ಕುಣಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಣಿಕೆಯು ಹಗ್ಗದ ಕೊನೆಯಲ್ಲಿರುವ ಒಂದು ಗೊಣಸು. ಇದರಲ್ಲಿನ ಗಂಟು ಭಾರ ಹೆಚ್ಚಾದಂತೆ ಬಿಗಿಯಾಗುತ್ತದೆ ಮತ್ತು ಭಾರ ಇಲ್ಲದಿದ್ದಾಗ ಇದನ್ನು ಸಡಿಲಿಸಬಹುದು. ಹಗ್ಗವನ್ನು ಕಂಬಕ್ಕೆ ಕಟ್ಟಲು ಈ ಗಂಟನ್ನು ಬಳಸಬಹುದು, ಆದರೆ ಕೊನೆಯು ಗೊಣಸನ್ನು ಮೇಲೆ ಸಾಗಿಸುವಂತೆ ಇರುವ ಸ್ಥಾನದಲ್ಲಿ ಇದ್ದಾಗ ಮಾತ್ರ. ಹಗ್ಗದ ಕೊನೆಯಲ್ಲಿ ಗೊಣಸನ್ನು ರಚಿಸುವ ಮೂಲಕ, ಮತ್ತು ನಂತರ ಗೊಣಸಿನ ಮುಖಾಂತರ ಹಗ್ಗದ ನಿಂತ ಕೊನೆಯ ಬಾಗನ್ನು ಸಾಗಿಸಿ ಗಂಟನ್ನು ಕಟ್ಟಲಾಗುತ್ತದೆ. ಕುಣಿಕೆಯ ಗಂಟು ಮೇಲುಗೈ ಗಂಟಿನ ಜಾರು ಸ್ವರೂಪವಾಗಿದೆ.

ಮರಣದಂಡನೆಯೊಂದಿಗೆ ಅತ್ಯಂತ ನಿಕಟವಾಗಿ ಸಂಬಂಧಿಸಿದ ಗಂಟೆಂದರೆ ವಧಕಾರನ ಗಂಟು. ಇದನ್ನು ವಧಕಾರನ ಕುಣಿಕೆ ಎಂದು ಕೂಡ ಕರೆಯಲಾಗುತ್ತದೆ. ಕಟ್ಟುವುದು ಮೂಲ ಕುಣಿಕೆಯನ್ನು ಹೋಲುತ್ತದೆ, ಆದರೆ ಗೊಣಸಿನ ಸುತ್ತ ಹಲವು ಸುತ್ತುಗಳನ್ನು ಸುತ್ತಿಸಲಾಗುತ್ತದೆ. ಇದಕ್ಕೆ ಕಾರಣವೆಂದರೆ ನೇಣನ್ನು ಹೆಚ್ಚು ಮಾನವೀಯ ಮಾಡುವುದಾಗಿತ್ತು. ಇಲ್ಲದಿದ್ದರೆ ಕುಣಿಕೆಯು ವ್ಯಕ್ತಿಯ ಕತ್ತನ್ನು ಮುರಿಯಬಹುದಿತ್ತು, ಮತ್ತು ಆ ವ್ಯಕ್ತಿಯ ಸಾವು ತಕ್ಷಣವಾಗುತ್ತಿತ್ತು. ಬದಲಾಗಿ ಹೀಗೆ ಮಾಡಿದರೆ ಅವರ ಕತ್ತು ಹಿಸುಕಿ ನಿಧಾನವಾಗಿ ಸಾವು ನೀಡಬಹುದು.

ಹೆಚ್ಚಿನ ವಾಚನ[ಬದಲಾಯಿಸಿ]

  • Jack Shuler, The Thirteenth Turn: A History of the Noose, Public Affairs, 2014, ISBN 9781610391368
"https://kn.wikipedia.org/w/index.php?title=ಕುಣಿಕೆ&oldid=851004" ಇಂದ ಪಡೆಯಲ್ಪಟ್ಟಿದೆ