ವಿಷಯಕ್ಕೆ ಹೋಗು

ಸದಸ್ಯ:Chaithra KM/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಿಡಿಗೇಶಿ ಬೆಟ್ಟ

[ಬದಲಾಯಿಸಿ]

ಮಧುಗಿರಿಯಿಂದ ಉತ್ತರಕ್ಕೆ 19 km ದೂರವಿರುವ ಮಿಡಿಗೇಶಿಯ ಹೆದ್ದಾರಿಯ ಎಡಭಾಗದಲ್ಲಿ ಸುಮಾರು 3409 ಅಡಿ ಎತ್ತರವಿರುವ ಬೆಟ್ಟದಲ್ಲಿ ಮಸೀದಿ,ಕೋಟೆ ಆಂಜನೇಯ ಗುಡಿ ಇದೆ.ನಾಗಿರೆಡ್ಡಿ ಆಳ್ವಿಕೆ ನಡೆಸುವ ಸಮಯದಲ್ಲಿ ಇಟ್ಟಿಗೆ ಮತ್ತು ಗಾರೆಯಿಂದ ಬೆಟ್ಟದ ಮೇಲೆ ಕೋಟೆ ಕಟ್ಟಿರುವ ಉಲ್ಲೇಖಗಳು ತಿಳಿದುಬಂದಿವೆ.

ಬೆಟ್ಟಕ್ಕೆ ನಾಲ್ಕು ದ್ವಾರಗಳಿವೆ,ಮೇಲ್ಬಾಗದಲ್ಲಿ ಹೂವಿನ ದಳದ ರಚನೆ, ಮೀನು ಮತ್ತು ಆಮೆಯ ಶಿಲ್ಪಿಗಲಿವೆ ಬಯಲಿನಲ್ಲಿ ಮಧುರೆ ದೋಣೆ,ಒರಕಲ್ಲುಗಳು,ಕಣ್ಣೆರಮ್ಮನ ದೋಣೆ ಇದೆ.ಅದನ್ನು ದೇವರ ಗಂಗೆ ಎಂದು ಕರೆಯಲಾಗುತ್ತದೆ. ಬೆಟ್ಟದ ಮೇಲೆ ಟಿಪ್ಪುಸುಲ್ತಾನ್ ಆಳ್ವಿಕೆ ಯಲ್ಲಿ ಬೆಟ್ಟದ ತುದಿಯಲ್ಲಿ ನಿರ್ಮಿಸಿರುವ ಎರಡು ಮಿನಾರ್ ಗಳಿರುವ ಮಾಸಿದಿ ಮೇಲೆ ಹೋಗಲು ಮೆಟ್ಟಿಲುಗಳಿದ್ದು ಕುಸುರಿ ಕೆಲಸದ ಚಾವಣಿ ಯನ್ನು ಕಾಣಬಹುದು.ದಕ್ಷಿಣಕ್ಕೆ ಕಣ್ಣೆರಮ್ಮನ ಬಾವಿ ಇದೆ.ಇದರಿಂದ ನೀರು ತಂದು ದೇವತಾ ಕಾರ್ಯಕ್ಕೆ ಬಳಸಲಾಗುತ್ತದೆ.ಎರಡು ಕನಜಗಳಿದ್ದು,ಆಯತಾಕಾರದ ಕಟ್ಟಡವಿದೆ.ತುಪ್ಪ ಸಂಗ್ರಹಿಸುವ ಕೊಳದಲ್ಲಿ ತುಪ್ಪವನ್ನು ಸಂಗ್ರಹಿಸಿ,ಯುದ್ಧ ಕಾಲದಲ್ಲಿ ಉಂಟಾದ ಗಾಯ ನೋವು ನಿವಾರಣೆಗಾಗಿ ಬಳಸುತ್ತಿದ್ದದ್ದು, ಚಲುವರಾವ್ ಪ್ರೌಢ ಸಂಶೋಧನೆ ಲೇಖನ ಉಲ್ಲೇಖಿಸಿದ್ದಾರೆ.