ವಿಷಯಕ್ಕೆ ಹೋಗು

ಅಕ್ಷಯ್ ವೆಂಕಟೇಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ. ಅಕ್ಷಯ್ ವೆಂಕಟೇಶ್, (೨೧, ನವೆಂಬರ್, ೧೯೮೧) ಭಾರತೀಯ ಮೂಲದ ಆಸ್ಟ್ರೇಲಿಯ ರಾಷ್ಟ ನಿವಾಸಿ. ಈಗ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿದ್ದಾರೆ. ಅಕ್ಷಯ್ ಗಣಿತ ಶಾಸ್ತ್ರದಲ್ಲಿ ಮಾಡಿದ ಉನ್ನತ ಸಾಧನೆಗಳಿಗಾಗಿ ೩೬ ನೆಯ ವಯಸ್ಸಿನಲ್ಲಿ ಫೀಲ್ಡ್ಸ್ ಪದಕ ಪುರಸ್ಕೃತರಾದರು. ಈ ಪುರಸ್ಕಾರ ಗಣಿತ ಕ್ಷೇತ್ರದ ನೋಬೆಲ್ ಪ್ರಶಸ್ತಿ ಎಂದು ಖ್ಯಾತಿ ಪಡೆದಿದೆ. ಅಕ್ಷಯ್ ವೆಂಕಟೇಶ್ ಜೊತೆಗೆ ನಾಲ್ಕು ಸಾಧಕರಿಗೆ ಪ್ರಶಸ್ತಿ ದೊರೆತ್ಗಿದೆ.[] ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಪ್ರದಾನಮಾಡುವ ಈ ಪ್ರಶಸ್ತಿ ೪೦ ವರ್ಷಪ್ರಾಯದ ಒಳಗಿನ ಮ್ಯಾಥೆಮೆಟಿಕ್ಸ್ ಸಾಧಕರಿಗೆ ಪ್ರದಾನಮಾಡಲಾಗುತ್ತದೆ. ೨೦೧೮ ರ ಆಗಸ್ಟ್ ೧ ರಂದು ರಯೋಡಿ ಜನೈರೋ ನಗರದ 'ಇಂಟರ್ನ್ಯಾಶನಲ್ ಸೈನ್ಸ್ ಆಫ್ ಕಾಂಗ್ರೆಸ್' ನ ಸಮಾರಂಭದಲ್ಲಿ ಪ್ರದಾನಮಾಡಲಾಯಿತು. ವಿಜೇತರಿಗೆ ೧೫ ಸಾವಿರ ಡಾಲರ್ ನಗದು ಹಣ ದೊರೆತಿದೆ. ಈ ಪ್ರತಿಷ್ಠಿತ ಪುರಸ್ಕಾರವನ್ನು ೧೯೩೨ ರಲ್ಲಿ ಸ್ಥಾಪಿಸಲಾಯಿತು. []

  1. ಅಕ್ಷಯ್ ವೆಂಕಟೇಶ್, ಭಾರತೀಯ ಮೂಲದ ಆಸ್ಟ್ರೇಯ ನಿವಾಸಿ,[]
  2. ಕೌಚರ್ ಬರ್ಕರ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಇರಾನಿಯನ್ ಕುರ್ಡಿಶ್ ಮೂಲದವರು. []
  3. ಪೀಟರ್ ಶೋಲಜ್,ಜರ್ಮನಿ ಮೂಲದ ಬಾನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ.
  4. ಅಲೆಸಿಯೋ ಫಿಗಾಲಿ, ಇಟಲಿ ಮೂಲದ ಐಟಿಯುಝಡ್,ಇಟಾಲಿಯನ್ ಗಣಿತಜ್ಞ, ಝುರಿಚ್ ನಲ್ಲಿ ಕೆಲಸಮಾಡುತ್ತಿದ್ದಾರೆ. []

ಬಾಲ್ಯ ಹಾಗೂ ವಿದ್ಯಾಭ್ಯಾಸ

[ಬದಲಾಯಿಸಿ]

ವೆಂಕಟೇಶ್​ ಮೂಲತಃ ದೆಹಲಿಯವರು. ತಮ್ಮ ಎರಡನೇ ವಯಸ್ಸಿನಲ್ಲಿ ಪಾಲಕರ ಜತೆ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. 20ನೇ ವಯಸ್ಸಿನಲ್ಲಿ ಪಿಎಚ್​ಡಿ ಪಡೆದಿದ್ದಾರೆ. ಅಕ್ಷಯ್ ತಮ್ಮ 13ನೇ ವಯಸ್ಸಿನಿಂದಲೇ ಪಶ್ಚಿಮ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪ್ರಾರಂಭ ಮಾಡಿದರು. 16ನೇ ವರ್ಷದಲ್ಲಿ ಗಣಿತದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ನಂತರ ಪ್ರಿನ್ಸನ್​ ಯೂನಿವರ್ಸಿಟಿ ಸೇರಿದರು. ಎಂಐಟಿಯಲ್ಲಿ ಡಾಕ್ಟರಲ್ ನಂತರದ ಸ್ಥಾನಕ್ಕೇರಲು ಕ್ಲೇ ರಿಸರ್ಚ್​ನಲ್ಲಿ ತೊಡಗಿದರು. ಈಗ ಸ್ಟಾನ್​ಫೋರ್ಡ್​ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್​ ಆಗಿದ್ದಾರೆ.

ಅಕ್ಷಯ್ ವೆಂಕಟೇಶ್ ರವರ ಕೊಡುಗೆಗಳು

[ಬದಲಾಯಿಸಿ]

ಅಕ್ಷಯ್​ ವೆಂಕಟೇಶ್ ರವರು ಸಂಖ್ಯಾ ಸಿದ್ಧಾಂತ, ಅಂಕಗಣಿತ, ರೇಖಾಗಣಿತ, ಟೋಪೋಲೊಜಿ, ಆಟೋಮಾರ್ಫಿಕ್ ರೂಪಗಳು ಮತ್ತು ಎರ್ಗೊಡಿಕ್ ಸಿದ್ಧಾಂತಗಳ ಬಗ್ಗೆ ಉನ್ನತ ಮಟ್ಟದ ಸಂಶೋಧನೆ ಮಾಡಿದ್ದಾರೆ..[][]

ಪ್ರಶಸ್ತಿಗಳು

[ಬದಲಾಯಿಸಿ]
  1. ಓಸ್ಟ್ರೋಸ್ಕಿ ಪ್ರಶಸ್ತಿ,
  2. ಇನ್ಫೋಸಿಸ್​ ಪ್ರಶಸ್ತಿ, []
  3. ಸೇಲಂ ಪ್ರಶಸ್ತಿ,
  4. ರಾಮಾನುಜನ್ ಪ್ರಶಸ್ತಿ,
  5. ಫೀಲ್ಡ್ಸ್ ಮೆಡಲ್ (೨೦೧೮)

ಉಲ್ಲೇಖಗಳು

[ಬದಲಾಯಿಸಿ]
  1. ಆಗಸ್ಟ್, ೨೦೧೮, ಕನ್ನಡಪ್ರಭ, 'ಭಾರತೀಯ ಮೂಲದ ಅಕ್ಷಯ್ ವೆಂಕಟೇಶ್ ಗೆ ಗಣಿತದ ನೋಬೆಲ್ ಫೀಲ್ಡ್ಸ್ ಮೆಡಲ್ ಪ್ರಶಸ್ತಿ'
  2. name="IndiaTVNews">"Indian-origin mathematician Akshay Venkatesh maths 'Nobel' Fields Medal". India TV News. 2 August 2018. Retrieved 4 August 2018.
  3. Mathematician Akshay venkatesh gets the Fields medal,The Nobel prize for Mathematics, scroll.in, Sun, 5th, Aug, 2018
  4. An nnovator Who Brings Order to an Infinitude of Equations , Quanta magazine
  5. "Akshay Venkatesh". claymath.org. Clay Mathematics Institute. 2 August 2018. Retrieved 4 August 2018.
  6. "Former IMO Olympians". amt.edu.au. Australian Mathematics Trust. 2017. Archived from the original on 13 ಡಿಸೆಂಬರ್ 2018. Retrieved 4 August 2018.
  7. MacDonald, Janine (15 July 2011). "Maths boy wonder shows how to stack oranges" (Press release). University of Western Australia. Retrieved 4 August 2018.
  8. The better world, Jan,11, 2017, Meet Mathematician Akshay venkatesh, who won The Infosys Prize for his Research in Number Theory

ಪೂರಕ ಓದಿಗೆ

[ಬದಲಾಯಿಸಿ]