ವಿಷಯಕ್ಕೆ ಹೋಗು

ಹೈಡ್ರಿಯೊಟೊಫಿಯ ಅರ್ನ್ ಬರಿಯಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೈಡ್ರಿಯೊಟೊಫಿಯ ಅರ್ನ್ ಬರಿಯಲ್ - ಇದು ಇಂಗ್ಲಿಷ್ ಗದ್ಯ ಸಾಹಿತಿ ಥಾಮಸ್ ಬ್ರೌನ್ ನ ಕೃತಿ ಇದು ಪ್ರಕಟವಾದದ್ದು 1658ರಲ್ಲಿ. ಇದರ ಇನ್ನೊಂದು ಹೆಸರು ಹೈಡ್ರಿಯೊಟಫೈಯ.

ಕೃತಿಯ ವಿಷಯ

[ಬದಲಾಯಿಸಿ]

ನಾರ್ಫೋಕ್‌ನಲ್ಲಿ ಮನುಷಯರ ಅಸ್ಥಿಗಳ ಸಂಚಯನಪಾತ್ರೆಗಳು ದೊರೆತುದು ಈ ಕೃತಿಯ ಮೂಲ ಪ್ರಚೋದನೆ. ವಿವಿಧ ದೇಶಗಳಲ್ಲಿ, ವಿವಿಧಕಾಲಗಳಲ್ಲಿ ಅಂತ್ಯಸಂಸ್ಕಾರ ಪದ್ಧತಿಗಳು, ಅಸ್ಥಿಪಾತ್ರೆಗಳು, ಅವುಗಳ ಬಳಕೆ-ಇವನ್ನು ವಿಮರ್ಶಿಸಿ ಬ್ರೌನ್ ಸಾವು, ಅಮರತ್ವ, ಅಂತ್ಯ, ನಾಶಗಳ ವಿವಾದದತ್ತ ಸಾಗುತ್ತಾನೆ. ಇವನ ಅಸಾಧಾರಣ ವಿದ್ವತ್ತು ಈ ಕೃತಿಯ ರಚನೆಯಲ್ಲಿ ಸಹಾಯಕವಾಯಿತು. ಇದರಲ್ಲಿ ಆತ್ಮಪ್ರಶಂಸೆಯ ಛಾಯೆ ಓದುಗರನ್ನು ಅತೃಪ್ತಿ ಪಡಿಸಬಹುದು. ಆದರೆ ಜೀವನದ ಒಗಟನ್ನು ಕುರಿತ ಬ್ರೌನ್ನ ಯೋಚನಾಲಹರಿ, ವಿಷಣ್ಣತೆ, ಕಾವ್ಯ ಮನೋಧರ್ಮಗಳು ಅತೃಪ್ತಿಯನ್ನು ಮರೆಸುತ್ತವೆ. ಮನುಷ್ಯನ ಬಾಳಿನ ಕ್ಷಣಭಂಗುರತೆ, ಅಮರತ್ವದ ಬಯಕೆಯ ನಿರರ್ಥಕತೆ-ಇವನ್ನು ಕುರಿತು ಬಹುಕಾಲ ಮನಸ್ಸಿನಲ್ಲಿ ಸುಳಿದಾಡುತ್ತಿದ್ದ ಭಾವನೆಗಳು ಭವ್ಯವಾದ ಗದ್ಯದಲ್ಲಿ ನಿರೂಪಣೆ ಪಡೆಯುತ್ತವೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: