ವಿಷಯಕ್ಕೆ ಹೋಗು

ಬಳೆ ಆಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಳೆ ಆಟ

ಆಡಲು ಬೇಕಾಗುವ ವಸ್ತುಗಳು- ಬಳೆ ಚೂರುಗಳು ಒಂದು ಮುಷ್ಠಿಯಷ್ಟು ಅಥವಾ ಹೆಚ್ಚು.

ಆಟದ ವಿವರಣೆ-

ಬಳೆಗಳು ಎಂದರೆ ಹೆಣ್ಣು ಮಕ್ಕಳಿಗೆ  ತುಂಬಾ ಇಷ್ಟ. ಒಡೆದ ಮೇಲೂ ಹಳ್ಳಿಗಳಲ್ಲಿನ ಮಕ್ಕಳು ಆ ಬಳೆ ಚೂರುಗಳನ್ನುಪಯೋಗಿಸಿ ಆಡುವ ಆಟವೇ ಈ ಬಳೆ ಆಟ. ಮನೆಯೊಳಗಡೆ ಹೊರಗಡೆ ಎಲ್ಲೂ ಆಡಬಹುದಾದ ಹಾಗೂ ಬಿಸಿಲು ಮಳೆ ಎನ್ನದೆ ಯಾವಾಗ ಬೇಕಾದರೂ ಈ ಆಡಬಹುದಾದ ಈ ಆಟ ಮಕ್ಕಳ ಅಚ್ಚು ಮೆಚ್ಚು.

ಆಡುವ ವಿಧಾನ

·        ಎರಡು ಹಾಗೂ ಎರಡಕ್ಕಿಂತ ಹೆಚ್ಚಿನ ಮಂದಿ ಆಡುವ ಆಟವಾಗಿದೆ ಇದು . ಕನಿಷ್ಟ 2 ಮಂದಿಯಾದರೂ ಈ ಆಟವಾಡಲು ಬೇಕು.

·        ಆಟಗಾರರೆಲ್ಲರೂ ಮೊದಲಿಗೆ ವೃತ್ತಾಕಾರದಲ್ಲಿ ಕುಳಿತುಕೊಳ್ಳಬೇಕು.

·        ಒಬ್ಬ ಆಟಗಾರನು ಆಟವನ್ನು ಪ್ರಾರಂಭಿಸುತ್ತಾನೆ.

·        ಆಟಗಾರನು ಬಳೆ ಚೂರುಗಳನ್ನು ಅಂಗೈಯಲ್ಲಿರಿಸಿ ಮೇಲಕ್ಕೆಸೆದು ಕೈಯನ್ನು ತಿರುಗಿಸಿ ಮುಂಗೈಯಲ್ಲಿ ಹಿಡಿಯಬೇಕು.

·        ಉಳಿದ ಆಟಗಾರರು ಮುಂಗೈ ಮೇಲಿನ ಬಳೆ ಚೂರುಗಳಲ್ಲಿ ಒಂದನ್ನು ಆಯ್ಕೈ ಮಾಡಬೇಕು.

·        ಆಟಗಾರನು ಆ ಬಳೆ ಚೂರನ್ನು ಹೊರತು ಪಡಿಸಿ ಉಳಿದ ಬಳೆ ಚೂರುಗಳನ್ನು ಕೆಳಕ್ಕೆ ಬೀಳಿಸಬೇಕು, ಆ ಬಳೆ ಚೂರನ್ನು ಎರಡು ಬೆರಳುಗಳ ಮಧ್ಯದಲ್ಲಿರಿಸಬಹುದು.

·        ನಂತರ ಆ ಬಳೆ ಚೂರನ್ನು ಹಿಡಿದುಕೊಂಡು ಕೆಳಗಿರುವ ಬಳೆ ಚೂರುಗಳನ್ನು ಎತ್ತಬೇಕು. ಎತ್ತಿರುವ ಬಳೆ ಚೂರುಗಳು ಅವರಿಗೆ ಸಿಗುತ್ತವೆ.

·        ಒಂದುವೇಳೆ ಆ ಬಳೆ ಚೂರು ಬಿದ್ದಲ್ಲಿ ಅವರ ಸರದಿ ಮುಗಿಯುತ್ತದೆ ಹಾಗೂ ಮುಂದಿನ ಆಟಗಾರನು ಆಡುತ್ತಾನೆ.

·        ಅಚ್ಚನ್ಕಲ್ಲು ಈ ಆಟದ ಒಂದು ಪರ್ಯಾಯ ರೂಪವಾಗಿದೆ

ಮಾಹಿತಿ ಸಂಗ್ರಹಣೆ-   ಯಲ್ಲಮ್ಮ

                     ಆಲಂಬ ಮಾಲೂರು


"https://kn.wikipedia.org/w/index.php?title=ಬಳೆ_ಆಟ&oldid=852741" ಇಂದ ಪಡೆಯಲ್ಪಟ್ಟಿದೆ