ವಿಷಯಕ್ಕೆ ಹೋಗು

ಕನ್ನಡಕ್ಕೆ ಸ್ವೀಕೃತವಾದ ಶಬ್ದಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಭಾಷೆಗೆ ಅನ್ಯಭಾಷೆಗಳ ಸಂಪರ್ಕ ಬಂದಾಗ ಅನೇಕ ಹಂತದಲ್ಲಿ ಭಾಷೆ ಬದಲಾವಣೆಯಾಗುತ್ತದೆ.

ಗಡಿಪ್ರದೇಶ

[ಬದಲಾಯಿಸಿ]

ಒಂದು ಭಾಷೆಗೆ ಅನ್ಯಭಾಷಾ ಸಂಪರ್ಕ ಗಡಿಪ್ರದೇಶದಲ್ಲಿ ಯಥೇಚ್ಛವಾಗಿ ಬರುವುದನ್ನು ಕಾಣುತ್ತೇವೆ.

  1. ಕನ್ನಡದಲ್ಲಿ ಮರಾಠಿ ಭಾಷೆ ಶಬ್ದಗಳು ಬಳಕೆಯಾಗುತ್ತವೆ. ಸೂಟಿ(ರಜೆ), ವೈನಿ(ಅತ್ತಿಗೆ), ವರದಿ(ಪೋಷಾಕು), ಚಾಡಿ(ಚಾಡಿ). ಖಾಸಗೀ(ಸ್ವಂತ), ಗೂಳೆ, ಪನ್ನಾಸು, ಗಾಡಿ, ಸೋಡಚೀಟಿ(ವಿಚ್ಛೇದನಾ), ಅಬಚಿ, ಅಗಾವ(ಮೊದಲು), ಧಡಧಡೀತ(ಗಟ್ಟಿಮುಟ್ಟಾದ), ಜರಾ(ಸ್ವಲ್ಪ), ಪಾರ್(ಹುಡುಗ), ಪೋರಿ(ಹುಡುಗಿ), ಅಗದೀ(ಬಹಳ), ವರಾತ, ಝಣಕ(ಕಡಲೆಹಿಟ್ಟಿನ ಪದಾರ್ಥ), ದೌಡ(ಬೇಗ), ರಗಡ(ಬಹಳ), ಖರೆ(ಸತ್ಯ), ಖಿಚಡಿ ಇತ್ಯಾದಿ.
  2. ಕನ್ನಡದಲ್ಲಿ ತೆಲುಗು ಭಾಷೆ ಶಬ್ದಗಳ ಬಳಕೆ. ಗಾಡಿದಿ(ಕತ್ತೆ), ನೀಳ್ಳು(ನೀರು), ಪಾಂಬು/ಪಾಮು(ಹಾವು), ಶಿಲ್ಕೋಲ್(ಬಾರ್ಕೋಲು), ಒಕ್ ರೂಪಾಯಿ, ಕುಂದು ರೂಪಾಯಿ, ಒಕಾಡಿ, ಪೋ(ಹೋಗು), ಡಬ್ಬು(ದುಡ್ಡು), ದೊಂಗಲು(ಕಳ್ಳರು), ಚಪ್ಪು(ಹೇಳು) ಇತ್ಯಾದಿ.
  3. ಕನ್ನಡ ಭಾಷೆಯಲ್ಲಿ ಕೊಂಕಣಿ ಭಾಷೆ ಶಬ್ದಗಳ ಬಳಕೆ. ಬೋಟ(ಬೆರಳು), ದಲೋ(ಮನುಷ್ಯ), ಮೊನ್ನಿ(ಮೂಗು), ಕೋಡು(ದೊಡ್ಡ) ಇತ್ಯಾದಿ
  4. ಕನ್ನಡ ಭಾಷೆಯಲ್ಲಿ ತುಳು ಭಾಷೆಯ ಶಬ್ದಗಳ ಬಳಕೆ. ಮಂಡೆಬೆಚ್ಚ(ತಲೆಬಿಸಿ), ಬೊಂಡ(ಎಳೆನೀರು), ಬೊಜ್ಜ(ಉತ್ತರಕ್ರಿಯೆ/ಸಾವು), ನೇಮ(ದೇವತಾ ಕಾರ್ಯ), ಜಂಬರ(ಕೆಲಸ), ಕೋಲ(ದೈವಗಳಿಗೆ ನಡೆಯುವ ಉತ್ಸವ), ಕೋಳಿಕಟ್ಟ(ಕೋಳಿ ಕಾಳಕಕಿತ್ಯಾದಿ

ಅನ್ಯಭಾಷಾ ಪ್ರಭಾವ

[ಬದಲಾಯಿಸಿ]

ನ್ನಡ ಭಾಷೆಗೆ ಸಂಸ್ಕøತ, ಗ್ರೀಕ್, ಅರಬ್ಬಿ, ಹಿಂದೂಸ್ತಾನಿ, ಪಾರಸಿ, ಪೋರ್ಚುಗೀಸ್, ಇಂಗ್ಲಿಷ್, ಪರ್ಶಿಯನ್, ಪಾರಸಿ, ಹಿಂದಿ, ಮರಾಠಿ ಇತ್ಯಾದಿ ಭಾಷೆಗಳು ಕನ್ನಡದ ಸಂಪರ್ಕಕ್ಕೆ ಬಂದ ಮುಖ್ಯ ಭಾಷೆಗಳು.

  1. ಸಂಸ್ಕೃತವು ಕನ್ನಡಕ್ಕೆ ಕೊಟ್ಟ ಬಹುದೊಡ್ಡ ಸಂಖ್ಯೆಯ ಶಬ್ದಗಳ ಪರಿಣಾಮವಾಗಿ ಕನ್ನಡವು ಸಂಸ್ಕøತಜನ್ಯ ಎಂಬ ಭ್ರಮೆ ಹುಟ್ಟಲು ಕಾರಣವಾಗಿತ್ತು. ಸಂಸ್ಕøತದ ಪದಗಳು ಕೊಂಚ ಬದಲಾವಣೆಯೊಂದಿಗೆ ಕನ್ನಡದೊಳಗೆ ಸ್ವೀಕೃತವಾದರೆ ಅದನ್ನು ತತ್ಸಮ ಎಂದೂ(ಲಕ್ಷ್ಮೀ-ಲಕ್ಷ್ಮಿ, ಸೀತಾ-ಸೀತೆ), ಬಹಳಷ್ಟು ಬದಲಾವಣೆ ಹೊಂದಿ ಬಂದರೆ ತದ್ಭವ ಎಂದು ಕರೆಯುತ್ತಾರೆ. (ಶ್ರೇಷ್ಟಿ>ಸೆಟ್ಟಿ, ಯಾತ್ರಾ>ಜಾತ್ರೆ). ರಕ್ತಸಂಬಂಧ ಸೂಚಿಸುವ ಪದ, ದಿನ ಬಳಕೆಯ ಪದ, ಪ್ರಾಣಿ-ಪಕ್ಷಿ ಸೂಚಕ ಪದ, ವೃತ್ತಿ-ವ್ಯಕ್ತಿ ನಿರ್ದೇಶಿಸುವ ಪದಗಳು, ಅಮೂರ್ತ ವಿಚಾರಗಳನ್ನು ಹೇಳುವ ಪದಗಳಲ್ಲಿ ಹಲವು ಸಂಸ್ಕೃತದಿಂದ ಕನ್ನಡಕ್ಕೆ ಬಂದಿದೆ. (ಅತ್ತಿಕಾ>ಅತ್ತಿಗೆ, ಸ್ನುಷಾ>ಸೊಸೆ, ಇಷ್ಟಿಕಾ>ಇಟ್ಟಿಗೆ, ಕುಠಾರ>ಕೊಡಲಿ, ವರ್ಣ>ಬಣ್ಣ, ಕಾಕ>ಕಾಗೆ, ಘೂಕ>ಗೂಗೆ, ಕುಂಭಕಾರ>ಕುಂಬಾರ, ಚಮಣಕಾರ>ಚಮ್ಮಾರ, ಯೋಗಿ>ಜೋಗಿ, ಸತ್ಯ, ಪರಮಾತ್ಮ, ಪುಣ್ಯ ಇತ್ಯಾದಿ)
  2. ಗ್ರೀಕ್ – ‘ದೀನಾರ’ದಂತಹ ಗ್ರೀಕ್ ಪದಗಳು ವಡ್ಡಾರಾಧನೆಯಲ್ಲಿ ಕಾಣಿಸುವಷ್ಟು ಕನ್ನಡ ಗ್ರೀಕ್ ಸಂಬಂಧ ಪ್ರಾಚೀನವಾದುದು.
  3. ಅರಬ್ಬೀ - ಗ್ರೀಕ್ – ರೋಮನ್ನರ ಸಂಪರ್ಕದ ಬಳಿಕ ಅರಬರ ಸಂಪರ್ಕ ಕನ್ನಡಿಗರಿಗಾಯಿತು. ಈಸದೀ>ಇಸವಿ, ಕಾಘಝ್>ಕಾಗದ, ಅವಲ್‍ಬದಲ್>ಅದಲುಬದಲು, ಕಸರತ>ಕಸರತ್ತು, ಖಿಡ್ಕಿ>ಕಿಟಕಿ, ಅಸಲ್>ಅಸಲು ಹೀಗೆ ಅರಬಿಯಿಂದ ಬಂದ ಪದಗಳು.
  4. ಹಿಂದೂಸ್ತಾನಿ - ಹಿಂದೂಸ್ತಾನಿಯ ಸಂಪರ್ಕದಿಂದ ಅತ್ತರ್>ಅತ್ತರು, ಆರಾಮ್>ಆರಾಮ, ತಾಟು>ತಟ್ಟೆ, ಘಾಬರಾ>ಗಾಬರಿ ಮುಂತಾದ ಪದಗಳು ಬಂದುವು.
  5. ಪಾರ್ಸಿ - ಪಾರಸೀ ಭಾಷೆಯಿಂದ ಪದಗಳಿಗೆ ಮಾದರಿಯಾಗಿ ಕಶಿಹತ್>ಕಸೂತಿ, ಕಾರ್‍ಖಾನಾ>ಕಾರ್ಖಾನೆ, ಖಾಯಿಲೆ>ಕಾಯಿಲೆ, ಖೂನ್>ಖೂನಿ, ಘಡಿ ಆಯಿಲ>ಗಡಿಯಾರ, ಕುಶ್ತೀ>ಕುಸ್ತಿ ಮೊದಲಾದ ಪದಗಳು ಬಂದುವು.
  6. ಪೋರ್ಚುಗೀಸ್ – ವಿಜಯನಗರ ಅರಸರ ಕಾಲದಿಂದಲೇ ಪೋರ್ಚುಗೀಸರ ವ್ಯಾಪಾರ ಸಂಪರ್ಕ ಕನ್ನಡ ನಾಡಿಗಾಗಿತ್ತು. ಬಂದರು, ಬಾತು, ಪಾದ್ರಿ, ಇಸ್ತ್ರೀ, ಅಲ್ಮಾರು, ತಂಬಾಕು, ಅನಾನಸು, ಸಾಬೂನು ಮೊದಲಾದ ಪದಗಳನ್ನು ಕಾಣಬಹುದು.

ಶಿಕ್ಷಣ

[ಬದಲಾಯಿಸಿ]

ಹೊಸ ಶಿಕ್ಷಣದಿಂದಾಗಿ ಹದಿನೇಳನೆ ಶತಮಾನದಿಂದೀಚೆಗೆ ಐರೋಪ್ಯ ಭಾಷೆಗಳ ಪ್ರಭಾವ ಭಾರತೀಯ ಭಾಷೆಗಳ ಮೇಲೆ ಆಗಿದೆ. ಕನ್ನಡದಲ್ಲೂ ಅನ್ಯಭಾಷೆಗಳ ಪದಗಳು ಯಥಾವತ್ತಾಗಿ ಬಳಕೆಯಾಗುತ್ತಿದೆ. ಆಫೀಸು, ಕ್ಲಾರ್ಕ, ಟೀಚರ, ಪೆನ್, ಬುಕ್, ಬೋರ್ಡ, ಡಸ್ಟರ, ಚಾಕ್, ಕಾಲೇಜ್, ನೋಟಿಸ್, ರಿಜಿಸ್ಟರ್, ಕಾಫೀ, ಟೀ, ಟಿಫನ್, ಸೊಸೈಟಿ, ಹೋಟೆಲ್, ಕ್ಯಾಂಟಿನ್, ಪೌಡರ, ಟೇಬಲ್, ಫ್ಯಾನ್, ಬಸ್‍ಸ್ಟ್ಯಾಂಡ್, ಫೀಸ್, ಕಾರ್, ಝರಾಕ್ಸ, ಟೈಪರೈಟರ್ ಇತ್ಯಾದಿ

ಆಳುವವರ ಪ್ರಭಾವ

[ಬದಲಾಯಿಸಿ]

ಪರಕೀಯ ಆಳುವವರ ಪ್ರಭಾವದಿಂದ ಸಹಜವಾಗಿ ಅವರ ಭಾಷೆ ಭಿನ್ನವಾಗಿದ್ದು, ಅವರ ಭಾಷೆಯ ಪ್ರಭಾವ ಆಳಿಸಿಕೊಳ್ಳುವವರ ಮೇಲೆ ಪರಿಣಾಮ ಬೀರುತ್ತದೆ. ಕರ್ನಾಟಕದ ಬೀದರ್, ಗುಲಬರ್ಗ, ರಾಯಚೂರು ಪ್ರದೇಶಗಳಲ್ಲಿ ಉರ್ದು ಭಾಷೆದಯ ಪ್ರಭಾವ ದಟ್ಟವಾಗಿದೆ. ಕಿಲ್ಲೆ, ಜಲಸಾ, ಸವಾರಿ, ಧೋಬಿ, ರಜಾಯಿ, ದುಕಾನ, ಹಿಕಮಲ್, ನಜರ್, ಕಿರಾಯ, ತೇಜ್, ಮುಷ್ಯಲ್, ಷಿಕಾಯತ್, ಇಜ್ಜತ್, ಜಿಲ್ಲಾ, ತಾಲೂಕ್, ಕೊಮು, ಖಾಲಿ

ಸಮೂಹ ಸಂವಹನ ಮಾಧ್ಯಮಗಳ ಪ್ರಭಾವ

[ಬದಲಾಯಿಸಿ]

ಸಂಪರ್ಕ ಸಾಧನ, ಸಮೂಹ ಸಂವಹನ, ಇಲೆಕ್ಟ್ರಾನಿಕ್ ಗ್ಯಾಜೆóಟ್, ವಿಜ್ಞಾನ, ತಂತ್ರಜ್ಞಾನ ಮುಂತಾದ ಮಾಧ್ಯಮಗಳಿಂದ ಅನ್ಯಭಾಷಾ ಶಬ್ದಗಳು ಕನ್ನಡ ಭಾಷೆಯಲ್ಲಿ ಸೇರಿವೆ.

  1. ಫೋನ್, ಮೊಬೈಲ್, ಟಿ.ವಿ., ರೇಡಿಯೋ, ಕ್ಯಾಸೆಟ್, ಟೇಪ್ ರೆಕಾರ್ಡರ್, ಕಂಪ್ಯೂಟರ್, ಇಂಟರ್‍ನೆಟ್ ಇತ್ಯಾದಿ.
  2. ಕಾಂಕ್ರೀಟ್, ವೈರ್, ಪಿಲ್ಲರ್, ಸೈಟ್, ಪಂಪ್‍ಸೆಟ್, ಸ್ಕ್ರೂ, ನಟ್, ಬೋಲ್ಟ್, ವೆಲ್ಡಿಂಗ್, ಸ್ಪ್ಯಾನರ್ ಇತ್ಯಾದಿ.
  3. ಫ್ಯಾನ್, ಗ್ಲಾಸ್, ಕ್ಯಾಂಡಲ್, ಸ್ಟೋ, ಫ್ರಿಜ್, ಮಿಕ್ಸಿ, ಲೈಟರ್, ಟೀಪಾಯಿ, ಟ್ರೇ ಇತ್ಯಾದಿ.
  4. ವೀಸಾ, ಪಾಸ್‍ಪೋರ್ಟ್, ಕಸ್ಟಮ್ಸ್, ಟ್ಯಾಕ್ಸ್, ಅಬ್ರಾಡ್ ಇತ್ಯಾದಿ.
  5. ಸೈಕಲ್ಲು, ಬೈಕು, ವ್ಯಾನು, ಕಾರು, ಜೀಪು, ಮ್ಯಾಕ್ಸಿಕ್ಯಾಬ್, ಬಸ್ಸು, ರೈಲು, ಲಾರಿ ಇತ್ಯಾದಿ.
  6. ಇಂಜೆಕ್ಷನ್, ಹಾರ್ಮೋನ್, ರೆಟಿನಾ, ಕ್ಯಾನ್ಸರ್, ಪೋಲಿಯೋ, ಎಕ್ಸರೆ, ಡಯಾಬಿಟಿಸಿ ಇತ್ಯಾದಿ.

ಉಲ್ಲೇಖ

[ಬದಲಾಯಿಸಿ]