ಸದಸ್ಯ:Ashoka KG/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಮ್ ಆದ್ಮಿ ಪಕ್ಷ (ಆಮ್ ಆದ್ಮಿ ಪಾರ್ಟಿ, Common Man's Party) ಒಂದು ರಾಜಕೀಯ ಪಕ್ಷ, ನವೆಂಬರ್ ೨೬, ೨೦೧೨ ರಂದು ಔಪಚಾರಿಕವಾಗಿ ಇದನ್ನು ಪ್ರಾರಂಭಿಸಲಾಯಿತು. ಪ್ರಸ್ತುತ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಆಡಳಿತ ಪಕ್ಷವಾಗಿದೆ. ಭ್ರಷ್ಟಾಚಾರ ವಿರುದ್ಧ ಭಾರತ ಎಂಬ ಚಳುವಳಿಯೊಂದಿಗೆ ೨೦೧೧ ರಿಂದ ಜನ ಲೋಕಪಾಲ ಮಸೂದೆಗೆ ಒತ್ತಾಯಿಸಿ ನೇತಾರರಾದ ಅಣ್ಣಾ ಹಜಾರೆ ಮತ್ತು ಅರವಿಂದ ಕೇಜ್ರಿವಾಲ್ ರವರ ಬೇರೆ ಬೇರೆ ನಿಲುವುಗಳಿಂದ ಇದು ಅಸ್ತಿತ್ವಕ್ಕೆ ಬಂದಿದೆ. ಹಜಾರೆಯವರ ಒತ್ತಾಸೆ ಯಾವುದೇ ರಾಜಕೀಯ ಪಕ್ಷಕ್ಕೂ ಜೋಡಿಸದೆ ಚಳುವಳಿಯಾದರೆ, ಕೇಜ್ರಿವಾಲ್ ಚಳುವಳಿಯ ಮಾರ್ಗ ಬಿಟ್ಟು ನೇರವಾಗಿ ರಾಜಕೀಯ ಪಕ್ಷದಿಂದ ಮಾತ್ರ ಸಾಧ್ಯ ಎಂದು ತಿಳಿದಿದ್ದಾರೆ. ೨೦೧೩ರ ವಿಧಾನಸಭೆ ಚುನಾವಣೆಯಲ್ಲಿ ಚೊಚ್ಚಲ ಪ್ರವೇಶ ಮಾಡಿದ ಈ ಪಕ್ಷ, ೭೦ ರಲ್ಲಿ ೨೮ ಸ್ಥಾನಗಳನ್ನು ಗೆಲ್ಲುವುದರೊಂದಿಗೆ, ಎರಡನೆಯ ದೊಡ್ಡ ಪಕ್ಷವಾಗಿ ಮೂಡಿ ಬಂತು. ಒಟ್ಟು ಬಹುಮತ ಸಿಗದ ಕಾರಣ,ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಅಲ್ಪಸಂಖ್ಯಾತರ ಸರ್ಕಾರ ರಚಿಸಿತು. ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಜನ ಲೋಕಪಾಲ ಮಸೂದೆ ಜಾರಿಗೆ ತರುವುದೇ ಇವರ ಪ್ರಮುಖ ಕಾರ್ಯಸೂಚಿಯಾಗಿತ್ತು. ಆದರೆ ಚುನಾವಣೆಯ ಬಳಿಕ ಪ್ರಮುಖ ರಾಜಕೀಯ ಪಕ್ಷಗಳು ಬೆಂಬಲ ಸೂಚಿಸದ ಕಾರಣ ಆಮ್ ಆದ್ಮಿ ಪಕ್ಷ (AAP) ಸರ್ಕಾರ ರಾಜೀನಾಮೆ ನೀಡಿತು. ಇದು ೪೯ ದಿನಗಳ ಕಾಲ ಆಡಳಿತದಲ್ಲಿತ್ತು. ೨೦೧೫ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ, ೭೦ ರಲ್ಲಿ ೬೭ ಸ್ಥಾನಗಳನ್ನು ಗೆದ್ದಿತ್ತು. ಉಳಿದ ೦೩ ಸ್ಥಾನಗಳನ್ನು ಭಾರತೀಯ ಜನತಾ ಪಕ್ಷ ಗೆದ್ದಿತ್ತು.