ವಿಷಯಕ್ಕೆ ಹೋಗು

ಕಡಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಡಾಯಿಯು ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಒಂದು ಬಗೆಯ ದಪ್ಪನೆಯ, ವೃತ್ತಾಕಾರದ ಮತ್ತು ಆಳದ ಅಡುಗೆ ಪಾತ್ರೆ (ಆಕಾರದಲ್ಲಿ ವಾಕ್ ಅನ್ನು ಹೋಲುತ್ತದೆ).[] ಇದನ್ನು ಭಾರತೀಯ, ಅಫ಼್ಘಾನಿ, ಪಾಕಿಸ್ತಾನಿ, ಬಾಂಗ್ಲಾದೇಶಿ, ಮತ್ತು ನೇಪಾಳಿ ಪಾಕಪದ್ಧತಿಯಲ್ಲಿ ಬಳಸಲಾಗುತ್ತದೆ. ಸಾಂಪ್ರದಾಯಿಕವಾಗಿ ಎರಕಹೊಯ್ದ ಕಬ್ಬಿಣದಿಂದ ಇದನ್ನು ತಯಾರಿಸಲಾಗುತ್ತದೆ. ಕಡಾಯಿಯು ಹೆಚ್ಚು ಕಡಿದಾದ ಬದಿಗಳಿರುವ ವಾಕ್‍ಗಳಂತೆ ಕಾಣುತ್ತದೆ. ಇಂದು ಇವನ್ನು ತುಕ್ಕಹಿಡಿಯದ ಉಕ್ಕು, ತಾಮ್ರದಿಂದ ತಯಾರಿಸಬಹುದು. ಇವು ಅಂಟಿಕೊಳ್ಳದ ಮೇಲ್ಮೈಗಳನ್ನು ಹೊಂದಿರಬಹುದು, ಮತ್ತು ದುಂಡನೆಯ ಅಥವಾ ಚಪ್ಪಟೆ ತಳವನ್ನು ಹೊಂದಿರಬಹುದು.

ಕಡಾಯಿಯನ್ನು ಮಾಂಸ, ಆಲೂಗಡ್ಡೆಗಳು, ಸಿಹಿತಿಂಡಿಗಳು, ಮತ್ತು ಸಮೋಸಾ ಹಾಗೂ ಮೀನಿನಂತಹ ಲಘು ತಿನಿಸುಗಳನ್ನು, ಜೊತೆಗೆ ಹಪ್ಪಳಗಳನ್ನು ಮೇಲುಮೇಲಾಗಿ ಕರಿಯಲು ಅಥವಾ ಪೂರ್ತಿ ಮುಳುಗಿಸಿ ಕರಿಯಲು ಬಳಸಲಾಗುತ್ತದೆ. ಆದರೆ ಹೆಚ್ಚಾಗಿ ಇವನ್ನು ಸ್ಟ್ಯೂಗಳನ್ನು ನಿಧಾನವಾಗಿ ಬೇಯಿಸಲು ಬಳಸಲಾಗುತ್ತದೆ. ಹಲವುವೇಳೆ ಇವನ್ನು ಕಡಾಯಿ ಭಕ್ಷ್ಯಗಳು ಎಂದು ಕರೆಯಲಾಗುತ್ತದೆ.

ಕಡಾಯಿಯಲ್ಲಿ ತಯಾರಿಸಲಾದ ಸ್ಟ್ಯೂಗಳಲ್ಲಿ ಚಿಕನ್ ಕಡಾಯಿ, ಬೀಫ಼್ ಕಡಾಯಿ, ಮಟನ್ ಕಡಾಯಿ ಮತ್ತು ಡಂಬಾ ಕಡಾಯಿ, ಜೊತೆಗೆ ಕಡಾಯಿ ಪನೀರ್ ಸೇರಿವೆ. ಉಲ್ಟಾ ತಿರುಗಿಸಿದ ಕಡಾಯಿ ಮೇಲೆ ರುಮಾಲಿ ರೋಟಿಗಳನ್ನು ಬೇಯಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Kadhai". Indianfood.about.com. 2009-09-25. Archived from the original on 2011-10-16. Retrieved 2009-11-02.


"https://kn.wikipedia.org/w/index.php?title=ಕಡಾಯಿ&oldid=1054029" ಇಂದ ಪಡೆಯಲ್ಪಟ್ಟಿದೆ