ಮರಕಂಬ ಆಟ
ಮರಕಂಬ ಆಟ
ಆಡಲು ಬೇಕಾದ ವಸ್ತುಗಳು – ಕಂಬ, ಎಣ್ಣೆ
ಆಟದ ವಿವರಣೆ
ಈ ಆಟವನ್ನು ಹಳ್ಳಿ ಭಾಷೆಯಲ್ಲಿ ಜಾರು ಮರದ ಆಟ ಎಂದು ಕರೆಯುತ್ತಾರೆ. ಎಣ್ಣೆಯನ್ನು ಸವರಿರುವ ಜಾರುವ ಕಂಬವನ್ನೇರುವುದೆ ಈ ಆಟ.ಮಲ್ಲ ಕಂಬ, ಮಲ್ಲರ್ ಕಂಬಮ್ ಎಂದೆಲ್ಲಾ ಕರೆಯಲ್ಪಡುವ ಈ ಆಟ ಗರಡಿ ಮನೆಗಳಲ್ಲಿ ಹೆಚ್ಚಾಗಿ ಆಡುತ್ತಿದ್ದರೂ ಹಬ್ಬ ಹರಿದಿನಗಳಲ್ಲಿ ಬೀದಿ ಮಧ್ಯದಲ್ಲೂ ಆಡುತ್ತಿದ್ದರು. ಈಗಿನ ದಿನಗಳಲ್ಲಿ ಈ ಆಟವು ತುಂಬಾ ಅಪರೂಪವಾಗಿದ್ದರೂ ಕೃಷ್ಣ ಆಷ್ಟಮಿ ಸಮಯದಲ್ಲಿ ಕೆಲವೆಡೆ ಇದನ್ನು ಆಡುತ್ತಾರೆ.
ಆಡುವ ವಿಧಾನ
· ಮೊದಲಿಗೆ ಎಲ್ಲರೂ ಸೇರಿ ಒಂದು ಕಂಬವನ್ನು ನೆಡುತ್ತಾರೆ.
· ಕಂಬವು ಗಟ್ಟಿಯಾಗಿದೆ ಎಂದು ಧೃಡೀಕರಿಸಲ್ಪಟ್ಟ ನಂತರ ಕಂಬಕ್ಕೆ ಎಣ್ಣೆ ಹಚ್ಚಿ ಜಾರುವಂತೆ ಮಾಡುತ್ತಾರೆ.
· ಕಂಬದ ತುದಿಯಲ್ಲೊಂದು ಉಡುಗೊರೆಯನ್ನು ಕಟ್ಟಿರುತ್ತಾರೆ.
· ಆಟಗಾರರು ಹಲವಾರು ತಂಡಗಳಲ್ಲಿ ಭಾಗವಹಿಸುತ್ತಾರೆ.
· ಆಟಗಾರರು ಕಂಬವನ್ನು ಹತ್ತುತ್ತಿರುವಂತೆ ಉಳಿದ ತಂಡದವರು ಅವರ ಗಮನವನ್ನು ಮತ್ತು ಹಿಡಿತವನ್ನು ತಪ್ಪಿಸುವುದರಲ್ಲಿ ನಿರತರಾಗುತ್ತಾರೆ.
· ನೀರು, ಬಣ್ಣಗಳನ್ನು ಎರಚುತ್ತಾರೆ.
· ಯಾವ ತಂಡ ಕಂಬವನ್ನೇರಿ ಉಡುಗೊರೆಯನ್ನು ತೆಗೆದು ಕೆಲಕ್ಕಿಳಿಯುತ್ತಾರೊ ಅವರು ವಿಜಯಿಗಳಾಗುತ್ತಾರೆ.
ಮಾಹಿತಿ ಸಂಗ್ರಹಣೆ – ಪ್ರತಾಪ್ . ಪಿ
ಆಲಂಬ ಮಾಲೂರು