ಬಾಗಿಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಾಗಿಲು
File:Porte ouverte.jpg

ಬಾಗಿಲು ಎಂದರೆ ಸಾಮಾನ್ಯವಾಗಿ ಗಟ್ಟಿ, ಅಪ್ರವೇಶ್ಯ ಮತ್ತು ಮುರಿಯಲು ಕಷ್ಟವಾದ ವಸ್ತುವಿನಿಂದ (ಉದಾಹರಣೆಗೆ ಕಟ್ಟಿಗೆ ಅಥವಾ ಲೋಹ) ತಯಾರಿಸಲಾದ ಫಲಕ. ಬಾಗಿಲು ಕಿಟಕಿಗಳನ್ನು ಹೊಂದಿರಬಹುದು ಅಥವಾ ಹೊಂದದಿರಬಹುದು, ಆದರೆ ಕೆಲವೊಮ್ಮೆ ಗಟ್ಟಿ ಚೌಕಟ್ಟನ್ನು ಹೊಂದಿರುತ್ತದೆ. ಈ ಚೌಕಟ್ಟಿನೊಳಗೆ ಗಾಜು ಅಥವಾ ಪರದೆಗಳನ್ನು ಅಳವಡಿಸಲಾಗಿರುತ್ತದೆ. ಬಾಗಿಲನ್ನು ತಿರುಗಣೆಗೆ ಜೋಡಿಸಲಾಗಿರುತ್ತದೆ ಮತ್ತು ಇದರ ಮೂಲಕ ಒಂದು ಚೌಕಟ್ಟಿಗೆ ಜೋಡಿಸಲ್ಪಟ್ಟಿರುತ್ತದೆ. ಈ ಚೌಕಟ್ಟು ಒಂದು ಕಟ್ಟಡ, ಕೋಣೆ, ಅಥವಾ ವಾಹನಕ್ಕೆ ಪ್ರವೇಶ ಅಥವಾ ನಿರ್ಗಮನಕ್ಕೆ ಸ್ಥಳವನ್ನು ರಚಿಸುತ್ತದೆ. ಪ್ರವೇಶ ಅಥವಾ ನಿರ್ಗಮನಕ್ಕೆ ಅನುಮತಿ ನೀಡಲು ಅಥವಾ ತಡೆಯಲು ಈ ಫಲಕವನ್ನು ವಿವಿಧ ರೀತಿಗಳಲ್ಲಿ ಚಲಿಸಬಹುದು (ಚೌಕಟ್ಟಿನಿಂದ ದೂರದ ಕೋನಗಳಲ್ಲಿ, ಚೌಕಟ್ಟಿಗೆ ಸಮಾಂತರವಾಗಿರುವ ಸಮತಲದ ಮೇಲೆ ಜಾರಿಸಿ, ಒಂದು ಸಮಾಂತರ ಸಮತಲದ ಮೇಲೆ ಕೋನಗಳಲ್ಲಿ ಮಡಚಿ, ಅಥವಾ ಚೌಕಟ್ಟಿನ ಮಧ್ಯದಲ್ಲಿರುವ ಒಂದು ಅಕ್ಷರೇಖೆಯ ಸುತ್ತ ಸುತ್ತಿ). ಬಹುತೇಕ ಸಂದರ್ಭಗಳಲ್ಲಿ, ಬಾಗಿಲಿನ ಒಳಭಾಗವು ಹೊರಭಾಗಕ್ಕೆ ಹೊಂದಾಣಿಕೆಯಾಗುತ್ತದೆ ಆದರೆ ಇತರ ಸಂದರ್ಭಗಳಲ್ಲಿ (ಉದಾ. ವಾಹನದ ಬಾಗಿಲು) ಎರಡೂ ಕಡೆಯ ಬದಿಗಳು ಒಂದರಿಂದ ಒಂದು ಭಿನ್ನವಾಗಿರುವ ಪ್ರವೇಶ ಅಥವಾ ನಿರ್ಗಮನದ ಚಟುವಟಿಕೆಗಳಿಗೆ ಆಧಾರ ನೀಡಲು ರೂಪದಲ್ಲಿ ಆಮೂಲಾಗ್ರವಾಗಿ ಭಿನ್ನವಾಗಿರುತ್ತವೆ. ಕೇವಲ ಮಾಲೀಕ ಅಥವಾ ಆ ಸ್ಥಳಕ್ಕೆ ಹಕ್ಕಿನ ಪ್ರವೇಶಾಧಿಕಾರವನ್ನು ಹೊಂದಿರುವ ಇತರ ವ್ಯಕ್ತಿಗಳು ಬಾಗಿಲು ತೆರೆಯಬಲ್ಲರು ಎಂಬುದನ್ನು ಖಾತರಿಪಡಿಸಲು ಹಲವುವೇಳೆ ಬಾಗಿಲುಗಳು ಭದ್ರಪಡಿಕೆ ಕಾರ್ಯವಿಧಾನಗಳನ್ನು ಹೊಂದಿರುತ್ತವೆ. ಬಾಗಿಲುಗಳು ಬಡಿಗೆಗಳು ಅಥವಾ ಗಂಟೆಗಳನ್ನು ಹೊಂದಿರಬಹುದು. ಇವುಗಳನ್ನು ಬಳಸಿ ಹೊರಗಿನವರು ತಮ್ಮ ಇರುವಿಕೆಯನ್ನು ಘೋಷಿಸಿ ತಮಗಾಗಿ ಬಾಗಿಲು ತೆರೆಯಲು ಅಥವಾ ತೆರೆದು ಪ್ರವೇಶಿಸುವ ಸಲುವಾಗಿ ಅನುಮತಿ ನೀಡಲು ಯಾರನ್ನಾದರೂ ಕರೆಯಬಹುದು. ಒಂದು ಸ್ಥಳದೊಳಗೆ ಅಥವಾ ಹೊರಗೆ ಪ್ರವೇಶವನ್ನು ಒದಗಿಸುವುದರ ಜೊತೆಗೆ, ಬಾಗಿಲುಗಳು ಗೋಪ್ಯತೆಯನ್ನು ಖಾತರಿಪಡಿಸುವ ದ್ವಿತೀಯ ಕಾರ್ಯಗಳನ್ನು ಹೊಂದಿರಬಹುದು. ಈ ಕಾರ್ಯಗಳೆಂದರೆ ಹೊರಗಿನವರ ಬೇಡವಾದ ಗಮನವನ್ನು ತಡೆಯುವುದು, ಭಿನ್ನ ಕಾರ್ಯಗಳ ಪ್ರದೇಶಗಳನ್ನು ಪ್ರತ್ಯೇಕಿಸುವುದು, ಒಂದು ಸ್ಥಳದ ಒಳಗೆ ಮತ್ತು ಹೊರಗೆ ಬೆಳಕು ಸಾಗಲು ಅವಕಾಶ ನೀಡುವುದು, ಒಳಭಾಗಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬೆಚ್ಚಗಿಡಲು ಅಥವಾ ತಂಪಾಗಿಸಲು ವಾತಾಯನ ಅಥವಾ ವಾಯು ಪ್ರವಾಹವನ್ನು ನಿಯಂತ್ರಿಸುವುದು, ಶಬ್ದವನ್ನು ಮಂದವಾಗಿಸುವುದು, ಮತ್ತು ಬೆಂಕಿಯ ಹರಡುವಿಕೆಯನ್ನು ತಡೆಯುವುದು.

ಬಾಗಿಲುಗಳು ಸೌಂದರ್ಯ ಸಂಬಂಧಿ, ಸಾಂಕೇತಿಕ, ಮತ್ತು ಕ್ರಿಯಾವಿಧಿ ಸಂಬಂಧಿ ಉದ್ದೇಶಗಳನ್ನು ಹೊಂದಿರಬಹುದು. ಒಂದು ಬಾಗಿಲಿನ ಬೀಗದ ಕೈಯನ್ನು ನೀಡುವುದು ಸ್ಥಾನಮಾನದ ಹೊರಗಿನವನಿಂದ ಒಳಗಿನವನಾಗಿರುವ ಬದಲಾವಣೆಯನ್ನು ಸೂಚಿಸಬಹುದು. ಬಾಗಿಲುಗಳು ಮತ್ತು ಬಾಗಿಲ ದಾರಿಗಳು ಆಗಾಗ್ಗೆ ಸಾಹಿತ್ಯ ಮತ್ತು ಕಲೆಗಳಲ್ಲಿ ಬದಲಾವಣೆಯ ಶಕುನವಾಗಿ ಅಲಂಕಾರಿಕ ಅಥವಾ ಸಾಂಕೇತಿಕ ಅರ್ಥದೊಂದಿಗೆ ಕಾಣಿಸುತ್ತವೆ.

"https://kn.wikipedia.org/w/index.php?title=ಬಾಗಿಲು&oldid=1118045" ಇಂದ ಪಡೆಯಲ್ಪಟ್ಟಿದೆ