆ ಪ್ರಾಣಿಗಳು ಕಂಡುಬರುವುದಿಲ್ಲ. ಆಧುನಿಕ ಸಾಮಾಗ್ರಿಗಲು : ಪ್ರತಿಯೊಂದು ಕುಟುಂಬಗಳಲ್ಲಿಯೂ ಹಿಂದಿನ ಕಾಲದ ಸಾಮಾಗ್ರಿಗಳು ಹಾಗೂ ಆಧುನಿಕ ಕಾಲದ ಸಾಮಾಗ್ರಿಗಳನ್ನು ಬಳಸುತ್ತಾರೆ. ಯಾವುದೇ ಐಷರಾªಮಿಯಾದ ಆಧುನಿಕ ಸಾಮಾಗ್ರಿಗಳು ಕಂಡುಬರುವುದಿಲ್ಲ. ಟಿವಿ,ಪ್ಯಾನ್,ಕುರ್ಚಿ,ಟೇಬಲ್ ಗಳು ಕಂಡುಬರುತ್ತವೆ ಆದರೆ ವಾಷಿಂಗ್ ಮಿಷನ್,ಪ್ರೀಡ್ಜ್,ಮಿಕ್ಸಿ,ಕೂಕ್ಕರ್ ಮುಂತಾದ ವಿದ್ಯುತ್ ಆಧಾರಿತ ಯಂತ್ರಗಳು ಕಂಡುಬರುವುದಿಲ್ಲ ಹಳೆಯ ಕಾಲದ ಅಡುಗೆ ಸಾಮಾಗ್ರಿಗಳು ಮತ್ತು ಗೃಹ¨ಳಕೆ ಸಾಮಾಗ್ರಿಗಳು ಕಂಡುಬರುತ್ತವೆ

ಸಾಮಾಜಿಕ ಭದ್ರತೆ :ಮಲೆಕುಡಿ ಜನಾಂಗದ ಕುಟುಂಬಗಳು ಸಾಮಾಜಿಕವಾಗಿ ಉತ್ತಮವಾಗಿದ್ದಾರೆ ಇತರೆ ಸನುದಾಯದವರ ಜೋತೆ ಯಾವಯದೆ ಸಂಘರ್ಷ ಮಾಡಿಕೊಂಡಿಲ್ಲ ಆದರೆ ಮೂಲ ಸೌಕರ್ಯಗಳ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆಧುನಿಕ ಜೀವನ ಶೈಲಿ :ಮಲೆಕುಡಿ ಜನಾಂಗದ ಜನರು ಇತ್ತೀಚಿನ ದಿನಗಳಲ್ಲಿ ಆಧುನಿಕ ಜೀವನ ಶೈಲಿಯಲ್ಲಿ ಆಸಕ್ತಿ ಹೊಂದಿದ್ದಾರೆ ಸ್ತ್ರೀರಿಗಿಂತ ಪುರುಷರು ಆಧುನಿಕ ಜೀವನ ಶೈಲಿಯನ್ನು ಇಷ್ಟಪಡುತ್ತಾರೆ ಆದರೆ ಮನೆಯ ಹರಿಯರು ಹಾಗೂ ಮನೆತನದವರು ಸಂಪ್ರದಾಯಿಕ ಜೀವನ ಶೈಲಿಯನ್ನು ಇಷ್ಟಪಡುತ್ತಾರೆ. '

ಕುಟುಂಬದ ಜನಗಣತಿ : ಸರ್ಕಾರದ ಕಾಲ ಕಾಲಕ್ಕೆ ನಡೆಯುವ ಜನಗಣತಿಯಲ್ಲಿ ಇವರ ಕುಟುಂಬದ ಜನಗಣತಿಯನ್ನು ಮಾಡುತ್ತಾರೆ ಹಾಗೂಅಂಗನವಾಡಿ ವ್ಯಾಪ್ತಿಯಲ್ಲಿ ಮಲೆಕುಡಿ ಜನಾಂಗದ ಕುಟುಂಬಗಳ ಜನಗಣತಿಯನ್ನು ಮಾಡಿದ್ದಾರೆ ಲಿಂಗ, ವಯಸ್ಸು, ಮದುವೆ ಸ್ಥಿತಿಗತಿ : ಪುರುಷರಿಗಿಂತ ಸ್ತ್ರೀಯರ ಪ್ರಮಾಣ ಹೆಚ್ಚಾಗಿದೆ ಸಾಮಾನ್ಯವಾಗಿ ಮಲೆಕುಡಿ ಜನರ ಮದುವೆ ವಯಸ್ಸು ಸುಮಾರು 30ರ ನಂತರವಾಗಿದೆ. ಮಲೆಕುಡಿ ಜನರ ಹೆಣ್ಣು ಮಕ್ಕಳನ್ನು ಬ್ರಾಹ್ಮಣ ಪುರುಷರು ಮದುವೆ ಮಾಡಿಕೊಳ್ಳುತ್ತಾರೆ ಆದರೆ ಮಲೆಕುಡಿ ಪುರುಷರಿಗೆ ಬ್ರಾಹ್ಮಣರ ಹೆಣ್ಣು ಮಕ್ಕಳನ್ನು ಮದುವೆ ಮಾಡುವುದಿಲ್ಲ. ಮದುವೆಯು 2 ದಿನಗಳ ಕಾಲ ನಡೆಯುತ್ತದೆ ಶಿಕ್ಷಣ ಮಟ್ಟ, ಮೂಲ ಕಸುಬು ಮತ್ತು ಉದ್ಯೋಗದ ಬಗ್ಗೆ :ಮಲೆಕುಡಿ ಜನಾಂಗದಲ್ಲಿ ಪದವಿ ಪೂರ್ವಶಿಕ್ಷಣದೊಳಗಿನ ಶಿಕ್ಷಣ ಪಡೆದವರ ಸಂಖ್ಯೆ ಹೆಚ್ಚಾಗಿದೆ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರ ಸಂಖ್ಯೆ ತುಂಬಾ ಕಡಿಮೆ ಇದೆ ಅನಕ್ಷರಸ್ಥರು ಹಾಗೂ ಶಾಲೆಯನ್ನು ಬಿಟ್ಟಿರುವರು ಕೂಲಿ ಹಾಗೂ ಕೃಷಿಯಲ್ಲಿ ತೊಡಗಿದ್ದಾರೆ ಸರ್ಕಾರದಿಂದ ಪಡೆದ ಸೌಲಭ್ಯಗಳು : ಮಲೆಕುಡಿ ಜನಾಂಗದ ಕುಟುಂಬದವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಹಾಗೂ ಅತಿ ಕಡಿಮೆ ಸೌಲಭ್ಯಗಳನ್ನು ಪಡೆದಿದ್ದಾರೆ ಸರ್ಕಾರದಿಂದ ಪಡೆದ ಸೌಲಭ್ಯಗಳೆಂದರೆ ಪೌಷ್ಠಿಕ ಆಹಾರ, ಶೌಚಾಲಯ, ಆಶ್ರಯಮನೆ, ಭಗ್ಯಜ್ಯೋತಿ ವಿದ್ಯುತ್ ಶಕ್ತಿ ಇತ್ಯಾದಿ. ಮಲೆಕುಡಿ ಜನಾಂಗದ ಸಾಮಾಜಿಕ ಸ್ಥಿತಿಗತಿಗಳು

ವಾಸಿಸುವ ಸ್ಥಳ ಮತ್ತು ಪರಿಸರ :ಮಲೆಕುಡಿ ಜನಾಂಗದ ಜನರು ಪಶ್ಚಿಮ ಘಟ್ಟ ವ್ಯಾಪ್ತಿಯ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ,ಬಂಜಾರು ಮಲೆ, ಅಂಬಾಟೆ ಮಲೆ, ಕೋಲೋಡಿ, ನೆರಿಯಾ ಕುದುರೆ ಮುಖ ಅಭಂiÀiರಣ್ಯ ಮತ್ತು ಆಗೊಂಬೆ ಅರಣ್ಯ ವ್ಯಾಪ್ತಿಯ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಾರೆ ಇವರು ವಾಸಿಸುವ ಪರಿಸರ ತುಂಬಾ ಸುಂದರವಾಗಿದ್ದು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ಸಮುದಾಯದ ಭಾಷೆ : ಮಲೆಕುಡಿ ಜನಾಂಗದ ಜನರಿಗೆ ಯಾವುದೇ ಪ್ರತ್ಯೇಕವಾದ ಭಾಷೆ ಇರುವುದಿಲ್ಲ ಇವರು ತುಳು ಹಾಗೂ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ

ಶಾರೀರಿಕ ಲಕ್ಷಣಗಳು :' ಮಲೆಕುಡಿ ಜನಾಂಗದ ಜನರ ಶಾರೀರಿಕ ಲಕ್ಷಣವೆಂದರೆ ನಸುಗೆಂಪು ಬಣ್ಣ, ನೀಳವಾದ ದೇಹಎತ್ತರ,ಚಪ್ಪಟೆ ಮೂಗು,ತೀಕ್ಷಣ ಕಣ್ಣು,ಸೌಮ್ಯ ಮುಖ,ಚುರುಕುಳ್ಳವರು ಹಾಗೂ ಮೃದು ಸ್ವಭಾವದ ವ್ಯಕ್ತಿಗಳಾಗಿದ್ದು ಸದೃಡವಾದ ದೇಹವನ್ನು ಹೊಂದಿದ್ದಾರೆ. ಹಾಲಿ ವಾಸವಿರುವ ಮನೆ ಮತ್ತು ಯಾವತರದ್ದು : ಮಲೆಕುಡಿ ಜನಾಂಗದ ಜನರು ವಾಸಿಸುವ ಮನೆಗಳು ಸ್ವಂತ ಜಾಗದಲ್ಲಿ ನಿರ್ಮಿಸಿಕೊಂಡ ಮನೆಗಳಾಗಿವೆ ಹೆಚ್ಚಿನ ಮಲೆಕುಡಿ ಜನರು ಹೆಂಚಿನ ಮನೆಗಳಲ್ಲಿ ವಾಸವಾಗಿದ್ದು ಕೆಲವರು ಶೀಟಿನ ಮನೆಗಳಲ್ಲಿ ವಾಸಿಸುವ ಬಡವರಾಗಿದ್ದಾರೆ.'''''

ಶೌಚಾಲಯದ ವ್ಯವಸ್ಥೆ : ಪ್ರತಿಯೊಂದು ಮಲೆಕುಡಿ ಜನಾಂಗದ ಕುಟುಂಬವು ಸೌಚಾಲಯವನ್ನು ಹೊಂದಿವೆ. ಶೌಚಾಲಯವು ಮನೆಯ ಆವರಣದಿಂದ ಪ್ರತ್ಯೇಕವಾಗಿವೆ. ಕೆಲವು ಮಲೆಕುಡಿ ಕುಟುಂಬಗಳು ಶೌಚಾಲಯವನ್ನು ಗ್ರಾಮಪಂಚಾಯಿತಿ ಸೌಲಭ್ಯಗಳಿಂದ ನಿರ್ಮಿಸಿ ಕೊಂಡಿದ್ದರೆ ಇನ್ನೂ ಕೆಲವು ಕುಟುಂಬಗಳು ಸ್ವಂತ ಖರ್ಚಿನಿಂದ ಶೌಚಾಲಯ ನಿರ್ಮಿಸಿಕೊಡಿದ್ದಾರೆ.ಆದರೆ ಸಾಮೊಹಿಕ ಮತ್ತು ಸಾರ್ವಜನಿಕ ಶೌಚಾಲಯಗಳು ಇವರು ವಾಸಿಸುವ ಸ್ಥಳಗಳಲ್ಲಿ ಕಂಡುಬರುವುದಿಲ್ಲ. ಕುಡಿಯುವ ನೀರಿನ ಬಗ್ಗೆ :ಮಲೆಕುಡಿ ಜನಾಂಗದ ಎಲ್ಲಾ ಕುಟುಂಬಗಳು ಕುಡಿಯಲು ಭಾವಿ ನೀರಿನ ವ್ಯವಸ್ಥೆಯನ್ನು ಹೊಂದಿವೆ ಕೆಲವು ಕುಟುಂಬಗಳು ಕುಡಿಯಲು ನದಿ, ಕಾಲುವೆ, ಝರಿ ನೀರನ್ನು ಕುಡಿಯಲು ಬಳಸುತ್ತಾರೆ. ಭಾವಿಗಳು ಮನೆಯ ಆವರಣದೊಳಗೆ ಇದ್ದು ಸಾರ್ವಜನಿಕ ಬಾವಿಗಳು ಮತ್ತು ಬೀದಿ ಕೊಳಾಯಿ ಹಾಗೂ ಕೈಪಂಪುಗಳು ಅಷ್ಟೋಂದು ಕಂಡು ಬರುವುದಿಲ್ಲ.

ಮನೆಯ ದೀಪ ಮತ್ತು ಅಡುಗೆಗೆ ಬಳಸುವ ಇಂಧನಗಳು  :ಮಲೆಕುಡಿ ಜನಾಂಗದ ಪ್ರತಿಯೊಂದು ಮನೆಯುಅಡುಗೆ ಮಾಡಲು ಕಟ್ಟಿಗೆಗಳನ್ನು ಬಳಸುತ್ತಾರೆ ಗ್ಯಾಸ್ ಸೌಲಭ್ಯ ಇರುವುದಿಲ್ಲ ಆದರೆ ಮನೆಯ ದೀಪದಮೂಲವಾಗಿ ಹೆಚ್ಚಿನ ಮಲೆಕುಡಿ ಕುಟುಂಬಗಳು ವಿದ್ಯುತ್ ದೀಪದ ವ್ಯವಸ್ಥೆಯನ್ನು ಹೊಂದಿವೆ ಹಾಗೂ ಕೆಲವು ಕುಟುಮಭಗಳು ಇನ್ನೂ ಸೀಮೇಎಣ್ಣೆದೀಪಗಳಲ್ಲೇ ವಾಸಮಾಡುತ್ತಿವೆ. ಸೌರ ದೀಪ ವ್ಯವಸ್ಥೆ ಕಂಡುಬರುವುದಿಲ್ಲ.

ಸ್ಥಿರ ಮತ್ತು ಚರ ಆಸ್ತಿಗಳು : ಕೆಲವು ಕುಟುಂಬಗಳು ಸ್ಥಿರ ಮತ್ತು ಚರ ಆಸ್ತಿಯನ್ನು ಹೊಂದಿದ್ದರೆ ಕೆಲವು ಕೆಲವು ಕುಟುಂಬಗಳು ಸ್ಥಿರ ಮತ್ತು ಚರ ಆಸ್ತಿಯನ್ನು ಹೊಂದಿಲ್ಲ. ದ್ವಿಚಕ್ರ ವಾಹನ, ಟಿವಿ,ಮೋಬೈಲ್ ಮುಂತಾದವುಗಳನ್ನು ಹೊಂದಿದ್ದಾರೆ. ಇತರೆ ಸಮುದಾಯದ ನಡುವಿನ ಸಂಬಂಧ: ಮಲೆಕುಡಿ ಜನಾಂಗದ ಜನರು ತಾವು ವಾಸಿಸುವ ಪರಿಸರದಲ್ಲಿ ಇತರೆ ಸಮುದಾಯದವರ ಜೋತೆ ಉತ್ತಮವಾದ ಸಂಬಂಧವನ್ನು ಹೊಂದಿದ್ದಾರೆ ಯಾವುದೇ ಸಮುದಾಯದವರ ಜೋತೆ ಯಾವುದೇ ಸಂಘರ್ಷ ಮಾಡಿಕೊಂಡಿಲ್ಲ

ಅವಿಭಕ್ತ ಕುಟುಂಬ ಮತ್ತು ವಿಭಕ್ತ ಕುಟುಂಭ : ಮಲೆಕುಡಿ ಜನಾಂಗದ ಜನರು ಅವಿಭಕ್ತ ಕುಟುಂಭ ಮತ್ತು ವಿಭಕ್ತ ಕುಟುಂಬ ಎಂಬ ಎರಡು ಪ್ರಕಾರದಲ್ಲಿಯೂ ವಾಸಿಸುತ್ತಿದ್ದು ಹೆಚ್ಚಿನ ಕುಟುಂ¨ಗಳು ಅವಿಭಕ್ತ ಕುಟುಂಬಗಳಲ್ಲಿ ವಾಸಿಸುತ್ತಿದ್ದಾರೆ.

ಆಹಾರ ಪದ್ದತಿ :ಮಲೆಕುಡಿ ಜನಾಂಗದ ಜನರು ಸಸ್ಯಹಾರಿ ಹಾಗೂ ಮಾಂಸಹಾರಿಗಳಾಗಿದ್ದಾರೆ. •

ಮಲೆಕುಡಿ ಜನರು ಬಳಸುವ ಮಾಂಸಹಾರ:ಹಂದಿ ಮಾಂಸ,ಕಡವೆ ಮಾಂಸ, ಜಿಂಕೆಮಾಂಸ,ಮೊಲ,ಬರಿಂಕ,ಮುಸು,ಕಾಡುಕುರಿ,ಕಾಡುಕೋಳಿ,ಚಟ್ಟಿ,ಮುಳ್ಳುಹಂದಿ,ಆಲಂಕು,ಉರೆ ಮತ್ತು ಕೆಂಚಳಿಲು ಗಳನ್ನು ಮಾಂಸಹಾರವಾಗಿ ಬಳಸುತ್ತಾರೆ. ಹಾಗೂ ಇವರ ಜನಪ್ರೀಯವಾದ ಆಹಾರವಾಗಿದೆ ಪ್ರತಿದಿನ ಊಟದಲ್ಲಿ ಮೀನು ಬಳಸುತ್ತಾರೆ. •

ಮಲೆಕುಡಿಜನರುಬಳಸುವಸಸ್ಯಹಾರ:ಅಂದು ತಾಳೆಮರದಹಿಟ್ಟು,ಬಿಂಗಿರಿ,ಜೋಳ,ಸಿಹಿಗೆಣಸು,ಮರಗೆಣಸು,ಸೂಣಗೆಣಸು,ತುಪ್ಪೆಗೆಣಸು,ಸುವರ್ಣಗೆಡ್ಡೆಗಳನ್ನು ಬಳಸಿ ಸಂಬಾರು ಮಾಡಿಕೊಂಡು ಆಹಾರ ರೂಪದಲ್ಲಿ ಬಳಸುತ್ತಾರೆ.ಇಂದು ಭತ್ತ,ಕ್ಯಾರೆಟ್,ಬೀಟ್ರೋಟ್,ಬೀನ್ಸ್,ಕೋಸು,ಬದನೆ ಕಾಯಿ,ಆಲೂಗೆಡ್ಡೆ, ಮಂಗಲೂರು ಸೌತೆಕಾಯಿ, ನುಗ್ಗೆಕಾಯಿ,ಅಕ್ಕಿ,ಜೋಳ ಮತ್ತು ಗೋದಿಯನ್ನು ಆಹಾರವಾಗಿ ಬಳಸುತ್ತಾರೆ.

• ಮಲೆಕುಡಿ ಜನರು ಬಳಸುವ ಹಣ್ಣಿನ ಪದಾರ್ಥಗಳು: ಮಲೆಕುಡಿ ಜನರು ಹಲಸಿನ ಹಣ್ಣು,ಗೇರು ಹಣ್ಣು, ಕಾಡು ಬಾಳೆ,ನೆಲ್ಲಿ ಕಾಯಿ,ಕಾವೆ ಹಣ್ಣು,ಮಾವಿನ ಹಣ್ಣು ಹಾಗೂ ಬಾಳೆಹಣ್ಣುಗಳನ್ನು ಬಳಸುತ್ತಾರೆ.

ಪಡಿತರ ಚೀಟಿಗಳು : ಮಲೆಕುಡಿ ಕುಟುಂಬಗಳು ಎಪಿಎಲ್ ಬಿಪಿಎಲ್ ಮತ್ತು ಅಂತ್ಯೋದಯ ಮೂರು ರೀತಿಯ ಪಡಿತರ ಚೀಟಿಯನ್ನು ಹೊಂದಿದ್ದು ಹೆಚ್ಚಿನ ಕುಟುಂಬಗಳು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದಾರೆ ನಂತರದ ಸ್ಥಾನದಲ್ಲಿ ಎಪಿಎಲ್ ಪಡಿತರ ಚೀಟಿಯನ್ನು ಹೊಂದಿರುವವರು ಇದ್ದಾರೆ ಹಾಗು ಅತಿಕಡಿಮೆ ಸಂಖೈಯಲ್ಲಿ ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರುವವರು ಇದ್ದಾರೆ.

ಗೃಹ ಉಪಯೋಗಿ ವಸ್ತುಗಳು : ಮಲೆಕುಡಿ ಜನಾಂಗದ ಮನೆಗಳಲ್ಲಿ ಅಂದು ಮಣ್ಣಿನ ಮಡಿಕೆ, ಕುಡಿಕೆ, ಪಡುಗೆ, ಹಿತ್ತಾಳೆ ಮತ್ತು ತಾಮ್ರದ ಕೊಡ ಹಾಗೂ ಹಂಡೆಗಳನ್ನು ಬಳಸುತ್ತಿದ್ದರು ಇಂದು ಪ್ಲಾಸ್ಟಿಕ್ ಕೊಡಗಳು, ಅಲ್ಯೂಮಿನಿಯಂ ಪತ್ರೆಗಳು, ಉಕ್ಕಿನ ಪಾತ್ರೆಗಳು ಹಾಗೂ ಟಿವಿ, ಟೇಬಲ್, ಕುರ್ಚಿಗಳು ಗೃಹ ಉಪಯೋಗಿ ವಸ್ತುಗಳಾಗಿವೆ ಅಷ್ಟೋಂದು ವಸ್ತುಗಳು ಕಂಡುಬರುವುದಿಲ್ಲ.

ವೇಷಭೂಷಣಗಳು : ಮಲೆಕುಡಿ ಜನಾಂಗದ ಗಂಡಸರುಅಂಗಿ, ಪಂಚೆ,ಕಚ್ಚೆ, ಮತ್ತು ನೀಲಿ ಅಂಗಿಗಳನ್ನು ಧರಿಸುತ್ತಾರೆ ಮಲೆಕುಡಿ ಜನಾಂಗದ ಹೆಂಗಸರು ಸೀರೆ,ಕುಪ್ಪಸ,ಲಂಗ,ರವಿಕೆ,ಕರಿಮಣಿ,ಓಲೆ,ಹವಳ ಹಾಗೂ ಬೆಳ್ಳಿಯ ಸರಗಳನ್ನು ಧರಿಸುತ್ತಾರೆ ಮತ್ತು ಕೆಲವು ವಿಶೇಷ ಸಂಧರ್ಭಗಳಲ್ಲಿ ವಿಶೇಷವಾದ ಉಡುಗೆ ತೊಡುಗೆಗಳನ್ನು ಧರಿಸುತ್ತಾರೆ ಕಲವು ಪುರುಷರು ಜಮೀನುಗಳಲ್ಲಿ ಕೆಲಸ ಮಾಡುವಾಗ ಖಾಲಿ ಮೈ ನಲ್ಲಿ ಕೆಲಸ ಮಾಡುತ್ತಾರೆ.

ಧಾರ್ಮಿಕ ಆಚಾರಣೆಗಳು : ಮಲೆಕುಡಿ ಜನಾಂಗದ ಜನರು ಹಿಂಧೂ ಸಂಪ್ರದಾಯದ ಎಲ್ಲಾ ಹಬ್ಬಗಳನ್ನು ಆಚರಣೆ ಮಾಡುತ್ತಾರೆ ಇವರಿಗೆ ಅಂತ ಯಾವುದೇ ಪ್ರತ್ಯೇಕವಾದ ವಿಶಿಷ್ಠವಾದ ಹಬ್ಬಗಳು ಇಲ್ಲ ಹಿಂಧೂ ಸಂಪ್ರದಾಯದ ಎಲ್ಲಾ ಹ್ಬಗಳನ್ನು ಆಧುನಿಕ ಶೈಲಿಯಲ್ಲಿ ಆಚರಣೆ ಮಾಡುತ್ತಾರೆ ಹಬ್ಬಗಳನ್ನು 2 ದಿನ ನೆಂಟರೋಂದಿಗೆ ಮಾಡುತ್ತಾರೆ ಮೊದಲನೆ ದಿನ ಸಸ್ಯಹಾರವಾದರೆ ಎರಡನೆ ದಿನ ಮಾಂಸಹಾರ ಮಾಡುತ್ತಾರೆ

ಸಂಸ್ಕಾರಗಳು : ಜನನ: ಹಿಂದಿನ ಕಾಲದಲ್ಲಿ ಜನನ ಮನೆಗಳಲ್ಲಿ ಮನೆಯ ಹಿರಿಯರಿಂದ ನಡೆಯುತ್ತಿದ್ದು ಆಧುನಿಕ ಕಾಲದಲ್ಲಿ ಜನನ ಆಸ್ಪತ್ರೆಯಲ್ಲಿ ಆಗುತ್ತಿದೆ ಭಾಣಂತಿ ಮಹೀಲೆಯರಿಗೆ ವಿಶೇಷವಾದ ಆರೈಕೆಯೊಂದಿಗೆ ನೋಡಿಕೊಳ್ಳುತ್ತಾರೆ ಜನನದ ನಂತರ ಭಾಣಂತಿ ಹಾಗೂ ನವಜಾತ ಶಿಶುವನ್ನು ಹೊರಗಡೆ ಇಟ್ಟು 12 ದಿನಗಳ ಕಾಲ ಸೂತಕ ಆಚರಣೆ ಮಢುತ್ತಾರೆ ನಂತರ ಶುದ್ದಿಮಾಡಿ ಮನೆಯ ಒಳಗಡೆ ಕರೆದುಕೊಳ್ಳುತ್ತಾರೆ.

ಋತುಮತಿ ಶಾಸ್ತ್ರ : ಹೆಣ್ಣು ಮಕ್ಕಳು 14 ರಿಂದ 16 ನೆ ವಯಸ್ಸಿನಲ್ಲಿ ಋತುಮತಿ ಆಗುತ್ತಾರೆ ಋತುಮತಿ ಎಂದು ತಿಳಿದಾಗ ನಾಲ್ಕು ದಿ ಮನೆಯಿಂದ ಹೊರಗಡೆ ಇರಿಸಿ ಸೂತಕ ಆಚರಣೆ ಮಾಡುತ್ತಾರೆ ನಂತರ ಶುದ್ದಿಮಾಡಿ ಮನೆಯೊಳಗೆ ಪ್ರವೇಶ ಕೊಡುತ್ತಾರೆ 12 ದಿನಗಳ ನಂತರ ನೆಂಟರು ಸಂಬಂದಿಕರಿಗೆ ಮತ್ತು ಗ್ರಾಮದ ಜನರಿಗೆ ತಿಳಿಸಿ ಹಸಮಣೆ ಕಾರ್ಯ ಮಾಡುತ್ತಾರೆ ಮದು ಮಗಳ ರೀತಿಯಲ್ಲಿ ಸಿಂಗರಿಸಿ ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಾರೆ ಕೆಲವರು ಅದ್ದೂರಿಯಾಗಿ ಮಾಡಿದ್ದರೆ ಇನ್ನೂ ಕಲವರು ಸರಳವಾಗಿ ಆಚರಣೆ ಮಾಡುತ್ತಾರೆ ಇದಕ್ಕೆ ಸುಮಾರು 30000 ದಿಮಧ 40000 ಸಾವಿರ ರೂ ಖರ್ಚು ಮಾಡುತ್ತಾರೆ.

ಸಿಮಾಂತ ಶಾಸ್ತ್ರ :ಹುಡುಗಿಯು ಬಸುರಿಯಾದ 8 ವರೆ ತಿಂಗಳಿನಲ್ಲಿ ಹುಡುಗನ ಮನೆಯಲ್ಲಿ ಸೀಮಾಂತ ಶಾಸ್ತ್ರ ಮನೆಯ ಮುಖ್ಯಸ್ಥರು, ಗ್ರಾಮದ ಮುಖಂಡರು ಹಾಗು ಸಂಬಂಧಿಕರ ಸಮ್ಮುಖದಲ್ಲಿ ನಡೆಯುತ್ತದೆ. ಬುಸುರಿಯಾದ ಹೆಂಗಸಿಗೆ ಹಸಿರು ಸೀರೆ, ಕೇಂಪು ಬಿಳಿ ಕುಪ್ಪಸ ಹಾಗೂ ಉಡುಗೋರೆಯೊಂದಿಗೆ ಸಿಂಗಾರ ಮಾಡಿ 5 ಕಾಯಿ,ಅಕ್ಕಿ,ಅರಿಷಿಣ,ಕುಂಕುಮ,ಬಾಳೇಹಣ್ಣು,ಎಲೆ,ಅಡಿಕೆ ಇವುಗಳನ್ನು ಬುತ್ತಿಕಟ್ಟಿ ಐದು ಜನ ಮುತ್ತೈದೆಯರು ಶಾಸ್ತ್ರಮಾಡಿ ಬಸುರಿಯಾದ ಹುಡುಗಿಯ ಮಡಿಲಿಗೆ ಹಾಕುತ್ತಾರೆ ಹಾಗೂ ತಾಯಿ ಮಗು ಆರೋಗ್ಯವಾಗಿರಲಿ ಎಂದು ಹಾರೈಸುತ್ತಾರೆ ಈ ಶುಭ ಸಮಾರಂಭದಲ್ಲಿ ಸಂಬಂಧಿಕರು ಹಾಗೂ ಊರಿನ ಮುಖಂಡರಿಗೆ ಸಿಹಿ ಊಟದ ವ್ಯವಸ್ಥೆ ಇರುತ್ತದೆ.

ಜವಳಿ ಶಾಸ್ತ್ರ :ಮಲೆಕುಡಿ ಜನಾಂಗದ ಜನರು ತಲೆಯ ಕೇಂದ್ರಭಾಗದಲ್ಲಿ ಸ್ವಲ್ಪ ತಲೆಯ ಕೂದಲುಗಳನ್ನು ತೆಗಿಸಿ ಜವಳೀ ಶಾಸ್ತ್ರ ಆಚರಣೆ ಮಾಡುತ್ತಾರೆ.

ನಾಮಕರಣ : ಮಗು ಹುಟ್ಟಿದ ವರ್ಷ ಯುಗಾದಿ ಹಬ್ಬದ ಸಮಯದಲ್ಲಿ ನಾಮಕರಣ ಮಾಡುತ್ತಾರೆ ಕಿವಿ ಚುಚ್ಚಿ ಓಲೆ ಹಾಕಿ ಸೊಂಟಕ್ಕೆ ಉಡದಾರ ಕಟ್ಟಿ ಚಿನ್ನಾಭರಣಗಳಿಂದ ಅಲಂಕಾರ ಮಾಡಿ ಸೋದರ ಮಾವ ಅಥಾವ ಸೋದರ ಅತ್ತೆ ತಂದೆಯ ತಾಯಿ ಅಥಾವ ತಂದೆಯ ತಂದೆ ನಾಮಕರಣ ಮಾಡುತ್ತಾರೆ ಮರಣ ; ಮಲೆಕುಡಿ ಜನಾಂಗದ ಜನರು ಮರಣ ಹೊಂದಿದ ಸಂಧರ್ಭಗಳಲ್ಲಿ ಅವರು ಮಣ್ಣಿನಲ್ಲಿ ಊಳುವುದು ಹಾಗೂ ಬೆಂಕಿಯಲ್ಲಿ ಸೂಡುವ ಎರಡು ಪಧ್ದತಿಯನ್ನು ಬಳಸುತ್ತಾರೆ ಹೆಣ್ಣು ಮಕ್ಕಳು ಹಾಗೂ ಬಾಲ್ಯದ ಮಕ್ಕಳಾದರೆ ಮಣ್ಣಿನಲ್ಲಿ ಮಣ್ಣುಮಾಡುತ್ತಾರೆ ವಯಸ್ಕರಾದರೆ ಬೆಂಕಿಯಲ್ಲಿಸೂಡುತ್ತಾರೆ ಹಾಲು ತುಪ್ಪ ತಿಥಿ ಸೂತಕ ಆಚರಣೆ ಮಾಡುತ್ತಾರೆ. ರಾಜಕೀಯ ಸ್ಥಿತಿಗತಿಗಳು : ಮಲೆಕುಡಿ ಜನಾಂಗದಲ್ಲಿ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಯಾರೂ ಸಹ ಸದಸ್ಯರು ಕಂಡುಬರುವುದಿಲ್ಲ ಮಲೆಕುಡಿ ಜನಾಂಗದ ಜನರು ರಾಜಕೀಯ ಅಧಿಕಾರದಿಂದ ವಂಚಿತರಾಗಿದ್ದಾರೆ. ಮೂಲ ಸೌಕರ್ಯಗಳು : ಮಲೆಕುಡಿ ಜನಾಂಗದ ಜನರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಕಲವು ಹಾಡಿಗಳಲ್ಲಿ ಮೂಲ ಸೌಕರ್ಯಗಳು ಸರಾಸರಿ ದೊರಕಿದ್ದು ಇನ್ನೂ ಕಲವು ಹಾಡಿಗಳ್ಲಿ ಮೂಲ ಸೌಕರ್ಯಗಳು ಸಿಕ್ಕಿಲ್ಲ ರಸ್ತೆಮಾರ್ಗ, ಸಾರಿಗೆ ವ್ಯವಸ್ಥೆ, ಶಾಲೆ, ಕುಡಿಯುವ ನೀರಿನ ಸಮಸ್ಯೆ, ಅಡುಗೆ ಅನಿಲ ಮುಂತಾದ ಸೌಲಭ್ಯಗಳು ಇಲ್ಲ.

ಮಲೆಕುಡಿ ಜನಾಂಗದ ಆರ್ಥಿಕ ಸ್ಥಿತಿಗತಿಗಳು ಸಂಪ್ರದಾಯಿಕ ಕುಲಕಸಬು : ಮಲೆಕುಡಿ ಜನಾಂಗದ ಜನರ ಸಮಪ್ರದಾಯಿಕ ಕುಲ ಕಸುಬು ಆರಣ್ಯ ಪ್ರಧೇಶ ಹಾಗೂ ಬೆಟ್ಟಗುಡ್ಡ ಪ್ರದೇಶಗಳಲ್ಲಿರು ಗಿಡಮರಗಳನ್ನು ಕಡಿದು ಕೃಷಿ ಭೂಮಿಯನ್ನಾಗಿ ಮಾರ್ಪಡಿಸುವುದಾಗಿದೆ ಆದರೆ ಈ ಸಂಪ್ರದಾಯಿಕ ಕುಲ ಕಸಬು ಆಧುನಿಕ ಕಾಲದಲ್ಲಿ ಕಂಡುಬರುವುದಿಲ್ಲ ಹಾಲಿ ವೃತ್ತಿ ಕಸಬುಗಳು : ಮಲೆಕುಡಿ ಜನಾಂಗದ ಜನರ ಹಾಲಿ ವೃತ್ತಿಯು ಕೃಷಿ ಕೂಲಿಯಾಗಿದೆ ಕಲವರು ಕೃಷಿಯಲ್ಲಿ ಹಾಗೂ ಇನ್ನೂ ಕಲವರು ದಿನಗೂಲಿ ನೌಕರರಾಗಿಬೇರೆಯವರ ತೋಟಗಳಲ್ಲಿ ಕೆಲಸ ಮಾಢುತ್ತಾರೆ.

ವಲಸೆ :ಇವರು ಯಾವುದೆ ಪ್ರದೇಶಗಳಿಂದ ವಲಸೆ ಬಂದಿಲ್ಲ ಇವರು ಇಲ್ಲಿನ ಮೂಲ ನಿವಾಸಿಗಳಾಗಿದ್ದಾರೆ ಬಡತನಕ್ಕೆ ಕಾರಣಗಳು : ಕೃಷಿ ಭೂಮಿ ಇಲ್ಲದಿರುವುದು, ಸರಿಯಾಗಿ ಕೂಲಿ ಸಿಗದಿರುವುದು, ಅನಕ್ಷರತೆ, ಇವರು ವಾಸಿಸುವ ಪ್ರದೇಶಗಳಿಂದ ಬೇರೆ ಸ್ಥಳಗಳಲ್ಲಿ ಉದ್ಯೋಗ ಮಾಡಲು ನಿರಾಸಕ್ತಿ ಹೊಂದಿರುವುದು ಹಾಗೂ ತರಬೇತಿ ಮತ್ತು ಕೌಶಲ್ಯಗಳ ಕೊರತೆ ಕುಟುಂಬದ ಆದಾಯ ಕಡಿಮೆ ಮತ್ತು ಕುಟುಂಬ ನಿರ್ವಾಹಣೆ ಖರ್ಚು ಅಧಿಕವಾಗಿರುವುದು.

ಕೃಷಿಗೆ ಸರ್ಕಾರ ನೀಡಿರುವ ಸವಲತ್ತುಗಳು :ಸರ್ಕಾರ ನೀಡುವ ಸವಲತ್ತುಗಳನ್ನು ಉನ್ನತ ವರ್ಗಗಳು ಮಾತ್ರ ಪಡೆದುಕೊಳ್ಳುತ್ತಿದ್ದು ಇವರಿಗೆ ಬೆರೆಳೆಣಿಕೆಯಷ್ಟು ಮಾತ್ರ ಸೌಲಭ್ಯಗಳು ಸಿಕ್ಕಿವೆ ಹಕ್ಕು ಪತ್ರಗಳನ್ನು ಹೊಂದಿರುವ ಕೆಲವು ಕುಟುಂಬಗಳು ಕೃಷಿ ಸಾಲ ಸೌಲಭ್ಯವನ್ನು ಪಡೆದು ಕೊಂಡಿದಾರೆ ವ್ಯಾಪಾರದ ವಿವರಗಳು : ಮಲೆಕುಡಿ ಜನಾಂಗದ ಜನರು ವ್ಯಾಪಾರದ ಬಗ್ಗೆ ಅಷ್ಟೊಂದು ಆಸಕ್ತಿ ಹೊಂದಿಲ್ಲ ಕಾಡಿನ ಉತ್ಪನ್ನಗಳನ್ನು ಹೊರತುಪಡಿಸಿ ಬೇರೆ ರೀತಿಯ ವ್ಯಾಪಾರಗಳು ಕಂಡುಬರುವುದಿಲ್ಲ ಇವರು ವ್ಯಾಪಾರ ಮಾಡುವಷ್ಟು ಜಾÐನ ಹಾಗೂ ಆದಾಯ ಈ ಜನರಲ್ಲಿ ಇರುವುದಿಲ್ಲ.

ಕುಟುಂಬ ಹೊಂದಿರುವ ಜಮೀನಿನ ವಿಸ್ತೀರ್ಣ : ಮಲೆಕುಡಿ ಜನಾಂಗದ ಕುಟುಂಬಗಳಲ್ಲಿ ಬಹುತೇಕ ಕುಟುಂಬಗಳು ಕೃಷಿ ಭೂಂಇಯನ್ನು ಹೊಂದಿಲ್ಲ ಮನೆ ನಿರ್ಮಿಸಿಕೊಳ್ಳುವಷ್ಟು ಜಾಗ ಮಾತ್ರ ಹೊಂದಿದ್ದಾರೆ. ಕೆಲವು ಕುಟುಂಬಗಳು 1 ರಿಂದ 3 ಎಕೆರೆ ಅಷ್ಟು ಭೂಮಿಯನ್ನು ಹೊಂದಿದ್ದಾರೆ.ಈ ಕುಟುಂಬಗಳು ತುಂಬಾ ಕಡಿಮೆ ಸಂಖೈಯಲ್ಲಿವೆ. ಕೃಷಿಗೆ ನೀರಾವರಿ ಮೂಲಗಳು ಮತ್ತು ಸಲಕರಣೆಗಳು :ಮಲೆಕುಡಿ ಜನಾಂಗದ ಜನರ ಕೃಷಿ ಭೂಮಿಗಳು ಕೃಷಿಗೆ ನೀರಾವರಿಯ ಮೂಲಗಳಾಗಿ ಮಳೆ, ಪಂಪ್ ಸೆಟ್, ಕಾಲುವೆ ನೀರಾವರಿ ವ್ಯವಸ್ಥೆಯನ್ನು ಹೊಂದಿವೆ ಪಂಪ್ ಸೆಟ್ ¨ಳಕೆದಾರರು ಹೆಚ್ಚಾಗಿದ್ದಾರೆ. ಪ್ರಮುಖ ಬೆಳೆಗಳು : ಮಲೆಕುಡಿ ಜನಾಂಗದ ಜನರು ಕೃóಷಿಭೂಮಿಯಲ್ಲಿ ವಾಣಿಜ್ಯ ಬೆಳೆಗಳು ಮತ್ತು ಹಣ್ಣಿನ ಗಿಡಗಳು ಕಂಡುಬರುತ್ತವೆ. ಭತ್ತ, ತೆಂಗು,ಅಡಿಕೆ, ಕಾಳು ಮೆಣಸು,ಗೇರು,ಬಾಳೆ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ

ಇತರೆ ಕೃಷಿ ಚಟುವಟಿಕೆಗಳು : ಹೆಚ್ಚಿನ ಮಲೆಕುಡಿ ಜನರು ಕೃಷಿಯನ್ನು ಹೊರತುಪಡಿಸಿ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ.

ಸಾಲದ ಮೂಲಗಳು ಮತ್ತು ಸಾಲದ ಉದ್ದೇಶ : ಮಲೆಕುಡಿ ಜನಾಂಗದ ಕೆಲವೇ ಕೆಲವು ಕುಟುಂಬಗಳು ಮಾತ್ರ ಸಾಲ ಸೌಲಭ್ಯವನ್ನು ಪಡೆದಿವೆ ಇವರ ಸಾಲದ ಮೂಲಗಳೆಂದರೆ ಸೋಸೈಟಿ ಬ್ಯಾಂಕ್‍ಗಳು, ಸಹಕಾರ ಸಂಘಗಳು, ಹಾಗೂ ಸ್ತ್ರೀಶಕ್ತಿ ಗುಂಪುಗಳಾಗಿವೆ. ಇವರ ಸಾಲದ ಉದ್ದೇಶವೆಂದರೆ ಕೃಷಿ ಉಪಕರಣ ಮತ್ತು ಸಾಮಾಗ್ರಿಗಳು, ಮನೆ ನಿರ್ಮಿಸಿಕೊಳ್ಳಲು ಮತ್ತು ಕುಟುಂಬ ನಿರ್ವಹಣೆಗಾಗಿ ಸಾಲ ಪಡೆಯುತ್ತಾರೆ.

ಸರ್ಕಾರಿ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳಲ್ಲಿ ಇವರ ಪಾತ್ರ : ಮಲೆಕುಡಿ ಜನಾಂಗದ ಜನರಲ್ಲಿ ಕೆಲವರು ಸಂಘ ಸಂಸ್ಥೆಗಳ್ಲಿ ಆಸಕ್ತಿಯನ್ನು ಹೊಂದಿದ್ದರೆ ಕೆಲವರು ಸಂಘ ಸಂಸ್ಥೆಗಳ್ಲಿ ನಿರಾಸಕ್ತಿಯನ್ನು ಹೊಂದಿದ್ದಾರೆ ಇತ್ತೀಚಿನ ದಿನಗಳಲ್ಲಿ ಜಿಲ್ಲ ಮಟ್ಟದಲ್ಲಿ ಮಲೆಕುಡಿ ಸಂಘವನ್ನು ಸ್ಥಾಪನೆ ಮಾಡಿಕೊಂಡು ರಾಜಕೀಯ ಅಧಿಕಾರದ ಜೋತೆ ಸರ್ಕಾರದ ಸೌಲಬ್ಯಗಳನ್ನು ಪಡೆಯಲು ಹಿತಾಸಕ್ತಿ ಹೊಂದಿದ್ದಾರೆ ಸ್ತ್ರೀಶಕ್ತಿ, ನವೋದಯ, ಧರ್ಮಸ್ಥಳ ಸಂಘಗಳಲ್ಲಿ ಸದಸ್ಯತ್ವ ಹೊಂದಿದ್ದಾರೆ ಹಾಗೂ ಉಳಿತಾಯ ಮತ್ತು ಸಾಲ ಸೌಲಬ್ಯ ಪಡೆದಿದ್ದಾರೆ.

ಮಲೆಕುಡಿ ಜನಾಂಗದ ಶೈಕ್ಷಣಿಕ ಸ್ಥಿತಿಗತಿಗಳು

ವಿದ್ಯಾಭ್ಯಾಸದ ವಿವರ : ಮಲೆಕುಡಿ ಜನಾಂಗದ ಮೊದಲನೆಯ ತಲೆಮಾರಿನ ಜನರು ಅನಕ್ಷರಸ್ಥರಾಗಿದ್ದು ನೊತರದ ತಲೆಮಾರಿನ ಜನರು ಶಿಕ್ಷಣ ಪಡೆಯಲು ಪ್ರಾರಂಭ ಮಾಡಿದ್ದಾರೆ ಮಲೆಕುಡಿ ಜನಾಂಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದವರು ಹೆಚ್ಚಾಗಿದ್ದಾರೆ

ವಾಸ ಮಾಡುವ ಸ್ಥಳಗಳಲ್ಲಿ ಶಾಲೆಗಳ ವ್ಯವಸ್ಥೆ :ಮಲೆಕುಡಿ ಜನಾಂಗದ ಮನೆಗಳು ಬೆಟ್ಟಗುಡ್ಡ ಹಾಗೂ ಗುಡ್ಡಗಾಡು ಪ್ರದೇಶಗಳಾದರಿಂದ ಇವರು ವಾಸಿಸುವ ಸ್ಥಳಗಳಲ್ಲಿ ಮನೆಗಳೀಗೆ ಹತ್ತಿರ ಇರುವಂತೆ ಶಾಲೆ ಹಾಗೂ ಅಂಗನವಾಡಿ ಇಲ್ಲ ಆದರೆ 2-3 ಕಿಮೀ ದೂರದಲ್ಲಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿವೆ ಕೆಲವು ಗ್ರಾಮಗಳಲ್ಲಿ ಶಾಲೆ ಹತ್ತಿರ ಇವೆ ಇನ್ನೂ ಕೆಲವು ಗ್ರಾಮಗಳಲಿ ಶಾಲೆ ತುಂಬಾ ದೂರದಲ್ಲಿವೆ ಆದರೆ ಪ್ರೌಢ ಶಾಲೆ ಮತ್ತು ಕಾಲೇಜ್‍ಗಳು 20-25 ಕಿಮೀ ದೂರದಲ್ಲಿವೆ. ಶಿಕ್ಷಣ ಪಡೆದವರ ಉದ್ಯೋಗ ಮಟ್ಟ : ಉನ್ನತ ಶಿಕ್ಷಣ ಪಡೆದವರು ಕಂಡುಬರುವುದಿಲ್ಲ ಪದವಿ ಮುಗಿಸಿದ ಪುರುಷರು ಕೃಷಿಯಲ್ಲಿ ಆಸಕ್ತಿ ಹೊಂದಿದ್ದಾರೆ ಹಾಗೂ ಮಹೀಲೆಯರು ಕೆಲವು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಾರೆ

ಶಿಕ್ಷಣ ಪಡೆದು ಉದ್ಯೋಗ ಮಾಡುವವರ ಸಂಖ್ಯೆ ಅತಿಕಡಿಮೆ ಇದೆ ಸರ್ಕಾರಿ ಉದೈಒಗದ ಬಗ್ಗೆ ಜ್ಞಾನ ಹಾಗೂ ಆಸಕ್ತಿ ಪ್ರಯತ್ನಗಳು ತುಂಬಾ ಕಡಿಮೆ ಇದೆ.

ಶಾಲೆಯಲ್ಲಿ ಮಕ್ಕಳಿಗೆ ಸಿಗುತ್ತಿರು ಸೌಲಬ್ಯಗಳು : ಸರ್ಕಾರಿ ಶಲೆಯಲ್ಲಿಯೇ ಓದಿಸುತ್ತಿದ್ದಾರೆ ಇವರಿಗೆ ಮಧ್ಯಾಹ್ನದ ಬಿಸಿ ಊಟ, ಹಾಲು, ಬಟ್ಟೆ, ಶೂ, ವಿದ್ಯಾರ್ಥಿ ವೇತನ ಹಾಗೂ ವಿದ್ಯಾರ್ಥಿ ನಿಲಯದ ಸೌಲಬ್ಯಗಳು ಸಿಕ್ಕಿವೆ.

ಮಕ್ಕಳು ಶಾಲೆ ಬೀಡಲು ಕಾರಣಗಳು: ಮಲೆಕುಡಿ ಜನಾಂಗದ ಜನರುಆಸಕ್ತಿಯ ಕೊರತೆಯ ಕಾರಣದಿಂದ, ಶರಿಗೆ ವ್ಯವಸ್ಥೆಯ ಸಮಸ್ಯೆಯಿಂದ, ಪೋಷಕರಿಗೆ ಹೆಣ್ಣು ಮಕ್ಕಳನ್ನು ಓದಿಸಲು ಇಷ್ಟಇಲ್ಲದ ಕಾರಣದಿಂದ,ಬಡತನ ಸಮಸ್ಯೆಯಿಂದ,ಹಾಗೂ ಶಾಲೆ ಕಾಲೇಜ್‍ಗಳು ಮನೆಯಿಂದ ತುಂಬಾ ದೂರ ಇರುವ ಕಾರಣಗಳಿಂದ ಶಾಲೆಯನ್ನು ಅರ್ಧದಲ್ಲಿಯೇ ಬಿಡುತ್ತಾರೆ.

ಅನಕ್ಷರಸ್ಥರಾಗಲು ಕಾರಣಗಳು :ಶಾಲೆ ಇಲ್ಲದಿರುವುದು, ಬಡತನ,ಆಸಕ್ತಿಯ ಕೊರತೆ, ಶಿಕ್ಷಣದ ಬಗ್ಗೆ ಜಾಗೃತಿ ಇಲ್ಲದ ಕಾರಣದಿಂದ ಮಲೆಕುಡಿ ಜನಾಂಗದ ಜನರು ಅನಕ್ಷರಸ್ಥರಾಗುತ್ತಿದ್ದಾರೆ. ಅನಕ್ಷರಸ್ಥರ ಸ್ಥಿತಿಗತಿಗಳು :ಮಲೆಕುಡಿ ಜನಾಂಗದಲ್ಲಿ ಅನಕ್ಷರಸ್ಥರಾದವರ ಸ್ಥಿತಿ ಹಿನಾಸ್ಥಿತಿಯಾಗಿದ್ದು ಕೂಲಿಯನ್ನು ಮಾಡುತ್ತಿದ್ದಾರೆ ಕೆಲವು ಸಮಯದಲ್ಲಿ ಕೂಲಿ ಸಿಗದೆ ನಿರುದ್ಯೋಗಿಗಳಾಗಿ ಆರ್ಥಿಕ ತೊಂದರೆಗಳಿಂದ ಬಡತನದಲ್ಲಿ ಜೀವಿಸುತ್ತಿದ್ದಾರೆ.

ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಲು ಕಾರಣಗಳು : ಮಲೆಕುಡಿ ಜನಾಂಗದ ಹೆಣ್ಣು ಮಕ್ಕಳು ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಹಾಗೂ ಮನೆಯ ಬಡತನದ ಸಮಸ್ಯೆಯಿಂದ ಮತ್ತು ಮಲೆ ಕುಡಿ ಸಮುದಾಯಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡದ ಕಾರಣಗಳಿಂದ ಮತ್ತು ಪೋಷಕರಿಗೆ ಹೆಣ್ಣು ಮಕ್ಕಳನ್ನು ಓದಿಸಲು ಇಷ್ಟಇಲ್ಲದ ಕಾರಣಗಳಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಮಲೆಕುಡಿ ಜನಾಂಗದ ಆರೋಗ್ಯದ ಸ್ಥಿತಿಗತಿಗಳು

ಗಿಡ ಮೂಲಿಕೆ ಔಷದಿ ಪಧ್ಧತಿ : ಮಲೆಕುಡಿ ಜನಾಂಗದ ಜನರು ಕೆಲವು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಗಳಿಗೆ ಹೋಗದೆ ಮನೆಗಳಲ್ಲಿಯೇ ಗಿಡ ಮೂಲಿಕೆಗಳಿಂದ ಔಷದಿ ತಯಾರಿಸಿಕಳ್ಳುತ್ತಾರೆ ಜ್ವರ, ಕೆಮ್ಮು,ನೆಗಡಿ,ತಲೆನೋವು,ದೇಹದ ಕಲವು ಗಾಯಗಳಿಗೆ ಔಷದಿ ತಯಾರಿಸಿ ಬಳಸುತ್ತಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳು : ಮಲೆಕುಡಿ ಜನಾಂಗದ ಜನರು ಕೆಲವು ರೋಗಗಳು ಬಂದಾಗ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಔಷದಿಗಳನ್ನು ಪಡೆಯುತ್ತಾರೆ ಈ ಪ್ರಾಥಮಿಕ ಆರೋಗ್ಯ ಕೆಂದ್ರಗಳು ಮಲೆಕುಡಿ ಜನರು ವಾಸಿಸುವ ಪ್ರದೇಶಗಳಿಂದ ಸುಮಾರು 7 ರಿಂದ 9 ಕಿಮೀ ದೂರದಲ್ಲಿವೆ.

ಲಸಿಕೆ ಹಾಕಿಸಿಕೊಂಡವರ ವಿವರ ; ಮಲೆಕುಡಿ ಜನಾಂಗದ ಜನರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಪೋಲಿಯೋ,ಬಿಸಿಜಿ,ದಡಾರ,ಡಿಪಿಟಿ ಮುಂತಾದ ಲಸಿಕೆಗಳನ್ನು ಹಾಕಿಸಿಕೊಂಡಿದ್ದಾರೆ ಭಾಣಂತಿ ಮತ್ತು ಗರ್ಬಿಣಿ ಸ್ತ್ರೀಯರು ಆರೋಗ್ಯ ಸೌಲಬ್ಯ ಪಡೆಯುತ್ತಿದ್ದರೆ.

ಗರ್ಬಿಣಿಯರ ಆರೈಕೆ : ಮಲೆಕುಡಿ ಜನರು ಗರ್ಬಿಣಿ ಸ್ತ್ರೀಯರನ್ನು ವಿಶಿಷ್ಠವಾದ ರೀತಿಯಲ್ಲಿ ಆರೈಕೆ ಂಡುತ್ತಾರೆ ಇವರಿಗೆ ಅಂಗನವಾಡಿಯಿಂದ ಪೌಷ್ಠಿಕ ಆಹಾರ ಹಾಗೂ ಆರೋಗ್ಯ ಬಗ್ಗೆ ಸಲಹೆ ಸೂಚನೆಗಳುನ್ನು ನೀಡುತ್ತಾರೆ ಮನೆಗಳ್ಲಿ ಮನೆಯ ಹಿರಿಯರು ವಿಶೇಷವಾದ ಹಾರೈಕೆ ಮಾಡುತ್ತಾರೆ ಆಹಾರ ಪಧ್ದತಿ ಹಾಗೂ ಜೀವನ ಶೈಲಿ ಈ ಸಮಯದಲ್ಲಿ ತುಂಬಾ ಬದಲಾವಣೆಯಿಂದ ಕೂಡಿರುತ್ತದೆ ಮನೆಐವರು ಜಾಗೃತಿಯನ್ನು ಹೊಂದಿರುತ್ತಾರೆ.

ಹೆರಿಗೆಯ ವಿವರ : ಹಿಂದಿನ ಕಾಲದಲ್ಲಿ ಮನೆಗಳಲ್ಲಿ ಮನೆಯ ಹಿರಿಯರಿಂದ ಆಗುತ್ತಿದ್ದು ಆಧುನಿಕ ಕಾಲದಲ್ಲಿ ಹೆರಿಗೆಯು ಆಸ್ಪತ್ರೆಯಲಲಿ ಆಗುತ್ತಿದೆ ಹೆರಿಗೆಯ ನೊಂತರ ತಾಯಿ ಮತ್ತು ಮಗುವನ್ನು ತುಂಬ ಪ್ರೀತಿಯಿಂದ ವಿಶೇಷವಾದ್ ಆರೈಕೆಯಿಂದ ನೋಡಿಕೊಳ್ಳುತ್ತಾರೆ ದಾದಿಯರು ಕಾಲ ಕಾಲಕ್ಕೆ ಮನೆಗಳಿಗೆ ಭೇಟಿನೀಡಿ ಅರೋಗ್ಯದ ಸ್ಥಿತಿಗತಿಗಳ ಬಗ್ಗೆ ವರದಿ ಮಾಡಿಕೋಡು ಹೋಗುತ್ತಾರೆ

ಮಲೆಕುಡಿ ಜನಾಂಗದ ಸಾಮಾಜಿಕ,ಆರ್ಥಿಕ,ರಾಜಕೀಯ ಮತ್ತು ಶೈಕ್ಷಣಿಕ ಹಾಗೂ ಆರೋಗ್ಯದ ಸ್ಥಿತಿಗತಿಯ ವರದಿ

ಸಾಮಾಜಿಕ ಅಂಶಗಳು

  • •    ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಾರೆ.
  • •    ವಾಸಿಸುವ ಪರಿಸರ ಉತ್ತಮವಾಗಿದೆ.
  • •    ಸ್ವಂತ ಮನೆಗಳಲ್ಲಿ ವಾಸಿಸುತ್ತಿದ್ದಾರೆ.
  • •    ಎಲ್ಲಾ ಮಲೆಕುಡಿ ಕುಟುಂಬಗಳು ಪಿತೃಪ್ರಧಾನ ಕುಟುಂಬಗಳಾಗಿವೆ.
  • •    ಅವಿಭಕ್ತ ಮತ್ತು ವಿಭಕ್ತ ಕುಟುಂಬಗಳಲ್ಲಿ ವಾಸಿಸುತ್ತಿದ್ದಾರೆ.
  • •    ಕೆಲವರು ಹೆಂಚಿನ ಮನೆಗಳಲ್ಲಿ ಕೆಲವರು ಶೀಟಿನ ಮನೆಗಳಲ್ಲಿ ವಾಸಿಸುತ್ತಿದ್ದಾರೆ.
  • •    ಕುಡಿಯಲು ಬಾವಿ ಮತ್ತು ಕೆರೆ ನೀರನ್ನು ಬಳಸುತ್ತಾರೆ.
  • •    ಸಾರಿಗೆ ವ್ಯವಸ್ಥೆ ಇಲ್ಲ.
  • •    ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.
  • •    ಸಂಪರ್ಕ ಸಾಧನಗಳು ತುಂಬಾ ಕಡಿಮೆ.
  • •    ಇತರೆ ಸಮುದಾಯದವರ ಜೋತೆ ಉತ್ತಮವಾದ ಸಂಬಂಧ ಹೊಂದಿದ್ದಾರೆ ಯಾವುದೇ ಸಮುದಾಯದವರೆ ಜೋತೆ ಸಂಘರ್ಷ ಮಾಡಿಕೊಂಡಿಲ್ಲ.
  • •    ಹಿಂಧೂ ಸಂಪ್ರದಾಯದ ಎಲ್ಲಾ ಹಬ್ಬಗಳನ್ನು ಆಧುನಿಕ ಶೈಲಿಯಲ್ಲಿ ಆಚರಣೆ ಮಾಡುತ್ತಾರೆ.
  • •    ಅಸ್ಪøಶೈತೆ ಆಚಾರಣೆಯಲ್ಲಿಲ್ಲ.
  • •    ಗ್ರಾಮದ ಹೊರ ಭಾಗಗಳಲ್ಲಿ ವಾಸಿಸುತ್ತಿದ್ದಾರೆ.
  • •    ಪ್ರತ್ಯೇಕ ಸ್ಮಶಾನ ಇಲ್ಲ ಸ್ವಂತ ಜಮೀನುಗಳಲ್ಲಿ ಶವಸಂಸ್ಕಾರ ಮಾಡುತ್ತಾರೆ.
  • •    ಎಲ್ಲರೂ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಪಡಿತರ ಚೀಟಿಯನ್ನು ಹೊಂದಿದ್ದಾರೆ.
  • •    ಮತಾಂತರ ಹೊಂದಿದವರು ಕಂಡು ಬರುವುದಿಲ್ಲ.
  • •    ಅಂಗವಿಕಲರು ಬೆರಳೆಣಿಕೆಯಷ್ಟು ಇದ್ದಾರೆ ಹಾಗೂ ಎಲ್ಲಾ ಅಂಗವಿಕಲರು ಗುರುತಿನ ಚೀಟಿಯನ್ನು ಹೊಂದಿದ್ದಾರೆ.
  • •    ಸ್ವಜಾತಿಯಲ್ಲಿಯೇ ವಿವಾಹ ಪದ್ದತಿ ಇದೆ ಪ್ರೇಮ ವಿವಾಹ ಹಾಗೂ ಅಂರ್ತಜಾತಿಯ ವಿವಾಹಗಳು ಕಂಡುಬರುವುದಿಲ್ಲ.

ಆರ್ಥಿಕ ಅಂಶಗಳು

  • •    ಇವರು ಯಾವುದೇ ಪ್ರದೇಶಗಳಿಂದ ವಲಸೆ ಬಂದಿರುವುದಿಲ್ಲ.
  • •    ಇವರು ಇಲ್ಲಿನ ಮೂಲ ನಿವಾಸಿಗಳು.
  • •    ಆದಾಯ ತೆರಿಗೆ ಪಾವತಿ ಮಾಡುವರ ಸಂಖ್ಯೆ ತುಂಬಾ ಕಡಿಮೆ.
  • •    ಕೆಲವರು ಕೃಷಿ ಭೂಮಿಯನ್ನು ಹೊಂದಿದ್ದಾರೆ ಕೆಲವರು ಕೃಷಿ ಭೂಮಿಯನ್ನು ಹೊಂದಿಲ್ಲ.
  • •    ಕೆಲವರ ಕೃಷಿ ಭೂಮಿಯು ಸ್ವಂತ ಭೂಮಿಯಾಗಿದೆ.
  • •    ಕೆಲವರು ಕೃಷಿ ಭೂಮಿಯನ್ನು ಹೊಂದಿದ್ದರು ಅದಕ್ಕೆ ಹಕ್ಕು ಪತ್ರಗಳನ್ನು ಹೊಂದಿಲ್ಲ.
  • •    ಕೆಲವರು ನೀರಾವರಿ ಆಧಾರಿತ ಕೃಷಿ ಭುಮಿಯನ್ನು ಹೊಂದಿದ್ದಾರೆ ಮತ್ತು ಕೆಲವರು ಮಳೆ ಆಧಾರಿತ ಕೃಷಿ ಭೂಮಿಯನ್ನು ಹೊಂದಿದ್ದಾರೆ.
  • •    ಕೆಲವರು 2-3 ಎಕರೆ ಭೂಮಿಯನ್ನು ಹೊಂದಿದ್ದರೆ ಇನ್ನೂ ಕೆಲವರು ಸೆಂಟ್ಸ್ ಲೆಕ್ಕದಲ್ಲಿ ಕೃಷಿ ಭೂಮಿಯನ್ನು ಹೊಂದಿದ್ದಾರೆ.
  • •    ಕೃಷಿಗೆ ನೀರಾವರಿಯಾಗಿ ಮಳೆಯಾಶ್ರಿತ,ಪಂಪ್‍ಸೆಟ್ ಹಾಗೂ ಕಾಲುವೆ ನೀರನ್ನು ಬಳಸುತ್ತಾರೆ.
  • •    ಇವರು ಅಡಿಕೆ, ತೆಂಗು,ಕಾಳುಮೆಣಸು,ಬಾಳೆ ಮತ್ತು ಭತ್ತವನ್ನು ಪ್ರಮುಖ ಬೆಳೆಯಾಗಿ ಬೆಳೆಯುತ್ತಾರೆ.
  • •    ಕೃಷಿಯನ್ನು ಹೊರತು ಪಡಿಸಿ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ.
  • •    ಕೆಲವು ಕುಟುಂಬಗಳು ಬ್ಯಾಂಕ್,ಸಹಾಕಾರಿ ಬ್ಯಾಂಕ್ ಮತ್ತ ಸ್ವ ಸಹಾಯ ಸಂಘ ಸಂಸ್ಥೆಗಳಿಂದ ಕಿರು ಸಾಲವನ್ನು ಪಡೆದಿವೆ.
  • •    ಮಲೆಕುಡಿ ಜನಾಂಗದ ಆರ್ಥಿಕ ಮಟ್ಟವು ಅಷ್ಟೊಂದು ಸುಧಾರಣೆಯಾಗಿಲ್ಲ
  • •    ಆದಾಯಕ್ಕಿಂತ ಕುಟುಂಬ ನಿರ್ವಹಣೆಯ ಖರ್ಚು ಹೆಚ್ಚಾಹಿದೆ.
  • •    ಆದಾಯದ ಹೆಚ್ಚಿನ ಭಾಗವನ್ನು ವಸತಿ ಮತ್ತು ಉಟೋಪಚಾರಗಳಿಗೆ ಖರ್ಚು ಮಾಡುತ್ತಾರೆ.

ಶೈಕ್ಷಣಿಕ ಅಂಶಗಳು

  • •    ಸಾಮಾನ್ಯವಾಗಿ ಶಾಲೆ ಸೇರುವ ವಯಸ್ಸು 6 ರಿಂದ 7 ಆಗಿದೆ.
  • •    ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಪಡೆಯುತ್ತಿದ್ದಾರೆ.
  • •    ಶಾಲೆಗಳು ಮನೆಯಿಂದ ತುಂ¨ ದೂರದಲ್ಲಿವೆ.
  • •    ಎಲ್ಲಾ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸುತ್ತಿದ್ದಾರೆ.
  • •    ಪದವಿ ಶಿಕ್ಷಣ ಪಡೆದವರ ಸಂಖ್ಯೆ ತುಂಬಾ ಕಡಿಮೆ.
  • •    ತಾಂತ್ರಿಕ ಶಿಕ್ಷಣ ಪಡೆದವರು ಕಂಡುಬರುವುದಿಲ್ಲ.
  • •    ಹೆಚ್ಚಿನ ಜನರು ಶಿಕ್ಷಣದ ಬಗ್ಗೆ ಇರುವ ನಿರಾಸಕ್ತಿಯಿಂದ ಅರ್ಧದಲ್ಲಿಯೆ ಶಾಲೆಯನ್ನು ಬೀಡುತ್ತಾರೆ.
  • •    ಮನೆಗಳಿಂದ ಶಾಲೆಗಳು ತುಂಬಾ ದೂರದಲ್ಲಿರುವ ಕಾರಣಗಳಿಂದ ಹಾಗೂ ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣಗಳಿಂದ ಹೆಣ್ಣು ಮಕ್ಕಳು ಶಾಲೆಯನ್ನು ಅರ್ಧದಲ್ಲಿಯೆ ಬೀಡುತ್ತಾರೆ.
  • •    8ನೇ ತರಗತಿಯಿಂದ 12ನೇ ತರಗತಿಯವರೆಗೆ ಓದಿದವರ ಸಂಖ್ಯೆ ಹೆಚ್ಚಾಗಿದೆ.
  • •    6 ರಿಂದ 10 ನೇ ತರಗತಿಯ ನಡುವೆ ಶಾಲೆ ಬಿಟ್ಟವರ ಸಂಖ್ಯೆ ಹೆಚ್ಚಾಗಿದೆ.
  • •    ಶಾಲೆಯನ್ನು ಬೀಡುವವರ ವಯಸ್ಸು 14 ರಿಂದ 17ರ ನಡುವಿನ ವಯಸ್ಸಿನವರಾಗಿದ್ದಾರೆ.
  • •    ಸ್ನಾತಕೋತ್ತರ ಪದವಿ ಪಡೆದವರು ಕಂಡು ಬರುವುದಿಲ್ಲ.
  • •    ಶೈಕ್ಷಣಿಕ ಸೌಲಭ್ಯಗಳು ತುಂಬಾ ಕಡಿಮೆ ಇದೆ.

ಔದ್ಯೋಗಿಕ ಅಂಶಗಳು

  • •    ಕೃಷಿ ಹಾಗೂ ಕೂಲಿ ಇವರ ಮುಖ್ಯ ಕಸಬು ಆಗಿದೆ.
  • •    ಮಹೀಳೆಯರು ಹೈನುಗಾರಿಕೆಯಲ್ಲಿಯೂ ಮತ್ತು ಪುರುಷರು ಕೃಷಿ ಹಾಗೂ ಕೂಲಿ ಕೆಲಸದಲ್ಲಿ ತೊಡಗಿದ್ದಾರೆ.
  • •    ಸರ್ಕಾರಿ ಉದ್ಯೋಗದಲ್ಲಿ ಯಾರೂ ಇಲ್ಲ.
  • •    ಖಾಸಗಿ ಕ್ಷೇತ್ರದಲ್ಲಿ ದುಡಿಯುವರ ಸಂಖ್ಯೆ ತುಂಬಾ ಕಡಿಮೆ.
  • •    ಬಾಲ ಕಾರ್ಮಿಕ ಪದ್ದತಿ ¨ಳಕೆಯಲ್ಲಿಲ್ಲ.
  • •    ಹೆಚ್ಚಿನ ಜನರು ದಿನಗೂಲಿ ನೌಕರರಾಗಿದ್ದಾರೆ.
  • •    ಅರಣ್ಯ ಉತ್ಪನ್ನಗಳನ್ನು ಹೊರತು ಪಡಿಸಿ ಬೇರೆ ರೀತಿಯ ವ್ಯಾಪಾರಗಳು ಕಂಡು ಬರುವುದಿಲ್ಲ.
  • •    ಜೀತ ಪದ್ದತಿ ಬಳಕೆಯಲ್ಲಿಲ್ಲ.
  • •    ಮಹಾತ್ಮ ಗಾಂಧಿ ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆಯ ಚೀಟಿ ಪಡೆದವರ ಸಂಖ್ಯೆ ತುಂಬಾ ಕಡಿಮೆ.
  • •    ವಂಶ ಪಾರಂಪರ್ಯೆ ವೃತ್ತಿ ¨ಳಕೆಯಲ್ಲಿಲ್ಲ.
  • •    ಮಹೀಳೆಯರು ಮನೆಯಲ್ಲಿ ಬಿಡುವಿನ ಸಮಯದಲ್ಲಿ ಆದಾಯಕ್ಕಾಗಿ ಬೀಡಿ ತಯಾರಿಕೆಯಲ್ಲಿ ತೋಡಗಿದ್ದಾರೆ.
  • •    ಕೆಲವು ಸ್ತ್ರೀಯರು ಸಣ್ಣ ಪ್ರಮಾಣದ ಗುಡಿ ಕೈಗಾರಿಕೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ.
  • •    ಕೂಲಿಯು ಪುರುಷರ ಕೆಲಸಕ್ಕೆ ಹೆಚ್ಚಾಗಿದ್ದು ಮಹೀಳೆಯರ ಕೆಲಸಕ್ಕೆ ಕಡಿಮೆ ಇದೆ.
  • •    ಸ್ವಯಂ ಉದ್ಯೋಗ ಮಾಡುವವರು ಕಂಡು ಬರುವುದಿಲ್ಲ.

ರಾಜಕೀಯ ಅಂಶಗಳು

  • •    ರಾಜಕೀಯವಾಗಿ ತುಂಬಾ ಹಿಂದೂಳಿದಿದ್ದಾರೆ.
  • •    ಎಲ್ಲಾರು ಮತದಾರರ ಗುರುತಿನ ಚೀಟಿಯನ್ನು ಹೊಂದಿದ್ದಾರೆ.
  • •    ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ ಈ ಜನಾಂಗದ ಒಬ್ಬರೂ ಸಹ ಸದಸ್ಯರು ಕಂಡುಬರುವುದಿಲ್ಲ.
  • •    ಇತ್ತೀಚಿನ ದಿನಗಳಲ್ಲಿ ಗ್ರಾಮ, ತಾಲ್ಲೂಕು,ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಮಲೆ ಕುಡಿ ಸಂಘ ರಚನೆ ಮಾಡಿ ರಾಜಕೀಯವಾಗಿ ಜಾಗೃತಿ ಆಗುತ್ತಿದ್ದಾರೆ.

ಆರೋಗ್ಯದ ಅಂಶಗಳು

  • •    ಎಲ್ಲಾ ಮಲೆಕುಡಿ ಜನರು ಸದೃಡವಾದ ದೇಹವನ್ನು ಹೊಂದಿದ್ದಾರೆ.
  • •    ಎಲ್ಲಾರು ಖಾಯಿಲೆ ಬಂದಾಗ ಚಿಕತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಗಳಿಗೆ ಹೋಗುತ್ತಾರೆ.
  • •    ಪ್ರಾಥಮಿಕ ಆರೋಗ್ಯ ಕೇಂದ್ರ ಇವರು ವಾಸಿಸುವ ಪ್ರದೇಶಗಳಿಂದ ಸುಮಾರು 7-8 ಕಿಮೀ ದೂರದಲ್ಲಿವೆ.
  • •    ಅಂಗನವಾಡಿಯಲ್ಲಿ ಪೌಷ್ಠಿಕ ಆಹಾರ ನೀಡುತ್ತಾರೆ.
  • •    ಎಲ್ಲಾ ಮಲೆಕುಡಿ ಕುಟುಂಬಗಳು ಶೌಚಾಲಯ ಹೊಂದಿವೆ.
  • •    ಗರ್ಬಿಣಿ ಹಾಗೂ ಭಾಣಂತಿ ಸ್ತ್ರೀಯರನ್ನು ವಿಶಿಷ್ಠವಾದ ಆರೈಕೆಯೊಂದಿಗೆ ನೋಡಿಕೊಳ್ಳುತ್ತಾರೆ.
  • •    ಕೆಲವು ಖಾಯಿಲೆಗಳಿಗೆ ಸಂಪ್ರಾದಾಯಿಕ ಔಷದಿಯನ್ನು ಬಳಸುತ್ತಾರೆ.
  • •    ಆಲೋಪತಿ ಔಷದಿ ಪದ್ದತಿ ¨ಳಕೆಯಲ್ಲಿದೆ.
  • •    ಕುಟುಂಬ ಯೋಜನೆಯ ಬಗ್ಗೆ ಮಾಹಿತಿ ಹೊಂದಿದ್ದಾರೆ.
  • •    ದೀರ್ಘಕಾಲಿಕ ಖಾಯಿಲೆಗಳು ಕಂಡು ಬರುವುದಿಲ್ಲ.
"https://kn.wikipedia.org/w/index.php?title=ಮಲೆಕುಡಿ&oldid=1174971" ಇಂದ ಪಡೆಯಲ್ಪಟ್ಟಿದೆ