ವಿಷಯಕ್ಕೆ ಹೋಗು

ಶಿಖರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎವರೆಸ್ಟ್ ಪರ್ವತದ ಶಿಖರದ ಮೇಲೆ ಪರ್ವತಾರೋಹಿಗಳು

ಶಿಖರ ಎಂದರೆ ಅದಕ್ಕೆ ತಕ್ಷಣ ಪಕ್ಕದಲ್ಲಿರುವ ಎಲ್ಲ ಬಿಂದುಗಳಿಂತ ಹೆಚ್ಚು ಎತ್ತರದಲ್ಲಿರುವ ಒಂದು ಮೇಲ್ಮೈ ಮೇಲಿನ ಬಿಂದು. ಗಣಿತೀಯವಾಗಿ, ಶಿಖರ ಎಂದರೆ ಎತ್ತರದಲ್ಲಿನ ಸ್ಥಳೀಯ ಗರಿಷ್ಠವಾಗಿದೆ.

"ತುದಿ" ಪದವನ್ನು ಸಾಮಾನ್ಯವಾಗಿ ಕೇವಲ ಹೆಚ್ಚು ಎತ್ತರದ ಅತ್ಯಂತ ಹತ್ತಿರದ ಬಿಂದುವಿನಿಂದ ಸ್ವಲ್ಪ ದೂರದಲ್ಲಿ ಸ್ಥಿತವಾಗಿರುವ ಪರ್ವತದ ಅಗ್ರಕ್ಕೆ ಬಳಸಲಾಗುತ್ತದೆ. ಉದಾಹರಣೆಗೆ, ಒಂದು ಪರ್ವತದ ಮುಖ್ಯ ಶಿಖರಕ್ಕೆ ಪಕ್ಕದ ಒಂದು ದೊಡ್ಡ ಬೃಹತ್ ಬಂಡೆಯನ್ನು ಶಿಖರ ಎಂದು ಪರಿಗಣಿಸಲಾಗುವುದಿಲ್ಲ. ಸ್ವಲ್ಪ ಉಬ್ಬು ಅಥವಾ ಪ್ರತ್ಯೇಕತೆ ಇರುವ ಹೆಚ್ಚು ಎತ್ತರವಾದ, ಆದರೆ ಪ್ರಮಾಣಗಳ ಒಂದು ನಿರ್ದಿಷ್ಟ ಹಂತದ ಮೌಲ್ಯವನ್ನು ಮುಟ್ಟದ ತುದಿಯ ಹತ್ತಿರದ ಶಿಖರಗಳನ್ನು ಹಲವುವೇಳೆ ಹೆಚ್ಚು ಎತ್ತರದ ತುದಿಯ ಉಪಶಿಖರಗಳು ಎಂದು ಪರಿಗಣಿಸಲಾಗುತ್ತದೆ ಮತ್ತು ಇವನ್ನು ಅದೇ ಪರ್ವತದ ಭಾಗವೆಂದು ಪರಿಗಣಿಸಲಾಗುತ್ತದೆ. ಪಿರಮಿಡ್ ತುದಿ ಎಂದರೆ ಹಿಮ ಸವಕಳಿಯಿಂದ ಉತ್ಪತ್ತಿಯಾದ ಪರ್ವತದ ಅಗ್ರದ ಉತ್ಪ್ರೇಕ್ಷೆಯ ರೂಪ.

ಸಮುದ್ರ ಮಟ್ಟದ ಮೇಲೆ ೮೮೪೪.೪೩ ಮೀ. ಎತ್ತರದ ಎವರೆಸ್ಟ್ ವಿಶ್ವದಲ್ಲಿನ ಅತ್ಯಂತ ಎತ್ತರದ ಶಿಖರವಾಗಿದೆ. ಇದನ್ನು ಅಧಿಕೃತವಾಗಿ ಮೊದಲು ಸರ್ ಎಡ್ಮಂಡ್ ಹಿಲರಿ ಏರಿದರು. ಇವರು ಪರ್ವತದ ತುದಿಯನ್ನು ೧೯೫೩ರಲ್ಲಿ ಮುಟ್ಟಿದರು.[] ಯುಐಎಎ ವ್ಯಾಖ್ಯಾನದ ಪ್ರಕಾರ ಶಿಖರವು ೩೦ ಮೀಟರ್ ಅಥವಾ ಹೆಚ್ಚು ಉಬ್ಬನ್ನು ಹೊಂದಿದ್ದರೆ ಅದು ಸ್ವತಂತ್ರವಾಗಿದೆ; ಅದು ಕನಿಷ್ಠಪಕ್ಷ ೩೦೦ ಮೀಟರ್‌ನಷ್ಟು ಉಬ್ಬನ್ನು ಹೊಂದಿದ್ದರೆ ಅದು ಪರ್ವತವಾಗಿದೆ.

ಶಿಖರ ಏರಿಕೆಯು ಸಾಮಾನ್ಯ ಪರ್ವತಾರೋಹಣದಿಂದ ಭಿನ್ನವಾಗಿದೆ. ಶಿಖರ ದಂಡಯಾತ್ರೆಗೆ: ೧ ವರ್ಷಕ್ಕಿಂತ ಹೆಚ್ಚಿನ ತರಬೇತಿ, ಒಳ್ಳೆ ದೈಹಿಕ ಸ್ಥಿತಿ, ಮತ್ತು ವಿಶೇಷ ಸಜ್ಜು ಸಾಮಗ್ರಿ ಬೇಕಾಗುತ್ತದೆ. ಏರುವವನ ಸಾಮಗ್ರಿಗಳ ದೊಡ್ಡ ಭಾಗವನ್ನು ಬಿಡಬಹುದು ಮತ್ತು ಮೂಲ ಶಿಬಿರಗಳಿಗೆ ಒಯ್ಯಬಹುದು ಅಥವಾ ಕೂಲಿಯಾಳುಗಳಿಗೆ ಕೊಡಬಹುದಾದರೂ, ವೈಯಕ್ತಿಕ ಸಾಮಾನು ಸರಂಜಾಮಿನ ದೊಡ್ಡ ಪಟ್ಟಿಯಿದೆ. ಸಾಮಾನ್ಯ ಪರ್ವತಾರೋಹಿಗಳ ಸಾಮಗ್ರಿಯ ಜೊತೆಗೆ, ಶಿಖರ ಏರುವವರು ಡಾಯಮಾಕ್ಸ್ (ಎತ್ತರ ನಿರೋಧಕ ಅಸ್ವಸ್ಥತೆ ಔಷಧಿ), ಮೊಗವಾಡಗಳು, ಮತ್ತು ಆಮ್ಲಜನಕದ ಬಾಟಲಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮುಳ್ಳಟ್ಟೆಗಳು, ಹಿಮ ಕೊಡಲಿ, ಜಾರು ಸಾಧನ, ಉಡುಪುಗಳು ಇತ್ಯಾದಿಗಳ ವಿಶೇಷ ಆವಶ್ಯಕತೆಗಳು ಕೂಡ ಇರುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. Lyons, Kate (2017-05-21). "Mount Everest's Hillary Step has collapsed, mountaineer confirms". The Guardian (in ಬ್ರಿಟಿಷ್ ಇಂಗ್ಲಿಷ್). ISSN 0261-3077. Retrieved 2017-12-10.


"https://kn.wikipedia.org/w/index.php?title=ಶಿಖರ&oldid=868297" ಇಂದ ಪಡೆಯಲ್ಪಟ್ಟಿದೆ