ವಿಷಯಕ್ಕೆ ಹೋಗು

ಕ್ಷೇಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ಷೇಮ (ಯೋಗಕ್ಷೇಮ) ಪದವು ಒಬ್ಬ ವ್ಯಕ್ತಿ ಅಥವಾ ಒಂದು ಗುಂಪಿನ ಪರಿಸ್ಥಿತಿಗೆ ಬಳಸಲಾಗುವ ಸಾಮಾನ್ಯ ಪದವಾಗಿದೆ. ಉನ್ನತ ಮಟ್ಟದ ಕ್ಷೇಮವೆಂದರೆ ಯಾವುದೋ ಅರ್ಥದಲ್ಲಿ ವ್ಯಕ್ತಿಯ ಅಥವಾ ಗುಂಪಿನ ಪರಿಸ್ಥಿತಿಯು ಸಕಾರಾತ್ಮಕವಾಗಿದೆ ಎಂದು. ನಾಸಿ ಮತ್ತು ಇವಾನೀಡೀಸ್‍ರ ಪ್ರಕಾರ, ಕ್ಷೇಮ ಪದವು ಆರೋಗ್ಯದ ಸಾಂಪ್ರದಾಯಿಕ ವ್ಯಾಖ್ಯಾನವನ್ನು ಮೀರಿ ವ್ಯಾಪಿಸುವ ದೈಹಿಕ, ಮಾನಸಿಕ, ಮತ್ತು ಸಾಮಾಜಿಕ ಯೋಗಕ್ಷೇಮದ ವೈವಿಧ್ಯಮಯ ಮತ್ತು ಪರಸ್ಪರ ಸಂಬದ್ಧ ಆಯಾಮಗಳನ್ನು ಸೂಚಿಸುತ್ತದೆ. ಅದು ದೈಹಿಕ ಜೀವಶಕ್ತಿ, ಮಾನಸಿಕ ಚುರುಕುತನ, ಸಾಮಾಜಿಕ ತೃಪ್ತಿ, ಸಾಧನೆಯ ಭಾವ, ಮತ್ತು ವೈಯಕ್ತಿಕ ನೆರವೇರಿಕೆಯನ್ನು ಸಾಧಿಸುವ ಗುರಿಹೊಂದಿರುವ ಆಯ್ಕೆಗಳು ಮತ್ತು ಚಟುವಟಿಕೆಗಳನ್ನು ಒಳಗೊಳ್ಳುತ್ತದೆ.

ಮನಃಶಾಸ್ತ್ರದಲ್ಲಿನ ಮೂರು ಉಪವಿಭಾಗಗಳು ಮಾನಸಿಕ ಯೋಗಕ್ಷೇಮದ ಅಧ್ಯಯನಕ್ಕೆ ನಿರ್ಣಾಯಕವಾಗಿವೆ:[] ಅಭಿವೃದ್ಧಿ ಮನಃಶಾಸ್ತ್ರ - ಇದರಲ್ಲಿ ಮಾನಸಿಕ ಯೋಗಕ್ಷೇಮವನ್ನು ಆಯಸ್ಸಿನ ಉದ್ದಕ್ಕಿನ ಬೆಳವಣಿಗೆಯ ಮಾದರಿಯ ಪರಿಭಾಷೆಯಲ್ಲಿ ವಿಶ್ಲೇಷಿಸಬಹುದು. ವ್ಯಕ್ತಿತ್ವ ಮನಃಶಾಸ್ತ್ರದಲ್ಲಿ ಮಾನಸಿಕ ಯೋಗಕ್ಷೇಮವನ್ನು ವಿವರಿಸಲು ಮ್ಯಾಸ್ಲೋನ ಸ್ವಯಂ ವಾಸ್ತವೀಕರಣದ ಪರಿಕಲ್ಪನೆಯನ್ನು, ರಾಜರ್‌ನ ಸಂಪೂರ್ಣವಾಗಿ ಕಾರ್ಯಶೀಲ ವ್ಯಕ್ತಿಯ ಪರಿಕಲ್ಪನೆಯನ್ನು, ಜಂಗ್‍ನ ವ್ಯಕ್ತೀಕರಣದ ಪರಿಕಲ್ಪನೆ, ಆಲ್‍ಪೋರ್ಟ್‌ನ ಪ್ರೌಢತೆಯ ಪರಿಕಲ್ಪನೆಯನ್ನು ಅನ್ವಯಿಸುವುದು ಸಾಧ್ಯವಿದೆ. ಚಿಕಿತ್ಸಕ ಮನಃಶಾಸ್ತ್ರದಲ್ಲಿ ಮಾನಸಿಕ ಕಾಯಿಲೆಯ ಅನುಪಸ್ಥಿತಿಯು ಮಾನಸಿಕ ಯೋಗಕ್ಷೇಮವನ್ನು ರೂಪಿಸುತ್ತದೆ ಎಂದು ಪ್ರತಿಪಾದಿಸಬಹುದು.

ಸಾಮಾನ್ಯವಾಗಿ ಮಾನಸಿಕ ಯೋಗಕ್ಷೇಮವನ್ನು ಅರ್ಥಮಾಡಿಕೊಳ್ಳಲು ಎರಡು ಕಾರ್ಯವಿಧಾನಗಳನ್ನು ಕೈಗೊಳ್ಳಲಾಗುತ್ತದೆ: ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳ ನಡುವೆ ವ್ಯತ್ಯಾಸ ಮಾಡುವುದು, ಮತ್ತು ಇವೆರಡರ ನಡುವಿನ ಸಮತೋಲನವಾಗಿ ಅತ್ಯಂತ ಅನುಕೂಲಕರ ಮಾನಸಿಕ ಯೋಗಕ್ಷೇಮ ಮತ್ತು ಸುಖವನ್ನು ವ್ಯಾಖ್ಯಾನಿಸುವುದು. ಮಾನಸಿಕ ಯೋಗಕ್ಷೇಮದ ಪ್ರಧಾನ ಸೂಚಕವಾಗಿ ಜೀವನ ತೃಪಿ ಮೇಲೆ ಒತ್ತುಕೊಡುವುದು. ಗಟ್‍ಮನ್ ಮತ್ತು ಲೆವಿಯವರ ಪ್ರಕಾರ ಯೋಗಕ್ಷೇಮವು "...ಮನೋಭಾವದ ವಿಶೇಷ ಸಂದರ್ಭವಾಗಿದೆ". ಈ ಕಾರ್ಯವಿಧಾನವು ಯೋಗಕ್ಷೇಮದ ಅಧ್ಯಯನದಲ್ಲಿ ಎರಡು ಉದ್ದೇಶಗಳನ್ನು ಪೂರೈಸುತ್ತದೆ: "ಯೋಗಕ್ಷೇಮದ ವೈವಿಧ್ಯಗಳಲ್ಲಿನ ಪರಸ್ಪರ ಸಂಬಂಧಗಳ ರಚನೆಗಾಗಿ ಒಂದು ವ್ಯವಸ್ಥಿತ ಸಿದ್ಧಾಂತವನ್ನು ಅಭಿವೃದ್ಧಿಪಡಿಸುವುದು ಮತ್ತು ಪರೀಕ್ಷಿಸುವುದು, ಮತ್ತು ಸಂಬಂಧಿತ ಸಂಶೋಧನೆಯ ವರ್ತನೆಯ ಕ್ಷೇತ್ರಗಳಲ್ಲಿನ ಅಸ್ತಿತ್ವದಲ್ಲಿರುವ ಸಂಚಿತ ಸಿದ್ಧಾಂತ ಅಭಿವೃದ್ಧಿಯೊಂದಿಗೆ ಯೋಗಕ್ಷೇಮ ಸಿದ್ಧಾಂತದ ಏಕೀಕರಣ".

ಉಲ್ಲೇಖಗಳು

[ಬದಲಾಯಿಸಿ]
  1. Ryff, Carol D. (1 January 1989). "Happiness is everything, or is it? Explorations on the meaning of psychological well-being". Journal of Personality and Social Psychology. 57 (6): 1069–1081. doi:10.1037/0022-3514.57.6.1069.


"https://kn.wikipedia.org/w/index.php?title=ಕ್ಷೇಮ&oldid=864304" ಇಂದ ಪಡೆಯಲ್ಪಟ್ಟಿದೆ